ಅದು ಉತ್ತರ ಕರ್ನಾಟಕದ ಜೀವನದಿ. ಲಕ್ಷಾಂತರ ಹೆಕ್ಟರ್ ಪ್ರದೇಶಕ್ಕೆ ನೀರು ಜನ ಜಾನುವಾರುಗಳ ಆಶ್ರಯವೇ ಆ ನದಿ. ಸದ್ಯ ಆ ಬೃಹತ್ ನದಿಗೆ ಮಹಾರಾಷ್ಟ್ರದಲ್ಲಿ ಕೆಮಿಕಲ್ ನೀರು ಮಿಶ್ರಣ ಆಗ್ತಿದ್ದು ನದಿಯಲ್ಲಿನ ಜಲಚರಗಳು ಪ್ರಾಣ ಬಿಡ್ತಿವೆ.
ಚಿಕ್ಕೋಡಿ (ಮಾ.12): ಅದು ಉತ್ತರ ಕರ್ನಾಟಕದ ಜೀವನದಿ. ಲಕ್ಷಾಂತರ ಹೆಕ್ಟರ್ ಪ್ರದೇಶಕ್ಕೆ ನೀರು ಜನ ಜಾನುವಾರುಗಳ ಆಶ್ರಯವೇ ಆ ನದಿ. ಸದ್ಯ ಆ ಬೃಹತ್ ನದಿಗೆ ಮಹಾರಾಷ್ಟ್ರದಲ್ಲಿ ಕೆಮಿಕಲ್ ನೀರು ಮಿಶ್ರಣ ಆಗ್ತಿದ್ದು ನದಿಯಲ್ಲಿನ ಜಲಚರಗಳು ಪ್ರಾಣ ಬಿಡ್ತಿವೆ. ಇದು ಹೀಗೆ ಮುಂದುವರೆದ್ರೆ ನಮ್ ಗತಿ ಏನೂ ಅಂತ ಈಗ ಉತ್ತರ ಕರ್ನಾಟಕಕ್ಕೂ ಆತಂಕ ಶುರುವಾಗಿದೆ. ನದಿಯ ದಡದಲ್ಲಿ ಬಂದು ಸಾವನ್ನಪ್ಪಿರೋ ಸಾವಿರಾರು ಮೀನಿಗಳು. ಮೀನು ಮೀನು ಅಂತ ಮಿಗಿಬಿದ್ದು ಬೃಹತ್ ಗಾತ್ರದ ಮೀನುಗಳನ್ನು ಹಿಡಿಯುತ್ತಿರೋ ಜನ.
ಈ ದೃಶ್ಯಗಳು ಕಂಡು ಬಂದಿದ್ದು ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಅಂಕಲಿ ಗ್ರಾಮದ ಬಳಿ ಹರಿದಿರುವ ಕೃಷ್ಣಾ ನದಿಯಲ್ಲಿ. ಸಾಂಗ್ಲಿ ಜಿಲ್ಲೆಯಲ್ಲಿರುವ ಕಾರ್ಖಾನೆಗಳ ತ್ಯಾಜ್ಯ ನೀರು ಹಾಗೂ ಹಾಗೂ ಸಾಂಗ್ಲಿ ನಗರದ ಕಲುಷಿತ ನೀರನ್ನ ಕೃಷ್ಣಾ ನದಿಗೆ ಹರಿಬಿಡಲಾಗ್ತಿದೆ ಇದರಿಂದಾಗಿ ನದಿಯಲ್ಲಿರವ ಜಲಚರಗಳು ಸಾವನ್ನಪ್ಪುತ್ತಿವೆ. ಮಹಾರಾಷ್ಟ್ರದ ಕೊಲ್ಹಾಪುರ ಹಾಗೂ ಸಾಂಗ್ಲಿ ಜಿಲ್ಲೆಗಳಲ್ಲಿ ಸಾಕಷ್ಟು ಕಾರ್ಖಾನೆಗಳಿದ್ದು ಅವುಗಳ ತ್ಯಾಜ್ಯ ನೀರನ್ನ ಉತ್ತರ ಕರ್ನಾಟಕದ ಜೀವನದಿ ಎಂದು ಕರೆಸಿಕೊಳ್ಳುವ ಕೃಷ್ಣೆಗೆ ಹರಿ ಬಿಡಲಾಗ್ತಿದೆ.
ವಾಲ್ಮೀಕಿಗೆ ಗೌರವ ಸಿಗಬೇಕು ಅಂದ್ರೆ ಬಿಜೆಪಿ ಗೆಲ್ಲಿಸಿ: ನಳಿನ್ ಕುಮಾರ್ ಕಟೀಲ್
ಸದ್ಯ ಚಿಕ್ಕೋಡಿ ನಗರದಿಂದ ಕೇವಲ 40 ರಿಂದ 50 ಕೀಮಿ ಅಂತರದಲ್ಲಿರುವ ಸಾಂಗ್ಲಿಯ ಅಂಕಲಿಯಲ್ಲಿ ಈ ರೀತಿ ಮೀನುಗಳು ಸಾವನ್ನಪ್ಪಿತ್ತಿದ್ದು ಮುಂದೆ ಅದೇ ನೀರು ಕರ್ನಾಟಕದತ್ತ ಹರಿದು ಬರುತ್ತೆ, ಬೆಳಗಾವಿ, ವಿಜಯಪುರ, ಬಾಗಲಕೋಟೆ ಹಾಗು ರಾಯಚೂರು ಜಿಲ್ಲೆಗಳಲ್ಲಿ ಕೃಷ್ಣೆ ಹರಿದಿದ್ದು ಕಲುಷಿತ ನೀರು ಸೇವಿಸಿ ಜನ ಜಾನುವಾರುಗಳಿಗೆ ತೊಂದರೆ ಆದರೆ ಯಾರು ಹೊಣೆ ಎನ್ನುವ ಪ್ರಶ್ನೆ ಈಗ ಕಾಡುತ್ತಿದೆ. ಅಲ್ಲದೆ ಕೊಲ್ಹಾಪುರ ಹಾಗೂ ಸಾಂಗ್ಲಿ ಜಿಲ್ಲಾಡಳಿತ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು.
ನಾಳಿನ 5, 8ನೇ ಕ್ಲಾಸ್ ಪರೀಕ್ಷೆ ಮುಂದೂಡಿಕೆ: ಪರೀಕ್ಷೆ ತಡೆಹಿಡಿಯಲು ಹೈಕೋರ್ಟ್ ಆದೇಶ
ಬೆಳಗಾವಿ ಜಿಲ್ಲಾಡಳಿತವೂ ಅಲ್ಲಿನ ಜಿಲ್ಲಾಡಳಿತವನ್ನು ಎಚ್ಚರಿಸಬೇಕು ಎನ್ನುವ ಕೂಗು ಕೇಳಿ ಬರ್ತಿದೆ. ಒಟ್ಟಿನಲ್ಲಿ ಇನ್ನೇನು ಬೇಸಿಗೆ ಕಾಲ ಬರಲಿದ್ದು ಹನಿ ನೀರಿಗೂ ಸಹ ಉತ್ತರ ಕರ್ನಾಟಕ ಪರಿತಪುವ ಕಾಲ ಎದುರಾಗುತ್ತೆ. ಹೀಗಾಗಿ ಸಾಂಗ್ಲಿ ಜಿಲ್ಲಾಡಳಿತ ಎಚ್ಚೆತ್ತುಕೊಳ್ಳಬೇಕು ಇಲ್ಲಿನ ಜನಪ್ರತಿನಿಧಿಗಳೂ ಸಹ ಅಲ್ಲಿನ ಜಿಲ್ಲಾಡಳಿತವನ್ನು ಎಚ್ಚೆತ್ತಕೊಳ್ಳುವಂತೆ ಮಾಡಬೇಕು ಎನ್ನುವುದು ಉತ್ತರ ಕರ್ನಾಟಕದ ಜನರ ಆಗ್ರಹ.