ಕಬ್ಬಿಣದ ಮೊಳೆ ನುಂಗಿದ 2 ವರ್ಷದ ಕಂದ: ವೈದ್ಯರಿಂದ ಶಸ್ತ್ರಚಿಕಿತ್ಸೆ
- ಕಬ್ಬಿಣದ ಮೊಳೆ ನುಂಗಿದ ಎರಡು ವರ್ಷದ ಬಾಲಕ
- ಪಶ್ಚಿಮ ಬಂಗಾಳದ ದಿನಾಜ್‌ಪುರ ಜಿಲ್ಲೆಯಲ್ಲಿ ಘಟನೆ
- ವೈದ್ಯರಿಂದ ಶಸ್ತ್ರಚಿಕಿತ್ಸೆ: ಬಾಲಕನ ರಕ್ಷಣೆ
ಕೋಲ್ಕತ್ತಾ(ಮಾ.19): ಎರಡು ವರ್ಷ ಪ್ರಾಯದ ಬಾಲಕನೋರ್ವ ಕಬ್ಬಿಣದ ಮೊಳೆಯನ್ನು ಆಕಸ್ಮಿಕವಾಗಿ ನುಂಗಿದ್ದು, ಕೂಡಲೇ ಅಸ್ವಸ್ಥನಾದ ಈ ಬಾಲಕ ವೈದ್ಯರ ಶಸ್ತ್ರಚಿಕಿತ್ಸೆಯಿಂದಾಗಿ ಪವಾಡ ಸದೃಶವಾಗಿ ಪಾರಾಗಿದ್ದಾನೆ. ಪಶ್ಚಿಮ ಬಂಗಾಳದ (West Bengal) ಉತ್ತರ ದಿನಾಜ್‌ಪುರ (North Dinajpur) ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.
ಎರಡು ವರ್ಷದ ಮುಸ್ತಾಕಿನ್ ಅಲಿ (Mustakin Ali) ಎಂಬ ಮಗುವೇ ಹೀಗೆ ಕಬ್ಬಿಣದ ಮೊಳೆ(Iron Nail) ನುಂಗಿ ಅಪಾಯದಿಂದ ಪಾರಾದ ಬಾಲಕ. ಮಗುವಿನ ಅಜ್ಜ ಮನೆಯ ಹೊರಗೆ ಬಿದಿರು ಕತ್ತರಿಸುತ್ತಿದ್ದಾಗ ಮುಸ್ತಾಕಿನ್ ಅವರ ಬಳಿ ಆಟವಾಡುತ್ತಿದ್ದ. ಈವೇಳೆ ಇದ್ದಕ್ಕಿದ್ದಂತೆ, ಮಗು ತೀವ್ರವಾಗಿ ಕೆಮ್ಮುವುದು ಮತ್ತು ಬಾಯಿಯಿಂದ ರಕ್ತಸ್ರಾವವಾಗುವುದನ್ನು ಅಜ್ಜ ನೋಡಿದರು. ಮಗು ಮುಸ್ತಾಕಿನ್ ಸ್ಥಿತಿ ಅವರ ಮನೆಯವರಲ್ಲಿ ಭಯವನ್ನು ಉಂಟುಮಾಡಿತು. ಕೂಡಲೇ ಕುಟುಂಬದವರು ಅವರನ್ನು ರಾಯ್‌ಗಂಜ್ ವೈದ್ಯಕೀಯ ಕಾಲೇಜಿಗೆ (Raiganj Medical College) ಕರೆದೊಯ್ದರು.
ವ್ಯಕ್ತಿಯ ಕರುಳಿನಲ್ಲಿ ಸಿಲುಕಿದ್ದ ಗ್ಲಾಸ್ ಹೊರತೆಗೆದ ವೈದ್ಯರು..!
ಅಷ್ಟರಲ್ಲಾಗಲೇ ಮಗುವಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದು, ನಿರಂತರವಾಗಿ ವಾಂತಿ ಮಾಡಿಕೊಳ್ಳುತ್ತಿತ್ತು. ರಾಯಗಂಜ್ ಮೆಡಿಕಲ್ ಕಾಲೇಜಿನಿಂದ, ಮುಸ್ತಾಕಿನ್ ಅವರನ್ನು ನಂತರ ಮಾಲ್ಡಾ ವೈದ್ಯಕೀಯ ಕಾಲೇಜಿಗೆ (Malda Medical College) ದಾಖಲಿಸಲಾಯಿತು. ಅಲ್ಲಿಂದ ಅವರನ್ನು ಮತ್ತೆ ಕೋಲ್ಕತ್ತಾದ SSKM ಆಸ್ಪತ್ರೆಗೆ ವರ್ಗಾಯಿಸಲಾಯಿತು. ಭಾನುವಾರ ಎಸ್‌ಎಸ್‌ಕೆಎಂ ಆಸ್ಪತ್ರೆಯಲ್ಲಿ ವೈದ್ಯರು ಹಲವು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿ ಅವರ ಗಂಟಲಿನಲ್ಲಿ ಸಿಲುಕಿದ್ದ ಕಬ್ಬಿಣದ ಮೊಳೆಯನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಮಗು ಐಸಿಯುನಲ್ಲಿದ್ದು, ಚೇತರಿಸಿಕೊಳ್ಳುತ್ತಿದೆ.
SSKM ಆಸ್ಪತ್ರೆಯ ಪ್ರಕಾರ, ಬಾಲಕ ಮುಸ್ತಾಕಿನ್ ಗೆ ಭಾನುವಾರ ಬೆಳಗ್ಗೆ 7 ಗಂಟೆಗೆ ಶಸ್ತ್ರಚಿಕಿತ್ಸೆ ನಡೆಸಿ ವೈದ್ಯರು ಪ್ರಾಣ ಉಳಿಸಿದ್ದಾರೆ. ಅರುಣವ್ ಸೇನ್‌ಗುಪ್ತಾ (Arunav Sengupta) ನೇತೃತ್ವದಲ್ಲಿ 4 ವೈದ್ಯರ ತಂಡ ಅವರಿಗೆ ಬಾಲಕನಿಗೆ ಶಸ್ತ್ರಚಿಕಿತ್ಸೆ ನಡೆಸಿದರು. ಮಗುವಿನ ಶ್ವಾಸನಾಳದಲ್ಲಿ ಮೊಳೆ ಸಿಕ್ಕಿ ಹಾಕಿಕೊಂಡಿದ್ದರಿಂದ ಮಗುವಿಗೆ ಉಸಿರಾಟದ ತೊಂದರೆ ಮತ್ತು ವಾಂತಿಯಾಗುತ್ತಿತ್ತು ಎಂದು ವೈದ್ಯರು ಹೇಳಿದರು.
ಹಲ್ಲುಜ್ಜುತ್ತಿದ್ದ ವೇಳೆ ಬಿದ್ದು ಬಾಯಲ್ಲಿ ಸಿಲುಕಿಕೊಂಡ ಬ್ರಶ್... ವೈದ್ಯರಿಂದ ಶಸ್ತ್ರಚಿಕಿತ್ಸೆ
ಕಳೆದ ತಿಂಗಳು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ವೈದ್ಯಕೀಯ ತಪಾಸಣೆ ನಡೆಸಿದಾಗ ಅವರ ಬಲ ಮೂಗಿನ ಹೊಳ್ಳೆಯಲ್ಲಿ ಹಲ್ಲು ಬೆಳೆಯುತ್ತಿರುವುದು ಕಂಡು ಬಂದಿದ್ದು ಆಘಾತಕ್ಕೊಳಗಾಗಿದ್ದರು. 38 ವರ್ಷದ ವ್ಯಕ್ತಿಯೊಬ್ಬರು ವರ್ಷಗಳಿಂದ ಉಸಿರಾಟದ ತೊಂದರೆಯಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ತೆರಳಿ ವೈದ್ಯರ ಬಳಿ ತಪಾಸಣೆಗೆ ಒಳಗಾಗಲು ಮುಂದಾಗಿದ್ದಾರೆ. ಇದಾದ ಬಳಿಕ ತಪಾಸಣೆ ನಡೆಸಿದ ವೈದ್ಯರು ಈ ಆಘಾತಕಾರಿ ವಿಚಾರವನ್ನು ಬಯಲು ಮಾಡಿದ್ದಾರೆ.
ಆರಂಭಿಕ ಪರೀಕ್ಷೆಗಳಲ್ಲಿ ವೈದ್ಯರಿಗೆ ಈ 38 ವರ್ಷದ ವ್ಯಕ್ತಿ ವಿಚಲನಗೊಂಡ ಸೆಪ್ಟಮ್ (septum) ಮತ್ತು ಕ್ಯಾಲ್ಸಿಫೈಡ್ ಸೆಪ್ಟಲ್ ಸ್ಪರ್ಸ್ (calcified septal spurs) ಅನ್ನು ಹೊಂದಿದ್ದಾರೆಂದು ಕಂಡುಹಿಡಿದರು. ಸೆಪ್ಟಮ್ ಎಂದರೆ ಮೂಗಿನ ಮಾರ್ಗಗಳ ನಡುವಿನ ತೆಳುವಾದ ಗೋಡೆಯಾಗಿದ್ದು, ಇದು ಒಂದು ಬದಿಗೆ ಸ್ಥಳಾಂತರಗೊಂಡಾಗ ವಿಚಲಿತ ಸೆಪ್ಟಮ್ ಎನಿಸುತ್ತದೆ.
ಈ ವ್ಯಕ್ತಿ ಈ ಸಮಸ್ಯೆಯಿಂದ ತನಗೆ ಯಾವುದೇ ಮುಖದ ವಿಕಾರತೆ ಅಥವಾ ಸಹಜತೆ ಎದುರಾಗಿಲ್ಲ ಎಂದು ವೈದ್ಯರಿಗೆ ಹೇಳಿದ್ದಾರೆ. ಆದಾಗ್ಯೂ ರೈನೋಸ್ಕೋಪಿ (rhinoscopy) ನಡೆಸಿದಾಗ ಈ ವಿಚಿತ್ರ ಕಾಯಿಲೆ ಬಯಲಾಗಿದೆ. ರೈನೋಸ್ಕೋಪಿಯಿಂದಾಗಿ ವ್ಯಕ್ತಿಯ ಬಲ ಮೂಗಿನ ಹೊಳ್ಳೆಯಲ್ಲಿ ಅಸಹಜವಾದ ಹಲ್ಲು (ectopic tooth) ಬೆಳೆಯುತ್ತಿದೆ ಎಂದು ತಿಳಿದು ಬಂದಿದೆ.
ಎಕ್ಟೊಪಿಕ್ ಎಂದರೆ ಅಸಹಜ ಸ್ಥಾನದಲ್ಲಿ ಅಥವಾ ಅಸಾಮಾನ್ಯ ರೀತಿಯಲ್ಲಿ ಸಂಭವಿಸುವ ವಿಚಾರವಾಗಿದೆ. ಈ ಅಸಹಜ ವೈದ್ಯಕೀಯ ಸ್ಥಿತಿಯ ವಿವರಗಳನ್ನು ಈಗ ವೈದ್ಯರಾದ ಸಾಗರ್ ಖನ್ನಾ (Sagar Khanna) ಮತ್ತು ಮೈಕೆಲ್ ಟರ್ನರ್ ( Michael Turner) ಅವರು ದಿ ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್‌ನಲ್ಲಿ (The New England Journal of Medicine) ಹಂಚಿಕೊಂಡಿದ್ದಾರೆ.