'ಜನನಾಯಕ ನೆಹರು ಓಲೇಕಾರಗೆ ಸಚಿವ ಸ್ಥಾನ ನೀಡಿ'

Kannadaprabha News   | Asianet News
Published : Feb 03, 2020, 10:47 AM IST
'ಜನನಾಯಕ ನೆಹರು ಓಲೇಕಾರಗೆ ಸಚಿವ ಸ್ಥಾನ ನೀಡಿ'

ಸಾರಾಂಶ

ಶಾಸಕ ನೆಹರು ಓಲೇಕಾರ್‌ಗೆ ಸಚಿವ ನೀಡಲು ಅಭಿಮಾನಿಗಳಿಂದ ಒತ್ತಾಯ| ಪಕ್ಷ ಸಂಘಟನೆ ಅನುಕೂಲವಾಗಲಿದೆಂಬ ವಿಶ್ವಾಸ|ಓಲೇಕಾರ ಸಚಿವರಾದರೆ ಮುಂದಿನ ದಿನಗಳಲ್ಲಿ ಪಕ್ಷಕ್ಕೆ ಇನ್ನೂ ಹೆಚ್ಚಿನ ಶಕ್ತಿ ಬರಲಿದೆ|  

ಹಾವೇರಿ(ಫೆ.03): ಎಲ್ಲ ವರ್ಗದ ಜನರು ಮೆಚ್ಚುವಂತಹ ಜನನಾಯಕ ಹಾಗೂ ಮೂರು ಬಾರಿ ಶಾಸಕರಾಗಿರುವ ನೆಹರು ಓಲೇಕಾರ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಅವರ ಅಭಿಮಾನಿ ಬಳಗದ ಪ್ರಮುಖರು ಒತ್ತಾಯಿಸಿದ್ದಾರೆ.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಮುಖರಾದ ಬಾಬುಸಾಬ ಮೊಮಿನಗಾರ್‌, ನೀಲಪ್ಪ ಚಾವಡಿ, ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಚಿವ ಸಂಪುಟವನ್ನು ಶೀಘ್ರದಲ್ಲಿ ವಿಸ್ತರಿಸುವುದಾಗಿ ಹೇಳಿದ್ದಾರೆ. ಆ ವೇಳೆ ಹಾವೇರಿ ಎಸ್ಸಿ ಮೀಸಲು ಕ್ಷೇತ್ರದ ಶಾಸಕ ನೆಹರು ಓಲೇಕಾರ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಎಂದು ಒತ್ತಾಯಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಓಲೇಕಾರ ಬಡವರು, ದೀನದಲಿತರು ಸೇರಿದಂತೆ ಎಲ್ಲ ವರ್ಗದ ಜನರು ಮೆಚ್ಚುವ ನಾಯಕರಾಗಿದ್ದು, ಅವರಿಗೆ ಸಚಿವ ಸ್ಥಾನ ನೀಡಬೇಕು ಎನ್ನುವುದು ಕ್ಷೇತ್ರದ ಎಲ್ಲರ ಅಭಿಪ್ರಾಯವಾಗಿದೆ. ಇದರಿಂದ ಪಕ್ಷ ಸಂಘಟನೆಗೂ ಅನುಕೂಲವಾಗಲಿದೆ. ಓಲೇಕಾರ ಸಚಿವರಾದರೆ ಮುಂದಿನ ದಿನಗಳಲ್ಲಿ ಪಕ್ಷಕ್ಕೆ ಇನ್ನೂ ಹೆಚ್ಚಿನ ಶಕ್ತಿ ಬರಲಿದೆ ಎಂದು ಹೇಳಿದ್ದಾರೆ.

ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಓಲೇಕಾರ ಮೇಲೆ ಅಪಾರ ಪ್ರೀತಿಯಿದೆ. ಆದ್ದರಿಂದ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುತ್ತಾರೆ ಎಂಬ ಭರವಸೆಯಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಸವರಾಜ ಸೋಮಸಾಗರ ಮಾತನಾಡಿ, ಜಿಲ್ಲೆಯ ಒಂದೇ ಸಮುದಾಯದ ಒಳಪಂಗಡಕ್ಕೆ ಸೇರಿದ ಇಬ್ಬರಿಗೆ ಸಚಿವ ಸ್ಥಾನ ಕೊಡುವುದು ಸರಿಯಲ್ಲ. ಅದರ ಬದಲು ಹಿರಿಯ ಶಾಸಕರಾದ ಸಿ.ಎಂ. ಉದಾಸಿ ಅವರನ್ನು ಪರಿಗಣಿಸಬೇಕು. ಇಲ್ಲದಿದ್ದರೆ ಓಲೇಕಾರ ಅವರನ್ನು ಮಂತ್ರಿ ಮಾಡಿ ಸಾಮಾಜಿಕ ನ್ಯಾಯ ಕಲ್ಪಿಸಬೇಕು ಎಂದು ಆಗ್ರಹಿಸಿದರು. ಶಿವರಾಜ ಮತ್ತಿಹಳ್ಳಿ, ಅಡವಯ್ಯ ಯಲವಿಗಿಮಠ ಇತರರು ಇದ್ದರು.
 

PREV
click me!

Recommended Stories

ಕನ್ನಡಪ್ರಭ & ಸುವರ್ಣನ್ಯೂಸ್‌ನಿಂದ ಅಸಾಮಾನ್ಯ ಕನ್ನಡಿಗರಿಗೆ ಗೌರವ: 'ಆಯುರ್ ಭೂಷಣ' ಪ್ರಶಸ್ತಿ ಪ್ರದಾನ
ದ್ವೇಷ ಭಾಷಣ ಪ್ರಕರಣ; ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್‌ಗೆ ನಿರೀಕ್ಷಣಾ ಜಾಮೀನು!