ಬೆಳಗಾವಿ ವಿಚಾರದಲ್ಲಿ ಕನ್ನಡಿಗರ ಮೇಲೆ ಪದೇ ಪದೇ ದಬ್ಬಾಳಿಕೆ ನಡೆಸುತ್ತಿರುವ ಶಿವಸೇನೆ ನಿಷೇಧ ಮಾಡಬೇಕೆಂದು ಜ.30ರಂದು ರೈಲು ತಡೆ ನಡೆಸಲಿದ್ದು ಈ ನಿಟ್ಟಿನಲ್ಲಿ ರೈಲ್ವೆ ಸಂಚಾರದಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ.
ಚಿಕ್ಕಬಳ್ಳಾಪುರ (ಜ.26): ಸರ್ಕಾರ ರಚಿಸಿರುವ ಮರಾಠಿ ಅಭಿವೃದ್ಧಿ ಪ್ರಾಧಿಕಾರವನ್ನು ಕೂಡಲೇ ರದ್ದುಗೊಳಿಸಿ ಬೆಳಗಾವಿ ಗಡಿ ವಿಚಾರದಲ್ಲಿ ಪದೇ ಪದೇ ಕನ್ನಡಿಗರ ಮೇಲೆ ದಬ್ಬಾಳಿಕೆ ಮಾಡುತ್ತಿರುವ ಶಿವಸೇನೆಯನ್ನು ನಿಷೇಧಿಸುವಂತೆ ಆಗ್ರಹಿಸಿ ಜ.30 ರಂದು ರಾಜ್ಯಾದ್ಯಂತ ಎಲ್ಲ ರೈಲು ನಿಲ್ದಾಣಗಳಲ್ಲಿ ರೈಲು ತಡೆ ಚಳವಳಿ ನಡೆಸಲಾಗುವುದು ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ನಾಯಕ ವಾಟಾಳ್ ನಾಗರಾಜ್ ಹೇಳಿದರು.
ನಗರದ ರೈಲ್ವೆ ನಿಲ್ದಾಣದಲ್ಲಿ ಸೋಮವಾರ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸಿದ ಬಳಿಕ ಮಾತನಾಡಿದ ಅವರು, ಕರ್ನಾಟಕದ ಅವಿಭಾಜ್ಯ ಅಂಗವಾಗಿರುವ ಬೆಳಗಾವಿ, ಕಾರವಾರ, ನಿಪ್ಪಾಣಿಯನ್ನು ಕಬಳಿಸುವ ಶಿವಸೇನೆ ವಿರುದ್ಧ ಕಿಡಿಕಾರಿದ ವಾಟಾಳ್, ಶಿವಸೇನೆ ಪುಂಡಾಟಿಕೆಯನ್ನು ನಿಯಂತ್ರಿಸುವಲ್ಲಿ ಬಿಜೆಪಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ವಾಗ್ದಾಳಿ ನಡೆಸಿದರು.
ಬೆಂಗ್ಳೂರು ಸಬರ್ಬನ್ ರೈಲು ಯೋಜನೆ: ಮಾರ್ಗ ನಿರ್ಮಾಣ ಅಂತಿಮ
ಕೋಮಾದಲ್ಲಿ ಬೆಳಗಾವಿ ರಾಜಕಾರಣಿಗಳು : ಬೆಳಗಾವಿ ರಾಜಕಾಣಿಗಳು ಸಂಪೂರ್ಣ ಕೋಮಾದಲ್ಲಿದ್ದಾರೆ. ಅವರಿಗೆ ಯಾರು ಬೇಕಿಲ್ಲ. ಮಂತ್ರಿಗಳಾಗಬೇಕು, ಇಡೀ ಬೆಳಗಾವಿಯ ರಾಜಕಾರಣಿಗಳು ಮರಾಠಿ ಹಾಗೂ ಎಂಇಎಸ್ ಏಜೆಂಟ್‌ರಾಗಿದ್ದಾರೆಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಬೆಳಗಾವಿಯಲ್ಲಿ ಕನ್ನಡ ಉಳಿದಿದ್ದರೆ ಕೇವಲ ಕನ್ನಡಪರ ಸಂಘಟನೆಗಳಿಂದ ಮಾತ್ರ ಎಂದರು.
5 ಲಕ್ಷ ವಿದ್ಯಾರ್ಥಿಗಳಿಗೆ ಸೈಬರ್ ಸೆಕ್ಯುರಿಟಿ ಕೌಶಲ್ಯ ತರಬೇತಿ
ಬೆಳಗಾವಿಯಲ್ಲಿ ಕನಿಷ್ಠ 2 ಲಕ್ಷ ಕನ್ನಡಿಗರು ಕೆಲಸ ಮಾಡುವಂತಹ ಕೈಗಾರಿಕೆಗಳನ್ನು ಸ್ಥಾಪಿಸಿದರೆ ಕನ್ನಡಿಗರ ರಕ್ಷಣೆ ಆಗುತ್ತದೆಯೆಂದು ನಾವು ಮೊದಲನಿಂದಲೂ ಒತ್ತಾಯ ಮಾಡುತ್ತಿದ್ದರೂ ಸರ್ಕಾರ ನಿರ್ಲಕ್ಷ್ಯ ತಾಳಿದೆ. ಯಡಿಯೂರಪ್ಪ ಸರ್ಕಾರ ಕನ್ನಡ ವಿರೋಧಿಯಾಗಿದೆ. ಇವರದು ಏನಿದ್ದರೂ ಬಿಜೆಪಿ, ಆರ್‌ಎಸ್‌ಎಸ್ ಸರ್ಕಾರ. ಹಿಂದಿ ಭಾಷಿಗರ ಮೇಲಿರುವ ಅಭಿಮಾನ ಕನ್ನಡಿಗರ ಮೇಲೆ ಇಲ್ಲ ಎಂದರು.
ಎಂಇಎಸ್ ನಿಷೇಧಿಸಲು ಒತ್ತಾಯ : ಎಂಇಎಸ್ ಸಂಘಟನೆ ನಿಷೇಧಿಸಿದರೆ ಮಾತ್ರ ಬೆಳಗಾವಿಯಲ್ಲಿ ಸಾಂತಿ ಕಾಪಾಡಲು ಸಾಧ್ಯ. ಬೆಳಗಾವಿ, ನಿಪ್ಪಾಣಿ, ಕಾರವಾರ ಸೇರಿ ಒಂದು ಇಂಚು ಕೂಡ ಮಹಾರಾಷ್ಟ್ರಕ್ಕೆ ಸೇರುವುದಿಲ್ಲ ಎಂದು ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆಗೆ ಎಚ್ಚರಿಕೆ ನೀಡಿದರು. ಪ್ರತಿಭಟನೆಯಲ್ಲಿ ಕನ್ನಡಪರ ಹೋರಾಟಗಾರರಾದ ಸಾ.ರಾ.ಗೋವಿಂದ್, ಪಾರ್ಥಸಾರಥಿ, ರಾಮು, ಅಮ್ಮಿ ಚಂದ್ರು ಸೇರಿದಂತೆ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಗ್ರಾನೈಟ್ ಸಂಪೂರ್ಣ ನಿಷೇದಕ್ಕೆ ಆಗ್ರಹ: ಸಿಎಂ ಯಡಿಯೂರಪ್ಪ ಗ್ರಾನೈಟ್ ಮಾಲೀಕರಿಂದಲೇ ಅಧಿಕಾರಕ್ಕೆ ಬಂದಿದ್ದು ಎಂದು ಟೀಕಿಸಿದ ವಾಟಾಳ್ ನಾಗರಾಜ್, ಅಕ್ರಮ ಗಣಿಗಾರಿಕೆಯನ್ನು ಸಕ್ರಮಗೊಳಿಸಿಕೊಳ್ಳುವ ಕುರಿತು ಸಿಎಂ ಯಡಿಯೂರಪ್ಪ ನೀಡಿರುವ ಹೇಳಿಕೆ ಕುರಿತು ಗರಂ ಆದ ವಾಟಾಳ್ ನಾಗರಾಜ್, ರಾಜ್ಯದ ಬಗ್ಗೆ ಪ್ರಾಮಾಣಿಕತೆ, ಕಾಳಜಿ ಇದ್ದರೆ ರಾಜ್ಯದ ಉದ್ದಗಲಕ್ಕೂ ಇರುವ ಗ್ರಾನೈಟ್ ದಂಧೆಯನ್ನು ನಿಲ್ಲಿಸಬೇಕೆಂದು ಆಗ್ರಹಿಸಿದರು. ಗ್ರಾನೈಟ್ ನಿಲ್ಲಿಸುವುದರಿಂದ ರಾಜ್ಯ, ದೇಶ ಉಳಿಯುತ್ತದೆ ಎಂದರು. ಶಿವಮೊಗ್ಗದಲ್ಲಿ ಗ್ರಾನೈಟ್ ಸಿಡಿಮುದ್ದಿನಿಂದ ಸತ್ತಿರುವ ಕುಟುಂಬಗಳಿಗೆ 5 ಲಕ್ಷ ಪರಿಹಾರ ಬದಲಾಗಿ 1 ಕೋಟಿ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.