ಶಿವಭಕ್ತರ ಅನುಕೂಲಕ್ಕಾಗಿ Athani ಸಾರಿಗೆ ಘಟಕದಿಂದ 2 ನೂತನ ಬಸ್; ವೇಳಾಪಟ್ಟಿ ಹೀಗಿದೆ

Published : Aug 12, 2026, 07:15 AM IST
Athani

ಸಾರಾಂಶ

ಶಿವಭಕ್ತರ ಅನುಕೂಲಕ್ಕಾಗಿ ಅಥಣಿ ಸಾರಿಗೆ ಘಟಕದಿಂದ ಶ್ರೀಶೈಲ ಮಲ್ಲಿಕಾರ್ಜುನ ದೇವಾಲಯಕ್ಕೆ ಎರಡು ನೂತನ ಬಸ್ ಸೇವೆಗಳನ್ನು ಆರಂಭಿಸಲಾಗಿದೆ. ಶ್ರೀಶೈಲ ಪೀಠದ ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು ಈ ಸೇವೆಗೆ ಚಾಲನೆ ನೀಡಿದ್ದು, ಬಸ್‌ನ ಸಮಯ, ಮಾರ್ಗ ಮತ್ತು ₹938 ಟಿಕೆಟ್ ದರದ ಬಗ್ಗೆ ಲೇಖನದಲ್ಲಿ ಮಾಹಿತಿ ನೀಡಲಾಗಿದೆ.

ಬೆಳಗಾವಿ: ಶಿವಭಕ್ತರ ಶಕ್ತಿಪೀಠ ಎಂದು ಕರೆಯಲ್ಪಡುವ ಶ್ರೀಶೈಲ ಮಲ್ಲಿಕಾರ್ಜುನ ದೇವಾಲಯಕ್ಕೆ ಹೋಗುವ ಭಕ್ತಾದಿಗಳಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಅಥಣಿ ಸಾರಿಗೆ ಘಟಕದಿಂದ ಎರಡು ನೂತನ ಬಸ್ ಸೇವೆಯನ್ನು ಆರಂಭಿಸಲಾಗಿದ್ದು, ಬಸ್‌ ಸೇವೆಗೆ ಶ್ರೀಶೈಲ ಪೀಠದ ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು ಚಾಲನೆ ನೀಡಿದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಗಳು, ಶ್ರೀಶೈಲ ಮಲ್ಲಿಕಾರ್ಜುನ ಜ್ಯೋತಿರ್ಲಿಂಗ ಭೌಗೋಳಿಕವಾಗಿ ಆಂಧ್ರ ಪ್ರದೇಶದಲ್ಲಿದ್ದರೂ ಭಾವನಾತ್ಮಕವಾಗಿ ಕರ್ನಾಟಕದ ಭಕ್ತರೇ ಅಪಾರ ಸಂಖ್ಯೆಯಲ್ಲಿದ್ದಾರೆ. ಅದರಲ್ಲೂ ಉತ್ತರ ಕರ್ನಾಟಕದಿಂದ ಅಪಾರ ಭಕ್ತರು ಬರುತ್ತಾರೆ. ಪ್ರತಿ ತಾಲೂಕಿನಿಂದ ಶ್ರೀಶೈಲಕ್ಕೆ ಸಾರಿಗೆ ಸೇವೆ ಆರಂಭಿಸಿರುವುದು ಸಂತೋಷದ ಸಂಗತಿ. ಶ್ರಾವಣ ಮಾಸ ಅತ್ಯಂತ ಪವಿತ್ರವಾದದ್ದು, ಈ ಸಂದರ್ಭದಲ್ಲಿ ಶ್ರೀ ಶೈಲಕ್ಕೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಅಥಣಿ ಘಟಕದಿಂದ ೨ ಬಸ್ ಸೇವೆ ಆರಂಭಿಸಿದ್ದು ಮಾದರಿಯಾಗಿದೆ ಎಂದರು.

ಆ.16 ರಿಂದ ಸೆಪ್ಟೆಂಬರ್ 11ರವರೆಗೆ ಜಗದ್ಗುರುಗಳ ಅನುಷ್ಠಾನ

ಶ್ರಾವಣ ಪ್ರಯುಕ್ತ ಪ್ರವಚನ: ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಶ್ರಾವಣ ಮಾಸದ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ. ಆ.16 ರಿಂದ ಸೆಪ್ಟೆಂಬರ್ 11ರವರೆಗೆ ಜಗದ್ಗುರುಗಳ ಅನುಷ್ಠಾನ, ಇಷ್ಟಲಿಂಗ ಪೂಜೆ ಜರುಗಲಿವೆ. ನಿತ್ಯ ಸಂಜೆ ಶಿವಶರಣೆ ಅಕ್ಕಮಹಾದೇವಿ ಕುರಿತು ಪ್ರವಚನ ಮತ್ತು ಪುರಾಣ ಜರುಗಲಿವೆ. ಭಕ್ತಾದಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಕರೆ ನೀಡಿದರು.

ಬಸ್ ಸಮಯ ಮತ್ತು ಟಿಕೆಟ್ ದರ

ಚಿಕ್ಕೋಡಿ ವಾಯವ್ಯ ಸಾರಿಗೆ ವಿಭಾಗಾಧಿಕಾರಿ ಮಹಾದೇವ ಮುಂಜಿ ಮಾತನಾಡಿ, ನಿತ್ಯ ಸಂಜೆ 5.30ಕ್ಕೆ ಅಥಣಿಯಿಂದ ಜಮಖಂಡಿ, ಬಾಗಲಕೋಟೆ, ರಾಯಚೂರು ಮಾರ್ಗವಾಗಿ ಹೊರಡುವ ಬಸ್‌ ಮರುದಿನ ಬೆಳಗ್ಗೆ 9ಕ್ಕೆ ಶ್ರೀಶೈಲ ತಲುಪಲಿದೆ. ಮರಳಿ ಸಂಜೆ 5.30ಕ್ಕೆ ವಾಪಸ್‌ ತೆರಳಲಿದೆ. ಟಿಕೆಟ್ ದರ ₹ 938 ಇದ್ದು, ಮಹಿಳೆಯರ ಉಚಿತ ಪ್ರಯಾಣಕ್ಕೆ ಅವಕಾಶವಿಲ್ಲವೆಂದರು.

ಜಮಖಂಡಿಯ ಗೌರಿಶಂಕರ ಶಿವಾಚಾರ್ಯ ಸ್ವಾಮೀಜಿ, ಝಂಜರವಾಡದ ಬಸವರಾಜ ದೇವರು, ಗ್ಯಾರಂಟಿ ಯೋಜನೆ ಅಥಣಿ ಅಧ್ಯಕ್ಷ ಸಿದ್ಧಾರ್ಥ ಸಿಂಗೆ, ಘಟಕ ವ್ಯವಸ್ಥಾಪಕ ಎಸ್‌.ಬಿ.ಗಸ್ತಿ, ಅಧಿಕಾರಿಗಳಾದ ಎ.ಆ‌ರ್.ಛಬ್ಬಿ, ಬಿ.ಬಿ.ಜಗದಾಳೆ, ಎಸ್.ಪಿ.ಕಂಕನವಾಡಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಇದನ್ನೂ ಓದಿ: ಹಂಪಿಯಲ್ಲಿ 200ಕ್ಕೂ ಅಧಿಕ ಅನಧಿಕೃತ ಹೋಂ ಸ್ಟೇ ಹಾವಳಿ! ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಉಪಲೋಕಾಯುಕ್ತ ಗರಂ

PREV
Read more Articles on
click me!

Recommended Stories

ವಾಲ್ಮೀಕಿ ನಿಗಮ ಹಗರಣ: ಈಗ ನಾನು ಏಟು ತಿಂದ ಹುಲಿ, ಬಿಜೆಪಿ ಆರೋಪಕ್ಕೆ ಉತ್ತರಿಸುವೆ -ನಾಗೇಂದ್ರ
triplets born ಬೆಳಗಾವಿಯಲ್ಲಿ ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ 20 ವರ್ಷದ ಯುವತಿ!