ಅಜಾನ್ ಕುರಿತು ವಿವಾದಾತ್ಮಕ ಹೇಳಿಕೆ : ಈಶ್ವರಪ್ಪ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ SDPI ಪ್ರತಿಭಟನೆ

By Kannadaprabha News  |  First Published Mar 16, 2023, 8:06 AM IST

 ಮಾಜಿ ಸಚಿವ ಹಾಗೂ ಶಾಸಕ ಕೆ.ಎಸ್‌. ಈಶ್ವರಪ್ಪ(KS Eshwarappa) ಅಲ್ಲಾಹು ಕುರಿತು ಹಾಗೂ ಅಜಾನ್‌ ವಿರುದ್ಧ ಅವಹೇಳನಾಕಾರಿ ಹೇಳಿಕೆ ನೀಡಿದ್ದಾರೆಂದು ಆರೋಪಿಸಿ ಹಾಗೂ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಸೋಶಿಯಲ್‌ ಡೆಮಾಕ್ರಟಿಕ್‌ ಪಾರ್ಟಿ ಆಫ್‌ ಇಂಡಿಯಾ (SDPI) ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.


ಶಿವಮೊಗ್ಗ (ಮಾ.16) : ಮಾಜಿ ಸಚಿವ ಹಾಗೂ ಶಾಸಕ ಕೆ.ಎಸ್‌. ಈಶ್ವರಪ್ಪ(KS Eshwarappa) ಅಲ್ಲಾಹು ಕುರಿತು ಹಾಗೂ ಅಜಾನ್‌ ವಿರುದ್ಧ ಅವಹೇಳನಾಕಾರಿ ಹೇಳಿಕೆ ನೀಡಿದ್ದಾರೆಂದು ಆರೋಪಿಸಿ ಹಾಗೂ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಸೋಶಿಯಲ್‌ ಡೆಮಾಕ್ರಟಿಕ್‌ ಪಾರ್ಟಿ ಆಫ್‌ ಇಂಡಿಯಾ (SDPI) ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

ಶಾಸಕ ಕೆ.ಎಸ್‌. ಈಶ್ವರಪ್ಪ ಅವರು ಮುಸ್ಲಿಮರ ಕುರಿತಾಗಿ ಪದೇ ಪದೇ ಅವಹೇಳನಕಾರಿ ಹೇಳಿಕೆ ನೀಡುತ್ತಿದ್ದಾರೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ಶಾಸಕರು ಈ ರೀತಿ ಹೇಳಿಕೆ ನೀಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಆಕ್ರೋಶ ವ್ಯಕ್ತಪಡಿಸಿದರಲ್ಲದೆ, ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡು ಶಾಸಕರು ಈ ರೀತಿ ಹೇಳಿಕೆ ನೀಡುತ್ತಿದ್ದಾರೆ. ಸಮಾಜದಲ್ಲಿ ಧಕ್ಕೆ ತರುವ ರೀತಿಯಲ್ಲಿ ಹೇಳಿಕೆ ನೀಡುತ್ತಿರುವ ಶಾಸಕ ಕೆ.ಎಸ್‌. ಈಶ್ವರಪ್ಪ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

Tap to resize

Latest Videos

ಅಜಾನ್‌ ಸದ್ದು ಕೇಳುತ್ತಲೇ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹಾಡು ಹೇಳೋದನ್ನ ನಿಲ್ಲಿಸಿದ ಶೆಹನಾಜ್‌!

ಅವರ ಈ ರೀತಿಯ ಹೇಳಿಕೆಯಿಂದ ಮುಸ್ಲಿಂ ಸಮುದಾಯ(Muslim community)ದವರ ಭಾವನೆಗೆ ನೋವುಂಟಾಗಿದೆ. ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡು ಅವಹೇಳನಕಾರಿ ಹೇಳಿಕೆ ನೀಡುತ್ತಿರುವ ಶಾಸಕ ಈಶ್ವರಪ್ಪ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ರಾಜ್ಯದಿಂದ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಇಮ್ರಾನ್‌, ರಾಜ್ಯ ಸಮಿತಿ ಸದಸ್ಯರಾದ ಸಲೀಂ ಖಾನ್‌, ಜಿಲ್ಲಾ ಕಾರ್ಯದರ್ಶಿ ಕಲೀಂ, ಜಿಲ್ಲಾ ಸಮಿತಿ ಸದಸ್ಯರಾದ ಫೈರೋಜ್‌, ಜೀಲಾನ್‌, ಇಸಾಕ್‌, ರಹಿಂ ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು. 

'ಲೌಡ್ ಸ್ಪೀಕರ್ ಅಜಾನ್' ವಿರುದ್ಧ 2ನೇ ಹಂತದ ಹೋರಾಟಕ್ಕೆ ಸಿದ್ಧತೆ

ಕೆ.ಎ​ಸ್‌.ಈಶ್ವ​ರಪ್ಪ ಗಡಿ​ಪಾ​ರಿಗೆ ಆಗ್ರ​ಹಿಸಿ ಎಸ್‌​ಡಿ​ಪಿಐ ಪ್ರತಿ​ಭ​ಟನೆ

ರಾಯ​ಚೂ​ರು: ಇಸ್ಲಾಂ ಧರ್ಮದ ಕುರಿತು ಅವ​ಹೇ​ಳನಕಾರಿ ಹೇಳಿಕೆ ನೀಡಿ​ರುವ ಮಾಜಿ ಸಚಿವ ಕೆ.ಎ​ಸ್‌.​ಈ​ಶ್ವ​ರಪ್ಪ ಅವ​ರನ್ನು ಗಡಿ​ಪಾರು ಮಾಡ​ಬೇಕು ಎಂದು ಆಗ್ರ​ಹಿಸಿ ಎಸ್‌ಡಿಪಿಐ ಜಿಲ್ಲಾ ಸಮಿ​ತಿ​ಯಿಂದ ಬುಧ​ವಾರ ಪ್ರತಿ​ಭ​ಟನೆ ನಡೆ​ಸ​ಲಾ​ಯಿ​ತು.

ಸ್ಥಳೀಯ ಜಿಲ್ಲಾ​ಧಿ​ಕಾರಿ ಕಚೇ​ರಿಗೆ ಆಗ​ಮಿ​ಸಿದ ಸಮಿತಿ ಪದಾ​ಧಿ​ಕಾ​ರಿ​ಗ​ಳು, ​ಸ​ದ​ಸ್ಯರು, ಮುಖಂಡರು ಈಶ್ವ​ರಪ್ಪ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತ​ಪ​ಡಿ​ಸಿ​ದರು. ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊ​ಳ್ಳ​ಬೇಕು ಎಂದು ಒತ್ತಾ​ಯಿಸಿ ಡಿಸಿ ಮುಖಾಂತರ ಸರ್ಕಾ​ರಕ್ಕೆ ಮನವಿ ಸಲ್ಲಿ​ಸಿ​ದರು.

ಸರ್ಕಾ​ರ​ದಲ್ಲಿ ಉನ್ನತ ಸ್ಥಾನ​ವನ್ನು ಅಲಂಕ​ರಿ​ಸಿದ್ದ ಕೆ.ಎ​ಸ್‌.​ಈ​ಶ್ವ​ರಪ್ಪ ಮುಸ್ಲಿಂ ಧರ್ಮ ಹಾಗೂ ಅವರ ಆಚಾರ, ವಿಚಾ​ರ​ಗಳ ಕುರಿತು ಪದೇ ಪದೇ ನಾಲಿಗೆ ಹರಿ​ಬಿ​ಡು​ತ್ತಿ​ದ್ದಾರೆ. ಇದ​ರಿಂದಾಗಿ ರಾಜ್ಯ​ದಲ್ಲಿ ಅಶಾಂತಿ, ಕೋಮು ಗಲ​ಭೆಯ ವಾತಾ​ವ​ರ​ಣ ನಿರ್ಮಾ​ಣಕ್ಕೆ ಇವರು ಕಾರ​ಣೀ​ಭೂ​ತ​ರಾ​ಗು​ತ್ತಿ​ದ್ದಾರೆ. ಇಂತಹ ವ್ಯಕ್ತಿಯು ಹಲ​ವಾರು ತಪ್ಪುಗ​ಳನ್ನು ಮಾಡು​ತ್ತಿ​ದ್ದರು ಸಹ ರಾಜ್ಯ ಸರ್ಕಾರ ಹಾಗೂ ಬಿಜೆಪಿ ಹೈಕ​ಮಾಂಡ್‌ ಅವರ ವಿರುದ್ಧ ಯಾವುದೇ ರೀತಿಯ ಕ್ರಮ ಜರು​ಗಿ​ಸದೆ ಮೃದು ​ಧೋ​ರಣೆ ಅನು​ಸ​ರಿ​ಸು​ತ್ತಿ​ರು​ವುದು ಖಂಡ​ನೀಯ ವಿಷ​ಯ​ವಾ​ಗಿದೆ ಎಂದು ಆಕ್ರೋಶ ವ್ಯಕ್ತ​ಪ​ಡಿ​ಸಿ​ದ​ರು.

ಪ್ರತಿ​ಭ​ಟ​ನೆ​ಯಲ್ಲಿ ಸಮಿತಿ ಮುಖಂಡ​ರಾದ ಗೌಸ ಮೋಹಿದ್ದಿನ್‌, ಸೈಯದ್‌ ಇಶಾಫ್‌ ಹುಸೇನ್‌, ಜಲಾಲ್‌ ಪಾಷಾ, ಸೈಯದ್‌ ಇರ್ಫಾನ್‌ ಸೇರಿ ಅನೇ​ಕ​ರಿ​ದ್ದ​ರು.

click me!