ಮೈಸೂರು ಪ್ರಕರಣ ಬೆನ್ನಲ್ಲೇ ಚಿಕ್ಕಮಗಳೂರಿನ ಮನೆಗಳ‌ ಮೇಲೆ ಕಲ್ಲು ತೂರಾಟ

Published : Feb 15, 2025, 05:42 PM ISTUpdated : Feb 15, 2025, 06:19 PM IST
ಮೈಸೂರು ಪ್ರಕರಣ ಬೆನ್ನಲ್ಲೇ ಚಿಕ್ಕಮಗಳೂರಿನ ಮನೆಗಳ‌ ಮೇಲೆ ಕಲ್ಲು ತೂರಾಟ

ಸಾರಾಂಶ

ಮೈಸೂರಿನ ಉದಯಗಿರಿ ಪ್ರಕರಣ ಮಾಸುವ ಮುನ್ನವೇ ಕಾಫಿನಾಡಲ್ಲೂ ಅದೇ ಮಾದರಿಯ ಪ್ರಕರಣ ನಡೆದಿದೆ. ಅನ್ಯಕೋಮಿನ ಏಳೆಂಟು ಯುವಕರು ಮನೆಯೊಂದರ ಮೇಲೆ ಸುಖಾಸುಮ್ಮನೆ ಏಕಾಏಕಿ ಕಲ್ಲು ತೂರಾಟ ನಡೆಸಿ ಪರಾರಿಯಾಗಿದ್ದಾರೆ. 

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು (ಫೆ.15): ಮೈಸೂರಿನ ಉದಯಗಿರಿ ಪ್ರಕರಣ ಮಾಸುವ ಮುನ್ನವೇ ಕಾಫಿನಾಡಲ್ಲೂ ಅದೇ ಮಾದರಿಯ ಪ್ರಕರಣ ನಡೆದಿದೆ. ಅನ್ಯಕೋಮಿನ ಏಳೆಂಟು ಯುವಕರು ಮನೆಯೊಂದರ ಮೇಲೆ ಸುಖಾಸುಮ್ಮನೆ ಏಕಾಏಕಿ ಕಲ್ಲು ತೂರಾಟ ನಡೆಸಿ ಪರಾರಿಯಾಗಿದ್ದಾರೆ. ಮನೆಯ ಕಿಟಕಿಯ ಗಾಜುಗಳು ಪುಡಿಯಾಗಿದ್ದು ಮನೆಯವರ ಜೊತೆಗೆ ಬಡಾವಣೆಯ ನಿವಾಸಿಗಳು ಕೂಡ ಆತಂಕಕ್ಕೀಡಾಗಿದ್ದಾರೆ. 

ಕಲ್ಲು ತೂರಾಟ ನಡೆಸಿ ಪರಾರಿ: ಕಾಫಿನಾಡು ಚಿಕ್ಕಮಗಳೂರು ಆಲ್ ಮೋಸ್ಟ್ ಕೂಲ್ ಸಿಟಿ. ಅಷ್ಟೆ ಪ್ರಮಾಣದ ಸೂಕ್ಷ್ಮ ಕೂಡ. ದತ್ತಪೀಠದ ವಿವಾದಿಂದ ಅತೀಸೂಕ್ಷ್ಮವೂ ಹೌದು. ಇಲ್ಲಿ ಒಂದು ಸಣ್ಣ ಘಟನೆ ಕೂಡ ನೋಡ-ನೋಡ್ತಿದ್ದಂತೆ ಯಾವ ಸ್ವರೂಪ ಬೇಕಾದ್ರು ಪಡೆದುಕೊಳ್ಳಬಹುದು. ಹಾಗಾಗಿ, ಪೊಲೀಸರು ಕೂಡ ಅತಿ ಸೂಕ್ಷ್ಮವಾಗೇ ಇರ್ತಾರೆ. ಆದ್ರೆ, ಕಳೆದ ರಾತ್ರಿ ನಗರದ ವಿಜಯಪುರ ಏರಿಯಾದಲ್ಲಿ ಏಳೆಂಟು ಅನ್ಯಕೋಮಿನ ಯುವಕರು ಇದ್ದಕ್ಕಿದ್ದಂತೆ ಏಕಾಏಕಿ ಮನೆ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. 

ಸರ್ವೇಯರ್ ಸಾವಿನ ಪ್ರಕರಣಕ್ಕೆ‌ ಬಿಗ್ ಟ್ವಿಸ್ಟ್: ಕಛೇರಿಯಲ್ಲಿ ಡೆತ್‌ನೋಟ್ ಪತ್ತೆ!

ಮನೆಯ ಕಿಟಕಿಯ ಗಾಜುಗಳು ಪುಡಿ-ಪುಡಿಯಾಗಿದ್ದು ಕಲ್ಲುಗಳು ಮನೆಯ ಅಡುಗೆ ಕೋಣೆಯೊಳಗೆ ಬಿದ್ದಿವೆ. ಮನೆಯವರು ಬಾಗಿಲು ತೆಗೆದು ಹೊರಬರುತ್ತಿದ್ದಂತೆ ಕಲ್ಲು ತೂರಾಟ ನಡೆಸಿದ ಯುವಕರು ಓಡಿ ಹೋಗಿದ್ದಾರೆ. ಕೂಡಲೇ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
 
ಸ್ಥಳಕ್ಕೆ ಎಸ್ ಪಿ ಭೇಟಿ, ಪರಿಶೀಲನೆ:
ತಿಳಿದ ಕೂಡಲೇ ಪೊಲೀಸರು ಕೂಡ ಸ್ಥಳ ಪರಿಶೀಲನೆ ನಡೆಸಿ, ಇಡೀ ರಾತ್ರಿ ಗಸ್ತು ತಿರುಗಿದ್ದಾರೆ. ಬೆಳ್ಳಗ್ಗೆಯಿಂದಲೂ ಕೂಡ ಸ್ಥಳದಲ್ಲೇ ಮೊಕ್ಕಾಂ ಹೂಡಿರುವ ಬಸವನಹಳ್ಳಿ ಪೊಲೀಸರು ರಸ್ತೆಯುದ್ಧಕ್ಕೂ ಇರುವ ಸಿಸಿ ಕ್ಯಾಮರಾಗಳನ್ನ ಹುಡುಕುತ್ತಿದ್ದಾರೆ. ಕಳೆದ ರಾತ್ರಿ ಅನ್ಯಕೋಮಿನ ಹಬ್ಬ ಮುಗಿಸಿಕೊಂಡು ಹೋಗುತ್ತಿದ್ದ ಕಿಡಿಗೇಡಿಗಳು ಈ ಕೃತ್ಯ ಎಸಗಿರಬಹುದು ಎಂದು ಅಂದಾಜಿಸಲಾಗಿದೆ. ಸ್ಥಳಕ್ಕೆ ಎಸ್ಪಿ ವಿಕ್ರಂ ಅಮಟೆ, ಎಎಸ್ಪಿ ಶೈಲೇಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 

ಜಾನುವಾರಿಗೆ ಕಂಟಕವಾಗ್ತಿರೊ ಪ್ಲಾಸ್ಟಿಕ್: ವರ್ಷದಿಂದ ವರ್ಷಕ್ಕೆ ಸಾವಿನ ಪ್ರಮಾಣ ಹೆಚ್ಚಳ

ಒಟ್ಟಾರೆ, ಕೂಲ್ ಅಂಡ್ ಸೆನ್ಸಿಟೀವ್ ಜಿಲ್ಲೆಯಲ್ಲಿ ಕಿಡಿಗೇಡಿಗಳ ಕೃತ್ಯದಿಂದ ಕಾಫಿನಾಡು ಒಂದಷ್ಟು ವಿಚಲಿತವಾಗಿರೋದಂತು ಸತ್ಯ. ಇದ್ದಕ್ಕಿದ್ದಂತೆ, ಏಕಾಏಕಿ ಕಲ್ಲು ತೂರಾಟಕ್ಕೆ ಕಾರಣವೇನೆಂಬುದು ಸ್ಥಳಿಯರು ಹಾಗೂ ಪೊಲೀಸರು ತಲೆನೋವು ತೋರಿಸಿದೆ. ಇದು ಮೈಸೂರಿನ ಪ್ರಕರಣದ ಮುಂದುವರಿದ ಭಾಗವೋ ಅಥವ ಭಯ ಹುಟ್ಟಿಸುವ ಹುನ್ನಾರವೋ ಅನ್ನೋದು ಯಕ್ಷ ಪ್ರಶ್ನೆಯಾಗಿದೆ. ಆದರೆ, ಹೈ ಅಲರ್ಟ್  ಘೋಷಿಸಿರೋ ಪೊಲೀಸರು ಮಾತ್ರ ಕಿಡಿಗೇಡಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

PREV
Read more Articles on
click me!

Recommended Stories

ದಾವಣಗೆರೆ ರಾಟ್‌ವೀಲರ್ ನಾಯಿಗಳ ಡೆಡ್ಲಿ ಅಟ್ಯಾಕ್; 50ಕ್ಕೂ ಹೆಚ್ಚು ಕಡೆ ಕಚ್ಚಿಸಿಕೊಂಡ ಮಹಿಳೆ ದುರ್ಮರಣ
ಅಂಗನವಾಡಿ, ಆಶಾ ನೌಕರರ ಗೌರವಧನ ಹೆಚ್ಚಿಸಿ: ಸಂಸದ ಡಾ.ಕೆ.ಸುಧಾಕರ್‌ ಮನವಿ