Tumakur : ಜನವರಿಯಲ್ಲಿ ರೈಲ್ವೆ ಸಂಚಾರಕ್ಕೆ ಚಾಲನೆ

By Kannadaprabha NewsFirst Published Nov 18, 2022, 4:48 AM IST
Highlights

ತುಮಕೂರು ಹಾಗೂ ಆಂಧ್ರದ ರೈಲ್ವೆ ಮಾರ್ಗದ ಕಾಮಗಾರಿ ಪ್ರಗತಿಯಲ್ಲಿದ್ದು 2023ರ ಜನವರಿಗೆ, ಆಂಧ್ರ ಮಾರ್ಗದ ಪಾವಗಡ ತಾಲೂಕಿನ ಕೆ.ರಾಮಪುರದಲ್ಲಿ ರೈಲ್ಪೆ ಸಂಚಾರಕ್ಕೆ ಚಾಲನೆಗೆ ನೀಡಲಾಗುವುದು ಎಂದು ಶಾಸಕ ವೆಂಕಟರಮಣಪ್ಪ ಹೇಳಿದರು.

  ಪಾವಗಡ (ನ.18):  ತುಮಕೂರು ಹಾಗೂ ಆಂಧ್ರದ ರೈಲ್ವೆ ಮಾರ್ಗದ ಕಾಮಗಾರಿ ಪ್ರಗತಿಯಲ್ಲಿದ್ದು 2023ರ ಜನವರಿಗೆ, ಆಂಧ್ರ ಮಾರ್ಗದ ಪಾವಗಡ ತಾಲೂಕಿನ ಕೆ.ರಾಮಪುರದಲ್ಲಿ ರೈಲ್ಪೆ ಸಂಚಾರಕ್ಕೆ ಚಾಲನೆಗೆ ನೀಡಲಾಗುವುದು ಎಂದು ಶಾಸಕ ವೆಂಕಟರಮಣಪ್ಪ ಹೇಳಿದರು.

ಗುರುವಾರ ವಿಶೇಷ ನಿಧಿಯ ಮೊದಲನೇ ಹಂತದ 50ಲಕ್ಷ ವೆಚ್ಚದ ಗುಂಡಾರ್ಲ ಹಳ್ಳಿ ಹಾಗೂ ವೀರ್ಲಗೊಂದಿ ರಸ್ತೆ ಡಾಂಬರೀಕರಣಕ್ಕೆ ಗುದ್ದಲಿಪೂಜೆ, ಶುದ್ಧ ಕುಡಿವ ನೀರಿಗಾಗಿ ಮಿಷನ್‌ ಅಡಿ ಮನೆ ಮನೆ ನಲ್ಲಿ (Water Tap)  ಸಂಪರ್ಕ ಆಳವಡಿಕೆಗೆ ಚಾಲನೆ ಮತ್ತು ಸರ್ಕಾರಿ ಪ್ರಾಥಮಿಕ ಶಾಲೆಯ (School)  ತಲಾ 10 ಲಕ್ಷ ವೆಚ್ಚದ ಎರಡು ಕೊಠಡಿಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರೆವೇರಿಸಿದ ಬಳಿಕ ಗುಂಡಾರ್ಲಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಮಾತನಾಡಿದರು.

ಈ ಹಿಂದೆ ಪಕ್ಷೇತರ ಅಭ್ಯರ್ಥಿಯಾಗಿ ರೈಲ್ವೆ ಚಿಹ್ನೆಯಿಂದ ಸ್ವರ್ಧಿಸಿದ್ದ ವೇಳೆ ಗೆದ್ದರೆ ಪಾವಗಡಕ್ಕೆ ರೈಲು ಬಿಡುವುದಾಗಿ ಹೇಳಿದ್ದೆ. ಆ ಭರವಸೆ ಈಡೇರುವ ಕಾಲ ಸಮೀಪಿಸಿದ್ದು ಬರುವ ಜನವರಿ ತಿಂಗಳಲ್ಲಿ ತಾಲೂಕಿನ ಕೆ.ರಾಮಪುರದಲ್ಲಿ ರೈಲು ಸಂಚಾರಕ್ಕೆ ಚಾಲನೆ ನೀಡುವುದಾಗಿ ತಿಳಿಸಿದರು.

ನಾನು ಸತ್ತರು ತಾಲೂಕಿನ ಜನತೆಯ ಮನದಲ್ಲಿರಬೇಕು. ಈ ಪರಿಕಲ್ಪನೆ ಹಿನ್ನಲೆಯಲ್ಲಿ ಕೋಟ್ಯಂತರ ರು. ವೆಚ್ಚದ ರಸ್ತೆ ಕಾಮಗಾರಿ, ಕುಡಿವ ನೀರಿಗೆ 2,350ಕೋಟಿ ವೆಚ್ಚದ ತುಂಗಭದ್ರಾ ಯೋಜನೆ, ಭದ್ರಾಮೇಲ್ದಂಡೆ ಹಾಗೂ ಎತ್ತಿನಹೊಳೆ ಯೋಜನೆಗಳು ತಾಲೂಕಿನಲ್ಲಿ ಪ್ರಗತಿಯಲ್ಲಿದೆ. ತಾಲೂಕಿನ ಗುಂಡಾರ್ಲಹಳ್ಳಿ ಹಾಗೂ ವೀರ್ಲಗೊಂದಿ ಎರಡು ಹಂತದ ರಸ್ತೆ ಪ್ರಗತಿಗೆ, 50ಲಕ್ಷ ಹಾಗೂ ಮಳೆ ಬಿದ್ದ ಹಿನ್ನಲೆಯಲ್ಲಿ ಕೆರೆ ಭರ್ತಿಯಾಗಿದ್ದು ಸಣ್ಣ ನೀರಾವರಿ ಇಲಾಖೆಯಿಂದ 19ಲಕ್ಷ ಹಣ ಬಿಡುಗಡೆ ಮಾಡಲಾಗಿದೆ. ಇಲ್ಲಿನ ಸರ್ಕಾರಿ ಪ್ರಾಥಮಿಕ ಪಾಠಶಾಲೆಯ ನೂತನ ಕೊಠಡಿಗಳ ನಿರ್ಮಾಣಕ್ಕೆ ತಲಾ 10ಲಕ್ಷ ದಂತೆ 20ಲಕ್ಷ ಬಿಡುಗಡೆ ಮಾಡಿದ್ದು, ತಾ,ಕೋಟಬಂಡೆ ಗ್ರಾಮದ ಕೋಲ್ಲಾಪುರದಮ್ಮ ದೇವಸ್ಥಾನ ಪ್ರಗತಿಗೆ 6.50ಲಕ್ಷ ಬಿಡುಗಡೆ ಮಾಡುವುದಾಗಿ ಹೇಳಿದರು.

ಮಾಜಿ ಜಿಪಂ ಸದಸ್ಯ ಎಚ್‌.ವಿ.ವೆಂಕಟೇಶ್‌ ಮಾತನಾಡಿ, ನಮ್ಮ ತಂದೆ ಶಾಸಕ ವೆಂಕಟರಮಣಪ್ಪ ಹಾಗೂ ನಾನು ತಾ,ಬ್ಯಾಡನೂರು ಗ್ರಾಪಂ ಬಗ್ಗೆ ವಿಶೇಷ ಆಸಕ್ತಿವಹಿಸಿದು,್ದ ಈ ಭಾಗದಲ್ಲಿ ಆನೇಕ ಪ್ರಗತಿ ಕಾರ್ಯ ಕೈಗೊಳ್ಳಲಾಗಿದೆ. ಕಾಂಗ್ರೆಸ್‌ನಿಂದ ಮಾತ್ರ ತಾಲೂಕಿನ ಪ್ರಗತಿ ಸಾಧ್ಯವಾಗಲಿದ್ದು, ವಿಧಾನ ಸಭೆ ಚುನಾವಣೆ ಹತ್ತಿರವಾಗುತ್ತಿದೆ. ಸಂಘಟಿತರಾಗಿ ಕೆಲಸಮಾಡುವತ್ತ ಕಾರ್ಯಕರ್ತರು ಸಜ್ಜಾಗುವಂತೆ ಕರೆ ನೀಡಿದರು.

ಬಿಇಒ ಅಶ್ವತ್ಥನಾರಾಯಣ್‌ ಮಾತನಾಡಿ, ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಮೂಲಭೂತ ಸಮಸ್ಯೆ ನಿವಾರಣೆಗೆ ಶಾಲಾ ಕೊಠಡಿಗಳ ಮಂಜೂರಾತಿ ಹಾಗೂ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಶಾಸಕರು ನೀಡುವ ಅಧ್ಯತೆ ಬಗ್ಗೆ ವಿವರಿಸಿದರು.

ತಾಲೂಕು ರೈತ ಸಂಘದ ಅಧ್ಯಕ್ಷ ನರಸಿಂಹರೆಡ್ಡಿ, ನಿವೃತ್ತ ಮುಖ್ಯ ಶಿಕ್ಷಕ ನರಸಪ್ಪ ಹಾಗೂ ಗ್ರಾಪಂ ಸದಸ್ಯ ಎಂ.ಜೆ.ಕೃಷ್ಣಮೂರ್ತಿ ಈ ಭಾಗದ ಪ್ರಗತಿಗೆ ಶಾಸಕ ವೆಂಕಟರಮಣಪ್ಪ ನೀಡಿದ ಕೊಡುಗೆ ಮತ್ತು ಸರಳತೆ ಹಾಗೂ ಸೇವಾಮನೋಭಾವ ಕುರಿತು ಸ್ಮರಿಸಿ, ಚರಂಡಿ ಮತ್ತು ಸಿಸಿ ರಸ್ತೆಗಳ ಪ್ರಗತಿಗೆ ಸಹಕರಿಸುವಂತೆ ಮನವಿ ಮಾಡಿದರು.

ಇದೇ ವೇಳೆ ತಾಲೂಕು ಕಾಂಗ್ರೆಸ್‌ ನಗರಾಧ್ಯಕ್ಷ ಸುದೇಶ್‌ಬಾಬು ಮುಖಂಡ ವೆಂಕಟಮ್ಮನಹಳ್ಳಿ ನಾಣಿ, ಪುರಸಭೆ ಸದಸ್ಯ ಪಿ.ಎಚ್‌.ರಾಜೇಶ್‌,ಮುಖಂಡರಾದ ಉಗ್ರನರಸಿಂಹಪ್ಪ ನಿವೃತ್ತ ಮುಖ್ಯ ಶಿಕ್ಷಕ ನರಸಪ್ಪ,ಬಾಲಕೃಷ್ಣ ಮದ್ದಿಬಂಡೆ ವೆಂಕಟೇಶ್‌, ಗ್ರಾಪಂ ಉಪಾಧ್ಯಕೆ ಅಕ್ಕಮ್ಮ, ಗ್ರಾಪಂ ಸದಸ್ಯರಾದ ಮದ್ದಿಬಂಡೆ ಕೃಷ್ಣಮೂರ್ತಿ ನರಸಿಂಹಪ್ಪ ವೇಣಗೋಪಾಲರೆಡ್ಡಿ, ಜೋಗಣ್ಣ ಹಾಗೂ ರಾಮಕೃಷ್ಣಪ್ಪ, ಯತೀಶ್‌ ಚಂದ್ರಶೇಖರ್‌, ಎಸ್‌ಡಿಎಂಸಿ ಅಧ್ಯಕ್ಷ ಕೃಷ್ಣಪ್ಪ ರಾಜ್‌ಕುಮಾರ್‌ ಹಾಗೂ ಎಂಜಿಎಂ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಶಿವಣ್ಣ, ಶಿಕ್ಷಕ ಬ್ಯಾಡನೂರು ಗಂಗಾಧರ್‌, ರಾಮಲಿಂಗಪ್ಪ ಮಂಗಪ್ಪ ಹಾಗೂ ಜಿಪಂ ಎಇಇ ಸುರೇಶ್‌, ಸಂಜೀವರೆಡ್ಡಿ ನಾಗೇಶ್‌ ರಾಜು ಇತರೆ ಆನೇಕ ಮಂದಿ ಗ್ರಾಮದ ಹಿರಿಯ ಮುಖಂಡರು ಉಪಸ್ಥಿತರಿದ್ದರು.

click me!