ಅಯ್ಯೋ ದುರ್ವಿಧಿಯೇ..! ತಂದೆ ಶವಸಂಸ್ಕಾರಕ್ಕೆ ಹೊರಟ ಮಗನೂ ಮಸಣ ಸೇರಿದ!

Suvarna News   | Asianet News
Published : Feb 03, 2020, 11:13 AM ISTUpdated : Feb 03, 2020, 01:13 PM IST
ಅಯ್ಯೋ ದುರ್ವಿಧಿಯೇ..! ತಂದೆ ಶವಸಂಸ್ಕಾರಕ್ಕೆ ಹೊರಟ ಮಗನೂ ಮಸಣ ಸೇರಿದ!

ಸಾರಾಂಶ

ಟಿಪ್ಪರ್ ಹಾಗೂ ಕಾರಿನ ಮಧ್ಯೆ ಅಪಘಾತ| ಮೂವರ ಸಾವು| ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ಪಟ್ಟಣ ಹೊರವಲಯದ ವಿರುಪಾಪುರ ಗ್ರಾಮದ ಬಳಿ ನಡೆದ ಘಟನೆ 

ಬಳ್ಳಾರಿ(ಫೆ.03): ತಂದೆಯ ಶವ ಸಂಸ್ಕಾರಕ್ಕೆ ಹೊರಟವರೂ ಕೂಡ ಮಸಣ ಸೇರಿದ ಘಟನೆ ಜಿಲ್ಲೆಯ ಕೂಡ್ಲಿಗಿ ಪಟ್ಟಣ ಹೊರವಲಯದ ವಿರುಪಾಪುರ ಗ್ರಾಮದ ಬಳಿ ನಡೆದಿದೆ. 

ಏನಿದು ಘಟನೆ? 

ಕಾರು, ಟಿಪ್ಪರ್ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ‌ ಮೂವರು ಸಾವನ್ನಪ್ಪಿ, ಮಗು ಗಾಯಗೊಂಡ ಘಟನೆ ಜಿಲ್ಲೆಯ ಕೂಡ್ಲಿಗಿ ಪಟ್ಟಣದ ಹೊರವಲಯದ ವಿರುಪಾಪುರ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ(50) ಇಂದು(ಸೋಮವಾರ) ನಡೆದಿದೆ. ಮೃತರನ್ನ ವಸಂತ ಕುಮಾರ(37), ಪತ್ನಿ ವಿನುತ (30) ಸೇರಿದಂತೆ ಡ್ರೈವರ್ ಸಾವನ್ನಪ್ಪಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಮೃತರೆಲ್ಲರೂ ಬಾಗಲಕೋಟೆ ಜಿಲ್ಲೆಯ ಇಳಕಲ್ಲ ಮೂಲದವರಾಗಿದ್ದಾರೆ ಎಂದು ತಿಳಿದು ಬಂದಿದೆ. ಮೃತ ವಸಂತ ಕುಮಾರ ಮಡಿಕೇರಿಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು. ಇಳಕಲ್ಲಿನಲ್ಲಿ ವಸಂತಕುಮಾರ ತಂದೆ ಮೃತಪಟ್ಟ ಹಿನ್ನಲೆಯಲ್ಲಿ ಶವ ಸಂಸ್ಕಾರಕ್ಕೆ ತೆರಳುವಾಗ ಈ ಅವಘಡ ನಡೆದಿದೆ. ಘಟನೆಯಲ್ಲಿ‌ ಮಗಳು ರುತ್ವಿಕಾ (2)  ಬದುಕುಳಿದಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

PREV
click me!

Recommended Stories

ವಿಧಾನಸಭೆಯಲ್ಲಿ 'ಉತ್ತರ ಕರ್ನಾಟಕ' ವಿವಾದ: ಶಿವಲಿಂಗೇಗೌಡರ ಮಾತುಗಳಿಗೆ ಗರಂ ಆದ ಯತ್ನಾಳ್, ಗ್ಯಾರಂಟಿ, ಗುಂಡಿ ವಿಚಾರಕ್ಕೆ ಜಟಾಪಟಿ!
ಕೊಡಗಿನ ಇತಿಹಾಸದಲ್ಲೇ ಮೊದಲ ಬಾರಿಗೆ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಿದ ಕೋರ್ಟ್! ಏನಿದು ಪ್ರಕರಣ?