Mysuru : ಸಾರಾ ಮಹೇಶ್‌ ಮನವಿಗೆ ಸ್ಪಂದಿಸಿದ ಸರ್ಕಾರ

By Kannadaprabha NewsFirst Published Nov 18, 2022, 4:55 AM IST
Highlights

ಶಾಸಕ ಸಾ.ರಾ. ಮಹೇಶ್‌ ಅವರ ಮನವಿಯ ಮೇರೆಗೆ ಕೆ.ಆರ್‌. ನಗರ ವಿಧಾನಸಭಾ ಕ್ಷೇತ್ರಕ್ಕೆ ಸರ್ಕಾರ 1,620 ಮನೆಗಳನ್ನು ಮಂಜೂರು ಮಾಡಿದೆ.

 ಕೆ.ಆರ್‌. ನಗರ (ನ.18):  ಶಾಸಕ ಸಾ.ರಾ. ಮಹೇಶ್‌ ಅವರ ಮನವಿಯ ಮೇರೆಗೆ ಕೆ.ಆರ್‌. ನಗರ ವಿಧಾನಸಭಾ ಕ್ಷೇತ್ರಕ್ಕೆ ಸರ್ಕಾರ 1,620 ಮನೆಗಳನ್ನು ಮಂಜೂರು ಮಾಡಿದೆ.

ವಿಧಾನ ಸೌಧದಲ್ಲಿ ವಸತಿ ಸಚಿವ (V Somanna)  ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಶಾಸಕರ ಮನವಿಯನ್ನು ಪರಿಗಣಿಸಿ ಮನೆಗಳನ್ನು ಮಂಜೂರು ಮಾಡಲಾಗಿದೆ.

2022-23ನೇ ಸಾಲಿಗೆ ವಿವಿಧ(House)  ಯೋಜನೆಗಳಾದ ಬಸವ, ವಾಜಪೇಯಿ, ಅಂಬೇಡ್ಕರ್‌ ನಿವಾಸ್‌ ವಸತಿ ಯೋಜನೆಯಡಿಯಲ್ಲಿ ಈ ಹೆಚ್ಚುವರಿ ಮನೆಗಳನ್ನು ಹಂಚಿಕೆ ಮಾಡಿರುವ ಬಗ್ಗೆ ವಸತಿ ಇಲಾಖೆಯ ಅಧೀನ ಕಾರ್ಯದರ್ಶಿ ಜಿ. ಲಕ್ಷ ್ಮಣ ಆದೇಶ ಹೊರಡಿಸಿದ್ದಾರೆ.

ಕಳೆದ ಸಾಲಿನಲ್ಲಿ 1,270 ಮನೆಗಳನ್ನು ಸರ್ಕಾರದಿಂದ ಮಂಜೂರು ಮಾಡಿಸಿದ್ದ ಶಾಸಕರು, ಮಳೆಯಿಂದ ಮನೆ ಕಳೆದು ಕೊಂಡವರು ಮತ್ತು ಸೂರು ಇಲ್ಲದವರು ಹೆಚ್ಚಿನ ರೀತಿಯಲ್ಲಿ ಮನೆ ಮಂಜೂರಿಗೆ ಮನವಿ ಸಲ್ಲಿಸಿದ್ದರು. ವಸತಿ ಇಲಾಖೆ ವತಿಯಿಂದ ಕೆ.ಆರ್‌. ನಗರ ವಿಧಾನಸಭಾ ಕ್ಷೇತ್ರಕ್ಕೆ ವಿವಿಧ ವಸತಿ ಯೋಜನೆಯಡಿ ಮಂಜೂರಾಗಿರುವ ಮನೆಗಳನ್ನು ಸಾಲಿಗ್ರಾಮ ತಾಲೂಕಿನ 19 ಗ್ರಾಪಂಗಳು ಮತ್ತು ಕೆ.ಆರ್‌. ನಗರ ತಾಲೂಕಿನ 15 ಗ್ರಾಪಂಗಳಿಗೆ ಹಂಚಿಕೆ ಮಾಡಬೇಕಾಗಿದೆ.

ಎರಡು ತಾಲೂಕಿನ ಗ್ರಾಪಂವಾರು ಮನೆಗಳನ್ನು ಬಿಡುಗಡೆ ಮಾಡಿದರೆ ಆಯಾ ಗ್ರಾಪಂಗಳು ಯಾರಿಗೆ ಮನೆ ಇಲ್ಲ ಎಂಬುದನ್ನು ಖಾತ್ರಿ ಪಡಿಸಿ ಅಂತಹ ಫಲಾನುಭವಿಗಳ ಪಟ್ಟಿಯನ್ನು ತಯಾರಿಸಿ ತಾಪಂಗೆ ಕಳಿಸಿ ಅನುಮೋದನೆ ಪಡೆದ ನಂತರ ಅರ್ಹ ಫಲಾನುಭವಿಗೆ ಮನೆ ನಿರ್ಮಾಣ ಹಕ್ಕು ಪತ್ರ ವಿತರಣೆ ನಡೆಯಲಿದೆ.

ತಾಲೂಕಿನಲ್ಲಿ ನಡೆದ ಜನ ಸಂಪರ್ಕ ಸಭೆಗಳಲ್ಲಿ ಮತ್ತು ನಾನು ಸೋಮವಾರ ಮತ್ತು ಶುಕ್ರವಾರ ನಡೆಸುವ ಜನ ಸಾಮಾನ್ಯರ ನೋವು-ನಲಿವುಗಳ ಕುಂದುಕೊರತೆ ಸಭೆಯಲ್ಲಿ ವ್ಯಾಪಕವಾಗಿ ಮನೆ ಮಂಜೂರಿಗೆ ಹೆಚ್ಚಾಗಿ ಮನವಿಗಳು ಸಲ್ಲಿಕೆಯಾಗುತ್ತಿದ್ದನ್ನು ಸರ್ಕಾರದ ಗಮನಕ್ಕೆ ತರಲಾಗಿ, ಈ ಹೆಚ್ಚುವರಿ ಮನೆಗಳನ್ನು ಮಂಜೂರು ಮಾಡಲಾಗಿದ್ದು, ಇದಕ್ಕಾಗಿ ವಸತಿ ಸಚಿವ ವಿ. ಸೋಮಣ್ಣ ಅವರಿಗೆ ಕೃತಜ್ಞತೆ ಸಲ್ಲಿಸುವೆ ಎಂದು ಶಾಸಕ ಸಾ.ರಾ. ಮಹೇಶ್‌ ತಿಳಿಸಿದ್ದಾರೆ.

ಜಾತ್ಯಾತೋತವಾಗಿ ಅಭಿವೃದ್ಧಿ ಕೆಲಸ

ಸಾಲಿಗ್ರಾಮ (ನ.06): ನನ್ನ ಹತ್ತೊಂಬತ್ತು ವರ್ಷಗಳ ಸೇವೆಯಲ್ಲಿ ಸರ್ಕಾರದ ಅನುದಾನ ಮತ್ತು ನನ್ನ ವೈಯಕ್ತಿಕ ಸಹಾಯದಿಂದ ತಾಲೂಕಿನಲ್ಲಿ ಪಕ್ಷಾತೀತ, ಜಾತ್ಯತೀತ ಪ್ರಾಮಾಣಿಕವಾಗಿ ಅಭಿವೃದ್ಧಿ ಕೆಲಸ ಮಾಡುತ್ತಾ ಬಂದಿದ್ದೇನೆ ಎಂದು ಶಾಸಕ ಸಾ.ರಾ. ಮಹೇಶ್‌ ಹೇಳಿದರು. ತಾಲೂಕಿನ ಲಕ್ಕಿಕುಪ್ಪೆ ಕೊಪ್ಪಲು ಗ್ರಾಮದಲ್ಲಿ ನೂತನವಾಗಿ ನಿರ್ಮಾಣ ಮಾಡಿರುವ ಶ್ರೀಮಾರಮ್ಮ ದೇವಸ್ಥಾನ ಉದ್ಘಾಟಿಸಿ ಮಾತನಾಡಿ, ಚುನಾವಣೆ ಸಂದರ್ಭದಲ್ಲಿ ರಾಜಕಾರಣ ಮಾಡೋಣ ಇತರೆ ದಿನಗಳಲ್ಲಿ ಎಲ್ಲರೂ ಸಾಮರಸ್ಯದ ಬದುಕು ಮಾಡೋಣ, ಯಾವುದೇ ಜಾತಿ ಭೇದ ಧರ್ಮಗಳಲ್ಲದೆ ಕಷ್ಟದಲ್ಲಿರುವವರಿಗೆ ಸಹಾಯ ಮಾಡುವವನೇ ರಾಜಕೀಯದಲ್ಲಿ ನಿರಂತರವಾಗಿ ಉಳಿಯುವುದು ಭರವಸೆ ಕೊಟ್ಟು ಕಣ್ಮರೆ ಆಗುವವರು ಸಾರ್ವಜನಿಕರ ಸೇವೆಯಲ್ಲಿ ಉಳಿಯಲು ಸಾಧ್ಯವಿಲ್ಲ ಎಂದರು.

ಕ್ಷೇತ್ರದ ವ್ಯಾಪ್ತಿಯಲ್ಲಿ ನಿರಂತರವಾಗಿ ಯಾವುದಾದರೂ ಒಂದು ಗ್ರಾಮಗಳಲ್ಲಿ ನಿತ್ಯ ನಿಮ್ಮ ಕೈಗೆ ಸಿಗುತ್ತೇನೆ, ಕೆಲವರು ನಾಲ್ಕುವರೆ ವರ್ಷಗಳಿಂದ ಜನರಿಂದ ದೂರ ಇರುತ್ತಾರೆ, ಚುನಾವಣೆ ಹತ್ತಿರವಾಗುತ್ತಿದ್ದಂತೆ ಸುತ್ತುತ್ತಾರೆ, ನಾನು ಶಾಸಕನಾಗಿ ಬರುವುದಕ್ಕಿಂತ ಮೊದಲು ಎಷ್ಟುಜನ ಶಾಸಕರು, ಸಚಿವರಾಗಿದ್ದರು ಅವರು ನಿಮ್ಮ ಗ್ರಾಮವನ್ನು ಎಷ್ಟುಅಭಿವೃದ್ಧಿ ಮಾಡಿದ್ದರು. ನಾನು ಏನು ಅಭಿವೃದ್ದಿ ಮಾಡಿದ್ದೇನೆ ಎಂದು ಒಮ್ಮೆ ಯೋಚಿಸಿ ಎಂದರು. 12 ಲಕ್ಷ ರು. ವೆಚ್ಚದಲ್ಲಿ ಗ್ರಾಮದೇವತೆ ಮಾರಮ್ಮ ದೇವಸ್ಥಾನವನ್ನು ನಿರ್ಮಾಣ ಮಾಡಲಾಗಿದೆ. ಆದರೆ ದೇವಸ್ಥಾನದ ಮೇಲೆ ಗೋಪುರ ಮಾಡಿದರೆ ಮತ್ತಷ್ಟುಲಕ್ಷಣವಾಗಿ ಕಾಣುತ್ತದೆ. ಹಾಗಾಗಿ ಗ್ರಾಮದಿಂದ ಯಾರೂ ಕೂಡ ಹಣ ಹಾಕಬೇಡಿ. ನಾನು ವೈಯಕ್ತಿಕವಾಗಿ ಈ ದೇವಸ್ಥಾನದ ಗೋಪುರವನ್ನು ಮಾಡಿಸಿಕೊಡುತ್ತೇನೆ ಎಂದು ಅವರು ಭರವಸೆ ನೀಡಿದರು.

ರಂಗಾಯಣದಿಂದ ‘ಟಿಪ್ಪು ನಿಜ ಕನಸುಗಳು’ ನಾಟಕ ಕೃತಿ ನ.13ರಂದು ಬಿಡುಗಡೆ

ಗ್ರಾಮದ ಸಮಿತಿಯವರು ಅಪ್ಪು ಅವರ ಟೀ ಶರ್ಚ್‌ ಧರಿಸಿದ್ದೀರಿ, ಆದರೆ ಅದು ಮಾನವೀಯತೆ ಮತ್ತು ಸ್ವಾಭಿಮಾನದ ಸಂಕೇತ. ಅಪ್ಪು ಅವರ ಆದರ್ಶಗಳನ್ನು ಪ್ರತಿಯೊಬ್ಬ ಯುವಕರು ತಮ್ಮಲ್ಲಿ ಮೈಗೂಡಿಸಿಕೊಂಡಾಗ ಮಾತ್ರ ಸಾಮರಸ್ಯದ ಸಮಾಜವನ್ನು ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ. ಗ್ರಾಮದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಉಳಿದಿದ್ದರೆ ನನಗೆ ತಿಳಿಸಿ ಅದನ್ನು ಶೀಘ್ರದಲ್ಲೇ ಮಾಡಿಸಿಕೊಡುತ್ತೇನೆ ಎಂದು ತಿಳಿಸಿದರು. ತಹಸೀಲ್ದಾರ್‌ ಮೋಹನ್‌ಕುಮಾರ್‌, ಸಿಪಿಐ ಶ್ರೀಕಾಂತ್‌, ಜೆಸಿಬಿ ಸತೀಶ್‌, ಹರದನಹಳ್ಳಿ ಗ್ರಾಪಂ ಅಧ್ಯಕ್ಷೆ ನಂದಿನಿ ರಮೇಶ್‌. ಸದಸ್ಯರಾದ ಲೋಕೇಶ್‌ ಗೋಪಾಲ್, ಮಹದೇವ್‌, ಪ್ರದೀಪ್‌, ಲೋಕೇಶ್‌ ಇದ್ದರು.

click me!