Selfie Tragedy: ಡ್ಯಾಂನಿಂದ ಏಕಾಏಕಿ ನೀರು, ನಾಲ್ವರ ದುರ್ಮರಣ

By Kannadaprabha News  |  First Published Nov 29, 2021, 8:07 AM IST

*   ತುಮಕೂರು ಜಿಲ್ಲೆಯ ಮಾರ್ಕೋನಹಳ್ಳಿ ಜಲಾಶಯದಲ್ಲಿ ನಡೆದ ಘಟನೆ
*   ಡ್ಯಾಂ ಬಳಿ ಆಡುತ್ತಿದ್ದ ನಾಲ್ವರು ನೀರುಪಾಲು
*  ನೀರಿನ ಸಂಪ್‌ ಸ್ವಚ್ಛತೆಗೆ ಇಳಿದ ಇಬ್ಬರು ಸಾವು


ಕುಣಿಗಲ್‌(ನ.29): ಆಟವಾಡಲು ಹೋಗಿದ್ದ ಇಬ್ಬರು ಯುವತಿಯರೂ ಸೇರಿ 4 ಮಂದಿ ಕೊಚ್ಚಿ ಹೋದ ಘಟನೆ ತುಮಕೂರು(Tumakuru) ಜಿಲ್ಲೆಯ ಮಾರ್ಕೋನಹಳ್ಳಿ ಜಲಾಶಯದಲ್ಲಿ(Markonahalli Dam) ಭಾನುವಾರ ಸಂಜೆ ನಡೆದಿದೆ. 

ಕುಣಿಗಲ್‌(Kunigal) ಪೇಟೆ ಬೀದಿಯ ಪರ್ವಿನ್‌ ತಾಜ್‌(23) ಸಾದೀಯಾ(17) ಹಾಗೂ ಯಡಿಯೂರು ಹೋಬಳಿ ಬೀರಗಾನಹಳ್ಳಿಯ ಅಪ್ಪು(20) ಹಾಗೂ ರಾಜು(23) ಕಣ್ಮರೆಯಾದವರು(Missing). ಎರಡೂ ಕುಟುಂಬದವರು ಮಾರ್ಕೋನಹಳ್ಳಿ ಜಲಾಶಯದ ಹಿನ್ನೀರಿನಲ್ಲಿ ಕಡಿಮೆ ನೀರಿದ್ದರಿಂದ ಆಟವಾಡುತ್ತಾ ಸೆಲ್ಫಿ(Selfie) ತೆಗೆದುಕೊಳ್ಳುತ್ತಿದ್ದರು. ಆದರೆ ಆ ವೇಳೆ ಜಲಾಶಯಕ್ಕೆ ಬರುತ್ತಿದ್ದ ಒಳ ಹರಿವು ಹೆಚ್ಚಾದ ಹಿನ್ನೆಲೆಯಲ್ಲಿ ಸ್ವಯಂ ಚಾಲಿತ ಯಂತ್ರಗಳಿಂದ 3 ಸಾವಿರ ಕ್ಯುಸೆಕ್‌ ನೀರು ಹೊರ ಹೋಗಿದೆ. ನೀರಿನ ರಭಸಕ್ಕೆ ಈ ನಾಲ್ವರು ಕೊಚ್ಚಿ ಹೋಗಿದ್ದಾರೆ.

Tap to resize

Latest Videos

Selfie Tragedy| ಸೆಲ್ಫಿ ತೆಗೆಯುವಾಗ ರೈಲಿಂದ ಬಿದ್ದು ಯುವಕ ಸಾವು

11 ವರ್ಷದ ತಬ್ರೇಜ್‌ ಎಂಬ ಬಾಲಕ ಕೊಚ್ಚಿ ಹೋಗುತ್ತಿದ್ದ ವೇಳೆ ಕುಟುಂಬಸ್ಥರು ಎಳೆದುಕೊಂಡ ಹಿನ್ನೆಲೆಯಲ್ಲಿ ಆತ ಬದುಕುಳಿದಿದ್ದಾನೆ. ನೀರಿನಲ್ಲಿ ಕೊಚ್ಚಿ ಹೋದ ನಾಲ್ವರ ಪತ್ತೆಗೆ ಪೊಲೀಸರು(Police) ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಶ್ರಮಿಸುತ್ತಿದ್ದಾರೆ.  

ನೀರಿನ ಸಂಪ್‌ ಸ್ವಚ್ಛತೆಗೆ ಇಳಿದ ಇಬ್ಬರು ಸಾವು

ಕಡೂರು(Kadur): ನೀರಿನ ಸಂಪಿಗೆ ಇಳಿದಿದ್ದ ಇಬ್ಬರು ಉಸಿರುಗಟ್ಟಿ ಸ್ಥಳದಲ್ಲೇ ಮೃತಪಟ್ಟಿರುವ(Dead) ಘಟನೆ ಪಟ್ಟಣದ ದೊಡ್ಡಪೇಟೆಯಲ್ಲಿ ಭಾನುವಾರ ನಡೆದಿದೆ.

ಸುಭಾಷ್‌ ನಗರದ ಮೇಸ್ತ್ರಿ ಕುಮಾರ್‌ (55) ಮತ್ತು ಕಲ್ಲಾಪುರದ ಮಾದೇವಪ್ಪ ಎಂಬವರ ಪುತ್ರ ವಸಂತ (30) ಮೃತಪಟ್ಟವರು. ಅಸ್ವಸ್ಥ ಮತ್ತೊಬ್ಬ ಕಾರ್ಮಿಕ ಕಲ್ಲಾಪುರದ ಮಹಮದ್‌ ಖಯೂಮ್‌ (25) ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಎಪಿಎಂಸಿ ಮಾಜಿ ಅಧ್ಯಕ್ಷ ದಿ.ಲಕ್ಕಪ್ಪ ಅವರ ಮನೆ ಎದುರು ಭಾನುವಾರ ಬೆಳಗ್ಗೆ ಸುಮಾರು 9.30 ರ ಸುಮಾರಿಗೆ ಈ ದುರ್ಘಟನೆ ನಡೆದಿದೆ.

ದೊಡ್ಡಪೇಟೆಯ ಹೂವಿನ ವ್ಯಾಪಾರಿ ಕುಮಾರ್‌ ಮನೆ ನಿರ್ಮಿಸಲು ತಳಪಾಯ ಹಾಕಿ, ಪಿಲ್ಲರ್‌ ನಿರ್ಮಿಸಲು ಮುಂದಾಗಿದ್ದರು. ನಿರ್ಮಾಣದ ಗುತ್ತಿಗೆಯನ್ನು ತಮ್ಮ ಪತ್ನಿಯ ಸಹೋದರ ಕುಮಾರ್‌ ಎಂಬವರಿಗೆ ಗುತ್ತಿಗೆ ನೀಡಿದ್ದರು. ಮೇಸ್ತ್ರಿ ಕುಮಾರ್‌ ಕಾರ್ಮಿಕರೊಂದಿಗೆ ಭಾನುವಾರ ಬೆಳಗ್ಗೆ ಬಂದು ನಿರ್ಮಾಣ ಹಂತದಲ್ಲಿದ್ದ ನೀರಿನ ಸಂಪಿಗೆ (ತೊಟ್ಟಿ) ಇಳಿದು ಸ್ವಚ್ಛಗೊಳಿಸಲು ಸಂಪಿಗೆ ಇಳಿದರು ಎನ್ನಲಾಗಿದೆ.

ಮೊದಲು ಕಾರ್ಮಿಕ ಮೊಹಮ್ಮದ್‌ ಖಯೂಮ್‌ ಏಣಿ ಮೂಲಕ ಸಂಪಿನೊಳಕ್ಕೆ ಇಳಿದಿದ್ದರು. ಆಗ ಅವರಿಗೆ ಉಸಿರುಗಟ್ಟಿದ ಅನುಭವವಾಗಿದೆ. ತುಂಬಾ ದಿನಗಳಿಂದ ಸಂಪನ್ನು ಸ್ವಚ್ಛಗೊಳಿಸದೇ ಇದ್ದುದರಿಂದ ಹೀಗಾಗಿರಬಹುದು ಎಂದು ಆತ ಮತ್ತಷ್ಟುಆಳಕ್ಕೆ ಇಳಿದಿದ್ದಾರೆ. ಆಗ ಉಸಿರಾಡಲು ಸಾಧ್ಯವಾಗದೇ ಕಿರುಚಾಡಿದ್ದಾರೆ. ತಕ್ಷಣವೇ ಮೇಸ್ತ್ರಿ ಕುಮಾರ್‌, ಮತ್ತೊಬ್ಬ ಕಾರ್ಮಿಕ ವಸಂತ ಆತನ ನೆರವಿಗೆ ಧಾವಿಸಿ, ಸಂಪಿಗೆ ಇಳಿದಿದ್ದಾರೆ. ತಕ್ಷಣ ಅವರಿಬ್ಬರಿಗೂ ಸಹ ಉಸಿರುಗಟ್ಟಿದಂತಾಗಿ, ಏಣಿಯಿಂದ ಜಾರಿ ಸಂಪಿನೊಳಕ್ಕೆ ಬಿದ್ದಿದ್ದಾರೆ. ಆದರೆ, ಕುಮಾರ್‌ ಮತ್ತು ಕಾರ್ಮಿಕ ವಸಂತ ಮಾತ್ರ ಸ್ಥಳದಲ್ಲೇ ಮೃತಪಟ್ಟರು.

Selfie Tragedy| ಕಾರಿನ ಮುಂದೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವಾಗ ಕ್ಯಾಂಟರ್‌ ಡಿಕ್ಕಿ: ಇಬ್ಬರ ಸಾವು

ಮೊದಲೇ ಕೆಳಕ್ಕೆ ಬಿದ್ದಿದ್ದ ಖಯೂಮ್‌ ಹೇಗೊ ಸಾವರಿಸಿಕೊಂಡು ಮೇಲೆ ಬಂದಿದ್ದು, ಆಗ ಅಲ್ಲಿಯೇ ಇದ್ದ ಸ್ಥಳೀಯರು, ಮನೆ ಮಾಲೀಕರು ಕೂಡಲೇ ಅವರನ್ನು ಕಡೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದರು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಚಿಕ್ಕಮಗಳೂರಿಗೆ(Chikkamagaluru) ಕಳುಹಿಸಲಾಗಿದೆ. ಘಟನೆ ನಡೆದ ಸ್ಥಳದಲ್ಲಿ ನೂರಾರು ಜನರು ಆಗಮಿಸಿದ್ದರು. ಸ್ಥಳಕ್ಕೆ ಕಡೂರು ಪೊಲೀಸ್‌ ಪಿಎಸ್‌ಐ ಎನ್‌.ಕೆ.ರಮ್ಯಾ ಮತ್ತು ಸಿಬ್ಬಂದಿ ಆಗಮಿಸಿ ಶವಗಳನ್ನು ಆಸ್ಪತ್ರೆಗೆ ಸಾಗಿಸಲು ಕ್ರಮಕೈಗೊಂಡರು. ಶವಗಳನ್ನು ಕಡೂರು ಸಾರ್ವಜನಿಕ ಆಸ್ಪತ್ರೆ ಶವಾಗಾರದಲ್ಲಿ(Mortuary) ಇರಿಸಲಾಗಿದೆ.

ಮಾಜಿ ಶಾಸಕ ವೈಎಸ್‌ವಿ ದತ್ತ ಮತ್ತು ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್‌ ಸೇರಿದಂತೆ ಅನೇಕ ಮುಖಂಡರು ಸ್ಥಳಕ್ಕೆ ಭೇಟಿ ನೀಡಿ ಮೃತರ ಕುಟುಂಬದವರಿಗೆ ಸಾಂತ್ವನ(Condolence)ಹೇಳಿದರು. ಆಸ್ಪತ್ರೆಗೆ ಆಗಮಿಸಿದ್ದ ಬಂಧುಗಳು ಘಟನೆ ಕೇಳಿ ಮಮ್ಮಲ ಮರುಗಿದರು. ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
 

click me!