ಮುಗ್ಟಾ ಗ್ರಾಮದ ಬಳಿ ಕಾರ್ ಪಲ್ಟಿಯಾಗಿದ್ದು ಚಾಲಕ ಸೇರಿ 6 ಜನರಿಗೆ ಗಂಭೀರ ಗಾಯಗಳಾಗಿದ್ದವು. ಅವರಲ್ಲಿ ವಸಂತರಾವ ಕುಲ್ಕರ್ಣಿ ಹಾಗೂ ಬ್ರಹ್ಮಪುರದ ರಾಮಾಚಾರ್ಯ ಕುಲ್ಕರ್ಣಿ ಎನ್ನುವವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ನಾಲ್ಕು ಮಂದಿಗೆ ಕಲಬುರಗಿಯ ಮನ್ನೂರ ಆಸ್ಪತ್ರೆ ಹಾಗೂ ಯುನೈಟೈಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಚಿತ್ತಾಪುರ(ಜೂ.23): ಸೇಡಂ ತಾಲೂಕಿನ ಮೊತಕಪಲ್ಲಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ಕಲಬುರಗಿಗೆ ವಾಪಸ್ ಬರುವಾಗ ಚಾಲಕನ ನಿಯಂತ್ರಣ ತಪ್ಪಿ ಮುಗ್ಟಾ ಕ್ರಾಸ್ ಬಳಿ ಕಾರ್ ಪಲ್ಟಿಯಾಗಿ ಇಬ್ಬರು ಮೃತಪಟ್ಟಿದ್ದು, ನಾಲ್ಕು ಜನ ಗಾಯಗೊಂಡ ಘಟನೆ ನಡೆದಿದೆ.
ಜಿಪಂ ನಿವೃತ್ತ ಕಾರ್ಯದರ್ಶಿಯಾಗಿದ್ದ ವಸಂತರಾವ ಕುಲ್ಕರ್ಣಿ ಸೇರಿದಂತೆ ಐದು ಜನರು ಇನ್ನೊವಾ ಕಾರಿನಲ್ಲಿ ವೈಯಕ್ತಿಕ ಕಾರ್ಯಕ್ರಮದ ನಿಮಿತ್ತ ಸೇಡಂ ತಾಲೂಕಿನ ಮೊತಕಪಲ್ಲಿ ಹನುಮಾನ ದೇವಸ್ಥಾನಕ್ಕೆ ಪೂಜೆ ಸಲ್ಲಿಸಲು ತೆರಳಿದ್ದರು.
undefined
Raichur: ಬೈಕ್ ಮತ್ತು ಬಸ್ ಡಿಕ್ಕಿಯಾಗಿ ಜಮೀನಿನಲ್ಲಿ ಉರುಳಿ ಬಿದ್ದ ಬಸ್: 30 ಜನರಿಗೆ ಗಾಯ
ಹಿಂತಿರುಗುವ ಸಮಯದಲ್ಲಿ ಮುಗ್ಟಾ ಗ್ರಾಮದ ಬಳಿ ಕಾರ್ ಪಲ್ಟಿಯಾಗಿದ್ದು ಚಾಲಕ ಸೇರಿ 6 ಜನರಿಗೆ ಗಂಭೀರ ಗಾಯಗಳಾಗಿದ್ದವು. ಅವರಲ್ಲಿ ವಸಂತರಾವ ಕುಲ್ಕರ್ಣಿ ಹಾಗೂ ಬ್ರಹ್ಮಪುರದ ರಾಮಾಚಾರ್ಯ ಕುಲ್ಕರ್ಣಿ ಎನ್ನುವವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ನಾಲ್ಕು ಮಂದಿಗೆ ಕಲಬುರಗಿಯ ಮನ್ನೂರ ಆಸ್ಪತ್ರೆ ಹಾಗೂ ಯುನೈಟೈಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮಾಡಬೂಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.