ಉತ್ತರ ಕರ್ನಾಟಕದ ಅಭಿವೃದ್ಧಿಯತ್ತ ಸಿಎಂ ಚಿತ್ತ: ಬೆಳಗಾವಿ ಸೌಧಕ್ಕೆ ಸರ್ಕಾರ ನವಶಕ್ತಿ..!

By Kannadaprabha News  |  First Published Sep 27, 2021, 9:44 AM IST

*  ಅ.3ಕ್ಕೆ ಸಕ್ಕರೆ ಆಯುಕ್ತಾಲಯ ಸುವರ್ಣಸೌಧಕ್ಕೆ
*  ಶಿಫ್ಟ್‌ ಆಗುತ್ತಿರುವ ಮೊದಲ ಪ್ರಮುಖ ಕಚೇರಿ
*  ಶೀಘ್ರ ಇನ್ನಷ್ಟು ಕಚೇರಿ ಸ್ಥಳಾಂತರ: ಬೊಮ್ಮಾಯಿ
 


ಬೆಳಗಾವಿ(ಸೆ.27):  ಉತ್ತರ ಕರ್ನಾಟಕದ(North Karnataka) ಅಭಿವೃದ್ಧಿಗೆ ಸರ್ಕಾರ ಸದಾ ಬದ್ಧ ಎಂದು ಈಗಾಗಲೇ ಸ್ಪಷ್ಟಪಡಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರು ಅದರ ಮೊದಲ ಹಂತವಾಗಿ ಕಲ್ಯಾಣ ಕರ್ನಾಟಕ ಭಾಗಕ್ಕೆ ದುಪ್ಪಟ್ಟು ಅನುದಾನ ನೀಡುವುದಾಗಿ ಘೋಷಿಸಿದ್ದರು. ಇದೀಗ ಉತ್ತರ ಕರ್ನಾಟಕ ಶಕ್ತಿ ಕೇಂದ್ರವಾಗಿರುವ ಸುವರ್ಣ ವಿಧಾನಸೌಧಕ್ಕೆ ಅ.3ರಂದು ಸಕ್ಕರೆ ಆಯುಕ್ತಾಲಯ ಸ್ಥಳಾಂತರ ಮಾಡುವ ಬಗ್ಗೆ ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ. ಈ ಮೂಲಕ ಅನೇಕ ಸಮಯದಿಂದ ನೆನೆಗುದಿಗೆ ಬಿದ್ದಿದ್ದ ಮಹತ್ವದ ಕಾರ್ಯವೊಂದಕ್ಕೆ ಚಾಲನೆ ನೀಡಲು ಮುಂದಾಗಿದ್ದಾರೆ. ಇದರಿಂದಾಗಿ ಕಬ್ಬು ಬಾಕಿ ಸೇರಿದಂತೆ ಸಕ್ಕರೆ ಕಾರ್ಖಾನೆಗಳ ಕುರಿತಾದ ಅಹವಾಲುಗಳನ್ನು ಬೆಳೆಗಾರರು ಸುಲಭವಾಗಿ ನಿರ್ವಹಿಸಲು ಅನುಕೂಲವಾಗಲಿದೆ.

ಹಾಲಿ ದಲ್ಲಿ(Suvarna Vidhana Soudha) ನಿರ್ಮಿತಿ ಕೇಂದ್ರ, ಕೌಶಲಾಭಿವೃದ್ಧಿ ಕೇಂದ್ರ, ಮಾಹಿತಿ ಆಯೋಗ ಸೇರಿದಂತೆ 27 ಪ್ರಾದೇಶಿಕ ಕಚೇರಿಗಳಿವೆ. ಸಕ್ಕರೆ ಆಯುಕ್ತಾಲಯ ಸುವರ್ಣ ವಿಧಾನಸೌಧಕ್ಕೆ ಬೆಂಗಳೂರಿನಿಂದ ಸ್ಥಳಾಂತರವಾಗುತ್ತಿರುವ ಮೊದಲ ಮಹತ್ವದ ಕಚೇರಿಯಾಗಿದೆ.

Tap to resize

Latest Videos

ನಗರದಲ್ಲಿ ಭಾನುವಾರ ಸುದ್ದಿಗಾರರ ಜೊತೆ ಮಾತನಾಡುವ ವೇಳೆ ಈ ಬಗ್ಗೆ ಸ್ಪಷ್ಟನೆ ನೀಡಿದ ಮುಖ್ಯಮಂತ್ರಿಗಳು, ರೈತರು ಹಾಗೂ ಉತ್ತರ ಕರ್ನಾಟಕ ಜನರ ಬೇಡಿಕೆಯಾಗಿರುವ ಸಕ್ಕರೆ ಆಯುಕ್ತಾಲಯ ಕಚೇರಿಯನ್ನು ಅ.3ರಂದು ಬೆಳಗಾವಿಯ ಸುವರ್ಣ ವಿಧಾನಸೌಧಕ್ಕೆ ಸ್ಥಳಾಂತರ ಮಾಡಲಾಗುವುದು ಎಂದು ತಿಳಿಸಿದರು.

ಸುವರ್ಣ ಸೌಧಕ್ಕೆ ರಾಜ್ಯ ಮಟ್ಟದ ಕಚೇರಿ ಬರಲ್ಲ: ಉತ್ತರ ಕರ್ನಾಟಕದಾದ್ಯಂತ ಭುಗಿಲೆದ್ದ ಆಕ್ರೋಶ

ಸಕ್ಕರೆ ಆಯುಕ್ತಾಲಯವನ್ನು ಸ್ಥಳಾಂತರ ಮಾಡಲು ಈಗಾಗಲೇ ಆದೇಶ ಮಾಡಲಾಗಿದೆ. ಅ.3ಕ್ಕೆ ಸ್ಥಳಾಂತರ ಮಾಡಲಾಗುವುದು. ಇದಲ್ಲದೆ ಇನ್ನೂ ಕೆಲ ಕಚೇರಿಗಳು ಸ್ಥಳಾಂತರ ಮಾಡಲು ಆದೇಶ ಮಾಡ​ಲಾ​ಗಿ​ದೆ. ಅವುಗಳನ್ನು ಕೂಡ ಶೀಘ್ರದಲ್ಲೇ ಸ್ಥಳಾಂತರ ಮಾಡಲಾಗುವುದು. ಡಿಸೆಂಬರ್‌ ತಿಂಗಳಿನಲ್ಲಿ ಬೆಳಗಾವಿಯಲ್ಲಿ ಅಧಿವೇಶನ ಮಾಡಲು ತೀರ್ಮಾನ ಕೈಗೊಳ್ಳಲಾಗಿದ್ದು ಅದರ ಒಳಗಾಗಿ ಸಾಧ್ಯವಿರುವ ಪ್ರಮುಖ ಸರ್ಕಾರಿ ಕಚೇರಿಗಳನ್ನು ಸ್ಥಳಾಂತರ ಮಾಡಲಾಗುವುದು ಎಂದರು.

ಯಾಕೆ ಬೆಳಗಾವಿಗೇ ಸಕ್ಕರೆ ಆಯುಕ್ತಾಲಯ?

ಉತ್ತರ ಕರ್ನಾಟಕ ಅದರಲ್ಲೂ ಬೆಳಗಾವಿ(Belagavi) ಜಿಲ್ಲೆಯಲ್ಲಿ ಅತಿ ಹೆಚ್ಚು ಕಬ್ಬು ಬೆಳೆಯುತ್ತಾರೆ. ಬೆಳಗಾವಿ ಜಿಲ್ಲೆಯೊಂದರಲ್ಲೇ 70ಕ್ಕೂ ಅಧಿಕ ಕಬ್ಬು ಕಾರ್ಖಾನೆಗಳಿವೆ. ಈ ಹಿನ್ನೆಲೆಯಲ್ಲಿ ಸಕ್ಕರೆ ಆಯುಕ್ತಾಲಯ ಬರಲಿರುವುದು ಈ ಭಾಗದ ಕಬ್ಬು ಬೆಳೆಗಾರರಿಗೆ ಉಪಯುಕ್ತವಾಗಿದೆ. ಅಲ್ಲದೆ ಕಬ್ಬು ಬೆಳೆಗಾರರು ಕೂಡಲೇ ಬಾಕಿ ಪಾವತಿ ಬಾರದೆ ಇದ್ದಲ್ಲಿ ದೂರು ಸಲ್ಲಿಸಲು ಅವಕಾಶ ಸಿಕ್ಕಂತಾಗುತ್ತದೆ. ಸಕ್ಕರೆ ಕಾರ್ಖಾನೆಗಳೂ ಬೇಗನೆ ಕಬ್ಬು ಪೂರೈಕೆ ಮಾಡಿದ ರೈತರಿಗೆ ಹಣ ಪಾವತಿ ಮಾಡಲು ಅನುಕೂಲವಾಗಲಿದೆ.

ಡಿಸೆಂಬರ್‌ನಲ್ಲಿ ಅಧಿವೇಶನ

ಕಾರಣಾಂತರದಿಂದ ಬೆಳಗಾವಿಯ ಸುವರ್ಣ ವಿಧಾನ ಸೌಧದಲ್ಲಿ ಕಳೆದ ಎರಡು ವರ್ಷಗಳಿಂದ ಅಧಿವೇಶನ ನಡೆದಿಲ್ಲ. ಆದ್ದರಿಂದ ಬರುವ ಡಿಸೆಂಬರ್‌ನಲ್ಲಿ ಚಳಿಗಾಲದ ಅಧಿವೇಶನವನ್ನು(Session) ಸುವರ್ಣ ವಿಧಾನಸೌಧದಲ್ಲಿ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅಲ್ಲದೇ ಅಧಿವೇಶನಕ್ಕೆ ಬಂದವರಿಗೆ ಯಾವುದೇ ರೀತಿಯ ಸಮಸ್ಯೆ ಆಗದಂತೆ ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗುವುದು. ಬೆಳಗಾವಿ ಅಧಿವೇಶನದಲ್ಲಿ ರಾಜ್ಯದ ಅಭಿವೃದ್ಧಿ ಪ್ರತಿಧ್ವನಿಸಲಿದೆ ಎಂದರು.
 

click me!