ಕಾಫಿನಾಡಲ್ಲಿ ಕೇಸರಿ ಕಂಡು ಕೆರಳಿದ್ದ ಕೋಮು ಗಲಭೆ ಸಂಚಿನ ಸಂಚುಕೋರರು. ಜಿಲ್ಲಾಡಳಿತ ಕೊಟ್ಟ ಕೆಲಸವನ್ನ ದುರುಪಯೋಗ ಮಾಡಿಕೊಂಡ ದುರುಳರು. ಸರ್ಕಾರಿ ಕೆಲಸವನ್ನೇ ಬಳಸಿಕೊಂಡು ಕೋಮು ಗಲಭೆಗೆ ಹುನ್ನಾರ. ಜಿಲ್ಲಾಡಳಿತದಿಂದ ದತ್ತಪೀಠದಲ್ಲಿ ಸಿಸಿಟಿವಿಗೆ ಕ್ಲ್ಯಾಂಪ್ ಹಾಕಲು ಚಿಪ್ಸ್ ಕೆಫೆ ಸಂಸ್ಥೆಗೆ ಸೂಚನೆ.
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು(ಡಿ.17): ಕಾಫಿನಾಡನಲ್ಲಿ ದತ್ತಜಯಂತಿ ವೇಳೆ ಕೋಮು ಗಲಭೆ ಸೃಷ್ಟಿಸಲು ಮಹಾಸಂಚುಯೊಂದು ನಡೆದಿತ್ತು. ಜಿಲ್ಲಾಡಳಿತ ಕೊಟ್ಟ ಕೆಲಸವನ್ನ ದುರುಪಯೋಗ ಮಾಡಿಕೊಂಡ ದುರುಳರು ಕೋಮು ಗಲಭೆಗೆ ಹುನ್ನಾರ ನಡೆಸಿದ್ದರು. ಸರ್ಕಾರ ಕೊಟ್ಟ ಕೆಲಸವನ್ನೇ ದುರುಪಯೋಗ ಮಾಡಿಕೊಂಡು ಮಾಡೋ ಕೆಲಸದಲ್ಲೇ ಧರ್ಮ ದಂಗಲ್ ಗೆ ಸ್ಕೆಚ್ ಹಾಕಿದ್ರು. ಸರ್ಕಾರ ಹೇಳಿದ್ದು ಒಂದು ಅವರು ಮಾಡಿದ್ದು ಎರಡು. ಆ ಧರ್ಮದ ಕಾರ್ಯಕ್ರಮವನ್ನೇ ಬಳಸಿಕೊಂಡು ಅಧರ್ಮಕ್ಕೆ ಕೈ ಹಾಕಿದ್ರು.
ಸರ್ಕಾರಿ ಕೆಲಸವನ್ನೇ ಬಳಸಿಕೊಂಡು ಕೋಮು ಗಲಭೆಗೆ ಹುನ್ನಾರ
ಕಾಫಿನಾಡಲ್ಲಿ ಡಿಸೆಂಬರ್ 6-7-8 ರಂದು ನಡೆದ ದತ್ತಜಯಂತಿ ಕಾರ್ಯಕ್ರಮದ ವೇಳೆ 3 ಕಿ.ಮೀ.ರಸ್ತೆಗೆ ಮೊಳೆ ಸುರಿದಿದ್ದು ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಜಿಲ್ಲೆ ಸೂಕ್ಷ್ಮವೂ ಆಗಿತ್ತು. ಆದ್ರೆ, ನಗರವನ್ನ ಸಂಪೂರ್ಣ ಕೇಸರಿ ಮಾಡಿದ್ದ ಕಂಡು ಸಿಸಿಟಿವಿಗೆ ಹಾಕೋ ಕೆಲಸ ಮಾಡುವವರು ಕೆರಳಿದ್ದರು. ಅದನ್ನೇ ಬಂಡವಾಳ ಮಾಡಿಕೊಂಡು ಕೋಮುಗಲಭೆಗೆ ಸ್ಕೆಚ್ ಹಾಕಿದ್ರು. ಸರ್ಕಾರ ಸೂಚನೆ ಮೇರೆಗೆ ಹೋಗ್ರಪ್ಪಾ. ಸಿಸಿಟಿವಿಗೆ ಕ್ಲ್ಯಾಂಪ್ ಹಾಕಿ ಬನ್ನಿ ಅಂದ್ರೆ ಧರ್ಮ ಹಾಗೂ ಕೇಸರಿ ವಿರುದ್ಧ ಕಹಳೆ ಊದಿ ಹೋಗುವಾಗಲೇ 4 ಕೆ.ಜಿ.ಮೊಳೆ ಕೊಂಡೊಯ್ದು 3 ಕಿ.ಮೀ. ಸುರಿದು ಬಂದು ದತ್ತಜಯಂತಿ ಕಾರ್ಯಕ್ರಮವನ್ನೇ ಹಾಳು ಮಾಡಿ ಹಿಂದೂಗಳ ಮೇಲೆ ಸೇಡು ತೀರಿಸಿಕೊಳ್ಳಲು ಮುಂದಾಗಿದ್ದರು. 4500 ಪೊಲೀಸರ ಸರ್ಪಗಾವಲಿನಲ್ಲಿ ದತ್ತಜಯಂತಿ ಶಾಂತಿಯುತವಾಗಿ ಮುಗಿದಿತ್ತು. ಮೊಳೆ ಹಾಕಿದ ಇಬ್ಬರ ಹೆಡೆಮುರಿ ಕಟ್ಟಿರೋ ಕಾಫಿನಾಡ ಖಾಕಿಗಳು ಅವರ ಬುಡಕ್ಕೂ ಕೈ ಹಾಕಿದ್ದಾರೆ.ಅಲ್ಲದೆ ಇಬ್ಬರು ಆರೋಪಿಗಳು ನಿಷೇಧಿತ ಪಿ.ಎಫ್.ಐ. ಸಂಘಟನೆಯ ಕಾರ್ಯಕರ್ತರು ಎನ್ನುವ ಅನುಮಾನವೂ ವ್ಯಕ್ತವಾಗಿದ್ದು ಈ ಬಗ್ಗೆಯೂ ಪೊಲೀಸ್ರು ತನಿಖೆ ನಡೆಸುತ್ತಿದ್ದಾರೆ.
ದತ್ತಪೀಠದ ರಸ್ತೆಯಲ್ಲಿ ಮೊಳೆ ಎಸೆದ ಪ್ರಕರಣ: ಕೃತ್ಯದ ಹಿಂದೆ ಪಿಎಫ್‌ಐ ಕೈವಾಡ
ಎನ್ ಐ ಎ ಗೆ ತನಿಖೆಗೆ ಒತ್ತಾಯ
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾಪ್ರಶಾಂತ್ ಸಂಭ್ರಮದ ದತ್ತಜಯಂತಿ ಸಹಿಸಲಾಗದೆ ಈ ರೀತಿ ಮಾಡಿದ್ದೀವೆಂದ ಆರೋಪಿಗಳು ತನಿಖೆಯಲ್ಲಿ ಒಪ್ಪಿಕೊಂಡಿದ್ದಾರೆ. ಅಲ್ಲದೆ ಕಳೆದ ಹಲವು ವರ್ಷಗಳ ಹಿಂದೆ ದತ್ತಜಯಂತಿ ಮೆರವಣಿಗೆಯಲ್ಲಿ ಮುಸ್ಲಿಂ ಸಮುದಾಯಕ್ಕೆ ಗೇಲಿ ಮಾಡಿದ್ರುಆ ಸಿಟ್ಟಿನಿಂದ ಈ ಕೃತ್ಯ ಎಸಗಿಸಲು ಸಂಚು ರೂಪಿಸಿದ್ವಿ ಎಂದ ಆರೋಪಿಗಳು ತನಿಖೆಯಲ್ಲಿ ಒಪ್ಪಿಕೊಂಡಿದ್ದು ಆರೋಪಿಗಳ ಹಿನ್ನೆಲೆ ಬಗ್ಗೆಯೂ ತೀವ್ರ ತನಿಖೆ ನಡೆಯುತ್ತಿದೆ ಎಂದರು. ಇವರಿಬ್ಬರೇ ಅಲ್ಲ. ಇನ್ನೂ ಐದಾರು ಕಿರಾತಕ ಮಾನಗೇಡಿಗಳು ತಲೆಮರೆಸಿಕೊಂಡಿದ್ದಾರೆ. ಇವರು ಮಾಡಿದ ಕೆಲಸ ಮುಸ್ಲಿಮರನ್ನೇ ಅಪನಂಬಿಕೆಯಿಂದ ನೋಡುವಂತಾಗಿದೆ.
ದತ್ತಪೀಠದಲ್ಲಿ ಮುಗಿಯದ ಅರ್ಚಕರ ವಿವಾದ: ನ್ಯಾಯಾಂಗ ನಿಂದನೆಯ ಎಚ್ಚರಿಕೆ ನೀಡಿದ ಮುಸ್ಲಿಮರು
ಪೊಲೀಸರು ಯಾವಾಗ ಇಬ್ಬರನ್ನ ಬಂಧಿಸಿದರೋ ಹಿಂದೂ ಸಂಘಟನೆಗಳು ಅವರ ತಳಕ್ಕೆ ಕೈ ಹಾಕಿದ್ದರು. ಅವರು ನಿಷೇಧಿತ ಪಿ.ಎಫ್.ಐ ಸಂಘಟನೆಯ ಕಾರ್ಯಕರ್ತರು. ಕೂಡಲೇ ಪ್ರಕರಣವನ್ನ ಎನ್.ಐ. ಎ. ಗೆ. ವಹಿಸಬೇಕು. ಇವರ ಹಿಂದೆ ಯಾರಿದ್ದಾರೆ. ಇವರ ಉದ್ದೇಶ ಏನು ಅನ್ನೋದು ಹೊರಬರಬೇಕೆಂದು ಭಜರಂಗಳದ ಮುಖಂಡ ರಘ ಸಕಲೇಶಪುರ ಆಗ್ರಹಿಸಿದ್ದಾರೆ. ಒಟ್ಟಾರೆ, ಕಾಫಿನಾಡ ದತ್ತಜಯಂತಿ ಅಂದ್ರೆ ಭಯದಲ್ಲೇ ನಡೆಯುವಂತದ್ದು. 90ರ ದಶಕದ ದತ್ತಜಯಂತಿ ಹೋರಾಟ ಆ ಭಯವನ್ನ ಹುಟ್ಟಿಸಿದೆ. ಧರ್ಮದ ಇಂತಹಾ ಸೂಕ್ಷ್ಮ ಆಚರಣೆಯಲ್ಲಿ ಧರ್ಮದ ಅಫೀಮನ್ನೇ ಮೈತುಂಬಾ ತುಂಬಿಕೊಂಡಿರೋ ಇಂತಹಾ ಕಿಡಿಗೇಡಿಗಳಿಂದ ಸ್ವಾಸ್ಥ್ಯ ಸಮಾಜದಲ್ಲಿ ಅಸಮಾಧಾನದ ಕಿಡಿ ಹಚ್ಚೋ ಇಂತವರಿಗೆ ಪೊಲೀಸ್ ಸರಿಯಾದ ಪಾಠ ಕಲಿಸಬೇಕಿದೆ.