ಎದು​ರಾಳಿ ಯಾರೇ ಆಗಿ​ರಲಿ ಎದು​ರಿ​ಸಲು ಸನ್ನ​ದ್ಧ​ರಾ​ಗಿ : ನಿಖಿಲ್‌ ಕುಮಾರಸ್ವಾಮಿ

By Kannadaprabha News  |  First Published Nov 13, 2021, 10:54 AM IST
  • 2023ರ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಎದುರಾಳಿ ಯಾರೇ ಆಗಿರಲಿ, ಅದರ ಬಗ್ಗೆ ತಲೆಕೆಡಿಸಿಕೊಳ್ಳದಿರಿ
  • ಸಮರ್ಥವಾಗಿ ಎದುರಿಸಲು ಸರ್ವ ಸನ್ನದ್ಧರಾಗುವಂತೆ ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಕರೆ 

 ರಾಮನಗರ(ನ.13):  2023ರ ವಿಧಾನಸಭಾ ಚುನಾವಣೆಯಲ್ಲಿ (Assembly election  ನಮ್ಮ ಎದುರಾಳಿ ಯಾರೇ ಆಗಿರಲಿ, ಅದರ ಬಗ್ಗೆ ತಲೆಕೆಡಿಸಿಕೊಳ್ಳದೆ ಅವರನ್ನು ಸಮರ್ಥವಾಗಿ ಎದುರಿಸಲು ಸರ್ವ ಸನ್ನದ್ಧರಾಗುವಂತೆ ಜೆಡಿಎಸ್‌ (JDS) ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ (Nikhil Kumaraswamy) ಕರೆ ನೀಡಿದರು.

ನಗರದ ಖಾಸಗಿ ಹೋಟೆಲ್‌ (Hotel) ನಲ್ಲಿ ನಡೆದ ರಾಮ​ನಗರ ಕ್ಷೇತ್ರ ವ್ಯಾಪ್ತಿಯ ಕೈಲಾಂಚ ಹೋಬಳಿಯ ಜೆಡಿಎಸ್‌ ಮುಖಂಡರು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, 2023ರ ಚುನಾವಣೆ ಕೇವಲ ನನ್ನ, ಕುಮಾರಣ್ಣ (HD kumaraswamy) ಅವರ ಅಸ್ತಿತ್ವದ ಪ್ರಶ್ನೆಯಲ್ಲ, ಕ್ಷೇತ್ರದ ಕಾರ್ಯಕರ್ತರ ಅಸ್ತಿತ್ವದ  ಪ್ರಶ್ನೆ. ಕ್ಷೇತ್ರವನ್ನು ಉಳಿಸಿಕೊಳ್ಳುವುದು ಅನಿವಾರ್ಯವಾಗಿದ್ದು, ಅದಕ್ಕಾಗಿ ಪ್ರತಿಯೊಬ್ಬ ಕಾರ್ಯಕರ್ತರೂ ಶಕ್ತಿಮೀರಿ ದುಡಿಯಬೇಕು ಎಂದರು ನಿಖಿಲ್.

Tap to resize

Latest Videos

ನಾವು ದುರ್ಬಲ ಆಗಿದ್ದೇವೆ ಎಂಬ ಚರ್ಚೆಯನ್ನು ನಮ್ಮ ವಿರೋಧಿಗಳು ಹುಟ್ಟು ಹಾಕಿದ್ದಾರೆ. ಕ್ಷೇತ್ರದ ಸರ್ವೆ ಮಾಡಿಸಿದ್ದೇನೆ. ಅದರಲ್ಲಿನ ಎಲ್ಲಾ ಅಂಶಗಳನ್ನು ಬಹಿರಂಗ ಮಾಡಲು ಬಯಸುವುದಿಲ್ಲ. ಆದರೆ, ಸರ್ವೆಯಲ್ಲಿ ನಮಗೆ ಪೂರಕವಾದ ಅಂಶಗಳಿದ್ದು, ನಾವು ದುರ್ಬಲರಾಗಿಲ್ಲ, ಮತದಾರರು ಈಗಲೂ ನಮ್ಮ ಪರವಾಗಿಯೇ ಇದ್ದಾರೆ ಎಂಬುದು ಬಹಿರಂಗವಾಗಿದೆ. ಏಕೆಂದರೆ ನಾವು ರಾಮನಗರಕ್ಕೆ (Ramanagara) ಅನ್ಯಾಯ ಮಾಡಿಲ್ಲ ಎಂದು ಹೇಳಿದರು.

2018ರ ಉಪ ಚುನಾವಣೆಗಿಂತ (By Election) ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಅದಕ್ಕಿಂತ ಹೆಚ್ಚು ಲೀಡ್‌ ಗಳಿಸಬೇಕು. ಈ ಹಿನ್ನೆಲೆಯಲ್ಲಿ ಪಕ್ಷವನ್ನು ತಳಮಟ್ಟದಿಂದ ಸದೃಢಗೊಳಿಸಲು ಬೂತ್‌ ಕಮಿಟಿ ರಚನೆಗೆ ಮುಂದಾಗಿದ್ದೇನೆ. ಕಮಿಟಿಯಲ್ಲಿ ಎಲ್ಲಾ ಜಾತಿ, ಜನಾಂಗದವರು, ಯುವಕರು, ಮಹಿಳೆಯರು, ಅಲ್ಪಸಂಖ್ಯಾತರು ಸೇರಿದಂತೆ ಎಲ್ಲ ವರ್ಗದ ಜನ ಇರಬೇಕು. ಕುಮಾರಣ್ಣ  ಅವರ ಕಾರ್ಯದೊತ್ತಡದಿಂದ ಇದುವರೆಗೆ ಬೂತ್‌ ಕಮಿಟಿ ರಚಿಸಿಲ್ಲ. ಈಗ ನಾನು ಆ ಜವಾಬ್ದಾರಿ ಹೊತ್ತುಕೊಂಡಿದ್ದೇನೆ, ಪ್ರತಿ ಬೂತ್‌ ನಲ್ಲೂ ಕಮಿಟಿ ರಚಿಸುತ್ತೇನೆ. ಚುನಾವಣೆಗೆ ಇನ್ನೂ ಒಂದೂವರೆ ವರ್ಷ ಬಾಕಿ ಇದೆ. ಅಷ್ಟರೊಳಗೆ ನಾವು ಪಕ್ಷವನ್ನು ಸಂಘಟನೆ ಮಾಡಬೇಕಿದ್ದು, ಇದಕ್ಕೆ ನಿಮ್ಮೆಲ್ಲರ ಸಹಕಾರ ಅಗತ್ಯ ಎಂದರು.

ಪಕ್ಷ ಬಲವರ್ಧನೆ ಕುಮಾರಣ್ಣ ಮಾರ್ಗದರ್ಶನ:

ನಮ್ಮ ತಂದೆಯವರ ಜತೆ ಈಗಾಗಲೇ ಮಾತನಾಡಿದ್ದೇನೆ. ನನಗೆ ಸಮಯವಿಲ್ಲ, ನೀನಾದರೂ ಆ ಕೆಲಸ ಮಾಡು ಎಂದು ಪ್ರೋತ್ಸಾಹಿಸಿದ್ದಾರೆ. ಕೈಲಾಂಚ ಹೋಬಳಿಯ ಜನ ನಮ್ಮನ್ನು ಯಾವತ್ತೂ ಕೈಬಿಟ್ಟಿಲ್ಲ. ಹಾಗಾಗಿ ಅಲ್ಲಿಂದಲೇ ಸಂಘಟನೆಗೆ ಚಾಲನೆ ನೀಡಿದ್ದೇನೆ. ಎಲ್ಲಾ ಬೂತ್‌ಗಳಲ್ಲಿ (Booth) ಕಮಿಟಿ ರಚನೆ ನಂತರ ರಾಜ್ಯಮಟ್ಟದ ಕಾರ್ಯಾಗಾರ ನಡೆಸಿದಂತೆ ಕ್ಷೇತ್ರದ ಮುಖಂಡರಿಗೂ ಕಾರ್ಯಾಗಾರ ಹಮ್ಮಿಕೊಳ್ಳಲಾಗುವುದು. ನಾಲ್ಕು ಹೋಬಳಿಗಳಿಗೆ ನಾಲ್ಕು ದಿನ ಕಾರ್ಯಾಗಾರ ನಡೆಸಲಾಗುವುದು. ಕಾರ್ಯಾಗಾರದಲ್ಲಿ ಪಕ್ಷವನ್ನು ಯಾವ ರೀತಿ ಬಲವರ್ಧನೆ ಮಾಡಬೇಕೆಂಬ ಬಗ್ಗೆ ಕುಮಾರಣ್ಣ ಮಾರ್ಗದರ್ಶನ ನೀಡಲಿದ್ದಾರೆ. ಅದಕ್ಕೂ ಮುನ್ನ ಬೂತ್‌ ಕಮಿಟಿ ರಚನೆ ಜತೆಗೆ ಸದಸ್ಯತ್ವ ನೋಂದಣಿಯನ್ನೂ ಕೂಡ ಮಾಡಲಾಗುವುದು ಎಂದು ಹೇಳಿ​ದ​ರು.

ಪ್ರತಿ ಬೂತ್‌ ನಿಂದ ಮೂರು ಮಂದಿ ನನ್ನ ನೇರ ಸಂಪರ್ಕದಲ್ಲಿರಬೇಕು. ಅದಕ್ಕೆಂದೇ ಒಂದು ಸಿಮ್ (Sim), ಫೋನ್‌ (Phone) ಮೀಸಲಿರುತ್ತದೆ, ಎಲ್ಲರ ಹೆಸರು, ನಂಬರನ್ನು ಅದರಲ್ಲಿ ಸೇವ್‌ ಮಾಡಿರಲಾಗುತ್ತದೆ. ಏನೇ ಸಮಸ್ಯೆಗಳಿದ್ದರೂ ನನಗೆ ನೇರವಾಗಿ ಕರೆ ಮಾಡಬಹುದು, ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು.

ಸಭೆಯಲ್ಲಿ ತಾಲೂಕು ಅಧ್ಯಕ್ಷ ರಾಜಶೇಖರ್‌ , ಜಿಪಂ ಮಾಜಿ ಅಧ್ಯಕ್ಷ ಎಚ್‌.ಸಿ.ರಾಜು, ರಾಜ್ಯ ವಕ್ತಾರ ಬಿ.ಉಮೇಶ್‌, ಮುಖಂಡರಾದ ದೊರೆಸ್ವಾಮಿ, ಅಶ್ವತ್ಥ್, ಪ್ರಕಾಶ್‌, ಮಾವಿನ ಸಸಿ ವೆಂಕಟೇಶ್‌, ರವಿ, ಗೂಳಿ ಕುಮಾರ್‌, ಕೃಷ್ಣ, ರಾಮಕೃಷ್ಣಯ್ಯ, ಮೋಹನ್‌, ಗೇಬ್ರಿಯಲ್, ಎಂ.ಜಿ.ಫೈರೋಜ್‌, ಸುಹೇಲ್‌ ಪಾಷಾ, ಕಾಡನಕುಪ್ಪೆ ನವೀನ್‌, ಪಾಂಡುರಂಗ ಮತ್ತಿತರರು ಉಪ​ಸ್ಥಿ​ತ​ರಿದ್ದರು.

ರಾಮನಗರ ಮಾದರಿ ಕ್ಷೇತ್ರ

ರಾಜ್ಯದ 224 ಕ್ಷೇತ್ರಗಳ ಪೈಕಿ ರಾಮನಗರ ಮಾದರಿ ಕ್ಷೇತ್ರವಾಗಿದೆ. ಅಭಿವೃದ್ಧಿಗೆ ಯಾವುದೇ ಕೊರತೆ ಇಲ್ಲದಂತೆ ಕುಮಾರಸ್ವಾಮಿ ಅವರು ನೋಡಿಕೊಂಡಿದ್ದಾರೆ. ನಮ್ಮ ತಾಯಿ ಅನಿತಾ ಕುಮಾರಸ್ವಾಮಿ ಅದನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಇದೀಗ ಆ ಜವಾಬ್ದಾರಿಯನ್ನು ನಾನು ವಹಿಸಿಕೊಳ್ಳುತ್ತಿದ್ದೇನೆ ಎಂದು ನಿಖಿಲ್‌ ತಿಳಿಸಿದರು.

ಕುಮಾರಣ್ಣ ಅವರು ಇಡೀ ರಾಜ್ಯ ಸುತ್ತಬೇಕಿದೆ. ಹಾಗಾಗಿ ಕ್ಷೇತ್ರದಲ್ಲಿ ಪ್ರವಾಸ ಮಾಡಲು ಸಾಧ್ಯವಾಗುತ್ತಿಲ್ಲ. 25 ವರ್ಷಗಳಿಂದ ಸಮರ್ಥವಾಗಿ ಪಕ್ಷ ಸಂಘಟನೆ ಮಾಡುತ್ತಿದ್ದಾರೆ. ರಾಮನಗರವನ್ನು ಜಿಲ್ಲೆ ಮಾಡಿದ್ದು ನಮ್ಮ ತಂದೆ. ತದ ನಂತರ ರಾಮನಗರ ಸರ್ವಾಂಗೀಣ ಅಭಿವೃದ್ಧಿ ಕಂಡಿದೆ.

ಜೆಪಿ ನಗರದ ನಮ್ಮ ಮನೆ ಬೇರೆ ಅಲ್ಲ ರಾಮನಗರ ಕ್ಷೇತ್ರ ಜನತೆ ಬೇರೆಯಲ್ಲ. ನೀವೆಲ್ಲಾ ನಮ್ಮ ಕುಟುಂಬದ ಸದಸ್ಯರಿದ್ದಂತೆ. 25-30 ವರ್ಷಗಳಿಂದ ಹಿರಿಯರು ಈ ಪಕ್ಷವನ್ನು ಕಟ್ಟಿಬೆಳೆಸಿದ್ದಾರೆ. ಯುವಕರಾದ ನಾವು ಅದನ್ನು ಇನ್ನಷ್ಟುಬೆಳೆಸಬೇಕಿದೆ. ಅದಕ್ಕಾಗಿ ಹಿರಿಯರು ತಮ್ಮ ಅನುಭವವನ್ನು ಧಾರೆಯರೆದು ಯುವಕರಿಗೆ ಮಾರ್ಗದರ್ಶನ ನೀಡಬೇಕು ಎಂದರು ಮನವಿ ಮಾಡಿದರು.

ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಕುಮಾರಣ್ಣ ಎಂದೂ ಹಸ್ತಕ್ಷೇಪ ಮಾಡಿದವರಲ್ಲ. ಆದರೆ, ಇತ್ತೀಚೆಗೆ ಒಂದು ಟ್ರೆಂಡ್‌ ಶುರುವಾಗಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ವಿಧಾನಸಭೆ ಚುನಾವಣೆ ರೀತಿ ನಡೆಸಲಾಗುತ್ತಿದೆ. ನಾವೂ ಕೂಡ ಅದನ್ನು ಶುರು ಮಾಡಬೇಕಿದೆ. ಬುಡ ಸದೃಢವಾಗಿದ್ದಾಗ ನಮ್ಮನ್ನು ಯಾರೂ ನಮ್ಮನ್ನು ಅಲುಗಾಡಿಸಲು ಸಾಧ್ಯವಿಲ್ಲ. ನಮ್ಮ ಕಾರ್ಯಕರ್ತರಲ್ಲಿದ್ದ ಗೊಂದಲದಿಂದ ಚುನಾವಣೆಯಲ್ಲಿ ನಮಗೆ ಅಲ್ಪ ಹಿನ್ನಡೆಯಾಗಿದೆ ಎಂಬುದನ್ನು ನಾನು ಒಪ್ಪಿಕೊಳ್ಳುತ್ತೇನೆ. ನಗರಸಭೆ ಚುನಾವಣೆ ವೇಳೆ ನನಗೆ, ಕುಮಾರಣ್ಣ ಅವರಿಗೆ ಕೋವಿಡ್‌ ಆಗಿತ್ತು. ಆ ಕಾರಣಕ್ಕೆ ಚುನಾವಣೆ ವೇಲೆ ಪ್ರಚಾರಕ್ಕೆ ಬರಲು ಸಾಧ್ಯವಾಗಿರಲಿಲ್ಲ. ಅದಕ್ಕಾಗಿ ನಾನು ಕ್ಷಮೆ ಕೋರುತ್ತೇನೆ.

- ನಿಖಿಲ್‌ ಕುಮಾ​ರ​ಸ್ವಾಮಿ, ರಾಜ್ಯಾ​ಧ್ಯ​ಕ್ಷರು, ಜೆಡಿ​ಎಸ್‌ ಯುವ ಘಟಕ

click me!