Minimum Support Price : ರೈತರೇ ಬೆಂಬಲ ಬೆಲೆ ಪಡೆಯಲು ನೋಂದಾವಣೆ ಮಾಡಿ

By Kannadaprabha News  |  First Published Dec 18, 2021, 3:42 PM IST
  • ಪ್ರಸಕ್ತ ಸಾಲಿನಲ್ಲಿ ಕನಿಷ್ಟ ಬೆಂಬಲ ಯೋಜನೆಯಡಿ ಜಿಲ್ಲೆಯಲ್ಲಿ ರೈತರಿಂದ ರಾಗಿ, ಶೇಂಗಾ ಖರೀದಿ
  • ರೈತರಿಂದ ಬೆಳೆ ಖರೀದಿ ಸಂಬಂಧಿಸಿದಂತೆ ಮಧ್ಯವರ್ತಿಗಳ ಹಾವಳಿ ತಡೆಗಟ್ಟಲು ಕಠಿಣ ಕ್ರಮ 

ದಾವಣಗೆರೆ (ಡಿ.18):  ಪ್ರಸಕ್ತ ಸಾಲಿನಲ್ಲಿ ಕನಿಷ್ಟ ಬೆಂಬಲ ಯೋಜನೆಯಡಿ (Minimum Support Price) ಜಿಲ್ಲೆಯಲ್ಲಿ ರೈತರಿಂದ ರಾಗಿ, ಶೇಂಗಾ ಖರೀದಿಗೆ ನಿರ್ಧರಿಸಲಾಗಿದ್ದು,   ನೊಂದಣಿ ಪ್ರಕ್ರಿಯೆ ಆರಂಭವಾಗಿದೆ. ರೈತರಿಂದ (Farmers) ಬೆಳೆ ಖರೀದಿ ಸಂಬಂಧಿಸಿದಂತೆ ಮಧ್ಯವರ್ತಿಗಳ ಹಾವಳಿ ತಡೆಗಟ್ಟಲು ಕಠಿಣ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು. ಬೆಂಬಲ ಬೆಲೆ (Price) ಯೋಜನೆಯಡಿ ರಾಗಿ ಮತ್ತು ಶೇಂಗಾ ಬೆಳೆ ಖರೀದಿ ಕುರಿತಂತೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ ಜಿಲ್ಲಾ ಕಾರ್ಯಪಡೆ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪ್ರಸಕ್ತ ಮುಂಗಾರು (Monsoon) ಹಂಗಾಮಿನಲ್ಲಿ ರೈತರು ಬೆಳೆದಿರುವ ರಾಗಿ ಮತ್ತು ಶೇಂಗಾ ಬೆಳೆಯನ್ನು ಖರೀದಿಸುವ ಸಲುವಾಗಿ ಸರ್ಕಾರ ಬೆಂಬಲ ಬೆಲೆ ನಿಗದಿಪಡಿಸಿದೆ. ಖರೀದಿಗೆ ಸಂಬಂಧಿಸಿದಂತೆ ಈಗಾಗಲೆ ಕೃಷಿ ಇಲಾಖೆಯಿಂದ ಜಾರಿಗೊಳಿಸಿರುವ ದತ್ತಾಂಶದಿಂದ ರೈತರ (Farmers) ಮಾಹಿತಿ ಪಡೆಯಲಾಗುವುದರಿಂದ, ಬೆಳೆ ಮಾರಾಟ ಮಾಡಬಯಸುವ ರೈತರು ಫä›ಟ್ಸ್‌ ತಂತ್ರಾಂಶದಲ್ಲಿ ತಪ್ಪದೆ ನೊಂದಣಿ ಮಾಡಿಸಬೇಕು. ಗುಣಮಟ್ಟದ ರಾಗಿಗೆ ಪ್ರತಿ ಕ್ವಿಂಟಾಲ್‌ಗೆ 3377 ರು.ಗಳ ಬೆಂಬಲ ಬೆಲೆ ಘೋಷಿಸಲಾಗಿದ್ದು, ಪ್ರತಿ ರೈತರಿಂದ ಎಕರೆಗೆ 10 ಕ್ವಿಂಟಾಲ್‌ನಂತೆ, ಗರಿಷ್ಟ20 ಕ್ವಿಂಟಾಲ್‌ ರಾಗಿ ಖರೀದಿಗೆ ಅವಕಾಶವಿದೆ. ರಾಗಿ (Millets) ಬೆಳೆ ತರುವ ರೈತರಿಗೆ ಪ್ರತಿ ಚೀಲಕ್ಕೆ 22 ರು. ನೀಡಲಾಗುವುದು. ಮಾರಾಟ ಮಾಡಬಯಸುವ ರೈತರಿಗೆ ಡಿ.31ರವರೆಗೂ ನೋಂದಣಿಗೆ ಅವಕಾಶವಿದೆ.

Latest Videos

undefined

ನೊಂದಣಿ ಮಾಡಿಕೊಂಡ ರೈತರ ರಾಗಿಯನ್ನು ಖರೀದಿ ಕೇಂದ್ರಗಳಲ್ಲಿ ಜ.1ರಿಂದ ಮಾಚ್‌ರ್‍ 31ರವರೆಗೆ ಮಾತ್ರ ಖರೀದಿಸಲಾಗುವುದು. ಬೆಂಬಲ ಬೆಲೆಯಲ್ಲಿ ರಾಗಿ ಖರೀದಿ ಕಾರ್ಯ ಜಿಲ್ಲೆಯ ಎಲ್ಲ ತಾಲೂಕುಗಳ ಎಪಿಎಂಸಿ (APMC) ಆವರಣದಲ್ಲಿ ಜ.1ರಿಂದ ಪ್ರಾರಂಭಿಸಲಾಗುವುದು. ಮಧ್ಯವರ್ತಿಗಳ ಹಾವಳಿ ತಡೆಗಟ್ಟಲು ಉಪವಿಭಾಗಾಧಿಕಾರಿಗಳು ಹಾಗೂ ಆಯಾ ತಹಸಿಲ್ದಾರರು, ಕೃಷಿ, ಆಹಾರ (Food) ಇಲಾಖೆ ಮತ್ತು ಎಪಿಎಂಸಿ ಅಧಿಕಾರಿಗಳು ಖರೀದಿ ಕೇಂದ್ರಗಳಿಗೆ ಆಗಾಗ್ಗೆ ಭೇಟಿ ನೀಡಿ ಪರಿಶೀಲಿಸಿ, ಕ್ರಮ ಕೈಗೊಳ್ಳಬೇಕು. ಸರ್ಕಾರದ ಸೂಚನೆಯಂತೆ ರೈತರಿಗೆ ಖರೀದಿಯಾದ 15 ದಿನಗಳ ಒಳಗೆ ನೇರವಾಗಿ ಅವರ ಬ್ಯಾಂಕ್‌ ಖಾತೆಗೆ ಹಣ ಜಮಾ ಮಾಡುವ ಕ್ರಮ ಆಗಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಆಹಾರ ಇಲಾಖೆ (Food Department) ಜಂಟಿ ನಿರ್ದೇಶಕ ಮಂಟೇಸ್ವಾಮಿ ಮಾತನಾಡಿ, ಬೆಂಬಲ ಬೆಲೆ ಯೋಜನೆಯಡಿ ರಾಗಿ ಮತ್ತು ಶೇಂಗಾ ಖರೀದಿ ಕುರಿತಂತೆ ಸರ್ಕಾರದ ಸೂಚನೆ ಬಗ್ಗೆ ವಿವರವಾದ ವರದಿ ನೀಡಿದರು. ಕಳೆದ ವರ್ಷ ಶೇಂಗಾ ಬೆಳೆಗೆ ಜಗಳೂರು ತಾಲ್ಲೂಕಿನಲ್ಲಿ ಖರೀದಿ ಕೇಂದ್ರ ಪ್ರಾರಂಭಿಸಿದರೂ, ಮಾರುಕಟ್ಟೆಯಲ್ಲಿ (Market) ಉತ್ತಮ ದರ ಇದ್ದ ಕಾರಣ, ಯಾವುದೇ ರೈತರು ಬೆಂಬಲ ಬೆಲೆಯಲ್ಲಿ ಮಾರಾಟಕ್ಕೆ ಮುಂದಾಗಲಿಲ್ಲ. ಈ ವರ್ಷ ಮುಕ್ತ ಮಾರುಕಟ್ಟೆಯಲ್ಲಿ ಶೇಂಗಾ ಪ್ರತಿ ಕ್ವಿಂಟಲ್‌ಗೆ 5650 ರು.ವರೆಗೂ ದರ ಇದೆ. ಬೆಂಬಲ ಬೆಲೆಗೆ ರೈತರ ನೋಂದಣಿ ಪ್ರಕ್ರಿಯೆ ನೋಡಿಕೊಂಡು, ಖರೀದಿ ಕೇಂದ್ರ ಪ್ರಾರಂಭ ಕುರಿತು ಕ್ರಮ ವಹಿಸಲಾಗುವುದು ಎಂದು ಹೇಳಿದರು.

ಜಂಟಿ ಕೃಷಿ ನಿರ್ದೇಶಕ ಶ್ರೀನಿವಾಸ ಚಿಂತಾಲ್‌ ಮಾತನಾಡಿದರು. ಸಭೆಯಲ್ಲಿ ಕಾನೂನು ಮಾಪನ ಶಾಸ್ತ್ರ ಇಲಾಖೆ ಸಹಾಯಕ ನಿರ್ದೇಶಕ ರಾಜು, ಕೆಒಎಫ್‌ ಜಿಲ್ಲಾ ಅಧಿಕಾರಿ ಹನುಮಂತ ನಾಯಕ್‌ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

click me!