ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ:ಲಾಸ್ಟ್‌ಮೈಲ್ ಕನೆಕ್ಟಿವಿಟಿಗೆ ಆ್ಯಪ್ ರಹಿತ ಮೆಟ್ರೋಮಿತ್ರ ಆಟೋ ಸೇವೆ ಆರಂಭ

By Sathish Kumar KH  |  First Published Nov 28, 2023, 8:38 PM IST

ಬೆಂಗಳೂರಿನ ಮೆಟ್ರೋ ನಿಲ್ದಾಣಗಳಿಂದ ನಿಮ್ಮ ಮನೆ ಅಥವಾ ವಿವಿಧ ಸ್ಥಳಗಳಿಗೆ ತೆರಳಲು ಆ್ಯಪ್ ರಹಿತ ಮೆಟ್ರೋಮಿತ್ರ ಆಟೋ ಸೇವೆಯನ್ನು ಆರಂಭಿಸಲಾಗಿದೆ.


ಬೆಂಗಳೂರು (ನ.28): ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮೆಟ್ರೋ ನಿಲ್ದಾಣದಿಂದ ಕೊನೆಯ ಸ್ಥಳದವರೆಗೆ ತಲುಪಲು ಅನುಕೂಲ ಆಗುವಂತೆ ಸರ್ಕಾರದಿಂದ ಮೆಟ್ರೋ ಫೀಡರ್ ಬಸ್‌ ಸೇವೆ ಆರಂಭಿಸಲಾಗಿದೆ. ಆದರೆ, ಫೀಡರ್ ಬಸ್‌ಗಳು ಹೋಗಲಾಗದ ಜಾಗದಲ್ಲಿ ಪ್ರಯಾಣಿಕರು ಹೋಗಲು ಅನುಕೂಲ ಆಗುವಂತೆ ಮೆಟ್ರೋ ಮಿತ್ರ ಆಟೋಗಳ ಸೇವೆಯನ್ನು ಮೆಟ್ರೋ ನಿಲ್ದಾಣಗಳಲ್ಲಿ ಆರಂಭಿಸಲಾಗಿದೆ. ಈ ಆಟೋಗಳು ಆ್ಯಪ್ ರಹಿತ ಸೇವೆ ನೀಡುತ್ತಿದ್ದು ಸ್ಕ್ಯಾನ್ ಮಾಡುವ ಮೂಲಕ ಸುಲಭವಾಗಿ ಆಟೋಗಳನ್ನು ಬುಕಿಂಗ್ ಮಾಡಬಹುದು.

ಈಗಾಗಲೇ ಬೆಂಗಳೂರಿನಲ್ಲಿ ನಮ್ಮ ಯಾತ್ರಿ, ಓಲಾ, ಉಬರ್ ಸೇರಿದಂತೆ ಹಲವು ಆ್ಯಪ್ ಸೇವೆ ಆಧಾರಿತ ಆಟೋಗಳು ಪ್ರಯಾಣಿಕರಿಗೆ ಸೇವೆಯನ್ನು ನೀಡುತ್ತಿವೆ. ಆದರೆ, ಈಗ ಆ್ಯಪ್ ರಹಿತವಾಗಿ ಸ್ಕ್ಯಾನ್‌ ಕೋಡ್ ಮೂಲಕ ಲಭ್ಯವಾಗುವ ಲಿಂಕ್ ಮೇಲೆ ಕ್ಲಿಕ್‌ ಮಾಡಿ ಸುಲಭವಾಗಿ ಆಟೋಗಳನ್ನು ಬುಕಿಂಗ್‌ ಮಾಡಲು ಅವಕಾಶವಿರುವ ಮೆಟ್ರೋ ಮಿತ್ರ ಆಟೋ ಸೇವೆಯನ್ನು ಆರಂಭಿಸಲಾಗಿದೆ. ಈಗಾಗಲೆ ಹಲವು ಮೆಟ್ರೋ ನಿಲ್ದಾಣಗಳಲ್ಲಿ ಮೆಟ್ರೋ ಮಿತ್ರ ಆಟೋ ಸೇವೆಗಳನ್ನ ಆರಂಭಿಸಲಾಗಿದ್ದು, ಪ್ರಯಾಣಿಕರಿಗೂ ಅನುಕೂಲ ಆಗುತ್ತಿದೆ.

Latest Videos

undefined

ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿದ ಶಾಸಕ ಬಿ.ಆರ್. ಪಾಟೀಲ್ ರಾಜಿನಾಮೆ ಪ್ರಸ್ತಾಪ

ಬೆಂಗಳೂರಿನಲ್ಲಿ ಬೆಳಗ್ಗೆ 5 ಗಂಟೆಯಿಂದ ರಾತ್ರಿ 11 ಗಂಟೆವರೆಗೂ ಮೆಟ್ರೋ ರೈಲು ಸೇವೆ ಲಭ್ಯವಿರುತ್ತದೆ. ಈಗಾಘಲೇ ಸುಮಾರು 73 ಕಿ.ಮೀ.ಗಿಂತ ಅಧಿಕ ಉದ್ದ ಮಾರ್ಗದಲ್ಲಿ ನಮ್ಮ ಮೆಟ್ರೋ ನೇರಳೆ ಮತ್ತು ಹಸಿರು ಮಾರ್ಗಗಳಲ್ಲಿ ಪ್ರಯಾಣಿಕರಿಗೆ ಟ್ರಾಫಿಕ್ ರಹಿತ ಪ್ರಯಾಣ ಸೇವೆಯನ್ನು ನೀಡಲಾಗುತ್ತಿದೆ. ಇದರಿಂದ ಸಮಯ, ಹಣ ಎಲ್ಲವೂ ಉಳಿತಾಯ ಆಗುತ್ತಿದೆ. ಮೆಟ್ರೋ ರೈಲು ಇಳಿದ ನಂತರ ಮೆಟ್ರೋ ನಿಲ್ದಾಣದಿಂದ ಮನೆಗೆ ಹೋಗಲು ಬಸ್‌ಗಳನ್ನು ಹತ್ತಿ ಹೋಗಬೇಕು. ಆದರೆ, ಬಸ್‌ ಸಂಚಾರ ಮಾಡಲಾಗದ ಸ್ಥಳದಲ್ಲಿ ಬೆಳ್ಳಂಬೆಳಗ್ಗೆ ಹಾಗೂ ರಾತ್ರಿ 9 ಗಂಟೆಯ ನಂತರ ಪ್ರಯಾಣಿಕರು ನಡೆದುಕೊಂಡು ಹೋಗಲು ಸಮಸ್ಯೆ ಆಗುತ್ತದೆ. ಹೀಗಾಗಿ, ಮೆಟ್ರೋ ನಿಲ್ದಾಣದಿಂದ ಲಾಸ್ಟ್‌ ಮೈಲ್‌ ಕನೆಕ್ಟಿವಿಟಿ (ಕೊನೆಯ ಸ್ಥಳದವರೆಗೆ ಸಾರಿಗೆ ಸಂಪರ್ಕ)ಗೆ ಅನುಕೂಲ ಆಗುವಂತೆ ಮೆಟ್ರೋ ಮಿತ್ರ ಆಟೋ ಸೇವೆಗಳನ್ನು ಆರಂಭಿಸಲಾಗಿದೆ.

ಇನ್ನು ಮೆಟ್ರೋ  ವಿಶ್ವಾಸಾರ್ಹ ಮೊದಲ ಮೈಲಿ ಮತ್ತು ಕೊನೆಯ ಮೈಲಿ ಸಂಪರ್ಕದ ಮೂಲಕ ನಮ್ಮ ಮೆಟ್ರೋ ಸವಾರಿಗೆ ಹೆಚ್ಚು ಅನುಕೂಲ ಮಾಡಿಕೊಡಲಾಗುತ್ತಿದೆ. ಈ ಮೆಟ್ರೋ ಮಿತ್ರ ಆಟೋ ಸೇವೆಯು ಈಗ ಕೆಲವು ನಿಲ್ದಾಣಗಳಲ್ಲಿ ಲಭ್ಯವಿದ್ದು, ವೇಗವಾಗಿ ಎಲ್ಲ ಮೆಟ್ರೋ ನಿಲ್ದಾಣಗಳಿಗೆ ವಿಸ್ತರಿಸಲಾಗುತ್ತಿದೆ. ಈಗ ಪ್ರಯಾಣಿಕರು ದ್ವಿಚಕ್ರ ವಾಹನಗಳು ಮತ್ತು ಕಾರುಗಳನ್ನು ಮನೆಯಲ್ಲಿಯೇ ಬಿಟ್ಟು ಕ್ಯೂಆರ್‌ ಕೋಡ್ (QR Code) ಮೂಲಕ ಮೆಟ್ರೋ ಮಿತ್ರ ಆಟೋ ಬುಕ್‌ ಮಾಡಿ ಸುಲಭವಾಗಿ ಮನೆಗೆ ತಲುಪಬಹುದು. ಕೆಲವು ಮೆಟ್ರೋ ನಿಲ್ದಾಣಗಳಲ್ಲಿಯೇ ಮೆಟ್ರೋ ಮಿತ್ರ ಸ್ಕ್ಯಾನ್ ಕೋಡ್ ಅಳವಡಿಕೆ ಮಾಡಲಾಗಿದೆ.

ಟ್ರಾಫಿಕ್ ದಟ್ಟಣೆ ನಿಯಂತ್ರಣಕ್ಕೆ ಬೆಂಗಳೂರು ಸುತ್ತ 287 ಕಿ.ಮೀ ರಿಂಗ್‌ರೈಲ್‌ ನಿರ್ಮಾಣ, 7 ಕೋಟಿ ರೂ ಮಂಜೂರು

ಇನ್ನು ಮೆಟ್ರೋ ನಿಲ್ದಾಣಗಳಿಂದ ಶಾಪಿಂಗ್ ಮಾಲ್‌ಗಳು, ವಸತಿ ಪ್ರದೇಶಗಳು, ಕೆಲಸದ ಕಚೇರಿಗಳು ಸೇರಿ ಇತ್ಯಾದಿ ಕಡೆಗಳಿಗೆ ತೆರಳಲು ಕೂಡ ಮೆಟ್ರೋಮಿತ್ರ ಆಟೋರಿಕ್ಷಾ ಕೇಂದ್ರಗಳನ್ನು ತೆರೆಯಲಾಗುತ್ತದೆ. ಹೀಗಾಗಿ, ಮೆಟ್ರೋ ನಿಲ್ದಾಣಗಳನ್ನು ಸುಲಭವಾಗಿ ತಲುಪಲು ಅನುಕೂಲ ಆಗಲಿದೆ. ಜೊತೆಗೆ, ಸುಲಭವಾಗಿ ಮೆಟ್ರೋದಲ್ಲಿ ಸಂಚಾರಕ್ಕೆ ಮೆಟ್ರೋಮಿತ್ರ ಸೇವೆಯು ಅನುಕೂಲ ಕಲ್ಪಿಸಿಕೊಡಲಾಗುತ್ತಿದೆ. ಇನ್ನು ಮೆಟ್ರೋಮಿತ್ರ ಆಟೋರಿಕ್ಷಾ ಸೇವೆಗಳಲ್ಲಿ ವೃತ್ತಿಪರ ಮೆಟ್ರೋಮಿತ್ರ ಚಾಲಕರು ಸೇವೆ ನೀಡಲಿದ್ದಾರೆ. ಈಗಾಗಲೇ ಅಕ್ಟೋಬರ್ 2ರ ಗಾಂಧಿ ಜಯಂತಿ ದಿನದಿಂದ ಹೊಸಹಳ್ಳಿ ಮೆಟ್ರೋ ನಿಲ್ದಾಣ ಸೇರಿದಂತೆ ವಿವಿಧೆಡೆ ಮೆಟ್ರೋ ಮಿತ್ರ ಸೇವೆ ಆರಂಭವಾಗಿದೆ.

click me!