ಹಸಿರು ಮಾರ್ಗದಲ್ಲಿ ಕೈ ಕೊಟ್ಟ ಮೆಟ್ರೋ, ಮಧ್ಯಾಹ್ನ ಸರಿ ಹೋಗುವ ಸಾಧ್ಯತೆ

By Gowthami K  |  First Published Oct 3, 2023, 9:38 AM IST

ಹಸಿರು ಮಾರ್ಗದ ಮೆಟ್ರೋ ಸಂಚಾರದಲ್ಲಿ ಭಾರೀ ವ್ಯತ್ಯಯವಾಗಿದೆ. ಮೆಟ್ರೋ ರೈಲುಗಳಲ್ಲಿ ತಾಂತ್ರಿಕ ತೊಂದರೆಯಾದಾಗ ಅದನ್ನು ಸರಿಪಡಿಸಲು ಬಳಸುವ ರೀ ರೈಲ್ ಹಳಿ ತಪ್ಪಿದ ಹಿನ್ನೆಲೆ ಮೆಟ್ರೋ ಈ ತೊಂದರೆಯಾಗಿದೆ. 


ಬೆಂಗಳೂರು (ಅ.3): ಹಸಿರು ಮಾರ್ಗದ ಮೆಟ್ರೋ ಸಂಚಾರದಲ್ಲಿ ಭಾರೀ ವ್ಯತ್ಯಯವಾಗಿದೆ. ಮೆಟ್ರೋ ರೈಲುಗಳಲ್ಲಿ ತಾಂತ್ರಿಕ ತೊಂದರೆಯಾದಾಗ ಅದನ್ನು ಸರಿಪಡಿಸಲು ಬಳಸುವ ರೀ ರೈಲ್ ಹಳಿ ತಪ್ಪಿದ ಹಿನ್ನೆಲೆ ಮೆಟ್ರೋ ಈ ತೊಂದರೆಯಾಗಿದೆ. 

ರಾಜಾಜಿನಗರ ಕರ್ವ್ ನಲ್ಲಿ ಟೆಸ್ಟ್ ಮಾಡುವಾಗ ರೀ ರೈಲು ಹಳಿ ತಪ್ಪಿದೆ. ಇದರಿಂದ ಪ್ರಯಾಣಿಕರಿಗೆ ಭಾರೀ ಸಮಸ್ಯೆಯಾಗಿದೆ. ರೀ ರೈಲು ಕೆಳಗಿಳಿಸಲು ಕ್ರೇನ್ ಬಳಕೆ ಮಾಡಲಾಗುತ್ತೆ. 12.30ರ ಸುಮಾರಿಗೆ ರಿ ರೈಲು ಕ್ರೇನ್ ಮೂಲಕ ಕೆಳಗಿಳಿಸಲಾಗುತ್ತೆ. ಮಧ್ಯಾಹ್ನ 1 ಗಂಟೆ ಸಮಯಕ್ಕೆ ಸಮಸ್ಯೆ ಸರಿ ಹೋಗಲಿದೆ ಎಂದು ಏಷ್ಯಾನೆಟ್  ಸುವರ್ಣನ್ಯೂಸ್‌ಗೆ ಮೆಟ್ರೋ ಎಂಡಿ ಅಂಜುಂ‌ ಪರ್ವೆಜ್  ಮಾಹಿತಿ ನೀಡಿದ್ದಾರೆ.

Latest Videos

undefined

ರೀ ರೈಲುನ್ನ ಹಳಿಗೆ ತರಲು ಸತತ ಪ್ರಯತ್ನ ಮಾಡಲಾಗುತ್ತಿದ್ದು, ಕಳೆದ ಎಂಟು ಗಂಟೆಗಳಿಂದ ಪ್ರಯತ್ನ ನಡೆಸಿದ್ದ ಮೆಟ್ರೋ ಇಂಜಿನಿಯರ್ ಗಳು ಈಗ ಕ್ರೇನ್ ಮೊರೆ‌ ಹೋಗಿದ್ದಾರೆ. ಬೃಹತ್ ಹೈಡ್ರಾಲಿಕ್ ಕ್ರೇನ್ ಮೂಲಕ ಹಳಿ ತಪ್ಪಿರೋ ರೀ ರೈಲ್ ಅನ್ನ ಹಳಿಗೆ ಮರಳಿ ತರಲು ಪ್ರಯತ್ನ ನಡೆಸಲಾಗುತ್ತಿದೆ. ಹಳಿ ತಪ್ಪಿರೋ ಜಾಗದಲ್ಲಿ ಕರೆಂಟ್ ಕಟ್ ಮಾಡಿಸಿ ಕಾರ್ಯಚರಣೆ ನಡೆಸಲು ಯೋಚಿಸಲಾಗಿದ್ದು, ಹೀಗಾಗಿ ಸ್ಥಳಕ್ಕೆ ಬೆಸ್ಕಾಂ ಸಿಬ್ಬಂದಿಗಳನ್ನ ಮೆಟ್ರೋ ಇಂಜಿನಿಯರ್ಸ್ ಕರೆಸಿಕೊಂಡಿದ್ದಾರೆ.

ಹಳಿ ತಪ್ಪಿರುವ ರೀ ರೈಲು ಸುಮಾರು 17 ಟನ್ ಇದ್ದು, ಇದನ್ನು ಮೇಲಕೆತ್ತಲು 200 ಟನ್ ಲಿಫ್ಟ್ ಮಾಡುವ ಸಾಮರ್ಥ್ಯದ ಕ್ರೇನ್ ತರಿಸಲಾಗಿದೆ. ಕ್ರೇನ್ ಆಪರೇಟರ್ ನಾಲ್ಕು ‌ಮೂಲೆಯಲ್ಲು ಸಿಲಿಂಗ್ ಬೆಲ್ಟ್ ಅಳವಡಿಕೆ‌ ಮಾಡಿ  ರೀ ರೈಲು ಲಿಫ್ಟ್ ಮಾಡಲಿದ್ದಾರೆ.

ಇನ್ನು ಯಶವಂತಪುರದಿಂದ ಮೆಜೆಸ್ಟಿಕ್ ಗೆ  ಪ್ರತಿ 5 ನಿಮಿಷಕ್ಕೊಂದು ಬಸ್ ಸಂಚಾರ ನಡೆಸುತ್ತಿದೆ. ಮೆಟ್ರೋ‌ ನಿಲ್ದಾಣದಿಂದ ಪ್ರತಿ 8 ನಿಮಿಷಕ್ಕೊಂದು ಬಸ್ ಸಂಚಾರ ಇತ್ತು. ಮೆಟ್ರೋ ಸ್ಥಗಿತ ಹಿನ್ನೆಲೆ 5 ನಿಮಿಷಕ್ಕೊಂದು ಬಸ್ ಸಂಚಾರ ನಡೆಸಲಾಗುತ್ತಿದೆ. ಮುಖ್ಯ ರಸ್ತೆಯಲ್ಲಿ ಸಂಚರಿಸೋ ಬಸ್ ಅನ್ನು ಬಿಎಂಟಿಸಿ  ಡೈವರ್ಟ್ ಮಾಡಿಸಿದೆ. ಹೀಗಾಗಿ ಯಶವಂತಪುರ ರೈಲ್ವೆ ನಿಲ್ದಾಣದ ಕಡೆಯಿಂದ ಬಸ್‌ ಸಂಚರಿಸುತ್ತಿದೆ. ಮೆಟ್ರೋ ಪ್ರಯಾಣಿಕರಿಗೆ ತೊಂದರೆಯಾಗದಂತೆ ಬಸ್ ರೂಟ್ ಬದಲಾವಣೆ ಮಾಡಲಾಗಿದೆ.
 
ಘಟನೆ ಹಿನ್ನೆಲೆ: ರಾಜಾಜಿನಗರ ನಿಲ್ದಾಣದ ಕರ್ವ್ ನಲ್ಲಿ ಈ ಘಟನೆ ನಡೆದಿದ್ದು, ನಾಗಸಂದ್ರದಿಂದ ರೇಷ್ಮೆ ಸಂಸ್ಥೆವರೆಗಿನ ರೈಲ್ವೆ ಟ್ರ್ಯಾಕ್ ನಲ್ಲಿ ಸಂಚಾರಕ್ಕೆ ತೊಂದರೆಯಾಗಿದೆ. ಹೀಗಾಗಿ ಏಕಮುಖವಾಗಿ ಮಾತ್ರ  ರೈಲುಗಳು ಸಂಚರಿಸುತ್ತಿದೆ. ಪರಿಣಾಮ ಪ್ರಯಾಣಿಕರಿಗೆ ಭಾರೀ ಅನಾನುಕೂಲವಾಗಿದೆ.

ರೀ ರೈಲ್ ವಾಹನವನ್ನು‌ ಹಳಿಗೆ ತರಲು ಸಿಬ್ಬಂದಿ ಹರಸಾಹಸ ಮಾಡುತ್ತಿದ್ದಾರೆ. ಇಂದು ಮದ್ಯಾಹ್ನದವರೆಗೂ ಪ್ರಯಾಣಿಕರಿಗೆ ತೊಂದರೆಯಾಗಲಿದೆ. ಮೆಟ್ರೋ ಪ್ರಯಾಣಿಕರು ಸಹಕರಿಸುವಂತೆ BMRCL ಮನವಿ ಮಾಡಿದೆ.

ಬೆಂಗಳೂರು: ಐಟಿ ಉದ್ಯೋಗಿಗಳಿಗೆ ಗುಡ್ ನ್ಯೂಸ್ ನೀಡಿದ ನಮ್ಮ‌ ಮೆಟ್ರೋ..!

ಅರ್ಧಗಂಟೆಗೊಂದು ಮೆಟ್ರೋ ಸಿಂಗಲ್‌ ಲೈನ್ ಸಂಚಾರ: ಇನ್ನು ರೀ ರೈಲ್ ಹಳಿ ತಪ್ಪಿದ ಹಿನ್ನೆಲೆ ಹಸಿರು ಮಾರ್ಗದಲ್ಲಿ ಅರ್ಧಗಂಟೆಗೊಂದು ಮೆಟ್ರೋ ಟ್ರೈನ್ ಓಡಾಡುತ್ತಿದೆ. ಯಶವಂತಪುರದಿಂದ ಮಂತ್ರಿ ಸ್ಕ್ವೇರ್ ವರೆಗೆ  ಸಿಂಗಲ್ ಲೈನ್ ನಲ್ಲಿ‌ ಸಂಚಾರ ಮಾಡಲಾಗುತ್ತಿದೆ. ರೀ ರೈಲ್ ತೆರವು ಆಗುವವರೆಗೆ ಸಿಂಗಲ್ ಲೈನ್ ನಲ್ಲಿ ಸಂಚಾರ ಇರಲಿದೆ. 

ಎಂಟು ತಾಸುಗಳಾದರೂ ದುರಸ್ತಿಗೆ ಆಗಿಲ್ಲ: ಇನ್ನೊಂದೆಡೆ ಹಳಿತಪ್ಪಿದ ರೀ ರೈಲ್ ಮೆಟ್ರೋ ಹಳಿಯ ಬದಿಯ ಗೋಡೆಗೆ ತಾಗಿ ನಿಂತಿದ್ದು, ಅದನ್ನು ಸರಿಪಡಿಸಲು ಇಂಜಿನಿಯರ್ ಗಳು ಹರಸಾಹಸ ಪಡುತ್ತಿದ್ದಾರೆ. ಕಳೆದ ಏಳೆಂಟು ತಾಸುಗಳಿಂದ ದುರಸ್ತಿ ಕಾರ್ಯದಲ್ಲಿ ನಿರತರಾಗಿದ್ದಾರೆ. ಹೈಡ್ರಾಲಿಕ್ ಪವರ್ ಬಳಸಿ ರೀ ರೈಲ್ ಟ್ರ್ಯಾಕ್ ಗೆ ಕೂರಿಸಲು ಪ್ರಯತ್ನಿಸುತ್ತಿದ್ದಾರೆ. ಇನ್ನೂ ರೀ ರೈಲನ್ನು ಹಳಿಯ ಮೇಲೆ ಕೂರಿಸಲಾಗದ ಕಾರಣ ಸದ್ಯ ಸತತ ಎಂಟು ತಾಸುಗಳ ದುರಸ್ತಿಗೆ ತಾತ್ಕಾಲಿಕ ವಿರಾಮ ನೀಡಲಾಗಿದೆ. 

ಮಂಗಳೂರು-ಮುಂಬೈ ನಡುವೆ ವಂದೇ ಭಾರತ್‌ ಎಕ್ಸ್‌ಪ್ರೆಸ್‌?

ಆಟೋ ಚಾಲಕರಿಂದ ದುಪ್ಪಟ್ಟು ವಸೂಲಿ: ಯಶವಂತಪುರ ಮೆಟ್ರೋ ನಿಲ್ದಾಣ ಸಂಪೂರ್ಣ ಫುಲ್ ಆಗಿದೆ. ನೂರಾರು ಪ್ರಯಾಣಿಕರು ಮೆಟ್ರೋಗಾಗಿ ಕಾಯುತ್ತಿದ್ದು, ಫ್ಲಾಟ್ ಫಾರಂ ನಲ್ಲಿ ನಿಲ್ಲೋದಕ್ಕೂ ಜಾಗವಿಲ್ಲದ ಸ್ಥಿತಿ ನಿರ್ಮಾಣವಾಗಿದೆ. ಇನ್ನೊಂದೆಡೆ ಮೆಟ್ರೋ ಸ್ಥಗಿತ ಹಿನ್ನೆಲೆ ಆಟೋ ಚಾಲಕರು ದುಪ್ಪಟ್ಟು ಬಾಡಿಗೆ ಪಡೆಯುತ್ತಿದ್ದಾರೆ. ಹೀಗಾಗಿ ಕಚೇರಿಗೂ ತೆರಳದೆ ಜನರು ವಾಪಾಸಾಗ್ತಿದ್ದಾರೆ.

 

ನಮ್ಮ ಮೆಟ್ರೋ ಪ್ರಯಾಣಿಕರು ದಯವಿಟ್ಟು ಗಮನಿಸಿ, ರಾಜಾಜಿನಗರ ಮೆಟ್ರೊ ನಿಲ್ದಾಣದಲ್ಲಿ ತಾಂತ್ರಿಕ ಅಡಚಣೆಯಿಂದಾಗಿ ನಾಗಸಂದ್ರದಿಂದ ಯಶವಂತಪುರ ಮತ್ತು ಮಂತ್ರಿ ಸ್ಕ್ವೇರ್ ಸಂಪಿಗೆ ರಸ್ತೆಯಿಂದ ರೇಷ್ಮೆ ಸಂಸ್ಥೆ ಮೆಟ್ರೊ ನಿಲ್ದಾಣದ ನಡುವೆ ಮಾತ್ರ ಹಸಿರು ಮಾರ್ಗದಲ್ಲಿ ರೈಲು ಸೇವೆಗಳು ಲಭ್ಯವಿರುತ್ತವೆ. ಅಡಚಣೆಗಾಗಿ ವಿಷಾದಿಸುತ್ತೇವೆ.

— ನಮ್ಮ ಮೆಟ್ರೋ (@cpronammametro)  

 

click me!