ನಾನು ಕಾಂಗ್ರೆಸ್‌ ಪಕ್ಷದಿಂದ ಪ್ರಬಲ ಟಿಕೆಟ್‌ ಆಕಾಂಕ್ಷಿ ಎಂದ ಮುಖಂಡ

By Kannadaprabha News  |  First Published Sep 27, 2021, 9:41 AM IST
  • ಮುಂಬರುವ ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಗೆ ನಾನು ಕೂಡ ಕಾಂಗ್ರೆಸ್‌ ಪಕ್ಷದಿಂದ ಪ್ರಬಲ ಟಿಕೆಟ್‌ ಆಕಾಂಕ್ಷಿ
  • ವಿಧಾನ ಪರಿಷತ್‌ ಮಾಜಿ ಸದಸ್ಯ ಕೆ.ಸಿ. ಪುಟ್ಟಸಿದ್ದ ಶೆಟ್ಟಿ 

  ಪಿರಿಯಾಪಟ್ಟಣ (ಸೆ.27):  ಮುಂಬರುವ ದಕ್ಷಿಣ ಪದವೀಧರ ಕ್ಷೇತ್ರದ (graduates constituency ) ಚುನಾವಣೆಗೆ ನಾನು ಕೂಡ ಕಾಂಗ್ರೆಸ್‌ (Congress) ಪಕ್ಷದಿಂದ ಪ್ರಬಲ ಟಿಕೆಟ್‌ ಆಕಾಂಕ್ಷಿ ಎಂದು ವಿಧಾನ ಪರಿಷತ್‌ ಮಾಜಿ ಸದಸ್ಯ ಕೆ.ಸಿ. ಪುಟ್ಟಸಿದ್ದ ಶೆಟ್ಟಿ ಹೇಳಿದರು.

ಚುನಾವಣೆಗೆ ಸ್ಪರ್ಧಿಸುವ ಸಂಬಂಧ ಈಗಾಗಲೇ ಪಕ್ಷದ ವರಿಷ್ಠರು ಹಾಗೂ ಪದಾಧಿಕಾರಿಗಳ ಗಮನಕ್ಕೆ ವಿಷಯ ತಂದಿದ್ದು ಕಾರ್ಯಕಾರಿಣಿ ಸಭೆಯಲ್ಲಿ ಕೂಡ ಭಾಗವಹಿಸಿದ್ದೇನೆ. 

Latest Videos

undefined

ಕಾಂಗ್ರೆಸ್‌ ಪಕ್ಷದ ಪರವಾಗಿ ಮತದಾರರ ನೋಂದಣಿ ಕಾರ್ಯ ಆರಂಭಿಸಿದ್ದು ಸ್ವಾಭಿಮಾನಿ ಪದವೀಧರರ ವೇದಿಕೆ ಸಹ ಬೆಂಬಲ ವ್ಯಕ್ತಪಡಿಸಿದೆ. 1994 ರಿಂದ 2000 ವರೆಗೆ ವಿಧಾನ ಪರಿಷತ್‌ ಸದಸ್ಯನಾಗಿ ಸಹ ಕಾರ್ಯನಿರ್ವಹಿಸಿ ದಕ್ಷಿಣ ಭಾರತದಲ್ಲಿಯೇ ಉತ್ತಮ ಸಂಸದೀಯಪಟು ಎಂದು ಮಾಜಿ ಪ್ರಧಾನಿ ದೇವೇಗೌಡರಿಂದ (HD Devegowda) ಪ್ರಶಸ್ತಿ ಪಡೆದಿದ್ದೇನೆ, ನನ್ನ ರಾಜಕೀಯ ಅವಧಿಯಲ್ಲಿನ ಎಲ್ಲ ಮಾನದಂಡಗಳನ್ನು ಪರಿಗಣಿಸಿ ಹಿರಿತನದ ಆಧಾರದ ಮೇಲೆ ಟಿಕೆಟ್‌ ನೀಡುವಂತೆ ಪಕ್ಷದ ವರಿಷ್ಠರಿಗೆ ಮನವಿ ಮಾಡಿದ್ದು ತಾಲೂಕಿನ ಮಾಜಿ ಸಚಿವರಾದ ಕೆ. ವೆಂಕಟೇಶ್‌ ಹಾಗೂ ಪಕ್ಷದ ಮುಖಂಡರು ಬೆಂಬಲ ನೀಡುವಂತೆ ಪಟ್ಟಣದ ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.

ಲಿಂಗಾಯತರನ್ನ ಸೆಳೆಯಲು ಕಾಂಗ್ರೆಸ್‌ ಸಭೆ

ಈ ಹಿಂದೆ ವಿಧಾನ ಪರಿಷತ್‌ ಸದಸ್ಯನಾಗಿದ್ದ ವೇಳೆ ನಿರುದ್ಯೊಗಿ ಪದವೀಧರರಿಗೆ ಮಾಸಿಕ ಭತ್ಯೆ 5 ಸಾವಿರ ನೀಡುವಂತೆ ಆಗ್ರಹಿಸಿ ಹೋರಾಟ ನಡೆಸಿದ್ದು ಆರ್ಥಿಕ ಮಿತವ್ಯಯದಿಂದಾಗಿ ಮುಂದೂಡಲ್ಪಟ್ಟಿತ್ತು, ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದ ನಂತರ ಈ ಹೋರಾಟ ಮುಂದುವರೆಸುವುದಾಗಿ ಭರವಸೆ ನೀಡಿ ಪ್ರಾಥಮಿಕ ಶಾಲೆಯಿಂದ ವಿಶ್ವವಿದ್ಯಾಲಯದವರೆಗೂ ಅತಿಥಿ ಶಿಕ್ಷಕರು (Teachers) ಹಾಗೂ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸುತ್ತಿರುವವರ ಬಹುದಿನಗಳ ಬೇಡಿಕೆಯಾದ ಕಾಯಂ ಮಾಡಲು ಹೋರಾಟ ನಡೆಸಿ ನಿರುದ್ಯೋಗಿ ಪದವೀಧರರ ಪರ ಧ್ವನಿ ಎತ್ತುತ್ತೆನೆ ಹಾಗೂ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಪ್ರಯತ್ನ ಮಾಡುವುದಾಗಿ ತಿಳಿಸಿದರು.

'2023ಕ್ಕೆ ಕಾಂಗ್ರೆಸ್‌ಗೆ ಅಧಿಕಾರ : ಸಿದ್ದರಾಮಯ್ಯಗೆ ಸಿಎಂ ಪಟ್ಟ'

ಬಿಜೆಪಿ ಅಭ್ಯರ್ಥಿ ಎಂದು ಬಿಂಬಿಸಿ ಪ್ರಚಾರ ನಡೆಸುತ್ತಿರುವ ವಿನಯ್‌ ಎಂಬವರು ಮತದಾರರಿಗೆ ಆಸೆ ಆಮಿಷಗಳನ್ನು ಒಡ್ಡಿ ಪ್ರಜಾ ಪ್ರಭುತ್ವ ವಿರೋಧಿ ನೀತಿ ಅನುಸರಿಸಿ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸುತ್ತಿರುವುದು ಕ್ಷೇತ್ರದಲ್ಲಿ ಕಂಡು ಬರುತ್ತಿದೆ. ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡುತ್ತೇನೆ. ದಕ್ಷಿಣ ಪದವಿಧರ ಕ್ಷೆತ್ರದ ಪ್ರಬುದ್ಧ ಮತದಾರರು ಯಾವುದೇ ಆಸೆ ಆಮಿಷಗಳಿಗೆ ತಲೆಬಾಗದೆ ನಿಷ್ಠಾವಂತ ಅಭ್ಯರ್ಥಿಯಾದ ನನಗೆ ಬೆಂಬಲ ವ್ಯಕ್ತಪಡಿಸಿ ಗೆಲ್ಲಿಸುವಂತೆ ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಕಾಯಕ ಸಮಾಜ ಒಕ್ಕೂಟದ ರಾಜ್ಯ ಪ್ರಧಾನ ಕಾರ್ಯದರ್ಶಿ ಬೋರಪ್ಪಶೆಟ್ಟಿ, ತಾಲೂಕು ಮುಖಂಡರಾದ ಎಂ.ಜೆ. ಸ್ವಾಮಿ, ಶಿವರಾಜ್, ಹಿರಣ್ಣಯ್ಯ ಇದ್ದರು.

click me!