ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿಗಳಿಗೆ ಆಡಳಿತದ ಮೇಲೆ ನಿಯಂತ್ರಣವಿಲ್ಲ| ಸರ್ಕಾರ ರೆಸಾರ್ಟ್‌ನಲ್ಲಿದೆ| ವಿರೊಧ ಪಕ್ಷದಲ್ಲಿದ್ದಾಗಲೂ ರೆಸಾರ್ಟ್ ಹಾಗೂ ಅಧಿಕಾರದಲ್ಲಿರುವಾಗಲೂ ರೆಸಾರ್ಟ್ ವಾಸಮಾಡುತ್ತಿದ್ದಾರೆ| ಕಾಂಗ್ರೆಸ್‌ನಿಂದ ಮಾತ್ರ ಅಭಿವೃದ್ಧಿ ಸಾಧ್ಯ: ಪ್ರಿಯಾಂಕ್ ಖರ್ಗೆ|
ಚಿತ್ತಾಪುರ(ಜ.26): ಚಿತ್ತಾಪುರ ಸೇರಿದಂತೆ ಜಿಲ್ಲೆಯ ಅಭಿವೃದ್ಧಿ ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ. ನಾನು ಸಚಿವನಾಗಿದ್ದಾಗ ಅನುಮೊದನೆ ಮಾಡಿದ ಯೊಜನೆಗಳನ್ನು ಇಂದು ಅಡಿಗಲ್ಲು ನೆರವೇರಿಸಿದ್ದೇನೆ. ಡಾ. ಅಂಬೆಡ್ಕರ್ ಹಾಗೂ ಬಾಬು ಜಗಜೀವನರಾಂ ಭವನ ಮತ್ತು ತರಕಸಪೇಟ ನಾಲವಾರ ನಡುವೆ ಸೇತುವೆ ನಿರ್ಮಾಣದ ಬಹುದಿನದ ಕನಸು ಈಡೇರಿದೆ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ತಾಲೂಕಿನ ನಾಲವಾರ ಪಟ್ಟಣದಲ್ಲಿ ಕೈಗೆತ್ತಿಕೊಳ್ಳಲಾದ ಸುಮಾರು 9.72 ಕೊಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಅಡಿಗಲ್ಲು ನೆರವೇರಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿಗಳಿಗೆ ಆಡಳಿತದ ಮೇಲೆ ನಿಯಂತ್ರಣವಿಲ್ಲ. ಸರ್ಕಾರ ರೆಸಾರ್ಟ್‌ನಲ್ಲಿದೆ. ವಿರೊಧ ಪಕ್ಷದಲ್ಲಿದ್ದಾಗಲೂ ರೆಸಾರ್ಟ್ ಹಾಗೂ ಅಧಿಕಾರದಲ್ಲಿರುವಾಗಲೂ ರೆಸಾರ್ಟ್ ವಾಸಮಾಡುತ್ತಿದ್ದಾರೆ ಎಂದು ಟೀಕಿಸಿದ ಅವರು, ಕಲಬುರಗಿ ಜಿಲ್ಲೆಗೆ ಮಂತ್ರಿನೇ ಇಲ್ಲ. ಇವರು ಮಂತ್ರಿ ಕೇಳಿದವರಿಗೆ ಬೊರ್ಡ್‌ಗಿರಿ ಕೊಟ್ಟಿದ್ದಾರೆ. ಇವರಿಗೆ ಅಷ್ಟೆಸಾಕಾಗಿತ್ತು ಇದನ್ನೆ ಪಡೆದು ಖುಷಿಯಾಗಿದ್ದಾರೆ ಎಂದು ಟೀಕಿಸಿದ್ದಾರೆ.
undefined
ವ್ಯಾಪಾರಸ್ಥರಿಗೆ ಜಿಎಸ್‌ಟಿ ಇರುವಂತೆ ಬಿಜೆಪಿಯ ನಾಯಕರಿಗೆ ವಿಎಸ್‌ಟಿ ಆಗಿದೆ. ವಿಎಸ್‌ಟಿ ಎಂದರೆ ವಿಜಯೇಂದ್ರ ಸರ್ವಿಸ್ ಟ್ಯಾಕ್ಸ್ ಯಾರು ದುಡ್ಡು ಕೊಡುತ್ತಾರೊ ಅವರಿಗೆ ಮಂತ್ರಿಗಿರಿ ದುಡ್ಡು ಕೊಡದವರಿಗೆ ಏನೂ ಸಿಗಲ್ಲ ಎಂದು ವ್ಯಂಗವಾಡಿದರು.
ಬಿಜೆಪಿ ಆಡಳಿತದಲ್ಲಿ ವರ್ಗಾವಣೆ ದಂದೆ ಜೊರಾಗಿ ನಡೆದಿದೆ. ಇಲ್ಲಿಗೆ ಅಧಿಕಾರಿಗಳು ಬರಬೇಕೆಂದರೆ ಅಥವಾ ಅಧಿಕಾರಿಗಳು ಇಲ್ಲಿಯೆ ಉಳಿಯಬೇಕೆಂದರೆ ಬಿಜೆಪಿ ನಾಯಕರಿಗೆ ದುಡ್ಡು ಕೊಡಲೇಬೇಕು. ಯಾವ ಜಾಗಕ್ಕೆ ಎಷ್ಟುದುಡ್ಡು ಎನ್ನುವದು ಫಿಕ್ಸ ಆಗಿದೆ. ಇಲ್ಲಿರುವ ಅಧಿಕಾರಿಗಳಿಗೆ ಗೊತ್ತಿದೆ. ಪಾಪ ಅವರು ಅದನ್ನು ಹೇಳೊ ಹಾಗಿಲ್ಲ ಎಂದು ಕುಟುಕಿದರು.
ಕಲಬುರಗಿಯಲ್ಲೊಬ್ಬ ಆಧುನಿಕ ಶ್ರವಣ ಕುಮಾರ: ತಂದೆ-ತಾಯಿ ನೆನಪಿಗಾಗಿ ಗುಡಿ ಕಟ್ಟಿಸಿದ ಮಗ
ಪಿಎಂಜಿಎಸ್‌ವೈ ಅಡಿಯಲ್ಲಿ 1.50 ಕೊಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ನಾಲವಾ-ತರಕಸಪೇಟ ನಡುವೆ ಸೇತುವೆ ನಿರ್ಮಾಣ, ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ 1 ಕೊಟಿ ವೆಚ್ಚದಲ್ಲಿ ಅಂಬೇಡ್ಕರ ಭವನ, ಬಾಬು ಜಗಜೀವನರಾಂ ಭವನ, ಎಸ್‌ಸಿಪಿ ಅಡಿಯಲ್ಲಿ 1 ಕೊಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಕುಂಬಾರಹಳ್ಳಿಗೆ ಕೂಡು ರಸ್ತೆ ಹಾಗೂ ಜಲಜೀವನ ಮಿಷನ್ ಅಡಿಯಲ್ಲಿ 22 ಲಕ್ಷ ವೆಚ್ಚದಲ್ಲಿ ಒದಗಿಸಲಾಗುವ ಕುಂಬಾರಹಳ್ಳಿ ಗ್ರಾಮಗಳ ಮನೆಗಳಿಗೆ ಕುಡಿಯುವ ನೀರಿನ ನಳ ಸಂಪರ್ಕ ಒದಗಿಸುವ ಕಾಮಗಾರಿಗಳ ಅಡಿಗಲ್ಲು ನೆರವೇರಿಸಿದರ ಜೊತೆಗೆ 6 ಕೊಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಮ್ಯೂಸಿಯಂ ವಿಕ್ಷಣೆ ಮಾಡಿದರು. ಅಲ್ಲದೇ ಸ್ವಚ್ಚ ಭಾರತ ಮಿಷನ್ ಅಡಿಯಲ್ಲಿ ಒಟ್ಟು 3600 ಕಸದ ಬುಟ್ಟಿವಿತರಣೆ ಮಾಡಿದರು.
ಜಿಪಂ ವಿರೋಧ ಪಕ್ಷದ ನಾಯಕ ಶಿವಾನಂದ ಪಾಟೀಲ್, ವೀರನಗೌಡ ಪರಸರೆಡ್ಡಿ ಮಾತನಾಡಿದರು.ವಾಡಿ ಬ್ಲಾಕ್ ಅಧ್ಯಕ್ಷ ಮೆಹಬೂಬ ಸಾಹೇಬ, ಸಿದ್ದುಗೌಡ, ಟೊಪಣ್ಣ ಕೊಮಟೆ, ಮಲನಗೌಡ ಪೊಲಿಸ ಪಾಟೀಲ್ ವೇದಿಕೆಯಲ್ಲಿದ್ದರು.
ನನ್ನ ಸೋಲಿಸಲು ಮೋದಿ ಹವಾ ನಡೆಯಲ್ಲ
ಕೆಲವರು ಹೇಳುತ್ತಿದ್ದಾರಂತೆ ಅಪ್ಪನಿಗೆ ಸೊಲಿಸಿದಂತೆ ಮಗನಿಗೂ ಸೊಲಿಸುತ್ತೇವೆ ಎಂದು ಅವರಿಗೆ ಗೊತ್ತಿರಲಿ ಅದೇನೊ ಮೊದಿ ಗಾಳಿಯಲ್ಲಿ ಎಂಪಿ ಚುನಾವಣೆಯಲ್ಲಿ ನಮಗೆ ಸೊಲಾಗಿರಬಹುದು ಅಭಿವೃದ್ಧಿಪರ ಚಿಂತನೆ ಹಾಗೂ ನಿಮ್ಮಲ್ಲರ ಆರ್ಶೀವಾದ ಇರುವವರೆಗೂ ಅಮಿತ್ ಶಾ ಅಲ್ಲಾ ಯಾರಪ್ಪ ಬಂದರೂ ಈ ಸಲ ನಮ್ಮನ್ನು ಸೊಲಿಸಲು ಸಾಧ್ಯವಿಲ್ಲ. ಬಿಜೆಪಿ ಪಕ್ಷದಿಂದ ಚಿತ್ತಾಪುರ ವಿಧಾನಸಭೆ ಚುನಾವಣೆಯ ಮುಂದಿನ ಅಭ್ಯರ್ಥಿ ಯಾರು ಎನ್ನುವುದೇ ಗೊತ್ತಿಲ್ಲಾ. ವಾಲ್ಮೀಕಿ ನಾಯಕ ದಿನನಿತ್ಯ ಅರ್ಜಿ ಹಿಡಿದು ಎಡತಾಕುವುದೇ ಆಗಿದೆ. ಅವರಿಗೆ ಮತ್ತೊಬ್ಬರು ಅಡ್ಡಿಯಾಗಿದ್ದಾರೆ. ಈ ಇಬ್ಬರ ನಡುವೆ ಈಗ ಮತ್ತೊಬ್ಬರು ಎಂಟ್ರಿ ಪಡೆದಿದ್ದಾರೆ. ಆದರೆ, ಚಿತ್ತಾಪುರ ತಾಲೂಕಿನಲ್ಲಿ ನಮ್ಮ ಪಕ್ಷದಿಂದ ಸುಭದ್ರ ನಾಯಕತ್ವವಿದೆ. ನಿಷ್ಟಾವಂತ ಕಾರ್ಯಕರ್ತರಿದ್ದಾರೆ. ನೀವೆಲ್ಲ ಒಗ್ಗಟ್ಟಾಗಿ ಕೆಲಸ ಮಾಡಿ ಬಿಜೆಪಿಯವರನ್ನು ಸೊಲಿಸಿ ಎಂದು ಕರೆ ನೀಡಿದರು.