RNR Paddy Crop : ಗಡಿಜಿಲ್ಲೆಯಲ್ಲಿ ಮಧುಮೇಹಿ ಅಕ್ಕಿ ಬಂಪರ್‌ ಇಳುವರಿ!

By Kannadaprabha News  |  First Published Dec 18, 2021, 3:12 PM IST
  • ಅತಿವೃಷ್ಠಿ, ಬೆಂಕಿ ರೋಗ ಗೆದ್ದ ಆರ್‌ಎನ್‌ಆರ್‌ ಭತ್ತ
  • ಹೈದರಾಬಾದ್‌ ಭಾರತೀಯ ಭತ್ತ ಸಂಶೋಧನಾ ಸಂಸ್ಥೆ ಸಿದ್ಧಪಡಿಸಿದ ಆರ್‌ಎನ್‌ಆರ್‌ ತಳಿ ಭತ್ತ

ವರದಿ :  ದೇವರಾಜು ಕಪ್ಪಸೋಗೆ

  ಚಾಮರಾಜನಗರ (ಡಿ.18):  ಎಡಬಿಡದೇ ಸುರಿದ ಮಳೆ (Rain), ಸಾಮಾನ್ಯವಾಗಿ ಬಾಧಿಸುತ್ತಿದ್ದ ಬೆಂಕಿ ರೋಗವನ್ನು ತಾಳಿಕೊಂಡು ಡಯಾ ರೈಸ್‌ (Rice) ಅಥವಾ ಮಧುಮೇಹಿಗಳ ಅಕ್ಕಿ ಎಂದೇ ಕರೆಯುವ ಆರ್‌ಎನ್‌ಆರ್‌-15048 ಭತ್ತ (Paddy) ಜಿಲ್ಲೆಯಲ್ಲಿ ಉತ್ತಮ ಇಳುವರಿ ಬಂದಿದೆ. ದರಾಬಾದ್‌ನಲ್ಲಿರುವ ಭಾರತೀಯ ಭತ್ತ ಸಂಶೋಧನಾ ಸಂಸ್ಥೆ ಸಿದ್ಧಪಡಿಸಿರುವ ಆರ್‌ಎನ್‌ಆರ್‌ ತಳಿಯ ಭತ್ತವನ್ನು ಚಾಮರಾಜನಗರ (Chamarajanagar)  ಕೃಷಿ ವಿಜ್ಞಾನ ಕೇಂದ್ರವು ಚಾಮರಾಜನಗರ (Chamarajanagar) ತಾಲೂಕಿನ ಇರಸವಾಡಿ ಹಾಗೂ ಯಳಂದೂರು ತಾಲೂಕಿನ ವೈ.ಕೆ.ಮೋಳೆ ಗ್ರಾಮದಲ್ಲಿ 100 ಮಂದಿ ರೈತರಿಗೆ (Farmers) ಪರಿಚಯಿಸಿದ್ದು ಬಂಪರ್‌ ಬೆಲೆ ಕಂಡಿದ್ದಾರೆ.

Tap to resize

Latest Videos

undefined

ಸಮಗ್ರ ಕೃಷಿಯಡಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು 100 ಎಕರೆಯಷ್ಟು ಪ್ರದೇಶದಲ್ಲಿ ಈ ಭತ್ತವನ್ನು ಹಾಕಿಸಿದ್ದು, ಬೇರೆಲ್ಲಾ ಭತ್ತಗಳಿಂದ ಕಡಿಮೆ ಸಮಯದಲ್ಲಿ ಹೆಚ್ಚು ಇಳುವರಿಯ ಫಲಿತಾಂಶ ಕಂಡಿದ್ದಾರೆ, ಮಣ್ಣಿನ ಗುಣಮಟ್ಟ ಅಷ್ಟೇನೂ ಚೆನ್ನಾಗಿರದ ಪ್ರದೇಶದಲ್ಲೂ ಈ ತಳಿ ಉತ್ತಮವಾಗಿ ಬೆಳೆದು ರೈತರಲ್ಲಿ (Farmers)  ಮಂದಹಾಸ ಮೂಡಿಸಿದೆ.

ಮಧುಮೇಹಿಗಳ ಅಕ್ಕಿ:  ಆರ್‌ಎನ್‌ಆರ್‌-15048 ತಳಿಯು ರೋಗ ನಿರೋಧಕ ಹಾಗೂ ಇತರೆ ರೋಗಗಳನ್ನು ತಡೆಗಟ್ಟುವ ಗುಣ ಹೊಂದಿದೆ. ಇದು ಮೂರರಿಂದ ನಾಲ್ಕು ಅಡಿ ಎತ್ತರ ಬೆಳೆಯಲಿದೆ. ಧಾನ್ಯದ ಗುಣಮಟ್ಟ ಮತ್ತು ಅಕ್ಕಿಯ ಗುಣಮಟ್ಟ ಬೇರೆ ತಳಿಗಳಿಗಿಂತ ಉತ್ತಮವಾಗಿದೆ. ಆರ್‌ಎನ್‌ಆರ್‌ ತಳಿಯಲ್ಲಿ ಸಕ್ಕರೆ ಅಂಶ ಕಡಿಮೆ ಇರುವುದರಿಂದ ಡಯಾಬಿಟಿಸ್‌ (Diabetes)  ರೋಗಿಗಳಿಗೆ ಹೆಚ್ಚು ಅನುಕೂಲಕರವಾಗಿದೆ. ಹೀಗಾಗಿ ಇದನ್ನು ಡಯಾರೈಸ್‌ ಎಂದು ಸಹ ಕರೆಯಲಿದ್ದಾರೆ.

ಈ ತಳಿಯ ಒಂದು ಕ್ವಿಂಟಾಲ್‌ ಭತ್ತದಿಂದ ಸುಮಾರು 65 ಕೆ.ಜಿಯಷ್ಟುಅಕ್ಕಿ ಉತ್ಪಾದನೆಯಾಗಲಿದೆ. ಮಾರುಕಟ್ಟೆಯಲ್ಲಿ ಈ ತಳಿಯ ಒಂದು ಕ್ವಿಂಟಾಲ್‌ ಭತ್ತವನ್ನು (Paddy) 1820 ರು.ಗೆ ರೈತರಿಂದ ನೇರವಾಗಿ ಮಾರಾಟ ಖರೀದಿ ಮಾಡಬಹುದಾಗಿದೆ.

ಭಾರತೀಯ ಭತ್ತ ಸಂಶೋಧನಾ ಸಂಸ್ಥೆ ನಾಲ್ಕು ವರ್ಷಗಳ ಹಿಂದೆಯಷ್ಟೆ ಪರಿಚಯಿಸಿರುವ ಆರ್‌ಎನ್‌ಆರ್‌-15048 ತಳಿಯು ಕೇವಲ 125 ದಿನಗಳಲ್ಲಿ ಕಟಾವಿಗೆ ಬರುವುದಲ್ಲದೆ, ಮಣ್ಣಿನ ಗುಣಮಟ್ಟಉತ್ತಮವಾಗಿರುವ ಕಡೆಗಳಲ್ಲಿ ಒಂದು ಎಕರೆಯಲ್ಲಿ ಸುಮಾರು 35ರಿಂದ 40 ಕ್ವಿಂಟಾಲ್‌ ಇಳುವರಿಯನ್ನು ತೆಗೆಯಬಹುದಾಗಿದೆ. ಆದರೆ ಮಣ್ಣಿನ ಸಾರ ಕಡಿಮೆ ಹಾಗೂ ಕಪುತ್ರ್ಪ ಮಣ್ಣು ಪ್ರದೇಶದಲ್ಲಿ ಒಂದು ಎಕರೆಗೆ ಸುಮಾರು 25 ರಿಂದ 30 ಕ್ವಿಂಟಾಲ್‌ ಇಳುವರಿ ಲಭ್ಯವಾಗಲಿದೆ. ಇದಕ್ಕೆ ಯಾವುದೇ ರೋಗಗಳು  ಭಾದಿಸುವುದಿಲ್ಲ.

ಈ ತಳಿಗೆ ಯಾವುದೇ ರೀತಿಯಾದ ರೋಗಗಳು ಬರುವುದಿಲ್ಲ. 125 ದಿನಗಳಲ್ಲಿ ಕಟಾವಿಗೆ ಬರುವ ಅಲ್ಪಾವಧಿ ತಳಿಯಾಗಿದೆ. ಇತರ ತಳಿ ಭತ್ತ ಬೆಳೆಯುವ ಸಂದರ್ಭದಲ್ಲಿ ಕಳೆ ನಿರ್ವಹಣೆಗೆ ಒಂದು ಎಕರೆಗೆ ಸುಮಾರು 7 ರಿಂದ 8 ಸಾವಿರ ರೂ.ಗಳವರೆಗೆ ಖರ್ಚಾಗುತ್ತಿತ್ತು. ಆದರೆ ಸಮಗ್ರ ಭತ್ತದ ಬೆಳೆ ಪದ್ದತಿಯಲ್ಲಿ ಆರ್‌ ಎನ್‌ ಆರ್‌ ತಳಿಯ ಭತ್ತ (Paddy) ಬೆಳೆಯುವ ಸಂದರ್ಭದಲ್ಲಿ ಕಳೆ ನಿರ್ವಹಣೆಗೆ ಕೇವಲ 1 ರಿಂದ 2 ಸಾವಿರ ರು.ಗಳವರೆಗೆ ಖರ್ಚಾಗಲಿದೆ.

ಬೇರೆ ತಳಿ ಭತ್ತದ ಬೆಳೆಯಲ್ಲಿ ಸುಮಾರು 15 ರಿಂದ 20 ಕ್ವಿಂಟಾಲ್‌ ಇಳುವರಿ ಬಂದರೆ ಹೆಚ್ಚಿತ್ತು. ಆರ್‌ಎನ್‌ಆರ್‌ ತಳಿಯ ಬಗ್ಗೆ ಈ ಬಾರಿ ತರಬೇತಿ ಮತ್ತು ಮುಂಚೂಣಿ ಪ್ರಾತ್ಯಕ್ಷಿಕೆ ಕೊಟ್ಟಿರುವುದರಿಂದ 25 ಕ್ವಿಂಟಾಲ್‌ ಗಳಷ್ಟುಇಳುವರಿ ಬಂದಿದೆ. ಇದರಿಂದ ರೈತರಿಗೆ ಮತ್ತು ನಮಗೂ ಹೆಚ್ಚು ಸಂತಸವಾಗಿದೆ ಎನ್ನುತ್ತಾರೆ ಹರದನಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ಕೃಷಿ (Agriculture) ವಿಜ್ಞಾನಿ ಡಾ.ಸಿ.ಎಂ.ಸುನಿಲ್‌. ಕೃಷಿ ವಿಜ್ಞಾನ ಕೇಂದ್ರದ ಕೃಷಿ ವಿಜ್ಞಾನಿಗಳು (Scientists) ಆರ್‌ಎನ್‌ಆರ್‌ ತಳಿಯನ್ನು ಪರಿಚಯಿಸಿಕೊಟ್ಟರು. ಅವರ ಮಾರ್ಗದರ್ಶನದಲ್ಲಿ ಬಿತ್ತನೆ ಮಾಡಿದ ಪರಿಣಾಮ ಇಂದು ಭತ್ತದ ಇಳುವರಿ ಹೆಚ್ಚಾಗಿದೆ. ಇದರಿಂದ ಖರ್ಚು ಕೂಡ ಕಡಿಮೆಯಾಗಿದೆ. ಹಿಂದೆ ನಾವು ಒಂದು ಎಕರೆಗೆ 15 ರಿಂದ 16 ಕ್ವಿಂಟಾಲ್‌ ಭತ್ತವನ್ನು ಬೆಳೆಯುತ್ತಿದ್ದೆವು. ಆರ್‌ಎನ್‌ಆರ್‌ ಪರಿಚಯಿಸಿದ ಕಾರಣ ಈಗ ಒಂದು ಎಕರೆಗೆ 25 ರಿಂದ 26 ಕ್ವಿಂಟಾಲ್‌ ಬೆಳೆಯುತ್ತಿದ್ದೇವೆ. ಇದರಿಂದ ಖರ್ಚು ಕೂಡ ಕಡಿಮೆಯಾಗಿದೆ. ಇಳುವರಿ ಹೆಚ್ಚಾಗಿದೆ. ಈ ತಳಿಯನ್ನು ಹೆಚ್ಚು ರೈತರು ಅಳವಡಿಸಿಕೊಂಡರೆ ಹೆಚ್ಚಿನ ಅನುಲಕೂಲವಾಗಲಿದೆ ಎನ್ನುತ್ತಾರೆ ರೈತ ವೆಂಕಟರಾಮು.

ಯಳಂದೂರು ತಾಲೂಕಿನ ವೈಕೆ ಮೋಳೆ ಗ್ರಾಮದ ಸುತ್ತಮುತ್ತಲಿನ ಪ್ರದೇಶದಲ್ಲಿ ಮಣ್ಣಿ ಸಾರ ಕಡಿಮೆ ಇರುವುದನ್ನು ಪತ್ತೆ ಹಚ್ಚಿ ಕೆಲ ವರ್ಷಗಳಿಂದ ಲಘುಪೋಷಕಾಂಶಗಳನ್ನು ಬಳಕೆ ಮಾಡುವಂತೆ ನಮ್ಮ ವಿಜ್ಞಾನಿಗಳು ರೈತರಿಗೆ ಮನವರಿಕೆ ಮಾಡಿಕೊಟ್ಟಪರಿಣಾಮ ಈ ಬಾರಿ ರೈತರು ಹೈದರಾಬಾದ್‌ನಲ್ಲಿರುವ ಭಾರತೀಯ ಭತ್ತ ಸಂಶೋಧನಾ ಸಂಸ್ಥೆ ಸಿದ್ಧಪಡಿಸಿರುವ ಆರ್‌ಎನ್‌ಆರ್‌ ತಳಿಯ ಭತ್ತವನ್ನು ಬೆಳೆದು ಉತ್ತಮ ಇಳವರಿ ಪಡೆದಿದ್ದಾರೆ.

click me!