ಚಳ್ಳಕೆರೆ (ಡಿ.18): ಚಳ್ಳಕೆರೆ, ಮೊಳಕಾಲ್ಮೂರು (Molakamur) ತಾಲೂಕುಗಳು ಕಳೆದ ಹತ್ತು ವರ್ಷಗಳಿಂದ ಬರಗಾಲಕ್ಕೆ ತುತ್ತಾಗಿವೆ. ಎರಡ್ಮೂರು ವರ್ಷಗಳಿಂದ ಕೊರೋನಾ (Corona Lockdown) ಲಾಕ್‌ಡೌನ್‌ನಲ್ಲಿ ಜನ ಜೀವನ ನಡೆಸುವುದೇ ದುಸ್ಥರವಾಗಿರುವ ವಿಷಮ ಸ್ಥಿತಿಯಲ್ಲಿ ಸರ್ಕಾರ 7.20 ಎಕರೆ ಜಮೀನು ಹೊಂದಿದ ರೈತರ (Farmers) ಬಿಪಿಎಲ್ ಕಾರ್ಡ್‌ಗಳನ್ನು (BPL Card) ರದ್ದುಪಡಿಸಿರುವುದು ಸರಿಯಾದ ಕ್ರಮವಲ್ಲ, ಅದನ್ನು ಮತ್ತೊಮ್ಮೆ ಪರಿಶೀಲನೆ ನಡೆಸಿ ಸರಿಪಡಿಸಬೇಕೆಂದು ಶಾಸಕ ಟಿ.ರಘುಮೂರ್ತಿ (MLA Raghumurthy) ಬೆಳಗಾವಿ ವಿಧಾನಮಂಡಲ ಅಧಿವೇಶನದಲ್ಲಿ ಸಭಾಪತಿಗೆ ಮನವಿ ಮಾಡಿದರು.
ಅಧಿವೇಶನದಲ್ಲಿ (Session) ಮಾತನಾಡಿದ ಅವರು, ತಾಲೂಕಿನಾದ್ಯಂತ 6971 ಬಿಪಿಎಲ್ ಕಾರ್ಡ್‌ಗಳನ್ನು (BPL Card) ರದ್ದುಪಡಿಸುವ ಮೂಲಕ ಅನ್ನಭಾಗ್ಯ ಯೋಜನೆ ಮತ್ತು ಸರ್ಕಾರಿ ಆಸ್ಪತ್ರೆಯ (Hospital) ಸೌಲಭ್ಯಗಳಿಂದ ಸಾವಿರಾರು ಬಡ ಕುಟುಂಬಗಳು (Poor Family) ವಂಚಿತವಾಗಿವೆ. ಜಂಟಿ ಕುಟುಂಬಗಳು (Family) ಇರುವುದನ್ನು ಪರಿಗಣಿಸಬೇಕು. ನೀರಾವರಿ ಪ್ರದೇಶ, ಬರಗಾಲ ಪ್ರದೇಶಗಳ ಬಗ್ಗೆ ಗಮನಹರಿಸಬೇಕು. ಕಳೆದ ಹತ್ತು ವರ್ಷದಲ್ಲಿ ಬರಗಾಲಕ್ಕೆ ತುತ್ತಾಗಿ, ಎರಡು ವರ್ಷದಲ್ಲಿ ಅತಿವೃಷ್ಟಿಯಿಂದ (Flood) ಚಳ್ಳಕೆರೆ, ಮೊಳಕಾಲ್ಮೂರಿನ ಜನ ತತ್ತರಿಸಿದ್ದಾರೆ. ಇಂತಹ ಸ್ಥಿತಿಯಲ್ಲಿ ಸರ್ಕಾರ ಪಡಿತರ ರದ್ದುಪಡಿಸುವ ಮೂಲಕ ಬಡ ಜನರಿಗೆ ಅನ್ಯಾಯ ಮಾಡಲಾಗಿದೆ. ಈ ಬಗ್ಗೆ ತರ್ತು ಗಮನಹರಿಸಬೇಕೆಂದು ಮನವಿ ಮಾಡಿದರು.
ಜಿಲ್ಲೆಯಲ್ಲಿ ಬರಗಾಲದ ಪರಿಸ್ಥಿತಿಯನ್ನು ದೂರ ಮಾಡುವ ನಿಟ್ಟಿನಲ್ಲಿ ಕಾಂಗ್ರೆಸ್ (Congress) ಸರ್ಕಾರದ ಅವಧಿಯಲ್ಲಿ ಅಂದಿನ ಸಿಎಂ ಸಿದ್ದರಾಮಯ್ಯ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಮೂರು ಬ್ಯಾರೇಜ್ ನಿರ್ಮಾಣಕ್ಕೆ ಹಣ ಬಿಡುಗಡೆಗೊಳಿಸಿದ್ದರು. ಬದಲಾದ ಪರಿಸ್ಥಿತಿಯಲ್ಲಿ ಬಿಜೆಪಿ (BJP) ಸರ್ಕಾರದಲ್ಲಿ ಕಾಂಗ್ರೆಸ್ ಶಾಸಕರು ಇರುವ ಕಡೆಯಲ್ಲಿ ಅಭಿವೃದ್ಧಿಗೆ ಹಣವೇ (Money) ಬಿಡುಗಡೆಗೊಂಡಿಲ್ಲ. ತಾಲೂಕಿನ ಗೋಸಿಕೆರೆಯಲ್ಲಿ 27 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಬ್ಯಾರೇಜ್‌ಗೆ ಹಣವೇ ಬಿಡುಗಡೆಗೊಂಡಿಲ್ಲ. ಈ ಬಗ್ಗೆ ಮಾನ್ಯ ಸಭಾಧ್ಯಕ್ಷರು ಗಮನಹರಿಸಿ ಅಭಿವೃದ್ಧಿಗೆ ಬೇಕಿರುವ ಹಣವನ್ನು ಬಿಡುಗಡೆಗೊಳಿಸಬೇಕೆಂದು ಮನವಿ ಮಾಡಿದರು.
ಈ ಬಾರಿ ಸುರಿದ ಮಳೆಯಿಂದ (Rain) ತಾಲೂಕಿನ 93 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಸಂಪೂರ್ಣ ನಾಶವಾಗಿವೆ. 2019-20ನೇ ಸಾಲಿನಲ್ಲಿ ಚಳ್ಳಕೆರೆ, ಮೊಳಕಾಲ್ಮೂರು, ಮಧುಗಿರಿ, ತುಮಕೂರು, ಪಾವಗಡ ತಾಲೂಕುಗಳಲ್ಲಿ ಶೇಂಗಾ ನಾಶವಾಗಿದೆ. ಕಾಂಗ್ರೆಸ್ (Congress) ಸರ್ಕಾರದಲ್ಲಿ 50 ಕೋಟಿ ರು.ವಿಶೇಷ ಅನುದಾನವನ್ನು ಮೀಸಲಿಟ್ಟಿದ್ದರು. ಇದರ ಬಗ್ಗೆ ಗಮನಹರಿಸಿ ನಷ್ಟದಲ್ಲಿರುವ ರೈತರಿಗೆ ನೆರವಾಗಬೇಕು ಎಂದು ಮನವಿ ಮಾಡಿದರು.
ಫಸಲ್ ಬಿಮಾ ಯೋಜನೆಯಡಿ 2020-21ನೇ ಸಾಲಿನಲ್ಲಿ ಚಳ್ಳಕೆರೆ ತಾಲೂಕಿನ 40 ಗ್ರಾಪಂಗಳಲ್ಲಿ 6 ಪಂಚಾಯಿತಿ, ಮೊಳಕಾಲ್ಮೂರಿನ 16 ಪಂಚಾಯಿತಿಗಳಲ್ಲಿ 3 ಪಂಚಾಯಿತಿಗೆ ಮಾತ್ರ ಹಣ (Money) ಬಂದಿದೆ. ಉಳಿದಂತೆ ರೈತರಿಗೆ ಸರ್ಕಾರದಿಂದ ಯಾವುದೇ ನೆರವು ಬಂದಿಲ್ಲ. ಫಸಲ್ ಭೀಮಾ ಯೋಜನೆಯಡಿ ನೀಡುವ ಪರಿಹಾರ ಮತ್ತಷ್ಟು ಹೆಚ್ಚಿಸಬೇಕು ಎಂದರು.
ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಅಡಿಯಲ್ಲಿ ತಾಲ್ಲೂಕಿನ ಫಸಲ್ ಭೀಮಾ ಯೋಜನೆಯಿಂದ ಯಾರೊಬ್ಬ ರೈತರಿಗೂ ಅನುಕೂಲವಾಗಿಲ್ಲ. ಇದರಿಂದ ಲಾಭಕ್ಕಿಂತ ನಷ್ಟವೇ ಹೆಚ್ಚಾಗಿದೆ. ಈ ಬಗ್ಗೆ ಸಭಾಧ್ಯಕ್ಷರು ಬರಗಾಲ ಪೀಡಿತ ಪ್ರದೇಶಕ್ಕೆ ಹೆಚ್ಚಿನ ಮಾನ್ಯತೆ ನೀಡಬೇಕೆಂದು ಮನವಿ ಮಾಡಿದರು.