ಚಿಕ್ಕಮಗಳೂರಿನಲ್ಲಿ ಬೀದಿ ನಾಯಿಗಳ ಹಾವಳಿ: 8 ತಿಂಗಳಲ್ಲಿ 12 ಸಾವಿರ ಜನರ ಮೇಲೆ ದಾಳಿ

By Govindaraj S  |  First Published Oct 2, 2023, 11:30 PM IST

ಮಲೆನಾಡು ಭಾಗದಲ್ಲಿ ನಿರಂತರ ಕಾಡಾನೆ ದಾಳಿ ಹಾಗೂ ಕಾಡು ಕೋಣಗಳ ದಾಳಿಗೆ ಮಲೆನಾಡಿನ ಜನ ಬೆಚ್ಚಿ ಬಿದ್ದಿದ್ದಾರೆ. ಅದೆಷ್ಟು ಜನ ಈಗಾಗಲೇ ತಮ್ಮ ಬದುಕು ನಾಶ ಮಾಡಿಕೊಂಡಿದ್ದು, ಕೆಲವರು ಕಾಡಾನೆ ದಾಳಿಗೆ ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. 


ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು

ಚಿಕ್ಕಮಗಳೂರು (ಅ.02): ಮಲೆನಾಡು ಭಾಗದಲ್ಲಿ ನಿರಂತರ ಕಾಡಾನೆ ದಾಳಿ ಹಾಗೂ ಕಾಡು ಕೋಣಗಳ ದಾಳಿಗೆ ಮಲೆನಾಡಿನ ಜನ ಬೆಚ್ಚಿ ಬಿದ್ದಿದ್ದಾರೆ. ಅದೆಷ್ಟು ಜನ ಈಗಾಗಲೇ ತಮ್ಮ ಬದುಕು ನಾಶ ಮಾಡಿಕೊಂಡಿದ್ದು, ಕೆಲವರು ಕಾಡಾನೆ ದಾಳಿಗೆ ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಒಂದು ಕಡೆ ವನ್ಯ ಮೃಗಗಳ ಕಾಟವಂತೂ ನಿಲ್ತಿಲ್ಲ. ಮಲೆನಾಡಿನ ತೋಟಗಳಲ್ಲಿ, ರಸ್ತೆಗಳಲ್ಲಿ ಕಾಡು ಪ್ರಾಣಿಗಳ ಕಾಟ ವಿಪರೀತವಾಗಿದೆ. ಕಾಡು ಪ್ರಾಣಿಗಳ ದಾಳಿಯ ಆತಂಕ ಒಂದು ಭಾಗವಾದರೆ, ಜಿಲ್ಲೆಯ ನಗರ, ಪಟ್ಟಣದ ಪ್ರದೇಶ, ಪಂಚಾಯಿತಿ ವ್ಯಾಪ್ತಿಯಲ್ಲಿ ಬೀದಿ ಶ್ವಾನಗಳ ಭೀತಿ ಎದುರಾಗಿದೆ. ಬರೊಬ್ಬರಿ 8 ತಿಂಗಳಿಗೆ 12 ಸಾವಿರ ಜನರ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿವೆ. 

Tap to resize

Latest Videos

undefined

ರಸ್ತೆಯಲ್ಲಿ ಸಂಚಾರಿಸುವ ಪಾದಚಾರಿಗಳೇ ಟಾರ್ಗೆಟ್: ಬೀದಿ ನಾಯಿಗಳ ದಾಳಿಯಿಂದ ಚಿಕ್ಕಮಗಳೂರು ಜಿಲ್ಲೆಯ ಜನತೆ ಬೆಚ್ಚಿ ಬಿದ್ದಿದ್ದು, ರಾತ್ರಿಯ ವೇಳೆ ಬೀದಿ ನಾಯಿಗಳ ಹಾವಳಿ ಹೆಚ್ಚಳ ವಾಗಿದೆ. ಬೈಕ್ ನಲ್ಲಿ ಹೋಗುವವರಿಗೆ, ಸೈಕಲ್ ನಲ್ಲಿ ಹೋಗುವವರಿಗೆ, ರಸ್ತೆಯಲ್ಲಿ ಸಂಚಾರ ಮಾಡುವವರೇ ಬೀದಿ ನಾಯಿಗಳ ಟಾರ್ಗೆಟ್ ಆಗಿದ್ದು, ಪುಟ್ಟ ಪುಟ್ಟ ಮಕ್ಕಳ ಮೇಲೂ ನಿರಂತರ ಬೀದಿ ನಾಯಿಗಳ ದಾಳಿ ನಡೆಯುತ್ತಿದೆ. ಬೀದಿ ನಾಯಿಗಳ ದಾಳಿಯಿಂದ ತಪ್ಪಿಸಿಕೊಳ್ಳಲು ಸಾರ್ವಜನಿಕರು ಹರ ಸಾಹಸ ಪಡುವಂತಾಗಿದೆ. ಚಿಕ್ಕಮಗಳೂರು ನಗರದಲ್ಲಿಯೇ ಆರು ಸಾವಿರಕ್ಕೂ ಅಧಿಕ ಬೀದಿ ನಾಯಿಗಳು ಕಚ್ಚಿರುವ ಪ್ರಕರಣ ದಾಖಲಾಗಿದ್ದು, ಈ ಅಂಕಿ ಅಂಶ ಸಾರ್ವಜನಿಕರನ್ನೇ ಬೆಚ್ಚಿ ಬೀಳಿಸುವಂತಿದೆ...

8 ತಿಂಗಳಲ್ಲಿಯೇ 12 ಸಾವಿರ ಪ್ರಕರಣ ದಾಖಲು: ಚಿಕ್ಕಮಗಳೂರು ನಗರ ಸೇರಿದಂತೆ, ಜಿಲ್ಲೆಯ ಜನರಲ್ಲಿ ಈಗ ಎದುರಾಗಿರೋದು ಶ್ವಾನ ಭೀತಿ ಅದು ಬೀದಿಯಲ್ಲಿರೋ ಶ್ವಾನಗಳು. ರಾತ್ರಿ ಸಮಯದಲ್ಲಂತೂ ಕಾಲ್ನಡಿಗೆ ಬೈಕ್ ನಲ್ಲಿ ಓಡಾಡೋಕು ಭಯ ಪಡುತ್ತಿದ್ದು, ಬರೊಬ್ಬರಿ 8 ತಿಂಗಳಲ್ಲಿ ಆಸ್ಪತ್ರೆಗೆ ಹೋದವರು12 ಸಾವಿರಕ್ಕೂ ಅಧಿಕ ಜನರು. ಶ್ವಾನಗಳ ದಾಳಿ ಹಾಗೂ ಕಚ್ಚೋ ಪ್ರಕರಣ ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷವೇ ಅಧಿಕವಾಗಿದ್ದು, ಕೇವಲ 8 ತಿಂಗಳಲ್ಲಿ 12 ಸಾವಿರದ ಗಡಿ ದಾಟಿದೆ. ಇದರಲ್ಲಿ ಗರಿಷ್ಠ 95 ರಷ್ಟು ಪ್ರಮಾಣದಲ್ಲಿ ಬೀದಿ ಶ್ವಾನಗಳೇ ದಾಳಿ ನಡೆಸಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. 

ಜಾತಿ ಆಧಾರದಲ್ಲಿ ಸಿಎಂ ಮಾಡಲಾಗದು: ಸಚಿವ ಸತೀಶ ಜಾರಕಿಹೊಳಿ

ಚಿಕ್ಕಮಗಳೂರು ನಗರದಲ್ಲಿ 6 ಸಾವಿರ ಪ್ರಕರಣಗಳಿದ್ದರೇ, ಕಡೂರು 1.756 ತರೀಕೆರೆ 1.168 ಎನ್. ಆರ್.ಪುರ 588, ಕೊಪ್ಪದಲ್ಲಿ 969, ಶೃಂಗೇರಿ 433, ಮೂಡಿಗೆರೆ 391 ಪ್ರಕರಣಗಳು ದಾಖಲಾಗಿದೆ. ಶ್ವಾನ ದಾಳಿಯಿಂದ ಬಂದೋರಿಗೆ ನೀಡೋಕೆ ಇಂಜೆಕ್ಷನ್ ಗೆ ಈ ವರೆಗೂ ತೊಂದರೆ ಯಾಗಿಲ್ಲ. ಮುಂದೇಯೂ ತೊಂದರೆ ಯಾಗದಂತೆ ಜಿಲ್ಲಾ ಆರೋಗ್ಯ ಇಲಾಖೆ ಎಚ್ಚರಿಕೆಯ ಕ್ರಮ ವಹಿಸಿದ್ದು, ಕಳೆದ ವರ್ಷ 13 ಸಾವಿರ ಪ್ರಕರಣಗಳಿದ್ವು ಈ ಬಾರಿ 8 ತಿಂಗಳಲ್ಲಿಯೇ 12 ಸಾವಿರ ದಾಖಲಾಗಿದೆ ಎಂಬ ಅಂಕಿ ಅಂಶವನ್ನು ಜಿಲ್ಲಾ ಆರೋಗ್ಯ ಇಲಾಖೆ ಹೊರ ಹಾಕಿದೆ. ಒಟ್ಟಾರೆಯಾಗಿ, ಜಿಲ್ಲೆಯ ಮಲೆನಾಡು ಭಾಗದಲ್ಲಿ ವನ್ಯ ಮೃಗಗಳ ಉಪಟಳದ ಜೊತೆ ಈಗ ಶ್ವಾನಗಳ ದಾಳಿಯ ಭಯ ಎದುರಾಗಿದೆ. ರಾತ್ರಿ ವೇಳೆ ಜನರು ಓಡಾಡೋಕು ಭಯ ಪಡುತ್ತಿದ್ದು, ಗುಂಪು ಗುಂಪಾಗಿ ಬಂದು ದಾಳಿ ನಡೆಸುತ್ತವೆ ಎಂಬ ಅತಂಕವೂ ಇದೆ.

click me!