* ಮಹಾರಾಷ್ಟ್ರದ ಪುಣೆಯಲ್ಲಿ ನಿಧನರಾದ ಗೋಖಲೆ
* ಅಪ್ರತಿಮ ರಾಷ್ಟ್ರೀಯವಾದಿ ರಾಜೇಂದ್ರ ಗೋಖಲೆ
* ಗೋಖಲೆ ನಿಧನಕ್ಕೆ ಸಿಎಂ ಸೇರಿದಂತೆ ಗಣ್ಯರ ಸಂತಾಪ
ಧಾರವಾಡ(ನ.29): ಹಿರಿಯ ಆರೆಸ್ಸೆಸ್(RSS) ಮುಖಂಡ, ಬಿಜೆಪಿ(BJP) ನಾಯಕ ರಾಜೇಂದ್ರ ಕೃಷ್ಣಾಜಿ ಗೋಖಲೆ (65) ಭಾನುವಾರ ಅನಾರೋಗ್ಯದಿಂದ ಪುಣೆಯಲ್ಲಿ(Pune) ನಿಧನರಾದರು. ಕಿಡ್ನಿ ವೈಫಲ್ಯ ಸೇರಿ ವಯೋಸಹಜ ಅನಾರೋಗ್ಯದ ಕಾರಣ ಹಲವು ದಿನಗಳಿಂದ ಅವರು ಪುಣೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು, ಅಲ್ಲೇ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು.
ಮೃತರಿಗೆ ಪತ್ನಿ, ಒಬ್ಬ ಪುತ್ರ ಇದ್ದಾರೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಬಿಜೆಪಿ ಹಿರಿಯ ಮುಖಂಡರಾದ ಎಲ್.ಕೆ. ಆಡ್ವಾಣಿ, ನಾನಾಜಿ ದೇಶಮುಖ್, ಜಗನ್ನಾಥರಾವ್ ಜೋಶಿ ಸೇರಿ ಅನೇಕ ಹಿರಿಯರೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ರಾಜೇಂದ್ರ ಗೋಖಲೆ(Rajendra Gokhale), ಉತ್ತರ ಕರ್ನಾಟಕ(North Karnataka) ಭಾಗದಲ್ಲಿ ಅನೇಕ ರಾಜಕಾರಣಿಗಳನ್ನು(Politicians) ಬೆಳೆಸಲು ಕಾರಣಕರ್ತರಾಗಿದ್ದರು.
undefined
Heart Attack| ಕನ್ನಡಪ್ರಭ ಕೋಲಾರ ಜಿಲ್ಲಾ ವರದಿಗಾರ ಸತ್ಯರಾಜ್ ನಿಧನ
ಅಸ್ಸಾಂನಲ್ಲಿ(Assam) ಪ್ರತ್ಯೇಕತಾವಾದಿಗಳ ಪ್ರಾಬಲ್ಯ ಕಡಿಮೆಯಾಗಿ ರಾಷ್ಟ್ರೀಯವಾದಿಗಳ ಧ್ವನಿ ಪ್ರಬಲವಾಗುವುದರಲ್ಲಿ ರಾಜೇಂದ್ರ ಗೋಖಲೆ ಪಾತ್ರ ದೊಡ್ಡದು. ತುರ್ತು ಪರಿಸ್ಥಿತಿ(Emergency) ಸಂದರ್ಭದಲ್ಲಿ ಜೈಲುವಾಸವನ್ನೂ(Jail) ಅನುಭವಿಸಿದ್ದರು. ಹುಬ್ಬಳ್ಳಿ ಈದ್ಗಾ ಮೈದಾನ ಸೇರಿ ಅನೇಕ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದ ಅವರು ರಾಷ್ಟ್ರ ರಾಜಕಾರಣದಲ್ಲಿ ಸಾಕಷ್ಟು ಅವಕಾಶಗಳು ಒಲಿದ ಬಂದರೂ ಧಾರವಾಡದಲ್ಲೇ(Dharwad) ರಾಜಕೀಯವಾಗಿ ಬೆಳೆಯಲು ಪ್ರಯತ್ನಿಸಿದ್ದರು. ಆದರೆ, ಕೈತಪ್ಪಿದ ರಾಜಕೀಯ ಅವಕಾಶಗಳಿಂದ ಬೇಸತ್ತು ಇತ್ತೀಚಿನ ವರ್ಷಗಳಲ್ಲಿ ರಾಜಕೀಯದಿಂದ ದೂರ ಸರಿದಿದ್ದರು.
ಅಪ್ರತಿಮ ರಾಷ್ಟ್ರೀಯವಾದಿ ರಾಜೇಂದ್ರ ಗೋಖಲೆ!
ಅನಾರೋಗ್ಯದಿಂದ ಭಾನುವಾರ ಮೃತಪಟ್ಟ ರಾಜೇಂದ್ರ ಗೋಖಲೆ ಅವರು ಮಾಜಿ ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿ(Atal Bihari Vajpayee), ಎಲ್.ಕೆ. ಆಡ್ವಾಣಿ(LK Advani), ನಾನಾಜಿ ದೇಶಮುಖ, ಜಗನ್ನಾಥರಾವ್ ಜೋಶಿ ಸೇರಿದಂತೆ ರಾಷ್ಟ್ರಮಟ್ಟದ ಅನೇಕ ಹಿರಿಯ ನಾಯಕರಿಗೆ ಆಪ್ತರಾಗಿದ್ದು ಎಂಬುದು ಸಾಮಾನ್ಯದ ಮಾತಲ್ಲ.
ಉತ್ತರ ಕರ್ನಾಟಕ ಭಾಗಕ್ಕೆ ಬಿಜೆಪಿ ರಾಷ್ಟ್ರೀಯ ನಾಯಕರು ಆಗಮಿಸಿದರೆ ಧಾರವಾಡದ ಗೋಖಲೆ ಅವರ ಮನೆಗೆ ಭೇಟಿ ನೀಡುತ್ತಿದ್ದರು. ಹೀಗಾಗಿ ಅವರ ಇಲ್ಲಿನ ರಾಜನಗರದ ಮನೆ ಇಂದಿಗೂ ‘ಸಂಘದ ಮನೆ’ ಎಂದು ಹೆಸರುವಾಸಿ. ಈ ಮನೆ ಮುಂದೆ ರಾಜ್ಯ ಹಾಗೂ ಕೇಂದ್ರದ ಹಲವು ಹಿರಿಯ ನಾಯಕರು ಈ ಹಿಂದೆ ಬಿ ಫಾರ್ಮ್‌ಗಾಗಿ ಸಾಲಾಗಿ ನಿಂತುಕೊಳ್ಳುತ್ತಿದ್ದರು. ಬಹುತೇಕ ಕ್ಷೇತ್ರಗಳ ಅಭ್ಯರ್ಥಿಗಳನ್ನು ಗೋಖಲೆ ಅವರೆ ನಿರ್ಧರಿಸುತ್ತಿದ್ದರು.
ಬಿಜೆಪಿ ಬೆಳವಣಿಗೆಗೆ ರಾಜೇಂದ್ರ ಗೋಖಲೆ ಅವರ ಕೊಡುಗೆ ಅಪಾರ. ಎಷ್ಟೋ ಅಭ್ಯರ್ಥಿಗಳಿಗೆ ಬಿ ಫಾರಂ ನೀಡಿದ ಗೋಖಲೆ ಅವರಿಗೆ ಒಂದು ಸಂದರ್ಭದಲ್ಲಿ ಟಿಕೆಟ್ ಸಿಗದೇ ಬೇಸತ್ತು ರಾಜಕೀಯದಿಂದಲೇ ಅವರು ದೂರು ಉಳಿದರು. ಬಿಜೆಪಿ ಮುಖಂಡರು ನಿರೀಕ್ಷೆಯಂತೆ ಅವರ ಸಹಾಯಕ್ಕೆ ಬರಲಿಲ್ಲ ಎಂಬ ಬೇಸರವೂ ಇದೆ. ಅವರು ಅನಾರೋಗ್ಯದಿಂದ ಬಳಲುತ್ತಿದ್ದಾಗಲೂ ರಾಜಕೀಯ ಮುಖಂಡರಿಂದ ಅನಾದರಕ್ಕೆ ಒಳಗಾದರು ಎನ್ನುವ ಮಾತುಗಳು ಕೇಳಿಬರುತ್ತಿವೆ.
ರಾಜೇಂದ್ರ ಗೋಖಲೆ ಒಬ್ಬ ಚತುರ ಸಂಘಟಕ
ರಾಜೇಂದ್ರ ಗೋಖಲೆ ಒಬ್ಬ ಚತುರ ಸಂಘಟಕ. ಉತ್ತಮ ನಾಯಕತ್ವ ಗುಣ ಹೊಂದಿದ್ದ ಅವರು ವಿದ್ಯಾರ್ಥಿ ಜೀವನದಿಂದ ಹೋರಾಟ ಪ್ರವೃತ್ತಿ ಹೊಂದಿದ್ದರು. ಹಲವು ಕಾರ್ಯಕರ್ತರಲ್ಲಿ ನಾಯಕತ್ವ ಗುಣ ಬೆಳೆಸಿದವರು. ವಿದ್ಯಾರ್ಥಿ ಜೀವನದ ಆನಂತರ ಪೂರ್ಣ ಸಮಯ ಸಂಘಟನೆಗಾಗಿ ಮೀಸಲಿಟ್ಟು, ಸಂಘಟನೆ ನಿರ್ಧಾರದಂತೆ ಅಸ್ಸಾಂ ರಾಜ್ಯದಲ್ಲಿ ಹಲವು ವರ್ಷ ಕೆಲಸ ಮಾಡಿದವರು. ರಾಷ್ಟ್ರೀಯ ವಿಷಯಗಳ ಬಗ್ಗೆ ಆಳವಾದ ಅಧ್ಯಯನಶೀಲರಾಗಿ ವಿಷಯ ಮಂಡನೆ ಮಾಡ ಬಲ್ಲವರಾಗಿದ್ದು ವಿಶೇಷ.
RIP: ನಟ ದುನಿಯಾ ವಿಜಯ್‌ಗೆ ಪಿತೃವಿಯೋಗ
ಮುಗಿದ ಅಂತ್ಯಕ್ರಿಯೆ:
ಭಾನುವಾರ ಬೆಳಗ್ಗೆ ಪುಣೆಯಲ್ಲಿ ನಿಧನರಾದ ರಾಜೇಂದ್ರ ಗೋಖಲೆ ಅವರ ಮೃತದೇಹವನ್ನು ಧಾರವಾಡ ರಾಮನಗರ ಮನೆಗೆ ರಾತ್ರಿ ವೇಳೆಗೆ ತೆಗೆದುಕೊಂಡು ಬಂದು, ಕೆಲ ಕಾಲ ಸಾರ್ವಜನಿಕರ ದರ್ಶನಕ್ಕೆ ಇಡಲಾಯಿತು. ಆನಂತರ ಹೊಸಯಲ್ಲಾಪುರ ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರ ಮಾಡಲಾಯಿತು. ಅನೇಕ ಗಣ್ಯರು ಅಂತ್ಯಕ್ರಿಯೆಯಲ್ಲಿ(Funeral) ಭಾಗಿಯಾಗಿದ್ದರು.
ಅನಾರೋಗ್ಯದಿಂದ ಬಳಲುತ್ತಿದ್ದರು:
ಆರ್‌ಎಸ್‌ಎಸ್ ಮುಖಂಡ, ಬಿಜೆಪಿ ನಾಯಕ ರಾಜೇಂದ್ರ ಕೃಷ್ಣಾಜಿ ಗೋಖಲೆ ಅವರಿಗೆ ಪತ್ನಿ, ಓರ್ವ ಪುತ್ರ ಇದ್ದಾರೆ. ರಾಷ್ಟ್ರ ರಾಜಕಾರಣದಲ್ಲಿ ಸಾಕಷ್ಟು ಅವಕಾಶಗಳು ಒಲಿದ ಬಂದರೂ ಧಾರವಾಡದಲ್ಲಿಯೇ ರಾಜಕೀಯವಾಗಿ ಬೆಳೆಯಲು ಪ್ರಯತ್ನಿಸಿದರು. ಆದರೆ, ಕೈತಪ್ಪಿದ ರಾಜಕೀಯ ಅವಕಾಶಗಳಿಂದ ಬೇಸತ್ತು ಇತ್ತೀಚಿನ ವರ್ಷಗಳಲ್ಲಿ ರಾಜಕೀಯದಿಂದ ದೂರ ಸರಿದಿದ್ದರು.
ಗಣ್ಯರಿಂದ ಸಂತಾಪ:
ರಾಜೇಂದ್ರ ಗೋಖಲೆ ಅವರ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಸಭಾಪತಿ ಬಸವರಾಜ ಹೊರಟ್ಟಿ ಅವರು ಸೇರಿದಂತೆ ಗಣ್ಯರು ಸಂತಾಪ ಸೂಚಿಸಿದ್ದಾರೆ.