ಸಾಲ ಮನ್ನಾ ವಿಚಾರ: ಮಾಜಿ, ಹಾಲಿ ಸಿಎಂ ನಡುವೆ ಟ್ವೀಟ್ ವಾರ್

By Suvarna NewsFirst Published Feb 29, 2020, 12:43 PM IST
Highlights

ರೈತರ ಸಾಲ ಮನ್ನಾಗೆ ಸಂಬಂಧಿ ಹಾಲಿ, ಹಾಗೂ ಮಾಜಿ ಸಿಎಂಗಳ ಟ್ವೀಟ್ ವಾರ್ ಜೋರಾಗಿದೆ. ಮಾಜಿ ಸಿಎಂ ಎಚ್. ಡಿ. ಕುಮಾರಸ್ವಾಮಿ ಹಾಗೂ ಸಿಎಂ ಬಿ. ಎಸ್. ಯಡಿಯೂರಪ್ಪ ನಡುವೆ ಟ್ವೀಟ್ ವಾರ್ ನಡೆದಿದೆ.

ಮೈಸೂರು(ಫೆ.29): ರೈತರ ಸಾಲ ಮನ್ನಾಗೆ ಸಂಬಂಧಿ ಹಾಲಿ, ಹಾಗೂ ಮಾಜಿ ಸಿಎಂಗಳ ಟ್ವೀಟ್ ವಾರ್ ಜೋರಾಗಿದೆ. ಮಾಜಿ ಸಿಎಂ ಎಚ್. ಡಿ. ಕುಮಾರಸ್ವಾಮಿ ಹಾಗೂ ಸಿಎಂ ಬಿ. ಎಸ್. ಯಡಿಯೂರಪ್ಪ ನಡುವೆ ಟ್ವೀಟ್ ವಾರ್ ನಡೆದಿದೆ.

ಸಾಲ ಮನ್ನಾದ ಬಗ್ಗೆ ಬಿಜೆಪಿಯ ಯಾರೂ ತಲೆ ಕೆಡಿಸಿಕೊಳ್ಳುತ್ತಿಲ್ಲ. ನಾನು ಮುಖ್ಯಮಂತ್ರಿ ಆಗಿದ್ದಾಗ ಮೀಸಲಿಟ್ಟಿದ್ದ ಇಪ್ಪತ್ತೈದು ಸಾವಿರ ಕೋಟಿ ರೂಪಾಯಿಗಳ ಹಣವನ್ನು ಬಿಜೆಪಿ ಸರ್ಕಾರ ಬೇರೆಡೆಗೆ ವರ್ಗಾಯಿಸಿದೆ.

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಿಂದಲೂ ರಾಜ್ಯದ ಒಂದು ಲಕ್ಷದ ಐವತ್ತ್ಮೂರು ಸಾವಿರ ರೈತರಿಗೆ ವಂಚಿಸಲಾಗಿದೆ.
2/3

— H D Kumaraswamy (@hd_kumaraswamy)

ಸಾಲಮನ್ನ ವಿಚಾರಕ್ಕೆ ಹಾಲಿ ಮಾಜಿ ಸಿಎಂ ನಡುವೆ ಏಟು ಎದುರೇಟು ನಡೆದಿದೆ. ರೈತರ ಸಾಲಾಮನ್ನಾ ಬಿಜೆಪಿ ಸರ್ಕಾರದಿಂದ ತಿಲಾಂಜಲಿ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರಣಿ ಟ್ವೀಟ್ ಮಾಡಿ ಸರ್ಕಾರ ಅಡ್ಡದಾರಿ ಹಿಡಿಯುತ್ತಿದೆ ಎಂದು ಹೆಚ್‌ಡಿಕೆ ಕಿಡಿಕಾರಿದ್ದಾರೆ.

ಹೆಂಡ್ತಿ ಟಾರ್ಚರ್ ತಡೆಯಲಾಗದೆ ಗಂಡ ಪ್ರಾಣ ಕಳ್ಕೊಂಡ

ರೈತರ ಬಾಳಿಗೆ ರಾಜ್ಯ ಸರ್ಕಾರ ಕೊಳ್ಳಿ ಇಡಲು ನಿರ್ಧರಿಸಿದೆ. ದಾಖಲೆಗಳ ನೆಪವೊಡ್ಡಿ ಸಾಲಮನ್ನಾ ಯೋಜನೆಯಿಂದ ಒಂದು ಲಕ್ಷ ರೈತರನ್ನು ಕೈಬಿಟ್ಟಿದೆ. ನಾನು ಸಿಎಂ ಆಗಿದ್ದಾಗ ರೈತರಿಗಾಗಿ ಮೀಸಲಿಟ್ಟಿದ್ದ ಹಣ ಬೇರೆಡೆಗೆ ವರ್ಗಾವಣೆಯಾಗಿದೆ ಎಂದು ಆರೋಪಿಸಿದ್ದಾರೆ.

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಿಂದಲೂ ರಾಜ್ಯದ ರೈತರಿಗೆ ವಂಚನೆ ಎಂದಿದ್ದಾರೆ. ಸಾಲಾ ಮನ್ನಾ ವಿಚಾರವಾಗಿ ಬೇಜವಬ್ದಾರಿ ಪ್ರದರ್ಶಿಸುತ್ತಿರುವ ಬಿಜೆಪಿ ವಿರುದ್ಧ ಹೋರಾಟ ಮಾಡಲಾಗುತ್ತೆ. ಅಧಿವೇಶನದಲ್ಲಿ ಈ ಬಗ್ಗೆ ಹೋರಾಟ ಮಾಡುವುದಾಗಿ ಹೆಚ್.ಡಿ.ಕೆ ಟ್ವೀಟ್ ಮಾಡಿದ್ದಾರೆ. ಸರಣಿ ಟ್ವೀಟ್ ಮಾಡಿ ಬಿಎಸ್ವೈ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಿಶ್ವದ 58 ರಾಷ್ಟ್ರಗಳಿಗೆ ಹಬ್ಬಿದ ಕೊರೋನಾ; ಜಾಗತಿಕ ಅಪಾಯ ಗಂಭೀರ ಮಟ್ಟಕ್ಕೆ

ಹೆಚ್‌ಡಿಕೆ ಟ್ವೀಟ್‌ಗೆ ಟ್ವೀಟ್ಟರ್‌ನಲ್ಲೇ ಬಿಎಸ್‌ವೈ ತಿರುಗೇಟು ನೀಡಿದ್ದಾರೆ. ನಮ್ಮ ಸರ್ಕಾರ ರೈತರ ಪರವಾಗಿದೆ. ದಾರಿತಪ್ಪಿಸುವ ಹೇಳಿಕೆಗೆ ರೈತರು ಕಿವಿಗೊಡಬೇಡಿ. ರೈತರಿಗೆ ಅನ್ಯಾಯ ಮಾಡಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಸೂಕ್ತದಾಖಲೆಗಳನ್ನು ಸಲ್ಲಿಸುವ ಎಲ್ಲಾ ರೈತರಿಗೂ ಸಾಲಮನ್ನಾ ಆಗಲಿದೆ. ರೈತರ ಸಾಲಾಮನ್ನಾ ವಿಚಾರವಾಗಿ ಊಹಾಪೋಹಗಳು ಹರಿದಾಡುತ್ತಿವೆ. ರೈತರು ಆತಂಕಕ್ಕೆ ಒಳಗಾಗಬಾರದೆಂದು ಸಿಎಂ ಟ್ವೀಟ್ ಮಾಡಿದ್ದಾರೆ.

ರೈತರ ಸಾಲ ಮನ್ನಾ ವಿಷಯವಾಗಿ ಕೆಲವು ಊಹಾಪೋಹಗಳು ಹರಿದಾಡುತ್ತಿದ್ದು, ರೈತರು ಯಾವುದೇ ರೀತಿಯ ಆತಂಕಕ್ಕೆ ಒಳಗಾಗಬಾರದು.

ರೈತರಿಗೆ ಅನ್ಯಾಯವಾಗಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಸೂಕ್ತ ದಾಖಲೆ ಸಲ್ಲಿಸುವ ಎಲ್ಲ ರೈತರ ಸಾಲ ಮನ್ನಾ ಆಗಲಿದೆ. ಇದರಲ್ಲಿ ಯಾವುದೇ ಅನುಮಾನ ಬೇಡ.

— B.S. Yediyurappa (@BSYBJP)
click me!