ಎಲ್ಲವನ್ನೂ ಬಿಟ್ಟಿದ್ದೇನೆ, ನಾನು ಸುಪಾರಿ ಹಂತಕನಲ್ಲ: ಬಾಗಪ್ಪ ಹರಿಜನ

By Kannadaprabha NewsFirst Published Feb 29, 2020, 12:42 PM IST
Highlights

ಆಸ್ತಿ, ಹಣಕ್ಕಾಗಿ ಕೆಟ್ಟ ಕೆಲಸ ಮಾಡಿಲ್ಲ| ಸಮಾ​ಜ​ದಲ್ಲಿ ಒಳ್ಳೆಯವಂತೆ ಬದುಕಲು ನನಗೂ ಇಷ್ಟ| ಬಸವರಾಜ ಹರಿಜನ ಹತ್ಯೆ: ನನ್ನದು ಯಾವುದೇ ಪಾತ್ರವಿರಲಿಲ್ಲ| ನಾನು ಯಾವುದೇ ತಪ್ಪು ಮಾಡಿಲ್ಲ ಹೀಗಾಗಿ ನಾನು ಯಾರಿಗೂ ಹೆದರಕಬೇಕಿಲ್ಲ| 

ವಿಜಯಪುರ(ಫೆ.29): ನಾನು ಸುಪಾರಿ ಹಂತಕನಲ್ಲ. ಆಸ್ತಿ, ಹಣಕ್ಕಾಗಿ ಯಾವುದೇ ಕೆಟ್ಟ ಕೆಲಸ ಮಾಡಿಲ್ಲ. ನಾನು ಕೂಡ ಸಮಾಜದಲ್ಲಿ ಒಳ್ಳೆಯ ಮನುಷ್ಯರಂತೆ ಬದುಕಲು ಇಷ್ಟ ಪಡುತ್ತೇನೆ ಎಂದು ಭೀಮಾ ತೀರದ ಬಾಗಪ್ಪ ಹರಿಜನ ಹೇಳಿದ್ದಾರೆ.

ಭೀಮಾ ತೀರದ ಹಂತಕ ಚಂದಪ್ಪ ಹರಿಜನ ಸಹೋದರ ಬಸವರಾಜ ಹರಿಜನ ಹತ್ಯೆ ಪ್ರಕರಣದಲ್ಲಿ ಖುಲಾಸೆಯಾದ ಬಳಿಕ ಶುಕ್ರವಾರ ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿ, ಈಗ ನಾನು ಎಲ್ಲವನ್ನೂ ಬಿಟ್ಟಿದ್ದೇನೆ. ಒಳ್ಳೆಯ ಮನುಷ್ಯನಾಗಿ ಬದುಕಲು ಬಯಸುತ್ತೇನೆ ಎಂದರು.

ಭೀಮಾತೀರದ ಕುಖ್ಯಾತಿ ಬಾಗಪ್ಪ ಹರಿಜನ ಪತ್ನಿ ಅಪಘಾತದಲ್ಲಿ ಸಾವು

ಚಂದಪ್ಪ ಹರಿಜನ ಆಸ್ತಿ ವಿಚಾರವಾಗಿ ಎಂದೂ ಅವರೊಂದಿಗೆ ಗಲಾಟೆ ಮಾಡಿಕೊಂಡಿಲ್ಲ. ಚಂದಪ್ಪ ಹರಿಜನ ನನ್ನ ಸಂಬಂಧಿಯೇ ಅಲ್ಲ. ಆದರೆ ನಾವಿಬ್ಬರೂ ಒಂದೇ ಜಾತಿಯವರು. ಅವರ ಆಸ್ತಿ ಸಲುವಾಗಿ ನಾನೇಕೆ ಜಗಳ ಮಾಡಲಿ ಎಂದು ಪ್ರಶ್ನಿಸಿದರು.

ಹಂತಕ ಚಂದಪ್ಪನ ಸಹೋದರ ಬಸವರಾಜ ಹರಿಜನ ಹತ್ಯೆಯಲ್ಲಿ ನನ್ನದು ಯಾವುದೇ ಪಾತ್ರವಿರಲಿಲ್ಲ. ಬಸವರಾಜ ಹತ್ಯೆ ಸಂದರ್ಭದಲ್ಲಿ ನಾನು ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಯಲ್ಲಿ ಇದ್ದೆ. ಮಾಧ್ಯಮದಲ್ಲಿ ವರದಿ ಬಂದ ಬಳಿಕ ಯಾರೋ ನನಗೆ ತಿಳಿಸಿದ ನಂತರವೇ ಈ ವಿಷಯ ಗೊತ್ತಾದದ್ದು. ಆದರೆ ಮಾಧ್ಯಮ ಹಾಗೂ ಪತ್ರಿಕೆಗಳಲ್ಲಿ ಹತ್ಯೆಗೆ ನಾನೇ ಕಾರಣ ಎಂದು ನನ್ನ ಹೆಸರು ಕೇಳಿ ಬಂತು. ಈ ವಿಷಯವಾಗಿ ನಾನು ಅಂದು ಸಿಪಿಐ ಜೊತೆಗೂ ಮಾತನಾಡಿದ್ದೆ. ಈ ಬಗ್ಗೆ ತನಿಖೆ ನಡೆಸುತ್ತೇನೆ ಎಂದು ಹೇಳಿದ್ದರು. ಆದರೂ ಆ ಪ್ರಕರಣದಲ್ಲಿ ನನ್ನ ಹೆಸರು ಸೇರಿಸಲಾಯಿತು ಎಂದರು.

ಭೀಮಾ ತೀರದಲ್ಲಿ ಮತ್ತೆ ರಕ್ತದೋಕುಳಿ : ಪ್ರಾಣಾಪಾಯದಿಂದ ಪಾರಾದ ಬಾಗಪ್ಪ ಹರಿಜನ

ಪುತ್ರಪ್ಪ ಸಾಹುಕಾರ ಭೈರಗೊಂಡ ಕೊಲೆಯಾದ ಸಂದರ್ಭದಲ್ಲಿ ನಾನು ಬಳ್ಳಾರಿ ಜೈಲಿನಲ್ಲಿದ್ದೆ. ಸುರೇಶ ಲಾಳಸಂಗಿ ಕೊಲೆ ನಡೆದಾಗಲೂ ಸಾಂಗಲಿ ಜಿಲ್ಲೆಯ ಇಚಲಕರಂಜಿಯಲ್ಲಿದ್ದೆ. ಈ ಎಲ್ಲ ಕೊಲೆಗಳನ್ನು ಯಾರು ಮಾಡಿದ್ದಾರೋ ಗೊತ್ತಿಲ್ಲ. ಸಮಾಜಕ್ಕೆ ಅಥವಾ ಪೊಲೀಸ್‌ ಇಲಾಖೆಗೆ ತೊಂದರೆ ಕೊಡುವ ಉದ್ದೇಶ ನನಗಿಲ್ಲ ಎಂದು ಸ್ಪಷ್ಟಪಡಿಸಿದರು.

ವಿಚಾರಣೆಗೆ ಕೋರ್ಟ್'ಗೆ ಆಗಮಿಸುತ್ತಿದ್ದ ನೊಟೋರಿಯಸ್ ಹಂತಕ ಬಾಗಪ್ಪ ಹರಿಜನ್ ಮೇಲೆ ಗುಂಡಿನ ದಾಳಿ

ಗ್ರಾಪಂ ಚುನಾವಣೆ ಸಂದರ್ಭದಲ್ಲಿ ದೇವಣಗಾಂವದಲ್ಲಿ ನನ್ನನ್ನು ಬಂಧಿಸಿ ಜೈಲಿಗೆ ಕಳುಹಿಸಲಾಯಿತು. ಬಸವರಾಜ ಹರಿಜನ, ಸುರೇಶ ಲಾಳಸಂಗಿ ಹಾಗೂ ಉಮರಾಣಿಯ ಪುತ್ರಪ್ಪ ಸಾಹುಕಾರ ಭೈರಗೊಂಡ ಕೊಲೆ ಪ್ರಕರಣಗಳನ್ನು ಸಹ ನನ್ನ ತಲೆಗೆ ಕಟ್ಟಲಾಯಿತು. ನಾನು ಕೇಸ್‌ಗಳ ವಿಚಾರವಾಗಿ ವಿಜಯಪುರ ಜಿಲ್ಲಾ ಕೋರ್ಟ್‌ಗೆ ಆಗಮಿಸಿದಾಗ ನ್ಯಾಯಾಲಯದ ಆವರಣದಲ್ಲಿಯೇ ನನ್ನ ಮೇಲೆ ಫೈರಿಂಗ್‌ ಮಾಡಲಾಯಿತು ಎಂದು ಹಿಂದಿನ ಘಟನೆಗಳನ್ನು ನೆನಪಿಸಿದರು.

ಬಾಗಪ್ಪ ಹರಿಜನ್ ಶೂಟೌಟ್ ಪ್ರಕರಣ: ಆರು ಮಂದಿ ಬಂಧನ

ನಾನು ಯಾವುದೇ ತಪ್ಪು ಮಾಡಿಲ್ಲ. ಹೀಗಾಗಿ ನಾನು ಯಾರಿಗೂ ಹೆದರಕಬೇಕಿಲ್ಲ. ಈಗ ಧೈರ್ಯವಾಗಿ ಓಡಾಡುತ್ತಿದ್ದೇನೆ ಎಂದು ಹೇಳಿದ್ದಾರೆ.

click me!