ಮಂಗಳೂರಿನಲ್ಲಿ ರಾಜ್ಯದ ಮೊದಲ ಸ್ಮಾರ್ಟ್ ಬಸ್ ಸ್ಟ್ಯಾಂಡ್, ವೈಫೈ, ಎಸ್ಓಎಸ್ ಸೇರಿ ಫುಲ್ ಡಿಜಿಟಲ್!

By Suvarna News  |  First Published Jan 2, 2023, 7:09 PM IST

 ರಾಜ್ಯದಲ್ಲೇ ಪ್ರಥಮ ಹೈಟೆಕ್ ಸ್ಮಾರ್ಟ್ ಆಂಡ್ ಡಿಜಿಟಲ್ ಬಸ್ ನಿಲ್ದಾಣವನ್ನು ಮಂಗಳೂರಿನ ಸುರತ್ಕಲ್ ಗೋವಿಂದ ದಾಸ್ ಕಾಲೇಜ್ ಮುಂಭಾಗ ಲೋಕಾರ್ಪಣೆಯಾಗಿದ್ದು, ಹತ್ತು ಹಲವು ಡಿಜಿಟಲ್ ತಂತ್ರಜ್ಞಾನ ಹೊಂದಿರೋ ಈ ಬಸ್ ನಿಲ್ದಾಣ ರಾಜ್ಯದ ಮೊದಲ ಹೈಟೆಕ್ ಬಸ್ ನಿಲ್ದಾಣ ಎಂಬ ಹೆಗ್ಗಳಿಕೆ ಪಡೆದಿದೆ.


ವರದಿ: ಭರತ್ ರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್

ಮಂಗಳೂರು (ಡಿ.2): ರಾಜ್ಯದಲ್ಲೇ ಪ್ರಥಮ ಹೈಟೆಕ್ ಸ್ಮಾರ್ಟ್ ಆಂಡ್ ಡಿಜಿಟಲ್ ಬಸ್ ನಿಲ್ದಾಣವನ್ನು ಮಂಗಳೂರಿನ ಸುರತ್ಕಲ್ ಗೋವಿಂದ ದಾಸ್ ಕಾಲೇಜ್ ಮುಂಭಾಗ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ.ವೈ. ಭರತ್ ಶೆಟ್ಟಿ ಉದ್ಘಾಟಿಸಿದರು. ಹತ್ತು ಹಲವು ಡಿಜಿಟಲ್ ತಂತ್ರಜ್ಞಾನ ಹೊಂದಿರೋ ಈ ಬಸ್ ನಿಲ್ದಾಣ ರಾಜ್ಯದ ಮೊದಲ ಹೈಟೆಕ್ ಬಸ್ ನಿಲ್ದಾಣ ಎಂಬ ಹೆಗ್ಗಳಿಕೆ ಪಡೆದಿದೆ.

Tap to resize

Latest Videos

Shivamogga News: ಇನ್ಮೇಲೆ ಕಂಡಲ್ಲೆಲ್ಲ ಕೈಎತ್ತಿದ್ರೆ ಸಿಟಿ ಬಸ್ ನಿಲ್ಲಲ್ಲ; ಬಸ್ ನಿಲ್ದಾಣಕ್ಕೆ ಜಾಗ ಗುರುತು

ಉಚಿತ ವೈಫೈ ಇಂಟರ್ ನೆಟ್ ಸೌಲಭ್ಯ, ಮೂರು ಸಿಸಿ ಕೆಮರಾ, ಶುದ್ಧೀಕರಿಸಿದ ನೀರು
ಎಫ್ ಎಂ ರೇಡಿಯೋ, ಇನ್ವರ್ಟರ್ ವ್ಯವಸ್ಥೆ, ಎಸ್ ಓ ಎಸ್ ಬಟನ್, ಸಿಟಿ ಎಕ್ಸ್ ಸೂಪರ್ ಆಪ್, 2 ಫ್ಯಾನ್, ಪ್ರಥಮ ಚಿಕಿತ್ಸೆ ಪೆಟ್ಟಿಗೆ, 12 ಆಸನ ವ್ಯವಸ್ಥೆ, ಅಗ್ನಿಶಮನ ವ್ಯವಸ್ಥೆ, ಎಲ್ ಇ ಡಿ ಬೆಳಕಿನ ವ್ಯವಸ್ಥೆ, ಸೆಲ್ಫಿ ಪಾಯಿಂಟ್ ಮೊಬೈಲ್, ಲ್ಯಾಪ್ ಟಾಪ್ ಚಾರ್ಜಿಂಗ್ ಪಾಯಿಂಟ್, ಯೂಸ್ ಮಿ ಬಾಕ್ಸ್ ಈ ಬಸ್ ನಿಲ್ದಾಣದಲ್ಲಿದೆ. ಯಾವುದೇ ಅಪಾಯ ಎದುರಾದರೂ ಎಸ್ ಓ ಎಸ್ ಬಟನ್ ಒತ್ತಿದರೆ ಸೈರನ್ ಮೊಳಗುತ್ತದೆ‌. ಅಲ್ಲದೇ ಎಸಿಪಿ, ಸುರತ್ಕಲ್ ಇನ್ಸ್ಪೆಕ್ಟರ್, ಪಿಎಸ್ಸೈ ಮತ್ತು ಠಾಣೆಗೆ ಲೊಕೇಶನ್ ಸಹಿತ ಸಂದೇಶ ರವಾನೆಯಾಗುತ್ತದೆ. ಈ ವೇಳೆ ಅಳವಡಿಸಿರೋ ಸಿಸಿ ಕ್ಯಾಮರಾದ ಫೂಟೇಜ್ ಮಾಹಿತಿ ಕೂಡ ಪೊಲೀಸರನ್ನ ತಲುಪಲಿದೆ‌. ಅಲ್ಲದೇ ಟಚ್ ಸ್ಕ್ರೀನ್ ಮೂಲಕ ಬಸ್ ಗಳ ಮಾಹಿತಿ, ಸಮಯ ಹಾಗೂ ಲೊಕೇಶನ್ ಮಾಹಿತಿಗಳು ಮತ್ತು ಸ್ಥಳೀಯ ಪ್ರವಾಸಿ ಸ್ಥಳಗಳ ಮಾಹಿತಿ ಲಭ್ಯವಾಗಲಿದೆ.

Bus Accident: ಮಗುಚಿಬಿದ್ದ ಶೈಕ್ಷಣಿಕ ಪ್ರವಾಸದ ಬಸ್: ಐವರು ವಿದ್ಯಾರ್ಥಿಗಳ ಸ್ಥಿತಿ ಗಂಭೀರ

ಹೆಣ್ಮಕ್ಕಳ ರಕ್ಷಣೆಗೆ ತಂತ್ರಜ್ಞಾನ: ಡಾ.ಭರತ್ ಶೆಟ್ಟಿ
ಈ ವೇಳೆ ಮಾತಾಡಿದ ಶಾಸಕ ಭರತ್ ಶೆಟ್ಟಿ, "ಸ್ಮಾರ್ಟ್ ಆಂಡ್ ಡಿಜಿಟಲ್ ಸುರತ್ಕಲ್" ಯೋಜನೆಯಡಿಯಲ್ಲಿ ಸುರತ್ಕಲ್ ಗೋವಿಂದ ದಾಸ್ ಕಾಲೇಜ್ ಮುಂಭಾಗ ರಾಜ್ಯದಲ್ಲೇ ಪ್ರಥಮವಾಗಿ ಸರ್ವ ರೀತಿಯಲ್ಲೂ ಸುಸಜ್ಜಿತವಾದ ಹೈಟೆಕ್ ಬಸ್ ನಿಲ್ದಾಣವನ್ನು ಲೋಕಾರ್ಪಣೆಗೊಳಿಸಲಾಗಿದೆ. ಶುದ್ಧ ಕುಡಿಯುವ ನೀರು, ಸಿಸಿ ಕೆಮರಾ ವ್ಯವಸ್ಥೆ ಸೇರಿದಂತೆ, ಮಹಿಳೆಯರು ಮತ್ತು ಹೆಣ್ಣುಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ತುರ್ತು ಸಂದರ್ಭದಲ್ಲಿ ನೇರವಾಗಿ ಸ್ಥಳೀಯ ಪೊಲೀಸ್ ಅಧಿಕಾರಿಗಳ ಮೊಬೈಲ್ ಗೆ ಸಂಪರ್ಕ ಕಲ್ಪಿಸುವಂತೆ ಎಮರ್ಜನ್ಸಿ ಕರೆ ವ್ಯವಸ್ಥೆಯನ್ನೂ ಮಾಡಲಾಗಿದೆ. ಯೋಜನೆಯ ಮುಂದುವರಿದ ಭಾಗವಾಗಿ ಸುರತ್ಕಲ್ ಬೀಚ್ ನಲ್ಲಿ ಪ್ರವಾಸಿಗರ ವಿಹಾರಕ್ಕೆ ಪಾರ್ಕ್, ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ. ಜನರು ಇವುಗಳನ್ನು ಯೋಗ್ಯ ರೀತಿಯಲ್ಲಿ ಬಳಸುವ ಮೂಲಕ ಸ್ವಚ್ಛತೆಯ ಕಡೆಗೆ ಗಮನ ನೀಡುವಂತಾಗಬೇಕು ಎಂದರು.

click me!