ನನ್ನ ಸಾವಿಗೆ ನನ್ನ ಪಕ್ಷದ ಮುಖಂಡರೇ ಕಾರಣ : ಸ್ಟೇಟಸ್ ಹಾಕಿ ಕೈ ಸದಸ್ಯೆ ಆತ್ಮಹತ್ಯೆ ಯತ್ನ

By Suvarna News  |  First Published Nov 13, 2021, 11:36 AM IST
  • ಪಕ್ಷದ ಮುಖಂಡರ ಮೇಲೆ ಆರೋಪಿಸಿ ಕಾಂಗ್ರೆಸ್ ಮುಖಂಡೆ ಆತ್ಮಹತ್ಯೆ ಯತ್ನ 
  • ನನ್ನ ಸಾವಿಗೆ ನನ್ನ ಪಕ್ಷದ ಮುಖಂಡರೇ ಕಾರಣ ಎಂದು  ಸ್ಟೇಟಸ್ ಹಾಕಿ  ಕಾಂಗ್ರೆಸ್ ಸದಸ್ಯೆ ಆತ್ಮಹತ್ಯೆ ಯತ್ನ

  ಚಿಕ್ಕಮಗಳೂರು (ನ.13):   ನನ್ನ ಸಾವಿಗೆ ನನ್ನ ಪಕ್ಷದ ಮುಖಂಡರೇ ಕಾರಣವೆಂದು ಸ್ಟೇಟಸ್ (status) ಹಾಕಿ ಪಟ್ಟಣ ಪಂಚಾಯಿ ಕಾಂಗ್ರೆಸ್ (Congress) ಸದಸ್ಯೆ ಆತ್ಮಹತ್ಯೆಗೆ (Suicide) ಯತ್ನಿಸಿದ ಘಟನೆ ಚಿಕ್ಕಮಗಳೂರಿನಲ್ಲಿ (Chikkamagaluru) ನಡೆದಿದೆ.  

ಅಧ್ಯಕ್ಷೆ ಸ್ಥಾನ ಬಿಟ್ಟು ಕೊಡದಿದ್ದಕ್ಕೆ ಮನನೊಂದು ಪಟ್ಟಣ ಪಂಚಾಯಿತಿ (Town panchayat) ಸದಸ್ಯೆ ಆತ್ಮಹತ್ಯೆಗೆ ಯತ್ನಿಸಿ ಶಿವಮೊಗ್ಗದಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ.  

Latest Videos

undefined

  5-6 ಬಗೆಯ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆ ಯತ್ನಿಸಿದ  ಎನ್.ಆರ್.ಪುರ ತಾಲೂಕಿನ ಪಟ್ಟಣ ಪಂಚಾಯಿತಿ ಸದಸ್ಯೆ  ಜುಬೇದಾ ತಮ್ಮ ಪಕ್ಷದ ಮುಖಂಡರ ವಿರುದ್ಧವೇ ಆರೋಪ ಮಾಡಿದ್ದಾರೆ.   ಎನ್.ಆರ್.ಪುರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಶಿವಮೊಗ್ಗದ ಆಸ್ಪತ್ರೆ ದಾಖಲಿಸಲಾಗಿದೆ.  

ಮಾತುಕತೆಯಂತೆ ಪ್ರಸ್ತುತ ಅಧ್ಯಕ್ಷೆ ಸುರಯ್ಯಾ ಭಾನು ಅಧ್ಯಕ್ಷೆ ಅವಧಿ ಮುಗಿದಿದೆ. ಸುರಯ್ಯಾ ಬಾನು, ಅಧ್ಯಕ್ಷೆ ಸ್ಥಾನ ಬಿಟ್ಟುಕೊಡಲು ಮೀನಾಮೇಷ  ಎಣಿಸುತ್ತಿದ್ದು, ಸುರಯ್ಯಾ ಬಾನು ರಾಜೀನಾಮೆಗೆ ಪಕ್ಷದ ಮುಖಂಡರಲ್ಲೇ ಮುಸುಕಿನ ಗುದ್ದಾಟ ಏರ್ಪಟ್ಟಿದೆ.  

ಈ ನಿಟ್ಟಿನಲ್ಲಿ ಮನನೊಂದು ಸದಸ್ಯೆ ಜುಬೇದಾ  ಆತ್ಮಹತ್ಯೆಗೆ ಯತ್ನಿಸಿದ್ದಾರೆ. 

ಪತ್ನಿ ವಿಡಿಯೋ ಕಾಲ್‌ನಲ್ಲಿದ್ದಾಗಲೇ ನೇಣಿಗೆ ಶರಣು :   ಶಿವಮೊಗ್ಗದ (Shovamgga) ಜೈಲಿನಲ್ಲಿ ವಾರ್ಡರ್ ಆಗಿ ಕೆಲಸ ಮಾಡುತ್ತಿದ್ದ 24 ವರ್ಷದ ಯುವಕರೊಬ್ಬರು ತನ್ನ ಪತ್ನಿಗೆ ವಾಟ್ಸಾಪ್ ವಿಡಿಯೋ ಕಾಲ್(Whatsapp Video Call) ಮಾಡುವಾಗಲೇ ನೇಣು ಹಾಕಿಕೊಂಡು ಆತ್ಮಹತ್ಯೆಗೆ (Suicide) ಶರಣಾಗಿದ್ದ.

ಬೆಳಗಾವಿಯ ಯರ್ನಾಡ ಗ್ರಾಮದ ಅಶ್ಫಾಕ್ ತಗಡಿ ಎಂಬ ವ್ಯಕ್ತಿ ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ವಾರ್ಡರ್ ಆಗಿದ್ದರು. ಅವರು ತಮ್ಮ ಹೆಂಡತಿಗೆ ವಿಡಿಯೋ ಕಾಲ್ ಮಾಡಿ ಮಾತನಾಡುತ್ತಿದ್ದಾಗಲೇ ರೂಮಿನ ಫ್ಯಾನ್​ಗೆ ನೇಣು ಹಾಕಿಕೊಂಡು ಸಾವನ್ನಪ್ಪಿದ್ದ.

Suvarna FIR; ರಾಧಾ-ಕೃಷ್ಣರ ಲವ್ ಸ್ಟೋರಿ... ಮಗಳನ್ನೇ ಹತ್ಯೆ ಮಾಡಿದ ಶಿಕಾರಿಪುರದ ತಂದೆ

ತಕ್ಷಣ ಅಶ್ಫಾಕ್ ಅವರ ಹೆಂಡತಿಯ ಜೈಲಿನ ಇತರೆ ಅಧಿಕಾರಿಗಳಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾರೆ. ಆದರೆ, ಅವರು ಅಲ್ಲಿಗೆ ತೆರಳಿ ಮನೆಯ ಬಾಗಿಲು ಒಡೆದು ಒಳಗೆ ಹೋಗುವಷ್ಟರಲ್ಲಿ ಅಶ್ಫಾಕ್ ಉಸಿರು ನಿಂತಿತ್ತು. 

ವಿಡಿಯೋ ಕಾಲ್​ನಲ್ಲಿ ಹೆಂಡತಿಯೊಂದಿಗೆ ಜಗಳವಾಡಿ, ಮಗುವಿನ ಮುಖ ನೋಡುತ್ತಿರುವಾಗಲೇ ಅವರು ನೇಣಿಗೆ ಶರಣಾಗಿದ್ದಾರೆ. ಅಶ್ಫಾಕ್ ನೇಣಿಗೆ ಶರಣಾಗುತ್ತಿರುವ ವಿಡಿಯೋ ನೋಡುತ್ತಿದ್ದಂತೆಯೇ ಹೆಂಡತಿ ಅದನ್ನು ತನ್ನ ತಂದೆಗೆ ತೋರಿಸಿದ್ದಾರೆ. ತಕ್ಷಣ ಅವರು ಶಿವಮೊಗ್ಗದಲ್ಲಿನ ಅಶ್ಫಾಕ್ ಅವರ ಸ್ನೇಹಿತನಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾರೆ. ವಿಷಯ ತಿಳಿದು ಜೈಲು ಸಿಬ್ಬಂದಿ ಬಂದು ಮನೆ ಬಾಗಿಲು ಒಡೆದು ಒಳಗೆ ಹೋಗುವಷ್ಟರಲ್ಲಿ ಅಶ್ಫಾಕ್ ಸಾವನ್ನಪ್ಪಿದ್ದರು.

ಕಳೆದ ವರ್ಷ ಪೊಲೀಸ್ ಇಲಾಖೆಗೆ ಸೇರಿದ್ದ ಅಶ್ಫಾಕ್ ಇದೇ ಮೊದಲ ಬಾರಿಗೆ ಜೈಲಿನಲ್ಲಿ ಅವರ ಮೊದಲ ಪೋಸ್ಟಿಂಗ್ ಆಗಿತ್ತು. ಆತ್ಮಹತ್ಯೆಗೆ ಕಾರಣವೇನೆಂಬುದು ಇನ್ನೂ ಸ್ಪಷ್ಟವಾಗಿಲ್ಲ ತಿಳಿದುಬಂದಿಲ್ಲ.

 ಸಾವಿನ ಹಾದಿ ಹಿಡಿದ ಸಾರಿಗೆ ನೌಕರ
ಬಾಗಲಕೋಟೆ, (ನ.06): ನಿಗದಿತ ಸಮಯಕ್ಕೆ ಬಾರದ ವೇತನ ಹಾಗೂ ಸಾಲಬಾಧೆಯಿಂದ ಕಂಗಾಲಾಗಿ ವಿಷ ಸೇವಿಸಿದ್ದ ಕೆ.ಎಸ್.ಆರ್.ಟಿ.ಸಿ. ಬಸ್​​ ಚಾಲಕ ಇಂದು ಚಿಕಿತ್ಸೆ ಫಲಿಸದೆ ಸಾವಪ್ಪಿದ್ದಾನೆ. ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಕೆರೂರು ಪಟ್ಟಣದ ನಿವಾಸಿ ಭರಮಪ್ಪ ಗೊಂದಿ(45) ಮೃತ ದುರ್ದೈವಿ.

ಬಾದಾಮಿ ಡಿಪೋದಲ್ಲಿ ಚಾಲಕ ಕಂ ನಿರ್ವಾಹಕನಾಗಿ ಸೇವೆ ಸಲ್ಲಿಸುತ್ತಿದ್ದ ಭರಮಪ್ಪ, ಲಕ್ಷಾಂತರ ರೂಪಾಯಿ ಸಾಲ ಮಾಡಿದ್ದರು. ಕರೊನಾ ವೇಳೆಯಲ್ಲಿ ಸರಿಯಾಗಿ ವೇತನ ಆಗಿರಲಿಲ್ಲ. ಸದ್ಯ ಕೆ.ಎಸ್.ಆರ್.ಟಿ.ಸಿ. ವೇತನ ಪ್ರತಿ ತಿಂಗಳೂ ಎರಡು ಕಂತುಗಳಲ್ಲಿ ಅರ್ಧದಂತೆ ಬರುತ್ತಿದ್ದರೂ ವೇತನ ಕುಟುಂಬ ನಿರ್ವಹಣೆಗೂ ಸಾಲುತ್ತಿರಲಿಲ್ಲ. ಅದರ ಮೇಲೆ ಸಾಲ ತೀರಿಸುವ ಚಿಂತೆಯಿಂದ ಮನನೊಂದು ಅಕ್ಟೋಬರ್ 30ರಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಭರಮಪ್ಪನನ್ನು ಕೂಡಲೇ ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಇಂದು ಆಸ್ಪತ್ರೆಯಲ್ಲೇ ಸಾವಪ್ಪಿದ್ದಾರೆ. ಮೃತ ಸಾರಿಗೆ ಸಂಸ್ಥೆ ನೌಕರ, ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

click me!