NPS ಪಿಂಚಣಿ ರದ್ದುಗೊಳಿಸುವಂತೆ ಚಿತ್ರದುರ್ಗ ಸರ್ಕಾರಿ ನೌಕರರು ಆಗ್ರಹ

By Suvarna NewsFirst Published Dec 17, 2022, 5:21 PM IST
Highlights

ಸರ್ಕಾರಗಳು ಸರ್ಕಾರಿ ನೌಕರರ OPS ಪಿಂಚಣಿ ರದ್ದುಗೊಳಿಸಿ 2006 ರಿಂದ NPS ಪಿಂಚಣಿ ಜಾರಿ ಮಾಡಿರುವುದು ನೌಕರರಿಗೆ ತುಂಬಾ ಅನಾನುಕೂಲ ಆಗ್ತಿದೆ ಎಂದು ಚಿತ್ರದುರ್ಗ ಜಿಲ್ಲಾ NPS ನೌಕರರ ಒಕ್ಕೂಟ  ಸರ್ಕಾರದ ವಿರುದ್ದ ‌ಆಕ್ರೋಶ  ವ್ಯಕ್ತಪಡಿಸಿದೆ.

ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿತ್ರದುರ್ಗ (ಡಿ.17): ಸರ್ಕಾರಗಳು ಸರ್ಕಾರಿ ನೌಕರರ OPS ಪಿಂಚಣಿ ರದ್ದುಗೊಳಿಸಿ 2006 ರಿಂದ NPS ಪಿಂಚಣಿ ಜಾರಿ ಮಾಡಿರುವುದು ನೌಕರರಿಗೆ ತುಂಬಾ ಅನಾನುಕೂಲ ಆಗ್ತಿದೆ ಎಂದು ಚಿತ್ರದುರ್ಗ ಜಿಲ್ಲಾ NPS ನೌಕರರ ಒಕ್ಕೂಟ ಜಿಲ್ಲಾಧ್ಯಕ್ಷ ಡಾ.ಎಸ್ ಆರ್ ಲೇಪಾಕ್ಷ ಸರ್ಕಾರದ ವಿರುದ್ದ ‌ಆಕ್ರೋಶ ಹೊರಹಾಕಿದರು. ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ರಾಜ್ಯದಲ್ಲಿ ಸರ್ಕಾರಿ ನೌಕರರಿಗೆ ಮರಣ ಶಾಸನದಂತೆ 01-04-2006 ರಿಂದ ಎನ್.ಪಿ.ಎಸ್ ಜಾರಿಯಾಗಿದೆ ನಮಗೆ ಇದರ ಕರಾಳತೆ ಅರ್ಥವಾಗುವುದಕ್ಕೆ 10 ವರ್ಷಗಳು ಬೇಕಾಯಿತು ಎಂದರು. 

ಹೀಗೆ ಇದರ ಅನಿಶ್ಚಿತತೆಯ ಅರಿವಾದಾಗಲೂ ಯಾವುದೇ ಗಟ್ಟಿಯಾದ ಕೂಗು ನಮ್ಮ ಪರವಾಗಿ ಧ್ವನಿಯೆತ್ತದೇ ಇದ್ದಾಗ, ಅನಿವಾರ್ಯವಾಗಿ ನಮ್ಮ ಕೂಗು ಸರ್ಕಾರಕ್ಕೆ ತಲುಪಿಸಲು ನಮ್ಮದೇ ಆದ ಸಂಘಟನೆ ರೂಪಿಸಲು ಬದ್ಧರಾಗಿ ದಿನಾಂಕ : 20-01-2016 ರಂದು ರಾಜ್ಯದ ಎಲ್ಲಾ ಜಿಲ್ಲೆಗಳ ಪ್ರತಿನಿಧಿಗಳೊಂದಿಗೆ ಕರ್ನಾಟಕ ರಾಜ್ಯ ಸರ್ಕಾರಿ ಎನ್.ಪಿ.ಎಸ್. ನೌಕರರ ಸಂಘ ಶ್ರೀ ಶಾಂತರಾಮ ತೇಜ ಅವರ ಅಧ್ಯಕ್ಷತೆಯಲ್ಲಿ ಸ್ಥಾಪನೆಯಾಯಿತು. ಇಂದು ಕರ್ನಾಟಕದ ಎಲ್ಲಾ ಜಿಲ್ಲೆ, ತಾಲ್ಲೂಕುಗಳಲ್ಲೂ ಸಂಘಟನೆ ಬಲವರ್ಧನೆ ಮಾಡಲಾಗಿದೆ ಎಂದರು.

NPS ಬೇಡ ಹಳೆಯ ಪಿಂಚಣಿ‌ ಕೊಡಿ, ಎನ್ ಪಿಎಸ್ ನೌಕರರ ಸಂಘಟನೆಯಿಂದ ಡಿ.19 ರಂದು ಸಾಮೂಹಿಕ ಹೋರಾಟ

ಇಂದು ನಾವು ನಮ್ಮ ಹೋರಾಟದಲ್ಲಿ ಬಹುದೂರ ಸಾಗಿದ್ದೇವೆ. 20-01-2018ರ “ಫ್ರೀಡಂ ಪಾರ್ಕ್ ಚಲೋ” 03-10-2018ರ “ರಕ್ತ ಕೊಟ್ಟೇವು, ಪಿಂಚಣಿ ಐಡೆವು”, 26-11-2018ರ “ಬೆಳಗಾವಿ ಚಲೋ”, NMOPS ಸಂಘಟನೆಯಿಂದ ಪಾರ್ಲಿಮೆಂಟ್ ಚಲೋ, ರಾಷ್ಟ್ರೀಯ “OPS ಸಂಕಲ್ಪ ಯಾತ್ರೆ”, ಹೀಗೆ ರಾಜ್ಯದ ಇತಿಹಾಸದಲ್ಲಿ ಐತಿಹಾಸಿಕ ಹೋರಾಟಗಳನ್ನು ಮಾಡಿರುವುದರ ಫಲವಾಗಿ ಈಗಾಗಲೇ ನಮಗೆ DCRG (ನಿವೃತ್ತಿ ಮತ್ತು ಮರಣ ಉಪಧನ), ಕುಟುಂಬ ಪಿಂಚಣಿ ಲಭ್ಯವಾಗಿವೆ. ಹಾಗೆಯೇ ದೇಶಾದ್ಯಂತ ಇಂದು NPS ವಿರೋಧಿ ಹೋರಾಟಗಳು ಬೃಹತ್ ಮಟ್ಟದಲ್ಲಿ ನಡೆಯುತ್ತಿದ್ದು, ರಾಜಸ್ಥಾನ, ಛತ್ತೀಸ್‌ಘಡ, ಜಾರ್ಖಾಂಡ್ ಮತ್ತು ಪಂಜಾಬ್ ಸರ್ಕಾರಗಳು ನೌಕರರ ಹೋರಾಟಕ್ಕೆ ಮಣಿದು NPS ರದ್ದುಗೊಳಿಸಿ, OPS ಜಾರಿಮಾಡಿರುವುದು ಆಶಾದಾಯಕ ಬೆಳವಣಿಗೆಯಾಗಿದ್ದು, ಹೋರಾಟದಿಂದ ಮಾತ್ರ ನಮ್ಮ ಗುರಿ ತಲುಪಲು ಸಾಧ್ಯ ಎಂದು ಸಾಬೀತಾಗಿದೆ. 

Personal Finance: ಪತ್ನಿ ಭವಿಷ್ಯ ಭದ್ರವಾಗ್ಬೇಕೆಂದ್ರೆ ಮಾಡಿ ಇಲ್ಲಿ ಹೂಡಿಕೆ

ನಮ್ಮ ಹೋರಾಟದ ನಿರ್ಣಾಯಕ ಹಂತಕ್ಕೆ ತಲುಪಿರುವ ನಾವುಗಳು ಈಗ ನಡೆಯುತ್ತಿರುವ ಡಿಸೆಂಬರ್ -19 ರ “ಮಾಡು ಇಲ್ಲವೇ ಮಡಿ” ಅನಿರ್ಧಿಷ್ಟಾವಧಿ ಹೋರಾಟದಲ್ಲಿ ಕುಟುಂಬ ಸಮೇತ ಭಾಗವಹಿಸಿ ನ್ಯಾಯ ಸಮ್ಮತವಾದ ಬೇಡಿಕೆಯನ್ನು ಈಡೇರಿಸಿಕೊಳ್ಳೋಣ‌ ಎಂದು ರಾಜ್ಯದ ಎಲ್ಲಾ ಸರ್ಕಾರಿ ನೌಕರರಿಗೆ ಕರೆ ಕೊಟ್ಟರು.

click me!