ಭದ್ರಾ ಮೇಲ್ದಂಡೆ, ಎತ್ತಿನಹೊಳೆ ಯೋಜನೆ ವೇಗ ಹೆಚ್ಚಿಸಿ: ವೆಂಕಟೇಶ್‌

By Kannadaprabha News  |  First Published Jul 20, 2023, 6:09 AM IST

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅಧ್ಯಕ್ಷತೆಯಲ್ಲಿ ಪಾವಗಡ ಭಾಗದ ನೀರಾವರಿ ಯೋಜನೆಗಳಿಗೆ ಸಂಬಂಧಪಟ್ಟಂತೆ ಮಂಗಳವಾರ ಬೆಂಗಳೂರಿನ ವಿಧಾನಸೌಧದಲ್ಲಿ ಸಭೆ ನಡೆಯಿತು.


 ಪಾವಗಡ: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅಧ್ಯಕ್ಷತೆಯಲ್ಲಿ ಪಾವಗಡ ಭಾಗದ ನೀರಾವರಿ ಯೋಜನೆಗಳಿಗೆ ಸಂಬಂಧಪಟ್ಟಂತೆ ಮಂಗಳವಾರ ಬೆಂಗಳೂರಿನ ವಿಧಾನಸೌಧದಲ್ಲಿ ಸಭೆ ನಡೆಯಿತು.

ಈ ವೇಳೆ ಪಾವಗಡ ಶಾಸಕರಾದ ಎಚ್‌.ವಿ.ವೆಂಕಟೇಶ್‌ ಪಾವಗಡ ತಾಲೂಕು ಸೇರಿದಂತೆ ತುಮಕೂರು ಜಿಲ್ಲಾ ವಿಭಾಗದ ಎತ್ತಿನಹೊಳೆ ಹಾಗೂ ಭದ್ರಾ ಯೋಜನೆ ಪ್ರಗತಿಗೆ ಸಂಬಂಧಪಟ್ಟಂತೆ ಸಭೆಯಲ್ಲಿ ಚರ್ಚಿಸಿದ್ದಾರೆ. ಪಾವಗಡ ತಾಲೂಕು ಬಯಲುಸೀಮೆ ವ್ಯಾಪ್ತಿಗೆ ಒಳಪಟ್ಟಿದ್ದು, ಸದಾ ಬರಕ್ಕೆ ತುತ್ತಾಗಿದೆ. ಇಲ್ಲಿ ಮಳೆಯ ಅಭಾವದಿಂದ ಕುಡಿವ ನೀರು ಮತ್ತು ಅಂತರ್ಜಲ ಕುಸಿತದಿಂದ ಕೊಳವೆ ಬಾವಿಗಳು ಬತ್ತಿಹೋಗುತ್ತಿವೆ. ನೀರಾವರಿ ಬೆಳೆಗಳು ನಷ್ಟಕ್ಕೀಡಾಗುತ್ತಿದ್ದು ಕೂಡಲೇ ಭದ್ರಾ ಮೇಲ್ದಂಡೆ ಹಾಗೂ ಎತ್ತಿನಹೊಳೆ ಯೋಜನೆಗಳ ಕಾಮಗಾರಿಯ ವೇಗ ಹೆಚ್ಚಿಸಿ, ಕೆರೆಗಳಿಗೆ ನೀರು ತುಂಬಿಸಿದರೆ ಅಂತರ್ಜಲ ಹೆಚ್ಚಾಗಲಿದೆ. ಇದರಿಂದ ಕೊಳವೆ ಬಾವಿಗಳಲ್ಲಿ ಹೆಚ್ಚು ನೀರು ಬರುವ ಕಾರಣ ನೀರಾವರಿ ಬೆಳೆಗಳ ಸಂರಕ್ಷಣೆ ಜತೆಗೆ ಲಕ್ಷಾಂತರ ಮಂದಿ ರೈತರ ಜೀವನ ಸುಧಾರಣೆ ಕಾಣಲಿದೆ ಎಂದು ಸಚಿವರಿಗೆ ಮನವಿ ಮಾಡಿದರು.

Tap to resize

Latest Videos

ಈ ವೇಳೆ ಸಹಕಾರ ಸಚಿವ ಕೆ.ಎನ್‌.ರಾಜಣ್ಣ, ಗುಬ್ಬಿ ಕ್ಷೇತ್ರದ ಶಾಸಕ ಶ್ರೀನಿವಾಸ್‌, ವಿಧಾನ ಪರಿಷತ್‌ ಸದಸ್ಯ ರಾಜೇಂದ್ರ ಇತರೆ ಅನೇಕ ಶಾಸಕರು ಸಭೆಯಲ್ಲಿ ಉಪಸ್ಥಿತರಿದ್ದರು.

ವಿಳಂಬ ಮಾಡ್ತಿರುವ ಸರ್ಕಾರದ ನಡೆ ವಿರುದ್ಧ ರೈತರ ಅನುಮಾನ

ಚಿತ್ರದುರ್ಗ (ಜ.28): ಅದೊಂದು‌ ಬರದನಾಡಿನ ಕನಸಿನ ಯೋಜನೆ. ಇನ್ನೇನು ಕೆಲವೇ ದಿನಗಳಲ್ಲಿ ರಾಷ್ಟ್ರೀಯ ಯೋಜನೆಯಾಗಿ ಮುಕ್ತಾಯ ಆಗಲಿದೆ ಅಂತ ರೈತರು ಭಾವಿಸಿದ್ರು. ಆದ್ರೆ ದಿನ ದಿನಕ್ಕೂ ಕಾಮಗಾರಿಯನ್ನು ವಿಳಂಬ ಮಾಡ್ತಿರುವ ಸರ್ಕಾರದ ನಡೆ ವಿರುದ್ಧ ರೈತರು ಅನುಮಾನ ಹಾಗೂ ಆತಂಕ ಹೊರಹಾಕಿದ್ದಾರೆ. ಬಿಜೆಪಿಯ ಸಮ್ಮಿಶ್ರ ಸರ್ಕಾರದಲ್ಲಿ ಅಂದಿನ ನೀರಾವರಿ ಸಚಿವರಾಗಿದ್ದ ಬಸವರಾಜ್ ಬೊಮ್ಮಾಯಿ ಘೋಷಿಸಿದ್ದ‌ ಭದ್ರಾ ಮೇಲ್ದಂಡೆ ಯೋಜನೆ‌ಯು ಕೋಟೆನಾಡು ಚಿತ್ರದುರ್ಗದ ಕನಸಿನ ಕೂಸಾಗಿದೆ. ಹೀಗಾಗಿ ಬಸವರಾಜ್ ಬೊಮ್ಮಾಯಿ ರಾಜ್ಯದ ಸಿಎಂ ಆದ ಬಳಿಕ ಚಿತ್ರದುರ್ಗ ಜಿಲ್ಲೆ ಜನರಲ್ಲಿ ಭರವಸೆ ಹೆಚ್ಚಾಗಿದ್ದೂ, ಈ ಯೋಜನೆ ಶೀಘ್ರದಲ್ಲೇ ರಾಷ್ಟ್ರೀಯ ಯೋಜನೆಯಾಗಲಿದೆ. ವೇಗವಾಗಿ ಕಾಮಗಾರಿಯನ್ನು ಸಂಪೂರ್ಣವಾಗಿ ಮುಗಿಯಲಿದೆ. ಇದರಿಂದಾಗಿ  ನೀರಿನ ಬವಣೆ ನೀಗಲಿದೆ ಎಂಬ ನಿರೀಕ್ಷೆಯಲ್ಲಿದ್ರು.

ಆದ್ರೆ ಭದ್ರಾ ಯೋಜನೆಯನ್ನು ರಾಷ್ಟ್ರೀಯ ಯೋಜನೆಯಾಗಿ ಘೋಷಿಸಲು ಕೇಂದ್ರಸರ್ಕಾರ ಮೀನಾಮೇಷ ಎಣಿಸುತ್ತಿದೆ. ಅಲ್ಲದೇ  ಕೆಲವೇ ದಿನಗಳಲ್ಲಿ 2023 ರ ವಿಧಾನಸಭಾ ಚುನಾವಣೆ ಸಹ ಶುರುವಾಗುವ ಪರಿಣಾಮ‌ ಈ ಯೋಜನೆ ಚುನಾವಣಾ ದಾಳವಾಗಿ ಬಳಸಿಕೊಳ್ಳಲು ಸರ್ಕಾರ ಹೊರಟಿರುವಂತಿದೆ. ಹೀಗಾಗಿ ಈ ವರ್ಷವೂ ಸಹ ಈ ಕಾಮಗಾರಿ ರಾಷ್ಟ್ರೀಯ ಯೋಜನೆ ಆಗಲ್ವೇನೊ ಎಂಬ ಅನುಮಾನ ರೈತರಲ್ಲಿ ಮೂಡಿದೆ. ಹೀಗಾಗಿ ತಕ್ಷಣವೇ ಭದ್ರಾ ಯೋಜನೆಯನ್ನು ತಕ್ಷಣವೇ ರಾಷ್ಟ್ರೀಯ ಯೋಜನೆಯಾಗಿ ಘೋಷಿಸಿ, ಕಾಮಗಾರಿಯನ್ನು ತ್ವರಿತವಾಗಿ ಮುಗಿಸುವಂತೆ ರೈತರು ಆಗ್ರಹಿಸಿದ್ದಾರೆ.

ಭದ್ರಾ ರಾಷ್ಟ್ರೀಯ ಯೋಜನೆಗೆ ಸಿಎಂ ಬೊಮ್ಮಾಯಿ ಒತ್ತಡ: ಕೇಂದ್ರ ಸಚಿವರಿಂದ ಸಕಾರಾತ್ಮಕ ಸ್ಪಂದನೆ

ಇನ್ನು ಇದಕ್ಕೆ ಪ್ರತಿಕ್ರಿಯಿಸಿರೋ ಚಿತ್ರದುರ್ಗದ ಬಿಜೆಪಿ‌ ಹಿರಿಯ ಶಾಸ ಕ‌ತಿಪ್ಪಾರೆಡ್ಡಿ, ಇದು ಕರ್ನಾಟಕದ ಬೃಹತ್ ನೀರಾವರಿ ಯೋಜನೆಗಳಲ್ಲಿ ಒಂದಾಗಿದೆ. ಈ ಭದ್ರಾ ಮೇಲ್ದಂಡೆ ಯೋಜನೆ ಶೀಘ್ರದಲ್ಲೇ ಕೇಂದ್ರ ಸರ್ಕಾರ ಸಚಿವ ಸಂಪುಟದಲ್ಲಿ ರಾಷ್ಟ್ರೀಯ ಯೋಜನೆಯಾಗಿ ಘೋಷಣೆಯಾಗಲಿದ್ದೂ, ಪ್ರಧಾ‌ನಿ ಮೋದಿ ಇದನ್ನು ಉದ್ಘಾಟಿಸಲಿದ್ದಾರೆ. ಹೀಗಾಗಿ ರೈತರಲ್ಲಿ ಯಾವುದೇ ಆತಂಕ ಬೇಡವೇಂದು ಭರವಸೆ ನೀಡಿದ್ದಾರೆ.

Chitradurga: ಭದ್ರಾದಿಂದ ವಿವಿ ಸಾಗರ ಜಲಾಶಯಕ್ಕೆ ನೀರು ಹರಿಸೋದಕ್ಕೆ ಕಾಡ ಸಮಿತಿ ಆಕ್ಷೇಪ!

ಒಟ್ಟಾರೆ ಕಳೆದ ಒಂದೂವರೆ ದಶಕಗಳಿಂದ ಬರದನಾಡಿನ ರೈತರು ಭದ್ರಾ ನೀರಿನ ಕನಸು ಕಾಣ್ತಿದ್ದಾರೆ. ಆದ್ರೆ ಅದು ಕನಸಾಗಿಯೇ ಉಳಿದಿದೆ. ಹೀಗಾಗಿ ಭದ್ರಾ ಮೇಲ್ದಂಡೆ ಯೋಜನೆಯನ್ನು ಚುನಾವಣಾ ದಾಳವಾಗಿ ಬಳಸಿಕೊಳ್ಳದೇ, ಈ ಡಬಲ್ ಎಂಜಿನ್ ಸರ್ಕಾರ ತ್ವರಿತವಾಗಿ ಈ ಬರದನಾಡಿನ ಬವಣೆ ನೀಗಿಸಲು ಅಗತ್ಯ ಕ್ರಮ ಕೈಗೊಳ್ಳಬೇಕಿದೆ‌.

click me!