Yadagiri: ಹಳ್ಳಿ ಸೋಡಗಿಯನ್ನು ಮತ್ತೆ ನೆನಪಿಸಿದ ಬೋಜಲಿಂಗೇಶ್ವರ ಶ್ರೀಗಳು

By Suvarna News  |  First Published Mar 26, 2022, 8:18 PM IST

* ಜೋಳದ ರಾಶಿ ಗುಂಪು ಹಾಕಿ ಬಿನ್ನಿಗೀಡದಲ್ಲಿ ಹಂತಿ ಕಣ
* ಮತ್ತೆ ಮರುಕಳಿಸಿದ ಹಂತಿ ಹೊಡೆಯುವ ಪದ್ಧತಿ
* ಹಳೆ ಸಂಪ್ರದಾಯವನ್ನು ಕಣ್ತುಂಬಿಕೊಂಡ ನೂರಾರು ಜನ


ವರದಿ: ಪರಶುರಾಮ್ ಐಕೂರ್, ಏಷ್ಯಾನೆಟ್ ಸುವರ್ಣ ನ್ಯೂಸ್, ಯಾದಗಿರಿ

ಯಾದಗಿರಿ (ಮಾ.26): ಇದು ಆಧುನಿಕ ಜಗತ್ತು, ಹೇಳಿಕೇಳಿ ಯಂತ್ರಗಳ ಯುಗ. ಜನರಿಗೆ ಆದಷ್ಟು ಬೇಗ ಕೆಲಸ ಕಾರ್ಯಗಳು ಕೆಲವೇ ಗಂಟೆಗಳಲ್ಲಿ ಮುಗಿಯಬೇಕು, ಆದ್ರೆ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಸೂಗೂರು ಗ್ರಾಮದ ಭೋಜಲಿಂಗೇಶ್ವರ ಶ್ರೀಮಠದ ಪೀಠಾಧಿಪತಿ ಹಿತಗಪ್ಪ ತಾತನವರು 18 ಎತ್ತುಗಳನ್ನು ಕಟ್ಟಿ, ಜೋಳದ ರಾಶಿಯನ್ನು ರಾತ್ರಿಯಿಡೀ ಹಂತಿ ರಾಶಿ ಮಾಡುವ ಆಗಿನ ಕಾಲದ, ಪಕ್ಕಾ ಹಳಿ ಸೊಗಡಿನ, ಭಾರತೀಯ ಸಂಪ್ರದಾಯವನ್ನು ನೂರಾರು ಜನರು ಕಣ್ತುಂಬಿಕೊಳ್ಳುವಂತೆ ಮಾಡಿದರು.

Tap to resize

Latest Videos

undefined

ರೈತರ ಜೀವನಾಡಿ ಜೋಡೆತ್ತುಗಳು: ರೈತರು ಹೊಲದಲ್ಲಿನ ರಾಶಿಯನ್ನು ಯಂತ್ರೋಪಕರಣಗಳಿಗೆ ಕೊಟ್ಟು ಕೆಲವೇ ಗಂಟೆಗಳಲ್ಲಿ ಫಟಾಫಟ್ ಅಂತ ಕೆಲಸ ಮುಗಿಸ್ತಾರೆ, ಆಧುನಿಕ ಯಂತ್ರಗಳ ಭರಾಟೆಯಲ್ಲಿ ರಾಶಿ ಕೆಲವೇ ಕ್ಷಣಗಳಲ್ಲಿ ಮುಗಿದೇ ಬಿಡುತ್ತದೆ. ಇಂತಹ ಸಂದರ್ಭದಲ್ಲಿಯೂ ಕೂಡ ಸೂಗೂರು ಗ್ರಾಮದಲ್ಲಿ ಶ್ರೀ ಭೋಜಲಿಂಗೇಶ್ವರ ಶ್ರೀಮಠದ ಪೀಠಾಧಿಪತಿ ಹಿರಗಪ್ಪ ತಾತನವರು ಆ ಸಂಪ್ರದಾಯವನ್ನು ಜೀವಂತವಿಡಲು ಪ್ರಯತ್ನಿಸುತ್ತಾ ರೈತನ ಜೀವನಾಡಿಯಾಗಿರುವ ಜೋಡೆತ್ತುಗಳೊಂದಿಗೆ ಜೋಳದ ರಾಶಿಯ ಹಂತಿ ಸಂಪ್ರದಾಯವನ್ನು ಮುನ್ನಡೆಸುತ್ತಿದ್ದಾರೆ. 

ನಮಗೆ ಹಿಜಾಬ್ ಮುಖ್ಯ, ಪರೀಕ್ಷೆ ಅಲ್ಲ ಎಂದು ಎಕ್ಸಾಂ ಬಿಟ್ಟು ಹೊರನಡೆದ ಬಾಲಕಿಯರು!

ಸೂಗೂರು ಗ್ರಾಮದ ಹೊರವಲಯದಲ್ಲಿರುವ ಶ್ರೀಮಠದ ಜಮೀನಿನಲ್ಲಿ ಬೆಳೆದ ಜೋಳದ ತೆನೆಗಳನ್ನು ಒಂದೆಡೆ ಗುಂಪು ಹಾಕಿ ಬನ್ನಿಗಿಡವಿರುವ ಜಾಗದಲ್ಲಿ ಹಂತಿಕಣ ಮಾಡಿ ಅದಕ್ಕೆ ಪೂಜೆ ಪುನಸ್ಕಾರಗಳನ್ನು ಮಾಡಿ ಹಂತಿ ಮಾಡುವುದು ವಾಡಿಕೆಯಾಗಿದ್ದು, ಕಳೆದ 3ವರ್ಷಗಳಿಂದ ಜೋಳದ ರಾಶಿಕಣವಾದ ಹಂತಿಯನ್ನು ನಡೆಸುತ್ತಿದ್ದರಿಂದ ಸುತ್ತಮುತ್ತಲಿನ ಗ್ರಾಮಗಳ ರೈತರು ತಮ್ಮ ತಮ್ಮ ಎತ್ತುಗಳೊಂದಿಗೆ ಶ್ರೀಮಠದ ವತಿಯಿಂದ ನಡೆಯುವ ಹಂತಿ ಕಾರ್ಯಕ್ರಮಕ್ಕೆ ಆಗಮಿಸಿ ಆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಸುಗ್ಗಿಯ ಬಂತು ಹಿಗ್ಗಿದ ರೈತರು: ಶ್ರೀಮಠಕ್ಕೆ ಸೇರಿದ ಹೊಲದಲ್ಲಿ ಹೊಲದಲ್ಲಿ ಸುಗ್ಗಿಯ ನಿಮಿತ್ತ ಹಳೆಯ ಪದ್ಧತಿಯಂತೆ ಹಂತಿ (ಎತ್ತುಗಳಿಂದ ಧಾನ್ಯ ತುಳಿಸಿ ಜೋಳದ ರಾಶಿ ಮಾಡುವುದು) ಮೂಲಕ ರಾಶಿ ನಡೆಸಿ ಗಮನ ಸೆಳೆದರು. ಎತ್ತುಗಳನ್ನು ಕಟ್ಟಿ ಜೋಳದ ತೆನೆಗಳನ್ನು ತುಳಿಸುವುದರಿಂದ ಜೋಳದ ಕಾಳುಗಳು ಬಿಚ್ಚುತ್ತವೆ. ನಂತರ ಅವುಗಳನ್ನು ತೂರಿ ಜೋಳದ ರಾಶಿ ನಡೆಸಲಾಗುತ್ತದೆ. ಇದರ ಜತೆ ಗ್ರಾಮಸ್ಥರಿಗೆ ರುಚಿ ಆಹಾರ ನೀಡಿ ಜನಪದ ಹಾಡುಗಳನ್ನು ಹಾಡುವುದು ಈಗ ಅಪರೂಪವಾಗಿದ್ದು, ಈ ಸಂದರ್ಭದಲ್ಲಿ ಎತ್ತುಗಳನ್ನು ಹುರಿದುಂಬಿಸಲು ಜನಪದ ಹಾಡುಗಳನ್ನು ಹಾಡುತ್ತಾರೆ. ಶ್ರೀಮಠದ ಹಂತಿಕಣವನ್ನು ನೋಡಲು ಸಾವಿರಾರು ಭಕ್ತರು ತಮ್ಮ ಕುಟುಂಬ ಪರಿವಾರ ಸಮೇತ ಆಗಮಿಸಿದ್ದರು.

Puneeth Rajkumar Inspiration: ಪುನೀತ್‌ ಹೆಸರಿನಲ್ಲಿ ಉಚಿತ ಗ್ರಂಥಾಲಯ ತೆರೆದ ಯಾದಗಿರಿ ಪೊಲೀಸ್

ಗೆಣಸಿನ ಹೋಳಿಗೆ ಸವಿದ ಜನ: ನಂತರ ಎಲ್ಲ ಭಕ್ತರಿಗೆ ಶ್ರೀಮಠದ ವತಿಯಿಂದ ಗೆಣಸಿನ ಹೋಳಿಗೆ, ಅನ್ನಸಾಂಬರ್ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

click me!