ವಿಜಯಪುರ ನಗರದಲ್ಲಿ ಬೀದಿ ನಾಯಿಗಳ ಹಾವಳಿ ಶುರುವಾಗಿದೆ. ಬಡಿ ಕಮಾನ್ ಏರಿಯಾದಲ್ಲಿ, ಕಳೆದ ಒಂದು ತಿಂಗಳಿನಿಂದ ಬೀದಿನಾಯಿಗಳ ಹಾವಳಿ ಹೆಚ್ಚಾಗಿದ್ದು ಜನರು ಭಯಬೀತರಾಗಿದ್ದಾರೆ. ಅದ್ರಲ್ಲು ನಿನ್ನೆ ಒಂದೆ ದಿನವೇ ಸುರ್ಕಿ ಗಾರ್ಡನ್ ಏರಿಯಾದ 3 ಮಕ್ಕಳ ಮೇಲೆ ಬೀದಿನಾಯಿಗಳು ಏರಗಿದ್ದು ಪೋಷಕರನ್ನ ದಿಗ್ಭ್ರಾಂತಗೊಳಿಸಿದೆ.
ಷಡಕ್ಷರಿ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್
ವಿಜಯಪುರ(ನ.28): ಬೀದಿ ನಾಯಿಗಳ ಹಾವಳಿಗೆ ಗುಮ್ಮಟನಗರಿ ಜನ ಬೆಚ್ಚಿ ಬಿದ್ದಿದ್ದಾರೆ. ಮಕ್ಕಳನ್ನ ಶಾಲೆಗಳಿಗೆ ಕಳಿಸೋದಕ್ಕು ಹಿಂದೆಟು ಹಾಕ್ತಿದ್ದಾರೆ. ಮಕ್ಕಳು ಮನೆ ಬಿಟ್ಟು ಆಚೆ ಹೋದ್ರೆ ಏನಾಗುತ್ತೋ ಏನೋ ಅಂತಾ ಪೋಷಕರು ಭಯದಲ್ಲೆ ಕಾಲ ಕಳೆಯುತ್ತಿದ್ದಾರೆ. ಕಾರಣ ಒಂದೆ ದಿನ ಮೂವರು ಮಕ್ಕಳ ಮೇಲೆ ಬೀದಿನಾಯಿಗಳ ಹಿಂಡು ದಾಳಿ ಇಟ್ಟಿದ್ದು, ಕ್ರಮಕೈಗೊಳ್ಳದ ಪಾಲಿಕೆ ವಿರುದ್ಧ ಆಕ್ರೋಶ ಹೊರಹಾಕ್ತಿದ್ದಾರೆ.
ಶಾಲಾ ಮಕ್ಕಳ ಮೇಲೆ ಏರಗಿದ ಶ್ವಾನಗಳು, ಭಯದಲ್ಲಿ ಪೋಷಕರು.!
ವಿಜಯಪುರ ನಗರದಲ್ಲಿ ಬೀದಿ ನಾಯಿಗಳ ಹಾವಳಿ ಶುರುವಾಗಿದೆ. ಬಡಿ ಕಮಾನ್ ಏರಿಯಾದಲ್ಲಿ, ಕಳೆದ ಒಂದು ತಿಂಗಳಿನಿಂದ ಬೀದಿನಾಯಿಗಳ ಹಾವಳಿ ಹೆಚ್ಚಾಗಿದ್ದು ಜನರು ಭಯಬೀತರಾಗಿದ್ದಾರೆ. ಅದ್ರಲ್ಲು ನಿನ್ನೆ ಒಂದೆ ದಿನವೇ ಸುರ್ಕಿ ಗಾರ್ಡನ್ ಏರಿಯಾದ 3 ಮಕ್ಕಳ ಮೇಲೆ ಬೀದಿನಾಯಿಗಳು ಏರಗಿದ್ದು ಪೋಷಕರನ್ನ ದಿಗ್ಭ್ರಾಂತಗೊಳಿಸಿದೆ. ಮರಿಯಮ್ ಮುಲ್ಲಾ (೭), ಮಾಹಿರಾ (೪), ಮಹಮ್ಮದ್ ಶಾಬೀರ್ (೬) ಮೂರು ಮಕ್ಕಳು ಭಯಾನಕ ರೀತಿಯಲ್ಲಿ ಗಾಯಗೊಂಡಿದ್ದಾರೆ, ಪೋಷಕರ ಮುಂಜಾಗೃತೆಯಿಂದ ಮಕ್ಕಳು ಸಾವಿನ ದವಡೆಯಿಂದ ಪಾರಾಗಿವೆ.
ವಾಲ್ಮೀಕಿ ಗುರುಪೀಠದ ಶ್ರೀಗಳನ್ನು 3 ಗಂಟೆ ಕೂಡಿಹಾಕಿದ ಭಕ್ತರು: ತಬ್ಬಿಬ್ಬಾದ ಪ್ರಸನ್ನಾನಂದ ಸ್ವಾಮೀಜಿ
ಬಡಿ ಕಮಾನ್ ಏರಿಯಾದಲ್ಲೆ ಶ್ವಾನಾರ್ಭಟ..!
ನಗರದ ಬಡಿ ಕಮಾನ್ ಏರಿಯಾದ ಬಾಗಾಯತ್ ಗಲ್ಲಿ, ಜಾಮಿಮಾ ಮಸೀದಿ, ಆಸಾರ್ ಗಲ್ಲಿ, ದೌಲತ್ ಕೋಟೆ ಸೇರಿದಂತೆ ಹಲವೆಡೆ ನಾಯಿಗಳ ಹಾವಳಿ ವಿಪರಿತವಾಗಿದೆ. ಮಕ್ಕಳು ಶಾಲೆಗೆ ಹೊರಟರೆ ನಾಯಿಗಳು ಬೆನ್ನಟ್ಟುತ್ತಿವೆ. ಈಗ ನಾಯಿ ಹಾವಳಿಯಿಂದ ಮಕ್ಕಳನ್ನ ಶಾಲೆಗೆ ಕಳಿಸೋದಕ್ಕು ಪೋಷಕರು ಹೆದರುತ್ತಿದ್ದಾರೆ.
ಒಂದು ತಿಂಗಳಿನಿಂದ ನಾಯಿಗಳ ಹಾವಳಿ ; ಶಾಲಾ ಮಕ್ಕಳೇ ಟಾರ್ಗೆಟ್..!
ಇನ್ನು ಕಳೆದ ಒಂದು ತಿಂಗಳಿನಿಂದ ನಾಯಿಗಳ ಹಾವಳಿ ಮಿತಿಮೀರಿದೆ. ಮಕ್ಕಳು ಶಾಲೆಗೆ ಹೊರಟ ಸಂದರ್ಭದಲ್ಲಿಯೇ ನಾಯಿಗಳು ದಾಳಿ ಇಡ್ತೀವೆ. ಇದಕ್ಕೆ ಸಾಕ್ಷಿ ಎನ್ನುವಂತೆ ಮಕ್ಕಳು ಶಾಲೆಗೆ ಹೊರಟಿರುವ ಸಮಯದಲ್ಲಿ ನಾಯಿಗಳು ಹಿಂಡಾಗಿ ಬೆನ್ನಟ್ಟುವ ದೃಶ್ಯಗಳು ಸಹಿತ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿವೆ. ಬಾಲಕಿಯೊಬ್ಬಳು ಶಾಲೆಗೆ ಹೊರಟಿದ್ದ ವೇಳೆ ಅಟ್ಟಿಸಿಕೊಂಡು ಬಂದ ನಾಯಿಗಳ ಹಿಂಡು ಅಟ್ಯಾಕ್‌ಗೆ ಯತ್ನಿಸಿವೆ. ಆದ್ರೆ ಬಾಲಕಿ ಮನೆಯೊಂದರ ಗೇಟ್‌ಗೆ ನುಗ್ಗಿ ಬಚಾವ್ ಆಗಿದ್ದಾಳೆ.
ಕಾಂಗ್ರೆಸ್ ಗ್ಯಾರಂಟಿ ಬಂದು ನಮ್ಮನೆಲ್ಲ ಸತ್ಯಾನಾಶ ಮಾಡಿದೆ: ಶಾಸಕ ಯತ್ನಾಳ
ಹೆಚ್ಚಾದ ಮಟನ್ ಸ್ಟಾಲ್ ನಾಯಿ ಹಾವಳಿಗೆ ಕಾರಣ ; ಆರೋಪ..!
ನಾಯಿ ಹಾವಳಿ ಕುರಿತಾಗಿ ಪಾಲಿಕೆ ಅಧಿಕಾರಿಗಳಿಗೆ ಕಳೆದ ತಿಂಗಳೆ ಬಡಿ ಕಮಾನ್ ಏರಿಯಾದ ಜನರು ನಾಯಿ ಹಾವಳಿ ನಿಯಂತ್ರಣಕ್ಕೆ ಮನವಿ ನೀಡಿದ್ರು, ಅಧಿಕಾರಿಗಳು ಖ್ಯಾರೆ ಎಂದಿಲ್ಲವಂತೆ. ಇನ್ನು ಸುರ್ಕಿ ಗಾರ್ಡನ್, ಬಾಗಾಯತ್ ಗಲ್ಲಿ ಸೇರಿ ಬಡಿ ಕಮಾನ್ ಏರಿಯಾದಲ್ಲಿ ಹೆಚ್ಚಿದ ಮಟನ್ ಅಂಗಡಿಗಳಿಂದಾಗಿಯೂ ನಾಯಿಗಳ ಹಾವಳಿ ಹೆಚ್ಚಾಗಿದೆ ಎನ್ನುವ ಆರೋಪವನ್ನ ಸ್ಥಳೀಯರು ಮಾಡ್ತಿದ್ದಾರೆ. ಪಾಲಿಕೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ನಾಯಿಗಳನ್ನ ಹಿಡಿದು ನಿರ್ಜನ ಪ್ರದೇಶಕ್ಕೆ ಬಿಡುವಂತೆ ಶಾಲಾ ಮಕ್ಕಳ ಪೋಷಕರು ಆಗ್ರಹಿಸಿದ್ದಾರೆ.
ಸ್ಥಳಗಿತಗೊಂಡಿರುವ ನಾಯಿ ಹಿಡಿಯುವ ಕಾರ್ಯಾಚರಣೆ..!
ನಾಯಿಗಳ ಹಾವಳಿ ಈ ಪರಿ ಹೆಚ್ಚುವುದಕ್ಕೆ ಕಾರಣವು ಇದೆ. ಈ ಮೊದಲು ಪಾಲಿಕೆ ಅಧಿಕಾರಿಗಳು ಶ್ವಾನಗಳ ನಿಯಂತ್ರಣಕ್ಕಾಗಿ ನಡೆಸುತ್ತಿದ್ದ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆಯಂತೆ. ಹೀಗಾಗಿ ಕಂಡು ಕಂಡಲ್ಲಿ ಶ್ವಾನಗಳು ಹಿಂಡು ಹಿಂಡಾಗಿ ಅಡ್ಡಾಡುತ್ತಿವೆ ಎನ್ನಲಾಗಿದೆ. ಅಮಾಯಕ ಜೀವಗಳು ಬಲಿಯಾಗೋ ಮುನ್ನ ಅಧಿಕಾರಿಗಳು ಕ್ರಮ ಜರುಗಿಸಬೇಕಿದೆ.