ಸಂಪೂರ್ಣ ಹದಗೆಟ್ಟ ಹನೂರು-ಬಂಡಳ್ಳಿ ಮಾರ್ಗದ ರಸ್ತೆ: ಗುಂಡಿಮಯ ರಸ್ತೆಯಲ್ಲಿ ಒಂದಲ್ಲ ಒಂದು ಆಕ್ಸಿಡೆಂಟ್!

Published : Feb 14, 2025, 09:58 PM ISTUpdated : Feb 14, 2025, 09:59 PM IST
ಸಂಪೂರ್ಣ ಹದಗೆಟ್ಟ ಹನೂರು-ಬಂಡಳ್ಳಿ ಮಾರ್ಗದ ರಸ್ತೆ: ಗುಂಡಿಮಯ ರಸ್ತೆಯಲ್ಲಿ ಒಂದಲ್ಲ ಒಂದು ಆಕ್ಸಿಡೆಂಟ್!

ಸಾರಾಂಶ

ಅದು 30 ಕ್ಕೂ ಹೆಚ್ಚು ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ  ರಸ್ತೆ. ಸಂಪೂರ್ಣ ರಸ್ತೆ ಹದಗೆಟ್ಟು ಹೋಗಿದೆ. ಈ ರಸ್ತೆ ಡಾಂಬರು ಕಂಡು 20 ವರ್ಷಗಳೇ ಕಳೆದಿದೆ. ಇತ್ತಿಚ್ಚಿಗೆ ಈ ರಸ್ತೆಯಲ್ಲಿ ಸಂಚರಿದೋದು ದುಸ್ತರವಾಗಿದೆ. 

ವರದಿ: ಪುಟ್ಟರಾಜು. ಆರ್.ಸಿ, ಏಷಿಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ.

ಚಾಮರಾಜನಗರ (ಫೆ.14): ಅದು 30 ಕ್ಕೂ ಹೆಚ್ಚು ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ  ರಸ್ತೆ. ಸಂಪೂರ್ಣ ರಸ್ತೆ ಹದಗೆಟ್ಟು ಹೋಗಿದೆ. ಈ ರಸ್ತೆ ಡಾಂಬರು ಕಂಡು 20 ವರ್ಷಗಳೇ ಕಳೆದಿದೆ. ಇತ್ತಿಚ್ಚಿಗೆ ಈ ರಸ್ತೆಯಲ್ಲಿ ಸಂಚರಿಸೋದು ದುಸ್ತರವಾಗಿದೆ. ಸಾಕಷ್ಟು ಅಪಘಾತಗಳು ಕೂಡ ಸಂಭವಿಸಿದೆ. ಈ ಹದಗೆಟ್ಟ ರಸ್ತೆಗೆ ಡಾಂಬರೀಕರಣ ಯಾವಾಗ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದೆಲ್ಲಿ ಅಂತೀರಾ ಹಾಗಾದ್ರೆ ಈ ಸ್ಟೋರಿ ನೋಡಿ. ನಾವು  ಹೇಳ್ತಿರೋದು  ಚಾಮರಾಜನಗರ  ಜಿಲ್ಲೆಯ  ಹನೂರು  ತಾಲೂಕಿನ ಹನೂರು-ಬಂಡಳ್ಳಿ-ಶಾಗ್ಯಗೆ  ಸಂಚಾರ ಕಲ್ಪಿಸಿರುವ ಹೆದ್ದಾರಿಯ ಬಗ್ಗೆ. 

ಈ ಭಾಗದಲ್ಲಿ 30 ಕ್ಕೂ ಹಳ್ಳಿಗಳ ಜನರು ಈ  ರಸ್ತೆಯನ್ನು ಸಂಚಾರಕ್ಕೆ  ಅವಲಂಬಿಸಿದ್ದಾರೆ. ರಸ್ತೆಯಲ್ಲಿ  ಸಂಚಾರ  ಮಾತ್ರ  ವಾಹನ ಸವಾರರಿಗೆ ಮಾತ್ರ ನಿತ್ಯ ನರಕಮಯವಾಗಿದೆ.  20 ವರ್ಷಗಳು ಕಳೆದರೂ ಕೂಡ ಈ ರಸ್ತೆಗೆ ಡಾಂಬರೀಕರಣ  ನಡೆದೆ  ಇಲ್ಲ. ನಿತ್ಯ ಈ ಭಾಗದ  ಒಂದಲ್ಲ ಒಂದು ಕಡೆ  ಅಪಘಾತ ಸಂಭವಿಸಿದ ನಿದರ್ಶನ  ಸಾಕಷ್ಟಿದೆ. ಇನ್ನೂ ಅನಾರೋಗ್ಯ  ಸಂಭವಿಸಿದರೆ, ಗರ್ಭೀಣಿಯರನ್ನು ಆಸ್ಪತ್ರೆಗೆ ಕರೆದೊಯ್ಯುವುದೇ ದೊಡ್ಡ ಸವಾಲಾಗಿದೆ. ಆಸ್ಪತ್ರೆಗೆ ಬರುವ ದಾರಿ ಮಧ್ಯೆಯಲ್ಲಿ ಹೆರಿಗೆಯಾದ ಪ್ರಸಂಗಗಳು ಕೂಡ ನಡೆದಿವೆ.  

ಇನ್ನೂ ವಾಹನ ಚಾಲಕರಂತು ಈ ರಸ್ತೆಯಲ್ಲಿ ಸಂಚಾರ ಮಾಡ್ತಿರುವುದರಿಂದ ನಮ್ಮ ವಾಹನಗಳಿಗೆ ಒನ್ ಟು ಡಬಲ್ ಖರ್ಚು ಬರ್ತಿದೆ ಅಂತಾ ವಾಹನ ಚಾಲಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇನ್ನೂ  ಹನೂರು,  ಬಂಡಳ್ಳಿ, ಶಾಗ್ಯ ರಸ್ತೆಯ ಬಗ್ಗೆ  ಸ್ಥಳೀಯ ಶಾಸಕ ಮಂಜುನಾಥ್ ರನ್ನು ಪ್ರಶ್ನಿಸಿದರೆ ಈ ರಸ್ತೆಗಳು ಹದಗೆಟ್ಟು 20 ವರ್ಷಗಳೇ ಕಳೆದು ಹೋಗಿದೆ. ನಾನು ಗೆದ್ದು ಎರಡು ವರ್ಷಗಳಾಗುತ್ತಿದೆ. ಈಗ  ಸಿಎಂ  ನಿಧಿಯಿಂದ  ವಿಶೇಷ  ಅನುದಾನ ಬಿಡುಗಡೆ  ಮಾಡಲಾಗಿದೆ. 

ಕಾಡ್ಗಿಚ್ಚು ತಪ್ಪಿಸಲು ಅರಣ್ಯ ಇಲಾಖೆಯಿಂದ ಫೈರ್‌ಲೈನ್: ಮುಂದಿನ 3 ತಿಂಗಳು ಬೆಂಕಿ ತಡೆಯೋದು ದೊಡ್ಡ ಟಾಸ್ಕ್!

ಈ ಭಾಗದ ಚಿಕ್ಕಲ್ಲೂರು, ಬಂಡಳ್ಳಿ ಭಾಗದ ರಸ್ತೆಗಳಿಗೆ ಶೀಘ್ರದಲ್ಲೇ ಗುದ್ದಲಿ ಪೂಜೆ ನಡೆಯಲಿದೆ.ಟೆಂಡರ್ ಪ್ರಕ್ರಿಯೆ ಕೂಡ ನಡೆಯುತ್ತಿದೆ. ಈ ಭಾಗದ ಜನರ ಸಾಕಷ್ಟು ವರ್ಷದ ಕನಸು ಈಡೇರಲಿದೆ. ಹನೂರು ಕ್ಷೇತ್ರದ ಮಲೆ ಮಹದೇಶ್ವರ ಬೆಟ್ಟ ಸೇರಿದಂತೆ ಬಹುತೇಕ ಭಾಗದ ರಸ್ತೆಗಳ ಅಭಿವೃದ್ಧಿಗೆ ಕ್ರಮ ವಹಿಸಿದ್ದೇನೆ ಅಂತಿದ್ದಾರೆ. ಒಟ್ನಲ್ಲಿ ಹಳ್ಳ ಕೊಳ್ಳ ಬಿದ್ದ ಈ ರಸ್ತೆಯಲ್ಲಿ ಸಂಚಾರ ಮಾತ್ರ  ದುಸ್ತರವಾಗಿದೆ. ನಿತ್ಯ ವಾಹನ ಸವಾರರಿಗೆ ಸಂಚಾರ ನರಕಮಯವಾಗಿದೆ. ಶೀಘ್ರದಲ್ಲೇ ಈ ರಸ್ತೆ ದುರಸ್ತಿಪಡಿಸಲಿ ಅಂತಾ ಸಾರ್ವಜನಿಕರು ದೇವರಲ್ಲಿ ಮನವಿ ಮಾಡ್ತಿದ್ದಾರೆ.

PREV
Read more Articles on
click me!

Recommended Stories

ನಾದಬ್ರಹ್ಮ ಇಡ್ಲಿ ಸೆಂಟರ್‌ ಮಾಲೀಕ, 28 ವರ್ಷದ ಸಂದೇಶ್‌ ಹೃದಯಾಘಾತದಿಂದ ಸಾವು
ಆನೆ ಕಾರಿಡಾರ್ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಬೇಕು: ಮಾಜಿ ಸಂಸದ ಪ್ರತಾಪ್ ಸಿಂಹ