Chikkaballapur: ಭಾನುವಾರ ಸರ್ಕಾರದಿಂದಲೇ ಕೈವಾರ ತಾತಯ್ಯನ ಜಯಂತಿ

By Suvarna News  |  First Published Mar 26, 2022, 7:42 PM IST

ಕೀರ್ತನೆಗಳ ತತ್ವಜ್ಞಾನಿ, ತತ್ವಪದಗಳ ಜನಕ ಎಂದೇ ಹೆಸರಾಗಿರೋ ಕಾಲಜ್ಞಾನಿ ಕೈವಾರ ಯೋಗಿ ನಾರಾಯಣ ಯತೀಂದ್ರರ 296ನೇ ಜಯಂತ್ಯೋತ್ಸವವನ್ನು ಈ ಬಾರೀಯಿಂದ ಸರ್ಕಾರವೇ ಅಧಿಕೃತವಾಗಿ ಗೌರವಯುತವಾಗಿ ಆಚರಿಸಲು ನಿರ್ಧಾರ ಮಾಡಿದೆ. 


ರವಿಕುಮಾರ್ ವಿ, ಚಿಕ್ಕಬಳ್ಳಾಪುರ

ಚಿಕ್ಕಬಳ್ಳಾಪುರ (ಮಾ.26): ಕೀರ್ತನೆಗಳ ತತ್ವಜ್ಞಾನಿ, ತತ್ವಪದಗಳ ಜನಕ ಎಂದೇ ಹೆಸರಾಗಿರೋ ಕಾಲಜ್ಞಾನಿ ಕೈವಾರ ಯೋಗಿ ನಾರಾಯಣ ಯತೀಂದ್ರರ 296ನೇ ಜಯಂತ್ಯೋತ್ಸವವನ್ನು ಈ ಬಾರೀಯಿಂದ ಸರ್ಕಾರವೇ ಅಧಿಕೃತವಾಗಿ ಗೌರವಯುತವಾಗಿ ಆಚರಿಸಲು ನಿರ್ಧಾರ ಮಾಡಿದೆ. ಬಲಿಜ ಸಮುದಾಯದಲ್ಲೆ ಜನಿಸಿರೋ ಕೈವಾರ ತಾತಯ್ಯ ಎಂದೇ ಪ್ರಸಿದ್ದಿ ಪಡೆದ ಯೋಗಿ ನಾರಾಯಣಪ್ಪ ಅವರ ಜಯಂತಿಯನ್ನು ಸರ್ಕಾರ ಅಧಿಕೃತವಾಗಿ ಆಚರಣೆ ಮಾಡುತ್ತಿದ್ದು, ಬಲಿಜ ಸಮುದಾಯದವರು ಸಂತಸ ವ್ಯಕ್ತಪಡಿಸಿದ್ದಾರೆ. 

Tap to resize

Latest Videos

undefined

ಇನ್ನೂ ರಾಜ್ಯದಲ್ಲೆ ಅತಿ ಹೆಚ್ಚು ಬಲಿಜ ಜನಾಂಗ ಇರೋ ಚಿಕ್ಕಬಳ್ಳಾಪುರದಲ್ಲಿ ತಾತಯ್ಯನವರ ಅದ್ದೂರಿ ಜಯಂತಿಯನ್ನು ಭಾನುವಾರ 27 ರಂದು ಮಾಡಲು ಎಲ್ಲಾ ಸಿದ್ಧತೆಗಳನ್ನು ಮಾಡಲಾಗಿದೆ. ನಗರದ ಜೂನಿಯರ್ ಕಾಲೇಜು ಆವರಣದ  ನಂದಿರಂಗ ಮಂದಿರಲ್ಲಿ ನಡೆಯಲಿದ್ದು. ಕಾರ್ಯಕ್ರಮಕ್ಕೆ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನೀಲ್ ಕುಮಾರ್, ಡಾ. ಕೆ ಸುಧಾಕರ್, ಎಂಟಿಬಿ ನಾಗರಾಜ್, ಸಂಸದರಾದ ಬಿ ಎನ್ ಬಚ್ಚೇಗೌಡ, ಪಿಸಿ ಮೋಹನ್ ಸೇರಿ ಬಲಿಜ ಸಮಾಜದ ಹಲವು ಗಣ್ಯರು ಭಾಗವಹಿಸಲಿದ್ದಾರೆ.. 

ಯಾರು ಈ ಕೈವಾರ ತಾತಯ್ಯ: ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕಿನ ಕೈವಾರ ಗ್ರಾಮದ ಕೊಂಡಪ್ಪ ಮುದ್ದಮ್ಮ ದಂಪತಿಯ ಪುತ್ರನಾದ ನಾರಾಯಣಪ್ಪ ಅವರೇ ಈಗಿನ ಕೈವಾರ ತಾತಯ್ಯ.. ಮೂಲತಃ ಬಳೆ ಬಲಿಜ ಸಮುದಾಯದವರಾಗಿದ್ದು, ಬಲಿಜ ಕುಲದ ಕಸುಬಾದ ಬಳೆ ಹಾಗೂ ಮುತ್ತೈದೆ ಸಾಮಾನುಗಳ ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿದ್ದರು.. ಚಿಕ್ಕವಯಸ್ಸಿನಲ್ಲೆ ತಂದೆ ತಾಯಿಯನ್ನು ಕಳೆದುಕೊಂಡರು, ಇದೇ ವೃತ್ತಿಯನ್ನು ಮುಂದುವರಿಸಿಕೊಂಡು ಬಂದಿದ್ದರು.. ಈ ವೇಳೆ ಸಂಬಂಧಿಕರನ್ನೆ ವಿವಾಹವಾಗಿ 50 ವರ್ಷಗಳ ಕಾಲ ಬಳೆ ವ್ಯಾಪಾರ ಮಾಡಿಕೊಂಡೆ ಜೀವನ ನಡೆಸುತ್ತಿದ್ದರು..

ಹುಬ್ಬಳ್ಳಿಯ ವಿಮಾನ ನಿಲ್ದಾಣಕ್ಕೆ ವಿಂಗ್ಸ್ ಇಂಡಿಯಾ- 2022 ಪ್ರಶಸ್ತಿ.!

ಸಾಂಸಾರಿಕ ಜೀವನದಿಂದ ವಿಮುಕ್ತಿ: ನಾರಾಯಣಪ್ಪ ಅವರು ತಮ್ಮ 50ನೇ ವಯಸ್ಸಿನಲ್ಲಿ ಲೌಕಿಕ ಜೀವನದಿಂದ ಬೇಸತ್ತು ಕೈವಾರ ಗ್ರಾಮದ ಬಳಿ ಇರೋ ನರಸಿಂಹಸ್ವಾಮಿ ಬೆಟ್ಟದ ಗುಹೆಯಲ್ಲಿ 9 ತಿಂಗಳ ಕಾಲ ಊಟ,ನೀರು ಸೇವಿಸದೆ ತಪ್ಪಸ್ಸು ಮಾಡೋ ಮೂಲಕ ಸಿದ್ದಿ ಹಾಗೂ ಯೋಗವನ್ನು ಪಡೆಯುತ್ತಾರೆ.. ಅಪಾರ ಜ್ಞಾನವನ್ನು ಹೊಂದಿದ ಯೋಗಿ ನಾರಾಯಣಪ್ಪ ಸೃಷ್ಠಿಕರ್ತ, ಸ್ಥಿತಿಕರ್ತ, ಲಯಕರ್ತನಾಗುತ್ತಾರೆ.. ಬಳಿಕ ಯೋಗಿನಾರಾಯಣಪ್ಪ ಅವರು ಕಾಲಜ್ಞಾನಿಯಾಗುತ್ತಾರೆ.. 

ಕೀರ್ತನೆ, ತತ್ವಪದಗಳ ಜನಕ ಎಂದೇ ಖ್ಯಾತಿ: ಕೈವಾರ ತಾತಯ್ಯ ಯೋಗಿ ನಾರಾಯಣಪ್ಪ ತನ್ನ ಕೀರ್ತನೆಗಳು ಹಾಗೂ ತತ್ವಪದಗಳನ್ನು ಹೇಳುವ ಮೂಲಕ ಮನೆ ಮಾತಾಗಿದ್ದರು. ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ಸಾವಿರಾರು ಕೀರ್ತನೆಗಳನ್ನು ರಚಿಸಿ, ಸಾಮಾನ್ಯ ಜನರಿಗೂ ಅರ್ಥ ಆಗುವ ರೀತಿಯಲ್ಲಿ ವಚನ ಸಾಹಿತ್ಯವನ್ನು ಪಸರಿಸಿದರು. 

ಕಾಲಜ್ಞಾನಿಯಾದ ಕೈವಾರ ತಾತಯ್ಯ: ಯೋಗಿ ನಾರೇಯಣ ಯತೀಂದ್ರರರು ದೇಶ ಹಾಗೂ ಪ್ರಪಂಚದಲ್ಲಿ ಮುಂದೆ ಏನೆಲ್ಲ ಆಗುತ್ತದೆ ಎಂಬ ಕಾಲಜ್ಞಾನವನ್ನು ಹೇಳುವ ಮೂಲಕ ಎಲ್ಲರನ್ನು ಅಚ್ಚರಿಪಡಿಸಿದ್ದರು, ಕೈವಾರ ತಾತಯ್ಯನವರು ನುಡಿದಿದ್ದ ಭವಿಷ್ಯಗಳಲ್ಲಿ ಬಹುತೇಖ ಘಟನೆಗಳು ಸತ್ಯವಾಗಿವೆ. ಆಹಾರವಿದ್ದರು ಕೊಳ್ಳಲು ಆಗಲ್ಲ, ದುಬಾರಿ ಜಗತ್ತಿನಲ್ಲಿ ವಿಚಿತ್ರ ಬರಾಗಲ, ಪತಿ - ಪತ್ನಿ ಸಂಬಂಧಕ್ಕೆ ಧಕ್ಕೆ ಸೇರಿದಂತೆ ಸಮಾಜದ ಬಗ್ಗೆ ಅನೇಕ ಪ್ರಚಲಿತ ವಿಷಯಗಳ ಬಗ್ಗೆ ಬಹಳ ಹಿಂದೆಯೇ ಉಲ್ಲೇಖಿಸಿದ್ದು, ಅಚ್ಚರಿ ಹಾಗೂ ಗಮನಾರ್ಹ.

ಹೆಣ್ಣು ಕಾಳಿಂಗ ಸರ್ಪವನ್ನ ಮೆಚ್ಚಿಸಲು ಎರಡು ಗಂಡು ಕಾಳಿಂಗಗಳ ಕೋಂಬ್ಯಾಕ್ ಡ್ಯಾನ್ಸ್..!

ಪಾಲ್ಗುಣ ಮಾಸದ ಪೌರ್ಣಮಿ ದಿನ ತಾತಯ್ಯನ ಜಯಂತಿ: ಈ ವರ್ಷದಿಂದ ಸರ್ಕಾರವೇ ಕೈವಾರ ತಾತಯ್ಯನ ಜನ್ಮದಿನವನ್ನು ಆಚರಿಸಲು ತೀರ್ಮಾನ ಮಾಡಿದ್ದು, ಮಾರ್ಚ್ 27 ರಂದು ತಾತಯ್ಯನ ಜಯಂತಿ ಮಾಡುತಿದ್ದಾರೆ. ಆದ್ರೆ ಕೈವಾರ ತಾತಯ್ಯನವರು ಹುಟ್ಟಿದ್ದು, ಮಾರ್ಚ್ ತಿಂಗಳ ಪಾಲ್ಗುಣ ಮಾಸದ ಪೌರ್ಣಮಿ ದಿನ ಹೀಗಾಗಿ ಮುಂದಿನ ವರ್ಷದಿಂದ ಪಾಲ್ಗುಣ ಮಾಸದ ಪೌರ್ಣಮಿ ದಿನವೇ ತಾತಯ್ಯನ ಜಯಂತಿ ಆಚರಿಸುವುದಾಗಿ ಸರ್ಕಾರ ಸ್ಪಷ್ಟಪಡಿಸಿದೆ.

click me!