ಸುವರ್ಣ ನ್ಯೂಸ್, ಕನ್ನಡ ಪ್ರಭ ವನ್ಯಜೀವಿ ಸಂರಕ್ಷಣಾ ಅಭಿಯಾನ:  ಹಂಪಿಯ ಬೆಟ್ಟಗಳಲ್ಲಿ ಅಡಗಿದೆ ವನ್ಯಜೀವಿ ರಹಸ್ಯ

ಸುವರ್ಣ ನ್ಯೂಸ್, ಕನ್ನಡ ಪ್ರಭ ವನ್ಯಜೀವಿ ಸಂರಕ್ಷಣಾ ಅಭಿಯಾನ: ಹಂಪಿಯ ಬೆಟ್ಟಗಳಲ್ಲಿ ಅಡಗಿದೆ ವನ್ಯಜೀವಿ ರಹಸ್ಯ

Published : Jul 06, 2026, 11:13 PM ISTUpdated : Jul 06, 2026, 11:14 PM IST
ವಿಜಯನಗರ ಜಿಲ್ಲೆಯ ಹಂಪಿಯಲ್ಲಿ ವೈವಿಧ್ಯಮಯ ವನ್ಯಜೀವಿಗಳಿವೆ. ಇಲ್ಲಿನ ದರೋಜಿ ಪ್ರದೇಶವನ್ನು ಕರಡಿ ಧಾಮವೆಂದು ಘೋಷಿಸಲಾಗಿದ್ದು, ಇದು ಕರಡಿಗಳ ಸಂತತಿ ಹೆಚ್ಚಳಕ್ಕೆ ಕಾರಣವಾಗಿದೆ. ಈ ಧಾಮದಲ್ಲಿ ಚಿರತೆ, ಮುಳ್ಳುಹಂದಿ ಮತ್ತು ಕಾಡುಹಂದಿಗಳೂ ಕಂಡುಬರುತ್ತವೆ.

ಈಗಿನ ವಿಜಯನಗರ ಜಿಲ್ಲೆಯ ಜಿಲ್ಲಾ ಕೇಂದ್ರ ಹೊಸಪೇಟೆ ಪಕ್ಕದಲ್ಲೇ ಇರುವ ವಿಜಯನಗರ ಸಾಮ್ರಾಜ್ಯದ ರಾಜಧಾನಿ ಹಂಪಿಯಲ್ಲಿ ವೈವಿಧ್ಯಮಯ ವನಸಿರಿ ಇದೆ. ಇಲ್ಲಿ ಚಂದನದ ಚಿರತೆ ಕಂಡುಬರುತ್ತದೆ. ಹಗರಿಬೊಮ್ಮನಹಳ್ಳಿ ಸುತ್ತಲಿನ ಜಾಗದಲ್ಲಿ ಈ ಚಿರತೆ ಕಾಣಿಸಿಕೊಂಡಿತ್ತು. ಈ ಪ್ರದೇಶ ನೈಸರ್ಗಿಕವಾಗಿ ಕರಡಿಗಳಿಗೆ ಅತ್ಯಂತ ಪ್ರಾಶಸ್ತ್ಯ ಸ್ಥಳವಾಗಿದೆ. ಹೀಗಾಗಿ ಕರ್ನಾಟಕ ಸರ್ಕಾರ ಈ ಜಾಗವನ್ನು ಅಂದರೆ ದರೋಜಿ ಪ್ರದೇಶವನ್ನು ಕರಡು ಧಾಮ ಎಂದು ಘೋಷಣೆ ಮಾಡಲಾಗಿದೆ.

ಕರಡಿಗಳ ಆಹಾರ ಕ್ರಮದಲ್ಲಿ ಕೀಟಗಳೇ ಮುಖ್ಯ ಆಹಾರ. ಗೆದ್ದಲು, ಇರುವೆಗಳೇ ಮುಖ್ಯ ಆಹಾರ. ಇನ್ನು ಮಳೆಗಾಲ ಸೀಸನ್‌ನಲ್ಲಿ ಹಣ್ಣುಗಳು ಮತ್ತು ಗೆಡ್ಡೆ, ಗೆಣಸುಗಳನ್ನು ತಿನ್ನುತ್ತವೆ. ಇಲ್ಲಿ ಮರಿಗಳನ್ನು ಅತ್ಯಂತ ಸುರಕ್ಷಿತವಾಗಿ ಕರಡಿಗಳು ನೋಡಿಕೊಳ್ಳುತ್ತವೆ. ಕರಡಿಗಳು ತಮ್ಮ ಮಕ್ಕಳನ್ನು ಬೆನ್ನ ಮೆಲೆಯೇ ಕೂರಿಸಿಕೊಂಡು ಹೋಗುತ್ತವೆ. ಒಂದು ಅವಧಿಯಲ್ಲಿ ಕರಡಿ ಕುಣಿತ ಹಾಗೂ ಕರಡಿಗಳು ಇರುವ ಕಾಡಿನ ರಕ್ಷಣೆಗೆ ಸರ್ಕಾರ ಕ್ರಮವಹಿಸಿದ ಬೆನ್ನಲ್ಲಿಯೇ ಕರಡಿ ಧಾಮವನ್ನು ನಿರ್ಮಾಣ ಮಾಡಲಾಯಿತು. ಇದೀಗ ಕರಡಿ ಧಾಮ ಮಾಡಿದ್ದರಿಂದ ಕರಡಿಗಳ ಸಂತತಿ ಹೆಚ್ಚಾಗಿದೆ. ಇನ್ನು ಈ ಭಾಗದಲ್ಲಿ ಚಿಪ್ಪುಹಂದಿಗಳು, ಮುಳ್ಳು ಹಂದಿಗಳು, ಕಾಡು ಹಂದಿಗಳ ಸಂಖ್ಯೆಯೂ ಹೆಚ್ಚಾಗಿದೆ.

25:48ಕ್ರೈಸ್ ಸಂಸ್ಥೆ ಅಧಿಕಾರಿಗಳ ಕರ್ಮಕಾಂಡ ಬಟಾಬಯಲು; ಸುವರ್ಣನ್ಯೂಸ್​ ಕವರ್ ಸ್ಟೋರಿ ತಂಡದ ಮೆಗಾ ಬೇಟೆ
26:56ಪ್ರೀತಿ, ದ್ರೋಹ, ದುರಂತ: ಹೆಂಡತಿಯ ಫೋಟೋ ವೈರಲ್ ಮಾಡಿ ಗಂಡ ಎಸ್ಕೇಪ್; ‘ಪಾಗಲ್ ಪ್ರೇಮಿ’ ಕಾಟಕ್ಕೆ ಗೃಹಿಣಿ ಬಲಿ!
23:12ಇಲ್ಲಿ ದೇವಿಗೆ ಬಂಗಾರವಲ್ಲ, ಬಳೆಗಳೇ ಹರಕೆ: ವಡನಬೈಲು ಪದ್ಮಾವತಿ ದೇವಿಯ ಪವಾಡದ ಕಥೆ
29:10ದೇಶದ 5 ರಾಜ್ಯಕ್ಕೆ ಬೇಕಿದ್ದ ಬಿಹಾರಿ ಬ್ರದರ್ಸ್ ಹೆಡೆಮುರಿ ಕಟ್ಟಿದ ಕರ್ನಾಟಕ ಕಾಪ್ಸ್; ಬೀದರ್‌ನಲ್ಲಿ 1 ನಿಮಿಷದಲ್ಲಿ ₹83 ಲಕ್ಷ ಎಗರಿಸಿ ಎಸ್ಕೇಪ್!
52:08ಹುಲಿಗಳಿಂದ ದಸರಾ ಆನೆಗಳವರೆಗೆ: ನಾಗರಹೊಳೆಯ ವನ್ಯಜೀವಿ ಲೋಕದ ರೋಚಕ ಕಥೆ
21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
Read more