ಹೆಣ್ಣು ಕಾಳಿಂಗ ಸರ್ಪವನ್ನ ಮೆಚ್ಚಿಸಲು ಎರಡು ಗಂಡು ಕಾಳಿಂಗಗಳ ಕೋಂಬ್ಯಾಕ್ ಡ್ಯಾನ್ಸ್..!

By Suvarna News  |  First Published Mar 26, 2022, 5:12 PM IST

ಮಲೆನಾಡಿನ ಪಶ್ಚಿಮ ಘಟ್ಟದ ಶ್ರೇಣಿಯಲ್ಲಿ ಕಾಳಿಂಗ ಸರ್ಪ ಸಂಖ್ಯೆ ಅತಿ ಹೆಚ್ಚು ಕಂಡುಬರುತ್ತದೆ. ಸಾಮಾನ್ಯವಾಗಿ ಕಾಳಿಂಗ ಸರ್ಪಗಳ ಮಿಲನದ ಸಮಯವಿದು,ಫೆಬ್ರವರಿಯಿಂದ ಎಪ್ರಿಲ್ ವರೆಗೂ ಕೂಡ ಕಾಳಿಂಗ ಸರ್ಪಗಳ ಮಿಲದ ಕ್ರಿಯೆ ಇರುತ್ತೆ. ಕಾಳಿಂಗ ಸರ್ಪಗಳು ತನ್ನ ಆಹಾರವನ್ನು ಹುಡುಕುವುದಕ್ಕಿಂತ ತನ್ನ ಸಂಗಾತಿಯನ್ನು ಹುಡುಕುವುದು ಹೆಚ್ಚು. 


ಚಿಕ್ಕಮಗಳೂರು (ಮಾ. 26): ಮಲೆನಾಡಿನ ಪಶ್ಚಿಮ ಘಟ್ಟದ ಶ್ರೇಣಿಯಲ್ಲಿ ಕಾಳಿಂಗ ಸರ್ಪ ಸಂಖ್ಯೆ ಅತಿ ಹೆಚ್ಚು ಕಂಡುಬರುತ್ತದೆ. ಸಾಮಾನ್ಯವಾಗಿ ಕಾಳಿಂಗ ಸರ್ಪಗಳ ಮಿಲನದ ಸಮಯವಿದು,ಫೆಬ್ರವರಿಯಿಂದ ಎಪ್ರಿಲ್ ವರೆಗೂ ಕೂಡ ಕಾಳಿಂಗ ಸರ್ಪಗಳ ಮಿಲದ ಕ್ರಿಯೆ ಇರುತ್ತೆ. ಕಾಳಿಂಗ ಸರ್ಪಗಳು ತನ್ನ ಆಹಾರವನ್ನು ಹುಡುಕುವುದಕ್ಕಿಂತ ತನ್ನ ಸಂಗಾತಿಯನ್ನು ಹುಡುಕುವುದು ಹೆಚ್ಚು. ಇಂಥ ಅಪರೂಪದ ಕಾಳಿಂಗಸರ್ಪಗಳ ಮಿಲನ ಮಹೋತ್ಸವ ಕಾಫಿನಾಡು ಚಿಕ್ಕಮಗಳೂರಿನ ಕುದುರೆಮುಖ ರಾಷ್ಟ್ರೀಯ ಉದ್ಯಾವನ ವ್ಯಾಪ್ತಿಯಲ್ಲಿ ನಡೆದಿದೆ. 

ಒಂದು ಹೆಣ್ಣು ಕಾಳಿಂಗ ಸರ್ಪವನ್ನ (King Cobra) ಮೆಚ್ಚಿಸಲು ಎರಡು ಗಂಡು ಕಾಳಿಂಗ ಸರ್ಪಗಳು ನಡೆಸುವ ಕೋಂಬ್ಯಾಕ್ ನೃತ್ಯದ ಅಪರೂಪದ ವಿಡಿಯೋ (Video) ಜಿಲ್ಲೆಯ ಕಳಸ ತಾಲೂಕಿನ ಕುದುರೆಮುಖ (Kudhuremukha) ಮಾರ್ಗದ ಭಗವತಿ ದೇವಸ್ಥಾನದ ಬಳಿ ಸೆರೆಯಾಗಿದೆ. ಈ ವಿಡಿಯೋ ಪ್ರಾಣಿ ಪ್ರಪಂಚದಲ್ಲಿ (World of Animals) ತುಂಬಾ ಅಪರೂಪದ ವಿಡಿಯೋವಾಗಿದ್ದು, ಸೆರೆ ಸಿಗುವುದು ತೀರಾ ವಿರಳ. ಎರಡು ಕಾಳಿಂಗ ಸರ್ಪಗಳು ರಸ್ತೆ ಮಧ್ಯೆಯೇ ಸುಮಾರು ಅರ್ಧಗಂಟೆಗಳ ಕೋಂಬ್ಯಾಕ್ ಡ್ಯಾನ್ಸ್ ನಡೆಸಿದ್ದು ಪ್ರಯಾಣಿಕರು ಸುಮಾರು ಅರ್ಧಗಂಟೆಗಳ ಕಾಲ ನಿಂತಲ್ಲೇ ನಿಂತು ಪರದಾಡಿದ್ದಾರೆ. ಕಾಳಿಂಗ ಸರ್ಪಗಳು ಹೆಚ್ಚಾಗಿ ಅರಣ್ಯ ಪ್ರದೇಶದಲ್ಲಿ ಕೋಂಬ್ಯಾಕ್ ಡ್ಯಾನ್ಸ್ ನಡೆಸುತ್ತವೆ. ಅವು ಜನರ ಕಣ್ಣೆದುರು ಈ ರೀತಿ ನೃತ್ಯ ಮಾಡುವುದು ಅಪರೂಪದಲ್ಲಿ ಅಪರೂಪ. ಹಾಗಾಗಿ, ಈ ವಿಡಿಯೋವನ್ನ ಅಪರೂಪದ ವಿಡಿಯೋ ಎಂದೇ ಹೇಳಲಾಗಿದೆ. ರಸ್ತೆ ಮಧ್ಯೆ ಎರಡು ಬೃಹತ್ ಸರ್ಪಗಳನ್ನ ಕಂಡು ಗಾಬರಿಯಾದ ಪ್ರಯಾಣಿಕರು ಕೂಡ ಹಾವುಗಳು ಹೋಗುವವರೆಗೂ ನಿಂತಲ್ಲೇ ನಿಂತಿದ್ದರು. 

Tap to resize

Latest Videos

ಕಾಳಿಂಗ ಮೈಥುನ: ಇಲ್ಲಿವೆ ಫೋಟೋಸ್

ಒಂದು ಹೆಣ್ಣು ಕಾಳಿಂಗ ಸರ್ಪವನ್ನ ಮೆಚ್ಚಿಸಲು ಎರಡು ಗಂಡು ಕಾಳಿಂಗ ಸರ್ಪಗಳು ನಡೆಸುವ ಕ್ರಿಯೆಯನ್ನ ಕೋಂಬ್ಯಾಕ್ ಡ್ಯಾನ್ಸ್ ಎಂದು ಪ್ರಾಣಿ ಪ್ರಪಂಚದಲ್ಲಿ ಕರೆಯುತ್ತಾರೆ. ಕೆಲವೊಮ್ಮೆ ಹೆಣ್ಣು ಕಾಳಿಂಗ ಸರ್ಪವನ್ನ ಮೆಚ್ಚಿಸಲು ಎರಡು ಗಂಡು ಕಾಳಿಂಗಗಳು ಹೊಡೆದಾಡುತ್ತವೆ ಅಥವಾ ಕೋಂಬ್ಯಾಕ್ ಡ್ಯಾನ್ಸ್ ಮಾಡುತ್ತವೆ. ಈ ವಿಡಿಯೋವನ್ನೂ ಕೂಡ ಪರಿಸರವಾದಿಗಳು ಕೋಂಬ್ಯಾಕ್ ಡ್ಯಾನ್ಸ್ ಎಂದೇ ಬಣ್ಣಿಸಿದ್ದಾರೆ. ಈ ರೀತಿ ಎರಡು ಕಾಳಿಂಗಗಳ ನಡುವಿನ ಫೈಟಿಂಗ್ ಅಥವ ಕೋಂಬ್ಯಾಕ್ ನೃತ್ಯದಲ್ಲಿ ಗೆದ್ದ ಗಂಡು ಕಾಳಿಂಗ ಸರ್ಪ ಹೆಣ್ಣು ಕಾಳಿಂಗ ಸರ್ಪದ ಜೊತೆ ಮಿಲನ ಮಹೋತ್ಸವ ಕ್ರಿಯೆಯಲ್ಲಿ ತೊಡಗಿ ಸಂತಾನೋತ್ಪತ್ತಿಯಲ್ಲಿ (Mating) ತೊಡಗಿಕೊಳ್ಳಲಿವೆ. ಕಾಳಿಂಗ ಸರ್ಪಗಳು ಹುತ್ತದೊಳಗೂ ಫೈಟ್ ಮಾಡುತ್ತವೆ ಅಥವ ಕೋಂಬ್ಯಾಕ್ ನೃತ್ಯ ನಡೆಸುತ್ತವೆ. ಆದರೆ, ಕಳಸ (Kalasa) ಭಾಗದಲ್ಲಿ ಸಂಜೆ ವೇಳೆ ಮಳೆ ಹಾಗೂ ಹಗಲಲ್ಲಿ ಭಾರೀ ಬಿಸಿಲಿರುವ ಕಾರಣ ಭೂಮಿಯೊಳಗೆ ಉಷ್ಟಾಂಶ ಹೆಚ್ಚಿರುವ ಘಟನೆ ಈ ರೀತಿ ಭೂಮಿಯ ಮೇಲ್ಭಾಗಕ್ಕೆ ಬಂದು ಹೊಡೆದಾಡುತ್ತವೆ ಅಥವ ಕೋಂಬ್ಯಾಕ್ ಡ್ಯಾನ್ಸ್ ಮಾಡುತ್ತವೆ ಎಂದು ಪ್ರಾಣಿ ಪ್ರಪಂಚದ ಬಗ್ಗೆ ಅರಿವಿರುವವರು ಹೇಳುತ್ತಿದ್ದಾರೆ.

ಮಿಲನದ ಬಳಿಕ ಸಂಗಾತಿಯನ್ನೇ ತಿನ್ನುತ್ತೆ ಕಾಳಿಂಗ, ಇದಕ್ಕೇನು ಕಾರಣ?

"

click me!