ಗದಗ ನಗರದ ಆಟಿಓ ಆಫೀಸ್ ಹಿಂಭಾಗ ಹಾಗೂ ಕಪ್ಪತ್ತಗುಡ್ಡ ಸೆರಗಿನ ಅಂಚಿನಲ್ಲಿ ನಡೆಯುತ್ತಿದೆ ಅಕ್ರಮ ಮಣ್ಣು ಗಣಿಗಾರಿಕೆ| ಹಣದ ಆಸೆಗಾಗಿ ರಾತ್ರೋರಾತ್ರಿ ಅಪಾರ ಪ್ರಮಾಣದ ಮಣ್ಣನ್ನು ಕಬಳಿಸುತ್ತಿರುವ ಗಣಿ ಕುಳುಗಳು|
ಗದಗ(ನ.23): ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಚಿವ ಸಿಸಿ ಪಾಟೀಲ್ ತವರು ಜಿಲ್ಲೆಯಲ್ಲಿ ಅಕ್ರಮ ಮಣ್ಣು ಗಣಿಗಾರಿಕೆ ರಾಜಾರೋಷವಾಗಿ ನಡೆಯುತ್ತಿದೆ. ಹೌದು, ಗದಗ ನಗರದ ಆಟಿಓ ಆಫೀಸ್ ಹಿಂಭಾಗ ಹಾಗೂ ಕಪ್ಪತ್ತಗುಡ್ಡ ಸೆರಗಿನ ಅಂಚಿನಲ್ಲಿ ಅಕ್ರಮ ಮಣ್ಣು ಗಣಿಗಾರಿಕೆ ನಡೆಯುತ್ತಿದೆ.
ಹಣದ ಆಸೆಗಾಗಿ ಗಣಿ ಕುಳುಗಳು ರಾತ್ರೋರಾತ್ರಿ ಅಪಾರ ಪ್ರಮಾಣದ ಮಣ್ಣನ್ನು ಕಬಳಿಸುತ್ತಿದ್ದಾರೆ. ಅಕ್ರಮ ಮಣ್ಣು ಗಣಿಗಾರಿಕೆ ನಡೆಯುತ್ತಿದ್ದರೂ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಮಾತ್ರ ನಮಗೂ ಇದಕ್ಕೂ ಯಾವುದೇ ಸಂಬಂಧವಿಲ್ಲವೇನೋ ಎಂಬಂತೆ ಕಣ್ಮುಚ್ಚಿ ಕುಳಿತಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಗಣಿ ಕುಳಗಳು ರಾಜಾರೋಶವಾಗಿ ಟಿಪ್ಪರ್ ಗಳಿಂದ ಮಣ್ಣನ್ನು ಸಾಗಿಸುತ್ತಿದ್ದಾರೆ. ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಚಿವ ಸಿಸಿ ಪಾಟೀಲ್ ಅವರು ನಮ್ಮ ಜಿಲ್ಲೆಯವರಾಗಿದ್ರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸ್ಥಳೀಯರು ಸಚಿವರ ವಿರುದ್ಧ ಆಕ್ರೋಶ ವ್ಯಕ್ರತಪಡಿಸಿದ್ದಾರೆ.