ಸಾಮಾಜಿಕ ಜಾಲತಾಣ ಎಷ್ಟು ಪ್ರಯೋಜನಕಾರಿಯಾಗಿದೆಯೋ ಅಷ್ಟೇ ಅಪಾಯಕಾರಿಯೂ ಹೌದು. ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಸಾಮಾಜಿಕ ಜಾಲತಾಣದಲ್ಲಿ ಹಾಕಿದ ವಿಡಿಯೋ ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು (ಆ.06): ಸಾಮಾಜಿಕ ಜಾಲತಾಣ ಎಷ್ಟು ಪ್ರಯೋಜನಕಾರಿಯಾಗಿದೆಯೋ ಅಷ್ಟೇ ಅಪಾಯಕಾರಿಯೂ ಹೌದು. ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಸಾಮಾಜಿಕ ಜಾಲತಾಣದಲ್ಲಿ ಹಾಕಿದ ವಿಡಿಯೋ ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರ ಧರ್ಮ ಪತ್ನಿಯೊಬ್ಬರ 'ರೀಲ್ಸ್ ಹುಚ್ಚ' ಈಗ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟೀಕೆಗೊಳಗಾಗಿದೆ.
ಬೆಲ್... ಬೆಲ್.. ಬೆಲ್ಲೂ ಹೊಡಿತಾನೆ ಅಂತ ಪ್ರಿನ್ಸಿಪಾಲರನ್ನ ತೋರಿಸಿದ ಮೇಡಂ: ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಬಾಳಗಡಿಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರ ಧರ್ಮಪತ್ನಿ ಕಾಲೇಜಿನ ಕಾರಿಡಾರ್‌ನಲ್ಲಿ ರೀಲ್ಸ್ ಮಾಡಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವೀಡಿಯೋದಲ್ಲಿ ಸ್ವತಃ ಪ್ರಾಂಶುಪಾಲರು ಕೂಡ ಇದ್ದು, ಸದ್ಯ ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ. ಬೆಲ್.. ಬೆಲ್.. ಬೆಲ್ಲೂ ಹೊಡಿತಾನೆ ಹಾಡಿಗೆ ಮೇಡಮ್ ಆ್ಯಕ್ಟಿಂಗ್ ಮಾಡಿದ್ದು, 14 ಸೆಕೆಂಡ್ ಇರುವ ಈ ವೀಡಿಯೊ ತುಣುಕು ಇದೀಗ ಕಾಲೇಜಿನ ವಿದ್ಯಾರ್ಥಿಗಳ ಮೊಬೈಲ್ ಸ್ಟೇಟಸ್‌ಗಳಲ್ಲೇ ವೈರಲ್ ಆಗಿದೆ.
ಚಿಕ್ಕಮಗಳೂರು: ಎರಡೇ ತಿಂಗಳಲ್ಲಿ ಹಾಳಾದ ರಸ್ತೆ, ಕಿತ್ತು ಬರ್ತೀರೋ ಟಾರ್ ಕಂಡು ಜನರ ಆಕ್ರೋಶ
'ನಾವು ಹುಡುಗೀರು ರೆಡಿ ಆಗೋದು ಊರೋರೆಲ್ಲಾ ನೋಡ್ಲಿ ಅಂತ ಜನ ಅಂದ್ಕೋತ್ತಾರೆ, ಯಾರ್ ಗುರು ಹೇಳಿದ್ದು.. ನಮ್ ಹುಡ್ಗ ನೋಡ್ಲಿ ಅಂತ ಎಂಬ ಹಿನ್ನಲೆ ಧ್ವನಿ ಮುಗೀತಿದ್ದಾಗೆ ಮೇಡಮ್ಮು ತಮ್ಮ ಹುಡುಗನನ್ನು ವೀಡಿಯೋದಲ್ಲಿ ತೋರಿಸಿದ್ದಾರೆ. ಕಾಲೇಜಿನ ಮೇಲ್ಮಹಡಿಯಲ್ಲಿ ನಿಂತು ಕೆಳಗೆ ಕಾರಿಡಾರ್‌ನಲ್ಲಿ ನಡ್ಕೊಂಡು ಬರ್ತಿರೋ ತಮ್ಮ ಪತಿಯನ್ನ (ಕಾಲೇಜು ಪ್ರಾಂಶುಪಾಲರಾದ ಡಾ ಅನಂತ್ ) ತೋರಿಸಿದ್ದಾರೆ. ಇತ್ತ ಬೆಲ್ ಬೆಲ್ ಬೆಲ್ಲೂ ಹೊಡಿತಾನೆ.. ಎದೆಯಾ ಒಳಗೆ ಗಲ್ ಗಲ್.. ಎನ್ನುತ್ತಾ ರೀಲ್ಸ್ ಮುಗಿಯುತ್ತದೆ. ಕಾಲೇಜ್ ಕಾರಿಡಾರಿನಲ್ಲೇ ವಿಡೀಯೋ ಮಾಡಿರುವುದರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಜೊತೆಗೆ ಕಾಲೇಜಿನ ಆವರಣದಲ್ಲಿ ಮೊಬೈಲ್ ನಿಷೇಧವಿದ್ದರೂ ಬಳಕೆ ಮಾಡಿರುವುದು ಟೀಕೆಗೆ ಗುರಿಯಾಗಿದೆ.
ವಿದ್ಯಾರ್ಥಿಗಳಿಗೆ ಏನು ಸಂದೇಶ ಕೊಡಲು ಹೊರಟಿದ್ದೀರಿ? ಸಾಮಾಜಿಕ ಜಾಲತಾಣದಲ್ಲಿ ತರಾಟೆ: ಸದ್ಯ ಈ ವೀಡಿಯೋವನ್ನು ಕಾಲೇಜಿನ ವಿದ್ಯಾರ್ಥಿಗಳ ಸ್ಟೇಟಸ್‌ನಲ್ಲಿ ಹಾಕಿಕೊಂಡಿದ್ದು, ಇದೀಗ ಫೇಸ್‌ಬುಕ್, ವಾಟ್ಸಾಪ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ. ಇವರು ಮಾಡಿರುವ ವೀಡಿಯೋದಲ್ಲಿರುವ ಡೈಲಾಗ್‌ಗಳು, ಸಾಂಗ್‌ಗಳು ವಿದ್ಯಾರ್ಥಿಗಳಿಗೆ ಏನು ಸಂದೇಶ ನೀಡಿದಂತಾಗುತ್ತದೆ? ಕಾಲೇಜಿನ ಮುಖ್ಯಸ್ಥರೇ ಈ ರೀತಿ ವರ್ತಿಸಿದರೆ ವಿದ್ಯಾರ್ಥಿಗಳು ಇದನ್ನೇ ಫಾಲೋ ಮಾಡುವುದಿಲ್ಲವೇ ಎಂಬ ಪ್ರಶ್ನೆಗಳು ಮೂಡಿವೆ. ಈ ಕುರಿತು ಶಿಕ್ಷಣ ಇಲಾಖೆಯ ಅಧಿಕಾರಿಗಳು ಪ್ರಾಂಶುಪಾಲರ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕು ಎಂಬ ಮಾತುಗಳು ಕೇಳಿಬಂದಿವೆ.
ಅಕ್ಕ...ಅಕ್ಕ ಎನ್ನುತ್ತಲೇ ಅನುಶ್ರೀ ಮುಂದೆ ಮಹತ್ವದ ಬೇಡಿಕೆ ಇಟ್ಟ ಕಾಫಿ ನಾಡು ಚಂದು!
ಕಾಲೇಜಿನಲ್ಲಿ ಇನ್ನು ಮುಂದೆ ರೀಲ್ಸ್ ಮಾಡುವಂತಿಲ್ಲ, ಕ್ಷಮೆ ಕೇಳಿ ಪ್ರಾಂಶುಪಾಲರಿಂದಲೇ ನೋಟಿಸ್: ಇನ್ನು ಈ ವೀಡಿಯೋ ವೈರಲ್ ಆಗುತ್ತಿದ್ದಂತೆ ವಿವಿಧ ಸಂಘಟನೆಗಳ ಮುಖಂಡರು ಕಾಲೇಜಿಗೆ ಭೇಟಿ ನೀಡಿದ್ದು ಪ್ರಾಂಶುಪಾಲರಾದ ಡಾ. ಅನಂತರನ್ನ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಬಳಿಕ ಪ್ರಿನ್ಸಿಪಾಲ್ ಕ್ಷಮೆ ಕೇಳಿದ್ದು, ಇನ್ನು ಮುಂದೆ ಕಾಲೇಜಿನ ಆವರಣದಲ್ಲಿ ಟಿಕ್ ಟಾಕ್/ ರೀಲ್ಸ್/ ಫೋಟೋ/ ವೀಡಿಯೋ ಮಾಡಲು ಅವಕಾಶವಿಲ್ಲ. ಒಂದು ವೇಳೆ ನಿಯಮ ಮೀರಿದಲ್ಲಿ ಮೇಲಾಧಿಕಾರಿಗಳಿಗೆ ಕ್ರಮ ಕೈಗೊಳ್ಳಲು ವರದಿ ಮಾಡಲಾಗುವುದು ಎಂದು ನೋಟಿಸ್‌ನಲ್ಲಿ ಸ್ವತಃ ಪ್ರಾಂಶುಪಾಲರೇ ತಿಳಿಸಿದ್ದಾರೆ.