* ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಮುಳ್ಳುಗುಡ್ಡೆಯ ಭಟ್ರಾಡಿ ಹೊಳೆಯಲ್ಲಿ ನಡೆದ ಘಟನೆ
* ಸಮುದ್ರಕ್ಕೆ ಬಿದ್ದು ಮೀನುಗಾರ ನಾಪತ್ತೆ
* ಅಪಘಾತದ ಗಾಯಾಳು ಯುವಕ ಸಾವು
ಕಾರ್ಕಳ(ನ.27): ಉಡುಪಿ(Udupi) ಜಿಲ್ಲೆಯ ಹೆಬ್ರಿ ತಾಲೂಕಿನ ಶಿವಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಳ್ಳುಗುಡ್ಡೆಯ ಭಟ್ರಾಡಿ ಹೊಳೆಯಲ್ಲಿ ಈಜಲು ತೆರಳಿದ ಹಿರಿಯಡ್ಕ ಸ.ಪ.ಪೂ. ಕಾಲೇಜಿನ ಮೂವರು ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಮೃತಪಟ್ಟ(Death) ಘಟನೆ ಶುಕ್ರವಾರ ಬೆಳಗ್ಗೆ 10.45ರ ಸುಮಾರಿಗೆ ನಡೆದಿದೆ.
ಮೃತ ವಿದ್ಯಾರ್ಥಿಗಳನ್ನು(Students) ಪಾಡಿಗಾರದ ಸುದರ್ಶನ್ (16), ಪಾಡಿಗಾರ ಖಜಾನೆಯ ಕಿರಣ್(16), ಹಿರಿಯಡ್ಕ ಅಂಜಾರಿನ ಸೋನಿತ್(17) ಎಂದು ಗುರುತಿಸಲಾಗಿದೆ. ಮೃತದೇಹಗಳನ್ನು(Deadbody) ಹೊಳೆಯಿಂದ ಮೇಲೆತ್ತಲಾಗಿದೆ. ಕಾಲೇಜಿನ ಹತ್ತು ವಿದ್ಯಾರ್ಥಿಗಳು ಹೊಳೆಗೆ ಈಜಲು ತೆರಳಿದ್ದರು ಎಂದು ತಿಳಿದು ಬಂದಿದೆ. ಹೆಬ್ರಿ ತಹಸೀಲ್ದಾರ್ ಪುರಂದರ ಕೆ., ಹೆಬ್ರಿ ಪೋಲೀಸರು, ತಾ.ಪಂ. ನಿ.ಪೂ. ಅಧ್ಯಕ್ಷ ರಮೆಶ್ ಕುಮಾರ್ ಶಿವಪುರ, ಹುಣ್ಸೆಯಡಿ ಸುರೇಶ್ ಶೆಟ್ಟಿ, ಪಂಚಾಯಿತಿ ಅಧ್ಯಕ್ಷ ಶೇಖರ ಶೆಟ್ಟಿ ಮೊದಲಾದವರು ಘಟನಾ ಸ್ಥಳಕ್ಕೆ ಆಗಮಿಸಿದ್ದರು.
undefined
Road accident: ದಂಪತಿ ಇಬ್ಬರು ಮಕ್ಕಳ ದಾರುಣ ಸಾವು
ಸೀತಾ ನದಿಯಲ್ಲಿ ಮುಳುಗಿ ಯುವಕ ಸಾವು
ಬ್ರಹ್ಮಾವರ: ಇಲ್ಲಿನ ಬಿಲ್ಲಾಡಿ ಗ್ರಾಮದ ಡೈರಿ ಬಳಿಯ ನಿವಾಸಿ ಶ್ರೀನಿವಾಸ ಆಚಾರಿ (32) ಎಂಬವರು ಸೀತಾನದಿಗೆ(Seetha River) ಬಿದ್ದು ಮೃತಪಟ್ಟಿದ್ದಾರೆ. ಮರದ ಕೆಲಸ ಮಾಡಿಕೊಂಡಿದ್ದು, ಅವರು ವಿಪರೀತ ಮದ್ಯಪಾನ(Alcohol) ಮಾಡುತ್ತಿದ್ದರು. ನ.23ರಂದು ಸಂಜೆ ಹೊಸಾಳ ಗ್ರಾಮದ ಅಣೆಕಟ್ಟೆಯ ಬಳಿ ಅಂಗಿ ಪ್ಯಾಂಟ್ ಬಿಚ್ಚಿಟ್ಟು ಮೀನು(Fish) ಹಿಡಿಯಲು ನದಿಗೆ ಇಳಿದಿದ್ದು, ಈಜಲು ಬಾರದೇ ನೀರಿನ ಸೆಳೆತಕ್ಕೆ ಕೊಚ್ಚಿ ಹೋಗಿದ್ದರು. ನ.26ರಂದು ಶವ ಪತ್ತೆಯಾಗಿದೆ. ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ(Case) ದಾಖಲಾಗಿದೆ.
ಕಾಪು: ರೈಲು ಹಳಿಯಲ್ಲಿ ಸ್ಥಳೀಯ ನಿವಾಸಿ ಶವ ಪತ್ತೆ
ಕಾಪು: ಇಲ್ಲಿನ ಮಲ್ಲಾರು ಗ್ರಾಮದ ಉರ್ದು ಶಾಲೆ ಬಳಿಯ ರೈಲ್ವೆ ಹಳಿಯಲ್ಲಿ(Railway Track) ಗಂಡಸಿನ ಮೃತದೇಹವೊಂದು ಛಿದ್ರಗೊಂಡ ಸ್ಥಿತಿಯಲ್ಲಿ ಶುಕ್ರವಾರ ಪತ್ತೆಯಾಗಿದೆ. ಮೃತರನ್ನು ಇಲ್ಲಿನ ಪಕೀರನಕಟ್ಟೆಯ ನಿವಾಸಿ ಅಬ್ದುಲ್ ರಜಾಕ್ (40) ಎಂದು ಸಂಬಂಧಿಕರು ಗುರುತಿಸಿದ್ದಾರೆ. ಶವವನ್ನು ಸಮಾಜ ಸೇವಕ ಸೂರಿ ಶೆಟ್ಟಿಯವರು ಉಡುಪಿ ಜಿಲ್ಲಾಸ್ಪತ್ರೆಗೆ ತನ್ನ ಆಂಬುಲೆಸ್ಸ್‌ನಲ್ಲಿ(Ambulance) ಸಾಗಿಸುವಲ್ಲಿ ಸಹಕರಿಸಿದ್ದರು. ಕಾಪು ಠಾಣಾಧಿಕಾರಿ ರಾಘವೇಂದ್ರ ಸಿ ಹಾಗೂ ಸಿಬ್ಬಂದಿ ವರ್ಗದವರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.
ಸಮುದ್ರಕ್ಕೆ ಬಿದ್ದು ಮೀನುಗಾರ ನಾಪತ್ತೆ
ಮಂಗಳೂರು(Mangaluru): ಇಲ್ಲಿನ ಹಳೆ ಬಂದರು ದಕ್ಕೆಯಿಂದ ಮೀನುಗಾರಿಕೆಗೆ(Fishing) ಬೋಟಿನಲ್ಲಿ(Boat) ಹೊರಟಿದ್ದ ಮೀನುಗಾರರ ಪೈಕಿ ಮನೋಜ್ ಎಂಬವರು ಸಮುದ್ರಕ್ಕೆ ಬಿದ್ದು ನಾಪತ್ತೆಯಾಗಿದ್ದು(Missing), ಇವರ ವಿಳಾಸ ಹಾಗೂ ಇತರೆ ವಿವರಗಳು ಲಭ್ಯವಾಗಿಲ್ಲ.
ಮನೋಜ್ ಇತರ ಐವರು ಮೀನುಗಾರರೊಂದಿಗೆ ನ.23ರಂದು ಸೀಬರ್ಡ್ ಬೋಟ್‌ನಲ್ಲಿ ಮೀನುಗಾರಿಕೆಗೆ ತೆರಳಿದ್ದರು. ಅಂದು ಸಂಜೆ 4 ಗಂಟೆಗೆ ಚಾಲಕ ಹೊರತುಪಡಿಸಿ ಉಳಿದ ಮೀನುಗಾರರು ಬಲೆ ಬೀಸಿದ ನಂತರ ಮಲಗಿದ್ದರು. ಸಂಜೆ 6.30ರ ಸುಮಾರಿಗೆ ಚಾಲಕ ಕ್ಯಾಬಿನ್ ಬಳಿ ಹೋದಾಗ ಮನೋಜ್ ನಾಪತ್ತೆಯಾಗಿರುವುದು ತಿಳಿದಿದೆ. 5’43 ಎತ್ತರ, ಎಣ್ಣೆ ಗಪ್ಪ ಮೈಬಣ್ಣ ಹೊಂದಿದ್ದು , ಹಳದಿ ಮತ್ತು ಕಪ್ಪು ಗಾಢ ಗೆರೆಗಳಿರುವ ಟೀ ಶರ್ಟ್ ಮತ್ತು ಬೂದು ಬಣ್ಣದ ಶಟ್ಸ್‌ರ್ ಧರಿಸಿರುತ್ತಾರೆ. ವಾರಸುದಾರರು ಪಾಂಡೇಶ್ವರ ಪೊಲೀಸ್ ಠಾಣೆಯನ್ನು(Police Station) ಸಂಪರ್ಕಿಸಬಹುದಾಗಿದೆ.
Accident| ಟ್ರ್ಯಾಕ್ಟರ್-ಕಾರಿನ ಮಧ್ಯೆ ಅಪಘಾತ: 6 ವರ್ಷದ ಬಾಲಕಿ ಸೇರಿ ಮೂವರ ಸಾವು
ಕಾರ್ಕಳ: ಅಪಘಾತದ ಗಾಯಾಳು ಯುವಕ ಸಾವು
ಕಾರ್ಕಳ(Karkala): ಬುಧವಾರ ರಾತ್ರಿ ಕಾರ್ಕಳ ಕುಕ್ಕುಂದೂರು ಗ್ರಾಮದ ದುರ್ಗಾನಗರ ಅಶ್ವಥಕಟ್ಟೆ ಬಳಿ ನಡೆದ ರಸ್ತೆ ಅಪಘಾತದಲ್ಲಿ(Accident) ಗಂಭೀರವಾಗಿ ಗಾಯಗೊಂಡಿದ್ದ ಯುವಕ ಆಸ್ಪತ್ರೆಯಲ್ಲಿ(Hospital) ಗುರುವಾರ ಮೃತಪಟ್ಟಿದ್ದಾರೆ. ಮಹಮ್ಮದ್ ರಫೀಕ್ ಮೃತರಪು. ರಫೀಕ್ ಗುರುವಾರ ರಾತ್ರಿ ದುರ್ಗಾನಗರ ಅಶ್ವಥಕ ಟ್ಟೆಹತ್ತಿರ ವಾಹನ ನಿಲ್ಲಿಸಿ ರಸ್ತೆ ದಾಟಲು ನಿಂತುಕೊಂಡಿದ್ದರು.
ಈ ವೇಳೆ ಅರವಿಂದ ಕಾಮತ್ ಎಂಬವರು ಉಡುಪಿ ಕಡೆಯಿಂದ ಕಾರ್ಕಳ ಕಡೆಗೆ ಅತೀವೇಗ ಮತ್ತು ಅಜಾಗರೂಕತೆಯಿಂದ ಕಾರನ್ನು ಚಲಾಯಿಸಿಕೊಂಡು ಬಂದು ರಫೀಕ್‌ಗೆ ಡಿಕ್ಕಿ ಹೊಡೆದಿದ್ದಾರೆ. ಕಾರು ಡಿಕ್ಕಿಯಾದ ಪರಿಣಾಮ ರಸ್ತೆಗೆ ಬಿದ್ದ ಮಹಮ್ಮದ್‌ರಫೀಕ್ ಹಿಂಬದಿ ತಲೆಗೆ ಗಂಭೀರ ಗಾಯವಾಗಿದ್ದು, ಅವರನ್ನು ಚಿಕಿತ್ಸೆಗಾಗಿ ತಕ್ಷಣವೇ ಉಡುಪಿ ಆದರ್ಶ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ರಫೀಕ್ ಅಸುನೀಗಿದರು. ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.