'BJPಯವರು ದುಡ್ಡು, ಸೀರೆ ಏನ್ ಕೊಟ್ರೂ ಕಿತ್ಕೊಳ್ಳಿ, ಓಟ್ ಮಾತ್ರ ನಂಗೆ ಹಾಕಿ'..!

Published : Nov 23, 2019, 11:17 AM IST
'BJPಯವರು ದುಡ್ಡು, ಸೀರೆ ಏನ್ ಕೊಟ್ರೂ ಕಿತ್ಕೊಳ್ಳಿ, ಓಟ್ ಮಾತ್ರ ನಂಗೆ ಹಾಕಿ'..!

ಸಾರಾಂಶ

ಬಿಜೆಪಿಯವರು ಸೀರೆ, ದುಡ್ಡು ಕೊಟ್ಟರೆ ತೆಗೆದುಕೊಳ್ಳಿ. ಆದರೆ ಓಟ್ ಮಾತ್ರ ನನಗೆ ಹಾಕಿ ಎಂದು ಕೆ. ಆರ್. ಪೇಟೆ ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ.ಚಂದ್ರಶೇಖರ್ ಹೇಳಿದ್ದಾರೆ. ಉಪಚುನಾವಣೆ ಸಮೀಪಿಸಿದ್ದು, ಪ್ರಚಾರ ನಡೆಸುತ್ತಿರುವ ಅವರು ಈ ರೀತಿ ಜನರಲ್ಲಿ ಮತ ಯಾಚಿಸಿದ್ದಾರೆ.

ಮಂಡ್ಯ(ನ.23): ಬಿಜೆಪಿಯವರು ಸೀರೆ, ದುಡ್ಡು ಕೊಟ್ಟರೆ ತೆಗೆದುಕೊಳ್ಳಿ. ಆದರೆ ಓಟ್ ಮಾತ್ರ ನನಗೆ ಹಾಕಿ ಎಂದು ಕೆ. ಆರ್. ಪೇಟೆ ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ.ಚಂದ್ರಶೇಖರ್ ಹೇಳಿದ್ದಾರೆ. ಉಪಚುನಾವಣೆ ಸಮೀಪಿಸಿದ್ದು, ಪ್ರಚಾರ ನಡೆಸುತ್ತಿರುವ ಅವರು ಈ ರೀತಿ ಜನರಲ್ಲಿ ಮತ ಯಾಚಿಸಿದ್ದಾರೆ.

ಕೆ. ಆರ್‌. ಪೇಟೆ ಉಪಚುನಾವಣೆ ಸಂದರ್ಭ ಬಿಜೆಪಿಯವ್ರು ಏನೇ ಕೊಟ್ರು ಕಿತ್ಕೊಳ್ಳಿ. ದುಡ್ಡು, ಸೀರೆ ಕೊಟ್ರೆ ತಗೋಳಿ, ಆದ್ರೆ ಓಟ್ ಮಾತ್ರ ನಂಗೆ ಹಾಕಿ ಎಂದು ಕೆ. ಆರ್‌. ಪೇಟೆ ತಾಲೂಕಿನ ತಗಡೂರು ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ.ಚಂದ್ರಶೇಖರ್ ವಿಶೇಷವಾಗಿ ಮತ ಯಾಚಿಸಿದ್ದಾರೆ.

ಕೆ. ಆರ್ ಪೇಟೆ: BJP ಅಭ್ಯರ್ಥಿಯ ಅಣ್ಣನಿಂದ ಕಾಂಗ್ರೆಸ್ ಪರ ಪ್ರಚಾರ..!

ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಜನ ಹೀಗೆ ಮಾಡಿದ್ರು. ಜೆಡಿಎಸ್‌‌‌ನವರ ಹತ್ತಿರ ದುಡ್ಡು ತಗೊಂಡು ಓಟ್ ಹಾಕಿದ್ದು ಮಾತ್ರ ಸುಮಲತಾಗೆ. ಹಾಗೆ ಈಗ ಬಿಜೆಪಿಯವರು ಏನೇ ಕೊಟ್ರು ಕಿತ್ತುಕೊಳ್ಳಿ. ಓಟ್ ಮಾತ್ರ ನಂಗೆ ಹಾಕಿ. ನಾನು ಎರಡು ಬಾರಿ ಸೋತಿದ್ದೇನೆ. ನನ್ನ ಬಳಿ ಏನು ಇಲ್ಲ. ನಂಗೆ ಮತ ಹಾಕಿ ಗೆಲ್ಲಿಸಿ ಎಂದು ಕೇಳಿದ್ದಾರೆ.

ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೆ ಡಿ.5ರಂದು ಉಪಚುನಾವಣೆ ನಡೆಯಲಿದ್ದು, 9ರಂದು ಫಲಿತಾಂಶ ಪ್ರಕಟವಾಗಲಿದೆ.

ಸ್ವಾಭಿಮಾನಿ ಕಳಹೆ ಮೊಳಗಿಸಿದ ಪಕ್ಷೇತರ ಅಭ್ಯರ್ಥಿ ದೇವೇಗೌಡ

PREV
click me!

Recommended Stories

ಪುಟಿನ್‌ಗೆ ಇಲ್ಲೇ ಎಲೆಕ್ಷನ್‌ ನಿಲ್ಲೋಕೆ ಟಿಕೆಟ್‌ ಕೊಡ್ತಾರೆ ಅಂದ್ಕೊಂಡಿದ್ದೆ.. ಸಂತೋಷ್‌ ಲಾಡ್‌ ಲೇವಡಿ
ಗಡುವು ಮೀರಿಸಿದರೆ ಮುಂದೆ ಕೆಲಸವಿಲ್ಲ: ಮೆಟ್ರೋ ಗುತ್ತಿಗೆದಾರರಿಗೆ ಡಿ.ಕೆ.ಶಿವಕುಮಾರ್‌ ಎಚ್ಚರಿಕೆ