* ವೈದ್ಯಕೀಯ ಸಾಧನೆ
* ಮಗುವಿನ ವಿಕಿತ್ಸೆ ವೇಳೆ ಅರವಳಿಕೆ ಔಷಧಿ
* ವೆಂಟಿಲೇಟರ್ ಬಳಸೋದೇ ವೈದ್ಯರಿಗೆ ಸವಾಲಾಗಿತ್ತು
ಕಲಬುರಗಿ(ಮೇ.26): ಇಲ್ಲಿನ ರಿಂಗ್ ರಸ್ತೆಯಲ್ಲಿರುವ ಮಣೂರೆ ಮಲ್ಟಿಸ್ಪೇಷಾಲಿಟಿ ಕ್ಲಿನಿಕ್‌ನಲ್ಲಿ ಒಂದೂವರೆ ವರ್ಷದ ಕಂದಮ್ಮ ರಿಯಾ ಜಾಧವಗೆ ಯಶಸ್ವಿಯಾಗಿ ಮೆದುಳು ಶಸ್ತ್ರ ಚಿಕಿತ್ಸೆ (ಪಿಡಿಯಾಟ್ರಿಕ್ ಬ್ರೆನಾಟಮಿ) ಮಾಡಲಾಗಿದೆ. ಕಳೆದ 5 ದಿನಗಳ ಹಿಂದೆಯೇ ಈ ಚಿಕಿತ್ಸೆ ಕೈಗೆತ್ತಿಕೊಳ್ಳಲಾಗಿದ್ದು ಇದೀಗ ಮಗು ಸಂಪೂರ್ಣ ಚೇತರಿಸಿಕೊಂಡಿದೆ.
ಈ ಕುರಿತು ನಡೆದ ಸುದ್ದಿಗೋಷ್ಠಿಯಲ್ಲಿ ಆಸ್ಪತ್ರೆಯ ಮುಖ್ಯವೈದ್ಯ ಡಾ. ಪಾರೂಕ್ ಮಣೂರೆ ಹಾಗೂ ನ್ಯೂರೋ ಸರ್ಜನ್ ಡಾ. ಶಶಾಂಕ್ ಸಂಗೊಳ್ಳಿ ಮಾಹಿತಿ ನೀಡಿ, ಮೆದುಳಲ್ಲಿ ಕೀವು ತುಂಬಿದ ಕಾರಣ ನಿರಂತರ ಜ್ವರದಿಂದ ಬಳಲುತ್ತಿದ್ದ ರಿಯಾ ಜಾಧವ್ ಸಂಪೂರ್ಣ ಪ್ರಜ್ಞಾಹೀನ ಸ್ಥಿತಿಯಲ್ಲಿ ತಮ್ಮ ಆಸ್ಪತ್ರೆಗೆ ಬಂದಾಗ ತಕ್ಷಣ ಅವಳಿಗೆ ಎಂಆರ್‌ಐ ಮಾಡಿಸಿ ಆಕೆಯ ಸಮಸ್ಯೆ ಪತ್ತೆ ಹಚ್ಚಲಾಯ್ತಲ್ಲದೆ ಆಸ್ಪತ್ರೆಗೆ ಬಂದ ಒಂದೂವರೆ ಗಂಟೆಯಲ್ಲೇ ಶಸ್ತ್ರ ಚಕಿತ್ಸೆಗೆ ವ್ಯವಸ್ಥೆ ಮಾಡಿ ನೆರವೇರಿಸಲಾಯ್ತು ಎಂದು ಹೇಳಿದ್ದಾರೆ.
ಕಬ್ಬಿಣದ ಮೊಳೆ ನುಂಗಿದ 2 ವರ್ಷದ ಕಂದ: ವೈದ್ಯರಿಂದ ಶಸ್ತ್ರಚಿಕಿತ್ಸೆ
ಸತತ 6 ಗಂಟೆಗಳ ಶಸ್ರ ಚಿಕಿತ್ಸೆ ಹಲವು ಸವಾಲುಗಳಿಂದ ಕೂಡಿತ್ತು. ಮಗುವಾದ್ದರಿಂದ ಅರಿವಳಿಕೆ ಔಷದಿ ನಿರ್ವಹಣೆ ಮಾಡುವುದೇ ಸಮಸ್ಯೆಯಾಗಿತ್ತು. ಇದಲ್ಲದೆ ವೆಂಟಿಲೇಟರ್ ಮೇಲೆ ಕೂಸನ್ನು ನಿವಹಿಸುವುದು ವೈದ್ಯರಿಗೆ ಸವಾಲಾಗಿತ್ತು. ಇಲ್ಲಿರುವ ತಜ್ಞ ವೈದ್ಯರೆಲ್ಲರೂ ಈ ಕೆಲಸಗಳನ್ನು ಚಾಕಚಕ್ಯತೆಯಿಂದ ಮಾಡುವ ಮೂಲಕ ರಿಯಾ ಜಾಧವಳ ಮೆದುಳು ಶಸ್ತ್ರ ಚಕಿತ್ಸೆ ಮಾಡಿ ಆಕೆಗೆ ಅಲ್ಲಿ ಹೆಪ್ಪುಗಟ್ಟಿದ್ದ ಕೀವನ್ನು ಹೊರ ತೆಗೆಯಲಾಯಿತು ಎಂದು ಮಾಹಿತಿ ನೀಡಿದರು.
ಮಹಿಳೆಯ ದೇಹದಿಂದ 47 ಕೆಜಿ ತೂಕದ ಬೃಹತ್ ಗಡ್ಡೆಯನ್ನು ಶಸ್ತ್ರಚಿಕಿತ್ಸೆ ಮಾಡಿ ತೆಗೆದ ವೈದ್ಯರು
ಡಾ. ಶಶಾಂಕ್ ಮಾತನಾಡಿ, ಮಗು ತುಂಬಾ ಗಂಭೀರ ಸ್ಥಿತಿ ತಲುಪಿತ್ತು. ಹೀಗೆ ಬಿಟ್ಟಿದ್ದರೆ ಕುಸಿಯುವ ಸಾಧ್ಯತೆಗಳಿದ್ದವು. ಆಸ್ಪತ್ರೆಗೆ ಬಂದ ಮರುಕ್ಷಣವೇ ವೈದ್ಯರೆಲ್ಲರೂ ಚರ್ಚಿಸಿ ಮಗುವಿನ ಸಮಸ್ಯೆ ಕಂಡು ಹಿಡಿದು ಸೂಕ್ತ ಚಿಕಿತ್ಸೆ ನೀಡಿದ್ದೇವೆ. ಇಲ್ಲಿರುವ ಸವಲತ್ತುಗಳಿಂದಾಗಿ ಮಗುವಿಗೆ ಇಂತಹ ಚಿಕಿತ್ಸೆ ನೆರವೇರಿಸಲು ಸಾಧ್ಯವಾಯ್ತು. ಮಣ್ಣೂರ ಆಸ್ಪತ್ರೆಯಲ್ಲಿ ಎಲ್ಲವೂ ಇರೋದರಿಂದ ಸಂಕೀರ್ಣ ಶಸ್ತ್ರ ಚಿಕಿತ್ಸೆಗಳನ್ನೂ ಇಲ್ಲಿ ನೆರವೇರಿಸಲು ಸಾಧ್ಯ ಎಂದರು.
ರಿಯಾ ಜಾಧವ್‌ಗೆ ಮೆದುಳಲ್ಲಿ ಕೀವು ತುಂಬಲು ಆಕೆಯ ರಕ್ತದಲ್ಲಿನ ಸೋಂಕು ಕಾರಣ. ಬ್ಯಾಕಿಟಿರಿಯಾದಿಂದ ಇಂತಹ ಸೋಂಕು ಮಕ್ಕಳನ್ನು ಕಾಡುತ್ತದೆ. ಇದು ಅಪರೂಪವಾದಂತಹ ಸೋಂಕು. ಮೆಟ್ರೋ ಊರುಗಳಲ್ಲಿ .4ರಿಂದ .5 ಲಕ್ಷ ತಗಲುವ ಆಪರೇಷನ್ ಮಣೂರೆ ಆಸ್ಪತ್ರೆಯಲ್ಲಿ 50 ರಿಂದ 1 ಲಕ್ಷದಲ್ಲಿಯೇ ಮಾಡಿ ಮುಗಿಸಲಾಗಿದೆ. 5 ದಿನಗಳಲ್ಲೇ ಮಗುವನ್ನು ಮನೆಗೂ ಬಿಡುಗಡೆ ಮಾಡಲಾಗುತ್ತಿದೆ. ಇಲ್ಲಿರುವ ತಜ್ಞರ ಶ್ರಮವೇ ಇದಕ್ಕೆಲ್ಲ ಕಾರಣ ಎಂದು ಡಾ. ಫಾರೂಕ್ ವೈದ್ಯರ ತಂಡವನ್ನು ಪ್ರಂಶಿಸಿದರು.