ರಾಜ್ಯದ ಹಲವು ಜಿಲ್ಲೆಗಳ ಬೇಡಿಕೆ ಇದ್ದರೂ ಧಾರವಾಡ ಜಿಲ್ಲೆಗೆ 26ನೇ ರಾಷ್ಟ್ರೀಯ ಯುವಜನೋತ್ಸವ ಆಯೋಜನೆಯ ಆತಿಥ್ಯ ಲಭಿಸಿದೆ. ಇದನ್ನು ಸಮರ್ಥವಾಗಿ ನಿರ್ವಹಿಸಿ, ಆತಿಥ್ಯ ನೀಡಬೇಕು. ಇದರಿಂದ ನಮ್ಮ ಜಿಲ್ಲೆಯ ಕೀರ್ತಿ ಹೆಚ್ಚುತ್ತದೆ ಎಂದು ಉಸ್ತುವಾರಿ ಸಚಿವರಾದ ಆಚಾರ ಹಾಲಪ್ಪ ಬಸಪ್ಪ ಅವರು ಹೇಳಿದರು.
ವರದಿ : ಪರಮೇಶ್ವರ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್
ಧಾರವಾಡ (ಜ.2): ರಾಜ್ಯದ ಹಲವು ಜಿಲ್ಲೆಗಳ ಬೇಡಿಕೆ ಇದ್ದರೂ ಧಾರವಾಡ ಜಿಲ್ಲೆಗೆ 26ನೇ ರಾಷ್ಟ್ರೀಯ ಯುವಜನೋತ್ಸವ ಆಯೋಜನೆಯ ಆತಿಥ್ಯ ಲಭಿಸಿದೆ. ಇದನ್ನು ಸಮರ್ಥವಾಗಿ ನಿರ್ವಹಿಸಿ, ಆತಿಥ್ಯ ನೀಡಬೇಕು. ಇದರಿಂದ ನಮ್ಮ ಜಿಲ್ಲೆಯ ಕೀರ್ತಿ ಹೆಚ್ಚುತ್ತದೆ ಎಂದು ಗಣಿ, ಭೂವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಸಚಿವರು ಮತ್ತು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಆಚಾರ ಹಾಲಪ್ಪ ಬಸಪ್ಪ ಅವರು ಹೇಳಿದರು.
ಅವರು ಇಂದು ಮಧ್ಯಾಹ್ನ ಧಾರವಾಡ ಸಕ್ಯೂರ್ಟ್ ಹೌಸದಲ್ಲಿ ಯುವಜನೋತ್ಸವ ನಿರ್ವಹಣಾ ಸಮಿತಿಗಳ ಮುಖ್ಯಸ್ಥರ ಹಾಗೂ ಹಿರಿಯ ಅಧಿಕಾರಿಗಳ ಸಭೆ ಜರುಗಿಸಿ ಮಾತನಾಡಿದರು.ರಾಷ್ಟ್ರೀಯ ಯುವಜನೋತ್ಸವದ ಆಯೋಜನೆ ಆತಿಥ್ಯ ನಮಗೆ ಸಿಕ್ಕಿರುವುದು ಸಂತಸ ತಂದಿದೆ. ಇಂತ ದೊಡ್ಡ ಕಾರ್ಯಕ್ರಮವನ್ನು ಯಾವುದೇ ಲೋಪವಾಗದಂತೆ ಯಶಸ್ವಿಗಾಗಿ ನಾವು ಸಂಘಟಿಸುತ್ತೇವೆ ಎಂಬ ನಂಬಿಕೆಯಿಂದ ಕೇಂದ್ರ ಸರ್ಕಾರ ನಮ್ಮ ಜಿಲ್ಲೆಗೆ ನೀಡಿದೆ. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ, ರಾಜ್ಯ ಕ್ರೀಡಾಕೂಟ, ಕುಸ್ತಿ ಹಬ್ಬಗಳ ಯಶಸ್ವು ನಮ್ಮ ಜವಾಬ್ದಾರಿ ಹೆಚ್ಚಿಸಿವೆ. ರಾಷ್ಟ್ರೀಯ ಯುವಜನೋತ್ಸವ ಯಶಸ್ವಿಗೊಳಿಸಲು ಎಲ್ಲ ಅಧಿಕಾರಿಗಳು ನಿರಂತರವಾಗಿಶ್ರಮಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವರು ತಿಳಿಸಿದರು.
ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ 17ಕ್ಕೂ ಹೆಚ್ಚು ಸಮಿತಿಗಳಿಗೆ ಯುವಜನೋತ್ಸವದ ಜವಾಬ್ದಾರಿಗಳನ್ನು ಹಂಚಲಾಗಿದೆ. ಅಧಿಕಾರಿಗಳು ತಮ್ಮ ಸಿದ್ಧತೆಗಳನ್ನು ಎರಡು ಮೂರು ದಿನ ಮೋದಲೇ ಪೂರ್ಣಗೊಳಿಸಿ, ವೇದಿಕೆ, ಮಳಿಗೆ ಮುಂತಾದ ಕಾಮಗಾರಿ ಗುತ್ತಿಗೆದಾರರಿಗೆ ಸ್ಥಳದಲ್ಲಿದ್ದು, ಮಾರ್ಗದರ್ಶನ ಮಾಡಿ, ಅವರ ಬೇಡಿಕೆಗಳಿಗೆ ತಕ್ಷಣ ಸ್ಪಂದಿಸಿ ಎಂದು ಅಧಿಕಾರಿಗಳಿಗೆ ಅವರು ಸೂಚಿಸಿದರು.
ಹೊರ ರಾಜ್ಯದಿಂದ ಬರುವ ಅತಿಥಿಗಳಿಗೆ, ಆಟಗಾರರಿಗೆ, ತೀರ್ವುಗಾರರಿಗೆ ಸೇವೆಯಲ್ಲಿ ಯಾವುದೇ ವ್ಯತ್ಯಾಯ ಅಥವಾ ತೋಂದರೆ ಆಗದಂತೆ ನಿಗಾವಹಿಸಿ, ಉತ್ತಮ ಸಾರಿಗೆ, ಭದ್ರತೆ ನೀಡಿ ಎಂದು ಸಚಿವರು ನಿರ್ದೇಶಿಸಿದರು. ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಯುವಜನೋತ್ಸವ ಸಿದ್ಧತೆಗಳನ್ನು ಸಚಿವರಿಗೆ ವಿವರಿಸಿದರು. ಆಹಾರ, ವಸತಿ, ಸಾರಿಗೆ, ವಿದ್ಯುತ್ ಅಲಂಕಾರ, ವೇದಿಕೆ, ಭದ್ರತಾ ಸಮಿತಿಗಳ ಮುಖ್ಯಸ್ಥರು ತಮ್ಮ ಸಮಿತಿ ಕಾರ್ಯ ಸಿದ್ಧತೆಗಳನ್ನು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೊಕೇಶ ಜಗಲಾಸರ್, ಜಿ.ಪಂ.ಸಿಇಓ ಡಾ.ಸುರೇಶ ಇಟ್ನಾಳ, ಅಪರ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿ, ಕವಿವಿ ಕುಲಸಚಿವ ಯಶಪಾಲ್ ಕ್ಷೀರಸಾಗರ, ಕೃವಿವಿ ಕುಲಸಚಿವ ಶಿವಾನಂದ ಕರಾಳೆ, ಹುಡಾ ಆಯುಕ್ತ ಸಂತೋಷ ಬಿರಾದಾರ ಸೇರಿದಂತೆ ವಿವಿಧ ಅಧಿಕಾರಿಗಳು ಭಾಗವಹಿಸಿದ್ದರು.ಸಭೆಯ ನಂತರ ಮಾದ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವರು, ಯುವಜನೋತ್ಸವದ ಸಿದ್ಧತೆ ತೃಪ್ತಿಕರವಾಗಿ ನಡೆದಿದೆ, ಯಶಸ್ವಿಗೊಳಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು ಜಿಲ್ಲೆಯ ರಸ್ತೆ ದುರಸ್ತಿ ಬಗ್ಗೆ ಗಮನ ಹರಿಸಿ ಶಾಸಕರ ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮರ್ಪಕ ನಿರ್ವಹಣೆಗೆ ನಿರ್ದೇಶಿಸಲಾಗುವುದು ಎಂದು ಸಚಿವರು ತಿಳಿಸಿದರು.
ಜಲ್ಲಿಕಲ್ಲು ಪೂರೈಕೆಯಲ್ಲಿ ಸ್ವಲ್ಪ ಮಟ್ಟಿನ ವ್ಯತ್ಯಯ ಉಂಟಾಗಿದೆ. ಕ್ರಶರ್ ಮಾಲೀಕರಿಗೆ ಅವರ ಬೇಡಿಕೆಗಳನ್ನು ಸಚಿವ ಸಂಪುಟದಲ್ಲಿ ಚರ್ಚಿಸಿ ತಿರ್ಮಾನಿಸಲಾಗುವುದೆಂದು ತಿಳಿಸಲಾಗಿದೆ. ಅವರು ಸಹ ಸಕಾರಾತ್ಮಕವಾಗಿ ಸ್ಪಂದಿಸುತ್ತಾರೆಂಬ ಭರವಸೆ ಇದೆ ಎಂದು ಸಚಿವರು ಹೇಳಿದರು.
Dharwad: ಸಚಿವೆ ಶಶಿಕಲಾ ಜೊಲ್ಲೆ ಒಡೆತನದ ಬೀರೇಶ್ವರ ಬ್ಯಾಂಕ್ ಗೆ ಕನ್ನ!
ಜಿಲ್ಲೆಯಲ್ಲಿ ಒಟ್ಟು 2,33,464 ಜಾನುವಾರುಗಳಿವೆ. ಚರ್ಮಗಂಟು ರೋಗಕ್ಕೆ ಇಲ್ಲಿಯವರೆಗೆ 7,994 ಜಾನುವಾರುಗಳು ಒಳಗಾಗಿದ್ದು, ಇದರಲ್ಲಿ 4,997 ಜಾನುವಾರುಗಳು ಚರ್ಮಗಂಟು ರೋಗದಿಂದ ಮುಕ್ತವಾಗಿದೆ. ಮತ್ತು 2,237 ಜಾನುವಾರುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಚರ್ಮಗಂಟು ರೋಗ ವಿರುದ್ಧ ರೋಗ ನೀರೋಧಕ ಶಕ್ತಿ ಹೆಚ್ಚಿಸುವ ಲಸಿಕೆಯನ್ನು ಇಲ್ಲಿಯವರಗೆ ಒಟ್ಟು 1,93,082 ಜಾನುವಾರುಗಳಿಗೆ ನೀಡಲಾಗಿದೆ. ಮತ್ತು ಜಿಲ್ಲೆಯಲ್ಲಿ 26,918 ರಷ್ಟು ಲಸಿಕೆ ದಾಸ್ತಾನು ಇದ್ದು, ಜಾನುವಾರಗಳಿಗೆ ಲಸಿಕೆ ಕೊಡುವ ಕಾರ್ಯ ಪ್ರಗತಿಯಲ್ಲಿದೆ ಎಂದು ಸಚಿವರು ತಿಳಿಸಿದರು.
Dharwad : ರಾಷ್ಟ್ರೀಯ ಭಾವೈಕ್ಯದ ಸಂಕೇತವಾಗಿ ರಾಷ್ಟ್ರೀಯ ಯುವಜನೋತ್ಸವ
ಇಲ್ಲಿವರಗೆ ಒಟ್ಟು 760 ಜಾನುವಾರುಗಳು ಚರ್ಮಗಂಟು ರೋಗದಿಂದ ಮರಣ ಹೊಂದಿದ್ದು, ಇದರಲ್ಲಿ 457 ಜಾನುವಾರುಗಳ ಮಾಲೀಕರಿಗೆ ಸರ್ಕಾರದಿಂದ ಪರಿಹಾರಧನ ನೀಡಲಾಗಿದೆ. ಉಳಿದ ಜಾನುವಾರಗಳ ಮಾಲೀಕರಿಗೂ ಪರಿಹಾರ ವಿತರಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ಸಚಿವ ಆಚಾರ ಹಾಲಪ್ಪ ಬಸಪ್ಪ ಅವರು ತಿಳಿಸಿದರು.