ಚಿತ್ರದುರ್ಗ: ಹೂವಿನ ದರ ಕುಸಿತ ಕಂಗಾಲಾದ ಅನ್ನದಾತ..!

By Girish Goudar  |  First Published Nov 28, 2023, 8:24 PM IST

ಮಳೆ ಬಾರದೇ ಬರಗಾಲದಿಂದ ತತ್ತರಿಸಿ ಹೋಗಿರೋ  ಬರದನಾಡು ಚಿತ್ರದುರ್ಗ ಜಿಲ್ಲೆಯ ಅನ್ನದಾತರಿಗೆ ಹೂವಿನ ದರ ಕುಸಿತ ಮತ್ತಷ್ಟು ಸಂಕಷ್ಟ ತಂದಿದೆ. 


ಕಿರಣ್.ಎಲ್. ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿತ್ರದುರ್ಗ

ಚಿತ್ರದುರ್ಗ(ನ.28):  ಈಗಾಗಲೇ‌ ಬರಗಾಲದಿಂದ ತತ್ತಿರಿಸಿರೋ ಅನ್ನದಾತನಿಗೆ ಹೂವಿನ ದರ ಕುಸಿತ ಗಾಯದ ಮೇಲೆ ಬರೆ ಎಳೆದಂತಾಗಿದೆ. ನೊಂದ ರೈತ ಟ್ರಾಕ್ಟರ್ ಮೂಲಕ ಬೆಳೆ ನಾಶ ಮಾಡಿರೋ ಘಟನೆ ಕೋಟೆನಾಡು ಚಿತ್ರದುರ್ಗದ ಕ್ಯಾದಿಗೆರೆಯಲ್ಲಿ ನಡೆದಿದೆ. ಈ ಕುರಿತು ವರದಿ ಇಲ್ಲಿದೆ‌‌‌‌‌. 

Latest Videos

undefined

ಮಳೆ ಬಾರದೇ ಬರಗಾಲದಿಂದ ತತ್ತರಿಸಿ ಹೋಗಿರೋ  ಬರದನಾಡು ಚಿತ್ರದುರ್ಗ ಜಿಲ್ಲೆಯ ಅನ್ನದಾತರಿಗೆ ಹೂವಿನ ದರ ಕುಸಿತ ಮತ್ತಷ್ಟು ಸಂಕಷ್ಟ ತಂದಿದೆ. ಹೀಗೆ, ಜಮೀನಿನಲ್ಲಿ ಬೆಳೆದಿರೋ ಹೂವನ್ನು ನೋವಿನಿಂದ ಟ್ರಾಕ್ಟರ್ ಮೂಲಕ ನಾಶ ಪಡಸ್ತಿರೋ ರೈತನ ಹೆಸರು ಮಂಜುನಾಥ್. ಚಿತ್ರದುರ್ಗ ತಾಲ್ಲೂಕಿನ ಕ್ಯಾದಿಗೆರೆ ಗ್ರಾಮದ ರೈತ, ಸುಮಾರು ೨ ಎಕರೆಯಲ್ಲಿ ಬೆಳೆದಿದ್ದ ಸೇವಂತಿಗೆ ಹೂವನ್ನು ದರ ಬೆಂಬಲ ಬೆಲೆ ಸಿಗದೇ, ದರ ಕುಸಿದಿರೋ ಕಾರಣ ನಾಶ ಪಡಿಸ್ತಿದ್ದಾರೆ. ಲಕ್ಷಾಂತರ ರೂಪಾಯಿ ಸಾಲ ಸೂಲ ಮಾಡಿ ಹೂವನ್ನು ಬೆಳೆದಿದ್ದೆವು. ಕಳೆದ ವರಮಹಾಲಕ್ಷ್ಮಿ ಹಬ್ಬದಿಂದಲೂ ಹೂವಿನ ಸೂಕ್ತ ಬೆಲೆ ಸಿಗಲಿಲ್ಲ. ಮಾರುಕಟ್ಟೆಗೆ ತೆಗೆದುಕೊಂಡು ಹೋದ್ರೆ ನೋ ಸೇಲ್ ಎಂದು ಹರಾಜು ಹಾಕುತ್ತಿದ್ದರು. ಇದ್ರಿಂದಾಗಿ ಬೇಸತ್ತು ಕೂಲಿ ಕೆಲಸಕ್ಕೆ ಬರುವ ಜನರಿಗೂ ಹಣ ನೀಡಲು ಕಷ್ಟವಾಗಿದ್ದಕ್ಕೆ ಇಂದು ಟ್ರಾಕ್ಟರ್ ಮೂಲಕ ಹೂವನ್ನು ನಾಶ ಪಡಿಸ್ತಿದ್ದೀವಿ. ಇನ್ನಾದ್ರು ಸರ್ಕಾರ ಹೂವು ಬೆಳೆಗಾರರ ಕಷ್ಟಕ್ಕೆ ಸ್ಪಂದಿಸಲು ಎಂಬುದು ನಮ್ಮ ಆಗ್ರಹ ಅಂತಾರೆ ನೊಂದ ರೈತ ಮಂಜುನಾಥ್.

ಇಸ್ಲಾಂ ಎಲ್ಲ ಧರ್ಮದ ಜೊತೆಗೆ ಹೊಂದಿಕೊಂಡು ಹೋಗುವುದನ್ನು ಕಲಿಸುತ್ತೆ: ವಕ್ಫ್ ಬೋರ್ಡ್ ರಾಜ್ಯಾಧ್ಯಕ್ಷ ಅನ್ವರ್ ಬಾಷಾ

ಸುಮಾರು ವರ್ಷಗಳಿಂದಲೂ ಈ ಭಾಗದ ರೈತರು ಹೂವಿನ ಬೆಳೆಯನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿದ್ದೇವೆ. ಪ್ರತೀ ವರ್ಷ ಅಷ್ಟೋ, ಇಷ್ಟೋ ಲಾಭ ಬರ್ತಿತ್ತು. ಆದ್ರೆ ಈ ಬಾರಿ ಬಂದಂತಹ ಸಂಕಷ್ಟ ಯಾವ ವರ್ಷವೂ ನಮಗೆ ಬಂದಿಲ್ಲ. ಮೊದಲಿಂದಲೂ ಸೂಕ್ತ ಬೆಂಬಲ ಬೆಲೆ ಹೂವಿಗೆ ಸಿಗಲಿಲ್ಲ. ಬರೀ ನಷ್ಟದಿಂದಲೇ ಜೀವನ ಸಾಗಿಸುವ ಪರಿಸ್ಥಿತಿ ಬಂದಿತು. ಯಾವ ಸರ್ಕಾರಗಳು ಹೂವಿನ ಬೆಳೆಗಾರರ ಕಷ್ಟಕ್ಕೆ ಯಾವತ್ತೂ ಸ್ಪಂದಿಸಿಲ್ಲ. ರಾಜ್ಯದ ಬಹುತೇಕ ಹೂವು ಬೆಳೆಗಾರರು ಇಂದು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇನ್ನಾದ್ರು ಸರ್ಕಾರ ರೈತರ ಸಮಸ್ಯೆಗೆ ಸ್ಪಂದಿಸಿ ಯಾವುದಾದ್ರು ರೂಪದಲ್ಲಿ ಸಹಾಯ ಮಾಡಲಿ ಎಂದು ರೈತರ ಸತೀಶ್ ಒತ್ತಾಯಿಸಿದರು.

ಒಟ್ಟಾರೆ ಸರಿಯಾದ ಸಮಯಕ್ಕೆ ಮಳೆ ಬಾರದೇ ಬೆಳೆ ಕಳ್ಕೊಂಡಿರೋ ರೈತರು ಹೂವಿನ ಬೆಳೆಯಲ್ಲಿ ಅಲ್ಪ ಸ್ವಲ್ಪ ಲಾಭದ ನಿರೀಕ್ಷೆಯಲ್ಲಿದ್ದರು. ಆದ್ರೆ ಅದು ಕೂಡ ಕೈಕೊಟ್ಟಿದ್ದು ರೈತರ ಕಷ್ಟ ಹೇಳತೀರದಂತಾಗಿದೆ......

click me!