ಸಕಲೇಶಪುರ-ಸುಬ್ರಹ್ಮಣ್ಯ ಮಾರ್ಗದಲ್ಲಿ ವಂದೇ ಭಾರತ್; ಅ.ನಲ್ಲಿ 3 ರೈಲುಗಳ ಸಂಚಾರ ಬಂದ್

Published : Aug 12, 2026, 07:45 AM IST
Vande Bharat Express Railway

ಸಾರಾಂಶ

ಮೈಸೂರು ವಿಭಾಗದಲ್ಲಿ ಹಳಿ ನಿರ್ವಹಣೆ ಕಾಮಗಾರಿಯಿಂದಾಗಿ ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ ಮಂಗಳೂರು-ಬೆಂಗಳೂರು ನಡುವಿನ ಹಲವು ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ. ಇದೇ ವೇಳೆ, ಸಕಲೇಶಪುರ-ಸುಬ್ರಹ್ಮಣ್ಯ ಮಾರ್ಗದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಪ್ರಾಯೋಗಿಕ ಸಂಚಾರ ನಡೆಯಲಿದೆ.

ಮಂಗಳೂರು: ಮೈಸೂರು ವಿಭಾಗದ ಸಿರಿಬಾಗಿಲು ಮತ್ತು ಯಡಕುಮೇರಿ ರೈಲು ನಿಲ್ದಾಣಗಳ ನಡುವೆ ಹಳಿ ನಿರ್ವಹಣೆ ಮತ್ತು ಎಂಜಿನಿಯರಿಂಗ್ ಕಾಮಗಾರಿಗಳಿಗಾಗಿ ಲೈನ್ ಬ್ಲಾಕ್ ಇರುವುದರಿಂದ ಮಂಗಳೂರು-ಬೆಂಗಳೂರು (Bengaluru To Mangaluru Trains) ನಡುವೆ ಅಕ್ಟೋಬರ್‌, ನವೆಂಬರ್‌ನಲ್ಲಿ ಮೂರು ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗುತ್ತದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ರದ್ದುಗೊಂಡಿರುವ ಮೂರು ರೈಲುಗಳ ಮಾಹಿತಿ

ರೈಲು ಸಂಖ್ಯೆ 16575 ಯಶವಂತಪುರ - ಮಂಗಳೂರು ಜಂಕ್ಷನ್ ಟ್ರೈ-ವೀಕ್ಲಿ ಎಕ್ಸ್‌ಪ್ರೆಸ್ ರೈಲು ಅಕ್ಟೋಬರ್‌ 4, 6, 8, 11, 13, 15, 22, 25, 27, 29, ನವೆಂಬರ್‌ 1, 3ರಂದು (ಒಟ್ಟು 12 ದಿನಗಳು) ರದ್ದುಗೊಳ್ಳಲಿದೆ. ರೈಲು ಸಂಖ್ಯೆ 16576 ಮಂಗಳೂರು ಜಂಕ್ಷನ್ - ಯಶವಂತಪುರ ಟ್ರೈ-ವೀಕ್ಲಿ ಎಕ್ಸ್‌ಪ್ರೆಸ್ ರೈಲು ಅಕ್ಟೋಬರ್‌ 5, 7, 9, 12, 14, 16, 23, 26, 28, 30, ನವೆಂಬರ್‌ 2, 4 ರಂದು (ಒಟ್ಟು 12 ದಿನಗಳು) ರದ್ದುಗೊಳ್ಳಲಿದೆ.

ರೈಲು ಸಂಖ್ಯೆ 16515 ಯಶವಂತಪುರ - ಕಾರವಾರ ಟ್ರೈ-ವೀಕ್ಲಿ ಎಕ್ಸ್‌ಪ್ರೆಸ್ ರೈಲು ಅಕ್ಟೋಬರ್‌ 5, 7, 9, 12, 14, 21, 23, 26, 28, 30, ನವೆಂಬರ್‌ 2ರಂದು ರಂದು (ಒಟ್ಟು 11 ದಿನಗಳು) ರದ್ದುಗೊಳ್ಳಲಿದೆ. ರೈಲು ಸಂಖ್ಯೆ 16516 ಕಾರವಾರ - ಯಶವಂತಪುರ ಟ್ರೈ-ವೀಕ್ಲಿ ಎಕ್ಸ್‌ಪ್ರೆಸ್ ರೈಲು ಅಕ್ಟೋಬರ್‌ 6, 8, 10, 13, 15, 22, 24, 27, 29, 31, ನವೆಂಬರ್‌ 3ರಂದು (ಒಟ್ಟು 11 ದಿನಗಳು) ರದ್ದುಗೊಳ್ಳಲಿದೆ.

ರೈಲು ಸಂಖ್ಯೆ 16539 ಯಶವಂತಪುರ - ಮಂಗಳೂರು ಜಂಕ್ಷನ್ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು ಅಕ್ಟೋಬರ್‌ 10, 24 ಮತ್ತು 31 ರಂದು (3 ದಿನಗಳು) ರಂದು ರದ್ದುಗೊಳ್ಳಲಿದೆ. ರೈಲು ಸಂಖ್ಯೆ 16540 ಮಂಗಳೂರು ಜಂಕ್ಷನ್ - ಯಶವಂತಪುರ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು ಅಕ್ಟೋಬರ್‌ 11, 25, ನವೆಂಬರ್‌ 1ರಂದು (3 ದಿನಗಳು) ರಂದು ರದ್ದುಗೊಳ್ಳಲಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

18 ರಿಂದ ‘ವಂದೇ ಭಾರತ್‌ ರೈಲು’ಪ್ರಾಯೋಗಿಕ ಸಂಚಾರ

ಸಕಲೇಶಪುರ-ಸುಬ್ರಹ್ಮಣ್ಯ ಮಾರ್ಗ (Sakleshpur-Subrahmanya) ನಡುವೆ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿನ ಪ್ರಾಯೋಗಿಕ ಸಂಚಾರ ಆ.18ರಿಂದ 22ರ ವರೆಗೆ ನಡೆಯಲಿದೆ. ಈ ಮಾರ್ಗದಲ್ಲಿ ಹಾದುಹೋಗುವ ಘಾಟ್‌ ಪ್ರದೇಶದಲ್ಲಿ ಗಂಟೆಗೆ 10 ಕಿ.ಮೀ. ಅಥವಾ ಅದಕ್ಕಿಂತ ತುಸು ಹೆಚ್ಚಿನ ವೇಗದಲ್ಲಿ ವಂದೇ ಭಾರತ್‌ ರೈಲು ಸಂಚರಿಸಲು ಪ್ರಯತ್ನಿಸಲಾಗುತ್ತದೆ. ಇದು ಪರೀಕ್ಷಾರ್ಥ ರೈಲು ಓಡಾಟ ಆಗಿರುವುದರಿಂದ ರೈಲ್ವೆ ಸುರಕ್ಷತಾ ಆಯುಕ್ತರು ಒಪ್ಪಿಗೆ ಸೂಚಿಸಿದ ಬಳಿಕವಷ್ಟೇ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಅಧಿಕೃತ ಓಡಾಟ ಆರಂಭಿಸಲಿದೆ.

ಇದನ್ನೂ ಓದಿ: ಆ.11ರಿಂದ ಬೆಂಗಳೂರು-ಮಂಗಳೂರು ವಂದೇ ಭಾರತ್ ಟ್ರಯಲ್, 57 ಸುರಂಗ, 226 ಸೇತುವೆ 108 ವಕ್ರಾಕೃತಿ ತಿರುವು ದಾಟಲಿದೆ ರೈಲು!

ಮೂಲಗಳ ಪ್ರಕಾರ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು (Vande Bharat Express Railway) ಸಕಲೇಶಪುರದಿಂದ ಮಂಗಳೂರು ಸೆಂಟ್ರಲ್‌ ವರೆಗೆ ಸಂಚರಿಸುವ ಸಾಧ್ಯತೆ ಇದೆ. ಈ ಕುರಿತು ರೈಲ್ವೆ ಇಲಾಖೆ ಅಧಿಕೃತವಾಗಿ ಇನ್ನೂ ಮಾಹಿತಿ ನೀಡಿಲ್ಲ.

ಇದನ್ನೂ ಓದಿ: ರೈಲು ಪ್ರಯಾಣಿಕರ ಗಮನಕ್ಕೆ: ಹಳಿ ನಿರ್ವಹಣೆ ನಿಮಿತ್ತ ಬೆಂಗಳೂರಿನ ಹಲವು ರೈಲುಗಳ ಸಂಚಾರ ಭಾಗಶಃ ರದ್ದು!

PREV
Read more Articles on
click me!

Recommended Stories

FSSAI: ಆಹಾರ ಸುರಕ್ಷತಾ ನಿಯಮ ಉಲ್ಲಂಘನೆ; ಇಂದಿರಾ ಕ್ಯಾಂಟೀನ್‌, ಜೆಪ್ಟೋ ಗೋದಾಮಿಗೆ ಬೀಗ!
ಬೆಳಗಾವಿ: ಸುಮಾರು 9 km ಉದ್ದದ ಎಲಿವೇಟೆಡ್ ರೈಲ್ವೆ ಟ್ರ್ಯಾಕ್ ನಿರ್ಮಾಣಕ್ಕೆ ಆಗ್ರಹ