ಉತ್ತರಕನ್ನಡ: ಹಿಮಾಚಲ ಪ್ರದೇಶದ ಪರ್ವತ ಏರಿ ಸಾಧನೆಗೈದ ಗೋಕರ್ಣದ ಯುವಕರು..!

By Girish Goudar  |  First Published Jun 23, 2023, 9:41 PM IST

ಮೈನಸ್ 10 ಡಿಗ್ರಿ ತಾಪಮಾನದಲ್ಲಿ ದುರ್ಗಮ ಪರ್ವತವನ್ನು ಏರಿ ಜೂನ್ 9ರಿಂದ ಚಾರಣವನ್ನು ಆರಂಭಿಸಿ 8 ರಾತ್ರಿ ಮತ್ತು 9 ಹಗಲಿನಲ್ಲಿ ಮುಗಿಸಿದ ಹೆಗ್ಗಳಿಕೆ ಇವರದ್ದಾಗಿದ್ದು, ಈವರೆಗೆ 10 ರಿಂದ 12 ತಂಡಗಳು ಮಾತ್ರ ಯಶಸ್ವಿಯಾಗಿ ಈ ಸಾಹಸ ಪೂರ್ಣಗೊಳಿಸಿದ್ದಾರೆ.


ಉತ್ತರಕನ್ನಡ(ಜೂ.23):  ಹಿಮಾಚಲ ಪ್ರದೇಶದ ಅತ್ಯಂತ ಎತ್ತರದ ಪಾರ್ವತಿ ಮತ್ತು ಪೀನ್ ಕಣಿವೆಯ ಸಂಧಿ ಸ್ಥಳವನ್ನು ಏರುವ ಮೂಲಕ ಉತ್ತರಕನ್ನಡ ಜಿಲ್ಲೆಯ ಗೋಕರ್ಣದ ಐವರು ಸಾಧನೆ ಮಾಡಿದ್ದಾರೆ.

5319 ಮೀ.(17450 ಅಡಿ) ಎತ್ತರದ ಹಿಮಾಚಲ ಪ್ರದೇಶದ ಅತ್ಯಂತ ಎತ್ತರದ ಪಾರ್ವತಿ ಮತ್ತು ಪೀನ್ ಕಣಿವೆ ಸಂಧಿ ಸ್ಥಳವಾಗಿದೆ. ಈ ವರ್ಷದ ಮೊದಲ ಪರ್ವತಾರೋಹಿ ತಂಡ ಎಂಬ ಹೆಗ್ಗಳಿಕೆಗೆ ಗೋಕರ್ಣದ ಈ ತಂಡ ಪಾತ್ರವಾಗಿದ್ದು, ಹಿಮಾಚಲ ಪ್ರದೇಶ ಸರ್ಕಾರದ ಈ ವರ್ಷದ ದಾಖಲೆಯಲ್ಲಿ ಈ ಐವರು ಪರ್ವತಾರೋಹಿಗಳ ಹೆಸರನ್ನು ನಮೂದಿಸಿದೆ. ಗೋಕರ್ಣದ ಮಹೇಶ್ ಹಿರೇಗಂಗೆ, ಗಣೇಶ ಮೂಳೆ, ಕುಮಾರ ಗೋಪಿ, ಶ್ರೀನಿಧಿ ಮೂಳೆ,  ಧ್ರುವ ಛಾಪಖಂಡ ಈ ಸಾಧನೆ ಮಾಡಿದವರಾಗಿದ್ದಾರೆ.‌ 

Tap to resize

Latest Videos

ಇನ್ಮುಂದೆ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಪ್ರವಾಸಿಗರಿಗೆ ವಿಮೆ! ಇಲ್ಲಿದೆ ಮಾಹಿತಿ

ಹಿಮಾಚಲದ ಖಾಜಾ ವಲಯದ ಮುದ್ ಎಂಬ ಹಳ್ಳಿಯಿಂದ ಪ್ರಾರಂಭವಾಗುವ 120 ಕಿ.ಮೀ. ಕಾಲ್ನೆಡಿಗೆಯ ಚಾರಣ ಪಾರ್ವತಿ ಮತ್ತು ಪೀನ್ ಕಣಿವೆಗಳ ಸಂಧಿ ಸ್ಥಳದ ಪ್ರದೇಶದವರೆಗೆ ಪೂರ್ಣಗೊಳಿಸಲು ಕನಿಷ್ಠ 10 ರಾತ್ರಿ 11 ಹಗಲಿನ ಪಯಣ ಬೇಕಾಗುತ್ತದೆ. ಮೈನಸ್ 10 ಡಿಗ್ರಿ ತಾಪಮಾನದಲ್ಲಿ ದುರ್ಗಮ ಪರ್ವತವನ್ನು ಏರಿ ಜೂನ್ 9ರಿಂದ ಚಾರಣವನ್ನು ಆರಂಭಿಸಿ 8 ರಾತ್ರಿ ಮತ್ತು 9 ಹಗಲಿನಲ್ಲಿ ಮುಗಿಸಿದ ಹೆಗ್ಗಳಿಕೆ ಇವರದ್ದಾಗಿದ್ದು, ಈವರೆಗೆ 10 ರಿಂದ 12 ತಂಡಗಳು ಮಾತ್ರ ಯಶಸ್ವಿಯಾಗಿ ಈ ಸಾಹಸ ಪೂರ್ಣಗೊಳಿಸಿದ್ದಾರೆ.

click me!