Covid19: ಎಸ್‌ಡಿಎಂ ಆಸ್ಪತ್ರೆಯ ಒಪಿಡಿ ಬಂದ್‌

By Kannadaprabha News  |  First Published Nov 29, 2021, 7:25 AM IST

*  ಎಸ್‌ಡಿಎಂನ ಎಲ್ಲರ ಕೋವಿಡ್‌ ಪರೀಕ್ಷೆ ಮುಕ್ತಾಯ
*  3873ರಲ್ಲಿ 306 ಕೋವಿಡ್‌ ದೃಢ
*  500 ಮೀಟರ್‌ ವ್ಯಾಪ್ತಿ ಜನರ ಪರೀಕ್ಷೆ ಸಹ 


ಧಾರವಾಡ(ನ.29):  ಕಳೆದ ಮೂರು ದಿನಗಳಿಂದ ತೀವ್ರ ಆತಂಕಕ್ಕೆ ಕಾರಣವಾಗಿದ್ದ ಎಸ್‌ಡಿಎಂನಲ್ಲಿ(SDM) ಸ್ಫೋಟಗೊಂಡಿದ್ದ ‘ಕೋವಿಡ್‌ ಸೋಂಕು’ ಇದೀಗ ತಹಬದಿಗೆ ಬರುವ ಲಕ್ಷಣಗಳು ಗೋಚರಿಸುತ್ತಿವೆ. ನ. 17ರಂದು ಡಾ. ಡಿ. ವೀರೇಂದ್ರ ಹೆಗ್ಗಡೆ ಕಲಾಕ್ಷೇತ್ರದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು(Students), ಪ್ರಾಧ್ಯಾಪಕರು ಸೇರಿದಂತೆ ಆಸ್ಪತ್ರೆಯ ಇಡೀ 3,873 ಜನರನ್ನೂ ಪರೀಕ್ಷೆಗೆ ಒಳಪಡಿಸಿದಾಗ 306 ಜನರಿಗೆ ಕೋವಿಡ್‌ ಪಾಸಿಟಿವ್‌ ಬಂದಿರುವುದು ದೃಢವಾಗಿದೆ.

ಕಳೆದ ಮೂರು ದಿನಗಳಿಂದ ಎಸ್‌ಡಿಎಂ ಕಾಲೇಜನ್ನು ತನ್ನ ಸುಪರ್ದಿಗೆ ತೆಗೆದುಕೊಂಡ ಜಿಲ್ಲಾಡಳಿತವು(District Administration) ತೀವ್ರ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡ ಹಿನ್ನೆಲೆಯಲ್ಲಿ ಸೋಂಕಿನ ಪ್ರಮಾಣ ಸದ್ಯ 306ರ ವರೆಗೆ ಬಂದು ನಿಂತಿದೆ. ಸೋಂಕು ಎಸ್‌ಡಿಎಂ ಆವರಣ ಬಿಟ್ಟು ಹೊರ ಹೋಗದಿರಲು ಇದೀಗ ಪರೀಕ್ಷೆಗೆ ಒಳಗಾದ 3,873 ಜನರ ಸಂಪರ್ಕಕ್ಕೆ ಬಂದಿರುವ ವಿದ್ಯಾರ್ಥಿಗಳ ಪಾಲಕರಾಗಲಿ ಅಥವಾ ಆಸ್ಪತ್ರೆಯಲ್ಲಿನ(Hospital) ರೋಗಿಗಳು(Patients) ಮತ್ತು ಅವರ ಸಂಬಂಧಿಗಳಿಗೂ ಪರೀಕ್ಷೆ(Covid Test)ಮಾಡಲಾಗುತ್ತಿದೆ.

Latest Videos

undefined

Omicron Variant: ಹೊಸ ತಳಿ ವೈರಸ್‌ ಭಯ, ಲಸಿಕೆಗೆ ಮುಗಿಬಿದ್ದ ಜನ..!

ಏತ​ನ್ಮಧ್ಯೆ, ಎಸ್‌ಡಿಎಂ ಆವರಣಕ್ಕೆ ಭಾನುವಾರ ಭೇಟಿ ನೀಡಿದ ಸಚಿವ ಶಂಕರ ಪಾಟೀಲ ಮುನೇನಕೊಪ್ಪ(Shankar Patil Munenkoppa), ವಿದ್ಯಾರ್ಥಿಗಳಲ್ಲಿ ಕಾಣಿಸಿಕೊಂಡಿದ್ದ ಕೋವಿಡ್‌(Covid19) ವೈರಾಣು ಸಂಪೂರ್ಣ ಹತೋಟಿಗೆ ಬಂದಿದೆ. ಜಿಲ್ಲೆಯ ಜನತೆ ಆತಂಕಪಡುವ ಅಗತ್ಯವಿಲ್ಲ. ಇಷ್ಟಾಗಿಯೂ ಆವರಣದ 500 ಮೀಟರ್‌ ಸುತ್ತಲಿನ ಪ್ರದೇಶವನ್ನು ಕಂಟೈನ್‌ಮೆಂಟ್‌ ವಲಯವೆಂದು(Containment Zone) ಪರಿಗಣಿಸಿ ಬಿಗಿಕ್ರಮಗಳನ್ನು ಮುಂದುವರಿಸಲಾಗುವುದು. ನ. 17ರಂದು ಕಲಾಕ್ಷೇತ್ರದಲ್ಲಿ ನಡೆದ ವಿದ್ಯಾರ್ಥಿಗಳ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಹಾಗೂ ಪಾಲಕರು(Parents) ಭಾಗವಹಿಸಿದ್ದರು. ಅವರಲ್ಲಿ ಜ್ವರ, ಕೆಮ್ಮು ಕಂಡುಬಂದಿದ್ದರಿಂದ ತಪಾಸಣೆಗೊಳಪಡಿಸಿದಾಗ ಕೋವಿಡ್‌ ದೃಢಪಟ್ಟಿದೆ. ಆನಂತರ ಉಳಿದರೆಲ್ಲರೂ ಸೇರಿ 3,973 ಜನರನ್ನು ತಪಾಸಣೆ ಒಳಪಡಿಸಲಾಗಿದೆ. ಇದೀಗ ಎಲ್ಲರ ವರದಿಗಳು ಬಂದಿದ್ದು, 306 ಜನರಲ್ಲಿ ಸೋಂಕು ದೃಢಪಟ್ಟಿದೆ. ಕೇರಳ(Kerala), ಮಹಾರಾಷ್ಟ್ರ(Maharashtra) ಹಾಗೂ ಇತರ ರಾಜ್ಯಗಳಿಂದ ಬಂದ ವಿದ್ಯಾರ್ಥಿಗಳಿಂದ ಸೋಂಕು ಹಬ್ಬಿರಬಹುದಾದ ಸಾಧ್ಯತೆಗಳಿದ್ದು ಪತ್ತೆ ಹಚ್ಚಲಾಗುತ್ತಿದೆ. ಎಸ್‌ಡಿಎಂ ಸುತ್ತಲಿನ 500 ಮೀಟರ್‌ ವ್ಯಾಪ್ತಿಯ ಜನರನ್ನೂ ತಪಾಸಣೆ ಮಾಡಲಾಗುತ್ತಿದೆ ಎಂದು ಮಾಧ್ಯಮಗಳಿಗೆ ಮಾಹಿತಿ ನೀಡಿದರು.

ಶಾಸಕ ಅರವಿಂದ ಬೆಲ್ಲದ(Aravind Bellad), ಜಿಲ್ಲಾ​ಧಿಕಾರಿ ನಿತೇಶ್‌ ಕೆ. ಪಾಟೀಲ, ಎಸ್‌ಡಿಎಂ ವಿವಿ ಕುಲಪತಿ ಡಾ. ನಿರಂಜನ ಕುಮಾರ್‌, ಉಪವಿಭಾಗಾ​ಕಾರಿ ಡಾ. ಬಿ. ಗೋಪಾಲಕೃಷ್ಣ, ಪೊಲೀಸ್‌ ಉಪ ಆಯುಕ್ತ ಸಾಹಿಲ್‌ ಬಾಗ್ಲಾ, ಆರೋಗ್ಯಾಧಿಕಾರಿ ಡಾ. ಯಶವಂತ್‌ ಮದೀನಕರ್‌, ಜಿಲ್ಲಾ ಸಮೀಕ್ಷಣಾಧಿ​ಕಾರಿ ಡಾ. ಸುಜಾತಾ ಹಸವಿಮಠ ಈ ಸಂದರ್ಭದಲ್ಲಿದ್ದರು.

Covid Effect: ಕೋವಿಡ್‌ನಿಂದ ಸೆನ್ಸ್ ಆಫ್ ಸ್ಮೆಲ್ ಕಳೆದುಕೊಂಡಿದ್ದೀರಾದ್ರೆ ಹೀಗ್ ಮಾಡಿ

ಬುಧವಾರ ವರೆಗೆ ಒಪಿಡಿ ಬಂದ್‌:

ಕೋವಿಡ್‌ ನಿಯಂತ್ರಣಕ್ಕೆ ಕೈಗೊಂಡಿರುವ ಬಿಗಿ ಕ್ರಮಗಳನ್ನು ಎಸ್‌ಡಿಎಂನಲ್ಲಿ(SDM) ಮುಂದುವರಿಸಲಾಗಿದ್ದು, ಬರುವ ಡಿಸೆಂಬರ್‌ 1ರ ವರೆಗೆ ಎಸ್‌ಡಿಎಂ ಆಸ್ಪತ್ರೆಯ ಒಪಿಡಿ ಹಾಗೂ ಹೊಸ ರೋಗಿಗಳ ಪ್ರವೇಶ ನಿರ್ಬಂಧಿ​ಸಲಾಗಿದೆ. ಧಾರವಾಡ ಹಾಗೂ ಸುತ್ತಲಿನ ಜಿಲ್ಲೆಗಳಿಂದ ಹುಬ್ಬಳ್ಳಿ(Hubballi) ಧಾರವಾಡಕ್ಕೆ(Dharwad) ಚಿಕಿತ್ಸೆಗಾಗಿ ಬರುವ ರೋಗಿಗಳು ಇದನ್ನು ಗಮನಿಸಿ ಯೋಜನೆಗಳನ್ನು ಮರು ರೂಪಿಸಿಕೊಳ್ಳಬೇಕು ಅಥವಾ ಹುಬ್ಬಳ್ಳಿಯ ಕಿಮ್ಸ್‌, ಧಾರವಾಡ ಜಿಲ್ಲಾ ಆಸ್ಪತ್ರೆ ಅಥವಾ ಮಹಾನಗರದ ಯಾವುದಾದರೂ ಆಸ್ಪತ್ರೆಗಳಿಗೆ ಭೇಟಿ ನೀಡಬಹುದು ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಸೂಚನೆ ನೀಡಿದ್ದಾರೆ. ಜತೆಗೆ ಕೋವಿಡ್‌ ವೈರಾಣುವಿನ ಜಿನೋಮ್‌ ಸಿಕ್ವೆನ್ಸ್‌ ವರದಿಗಳು ಬುಧವಾರ ಕೈಸೇರುವ ನಿರೀಕ್ಷೆ ಇದ್ದು, ಈ ವೈರಾಣು ಯಾವುದು ಎಂಬುದು ಈ ಮೂಲಕ ತಿಳಿಯಲಿದೆ ಎಂದಿದ್ದಾರೆ.
 

click me!