Kolar: ‘ನನ್ನ ಮತ ಮಾರಾಟಕ್ಕಿಲ್ಲ’ ಅಭಿಯಾನ ಯಶಸ್ವಿಗೊಳಿಸಿ: ಕಾಗೇರಿ ಕರೆ

Published : Oct 13, 2022, 10:51 PM IST
Kolar: ‘ನನ್ನ ಮತ ಮಾರಾಟಕ್ಕಿಲ್ಲ’ ಅಭಿಯಾನ ಯಶಸ್ವಿಗೊಳಿಸಿ: ಕಾಗೇರಿ ಕರೆ

ಸಾರಾಂಶ

ಆದರ್ಶ, ಮೌಲ್ಯಗಳ ರಕ್ಷಣೆ ಕೇವಲ ಶಾಸಕಾಂಗಕ್ಕೆ ಮಾತ್ರ ಸೀಮಿತವಲ್ಲ. ಇದರಲ್ಲಿ ಸಮಾಜದ ಪ್ರತಿಯೊಬ್ಬರ ಜವಾಬ್ದಾರಿಯೂ ಇದೆ. ‘ನನ್ನ ಮತ ಮಾರಾಟಕ್ಕಿಲ್ಲ’ ಅಭಿಯಾನ ಯಶಸ್ವಿಗೊಳಿಸುವ ಮೂಲಕ ಪ್ರಜಾಪ್ರಭುತ್ವ ಉಳಿಸುವ ಕಾರ್ಯದಲ್ಲಿ ಯುವಕರು ಮುಂಚೂಣಿಯಲ್ಲಿ ನಿಲ್ಲಬೇಕು ಎಂದು ರಾಜ್ಯ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮನವಿ ಮಾಡಿದರು.

ಕೋಲಾರ (ಅ.13): ಆದರ್ಶ, ಮೌಲ್ಯಗಳ ರಕ್ಷಣೆ ಕೇವಲ ಶಾಸಕಾಂಗಕ್ಕೆ ಮಾತ್ರ ಸೀಮಿತವಲ್ಲ. ಇದರಲ್ಲಿ ಸಮಾಜದ ಪ್ರತಿಯೊಬ್ಬರ ಜವಾಬ್ದಾರಿಯೂ ಇದೆ. ‘ನನ್ನ ಮತ ಮಾರಾಟಕ್ಕಿಲ್ಲ’ ಅಭಿಯಾನ ಯಶಸ್ವಿಗೊಳಿಸುವ ಮೂಲಕ ಪ್ರಜಾಪ್ರಭುತ್ವ ಉಳಿಸುವ ಕಾರ್ಯದಲ್ಲಿ ಯುವಕರು ಮುಂಚೂಣಿಯಲ್ಲಿ ನಿಲ್ಲಬೇಕು ಎಂದು ರಾಜ್ಯ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮನವಿ ಮಾಡಿದರು. ನಗರದ ರಂಗಮಂದಿರ, ಕೋಲಾರ ಜಿಲ್ಲಾಡಳಿತದ ಆಶ್ರಯದಲ್ಲಿ ಆಯೋಜಿಸಿದ್ದ ‘ಚುನಾವಣಾ ಸುಧಾರಣಾ ಕ್ರಮ’ಗಳ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಸಾರ್ವಜನಿಕರು ವಿದ್ಯಾರ್ಥಿಗಳ ಪ್ರಶ್ನೆಗೆ ಉತ್ತರಿಸಿ, ಈ ಕಾರ್ಯ ನಡೆಯದಿದ್ದರೆ ಮೌಲ್ಯಗಳು ಅಧಃಪತನಕ್ಕೆ ಸಾಗುತ್ತವೆ ಎಂದು ಎಚ್ಚರಿಸಿದರು.

ಪ್ರಜಾಪ್ರಭುತ್ವದ ಕಾವಲುಗಾರರಾಗಿ: ಯುವಕರು ದೇಶದ ಭವಿಷ್ಯ ಮಾತ್ರವಲ್ಲ, ಪ್ರಜಾಪ್ರಭುತ್ವ ವ್ಯವಸ್ಥೆಯ ಕಾವಲುಗಾರರು ಆಗಬೇಕು, ಇಲ್ಲದಿದ್ದರೆ ನಿಮ್ಮ ಬದುಕು ಅಂಧಕಾರವಾಗುತ್ತದೆ. ಜನಾಂದೋಲನ ಪ್ರಾರಂಭವಾಗಬೇಕು, ನನ್ನ ಮತ ಮಾರಾಟಕ್ಕಿಲ್ಲ ಎಂಬ ಆಂದೋಲನ ಆರಂಭಿಸಿ. ನಾವು ಹಣ ಕೊಟ್ಟರೂ ಬೇಡ ಎನ್ನಬೇಕು. ಈ ವಿಷಯದಲ್ಲಿ ಎಲ್ಲಿ ತನಕ ಮತದಾರರಲ್ಲಿ ಜಾಗೃತಿ ಬರುವುದಿಲ್ಲವೋ ಅಲ್ಲಿಯ ತನಕ ಸುಧಾರಣೆ ಅಸಾಧ್ಯ ಎಂದರು.

Kolar: ಅಕ್ರಮ ಜಾಗ ತೆರವುಗೊಳಿಸಿ ಎಂದಿದ್ದಕ್ಕೆ ತಹಶೀಲ್ದಾರ್ ಮೇಲೆ ಹಲ್ಲೆಗೆ ಯತ್ನ!

ವೈದ್ಯರು, ವ್ಯಾಪಾರಸ್ಥರು ಮಾನವೀಯ ಮೌಲ್ಯ ಉಳಿಸಿಕೊಂಡಿದ್ದಾರೆಯೇ, ನಮ್ಮ ಶಿಕ್ಷಣ ಪಾಶ್ಚಿಮಾತ್ಯೀಕರಣಗೊಂಡಿದೆ, ಭಾರತ ವಿರೋಧಿ ಶಕ್ತಿ ಬೆಳೆಯುತ್ತಿದ್ದರೆ ಅದರ ಜತೆ ಕೈಜೋಡಿಸುವ ಶಕ್ತಿಗಳಿಗೆ ಏನೆನ್ನಬೇಕು, ಹಣ, ತೋಳ್ಬಲ, ಹೆಂಡ, ಜಾತಿ, ಆಮಿಷವಿದ್ದರೇನೇ ಚುನಾವಣೆ ಗೆಲ್ಲಲು ಸಾಧ್ಯವೇ, ಪದವೀಧರ ಚುನಾವಣೆಯಲ್ಲೂ ಹಣ ಪಡೆದು ಮತ ಹಾಕಲಿಲ್ಲವೇ ಇನ್ನು ಸುಶಿಕ್ಷಿತರಾದರೆ ಏನು ಪ್ರಯೋಜನಮ ಪ್ರಜಾಪ್ರಭುತ್ವ ಮೌಲ್ಯ ಎಲ್ಲಿದೆ ಎಂದರು.

ದೇಶದ ಸಂವಿಧಾನ ಶ್ರೇಷ್ಠ: ಭಾರತದ 75 ವರ್ಷಗಳ ಸಾಧನೆಗೆ ಕಾರಣ ಸಂವಿಧಾನ. ಇದರ ಅದ್ಬುತ ಕೊಡುಗೆಯಿಂದಲೇ ದೇಶ ಇಷ್ಟೊಂದು ಎತ್ತರಕ್ಕೆ ಬೆಳೆದಿದೆ. ಪ್ರತಿಯೊಬ್ಬರಿಗೂ ಸಮಾನತೆ ಕಲ್ಪಿಸಿದೆ, ಬುಡಕಟ್ಟು ಸಮುದಾಯದ ಮುರ್ಮು ರಾಷ್ಟ್ರಪತಿ ಆಗಲು, ಚಹಾ ಮಾರುತ್ತಿದ್ದ ನರೇಂದ್ರ ಮೋದಿ ಪ್ರಧಾನಿ ಯಾಗಲು ಸಂವಿಧಾನವೇ ಕಾರಣವಲ್ಲವೇ. ಸಂವಿಧಾನವನ್ನು ಇನ್ಯಾರೋ ಬರೆದಿದ್ದರೆ ಅದು ಬರೀ ಅಕ್ಷರ ಜೋಡಣೆ ಆಗಿರುತ್ತಿತ್ತು. ಆದರೆ, ಅಂಬೇಡ್ಕರ್‌ ಜೀವಾನನುಭವದ ಮೇಲೆ ಬರೆದಿದ್ದಾರೆ. ಹೀಗಾಗಿ ಅದು ಶ್ರೇಷ್ಠ ವಾಗಿ ಉಳಿದಿದೆ,

ಸಂಸದ ಎಸ್‌.ಮುನಿಸ್ವಾಮಿ ಮಾತನಾಡಿ, ದೇಶದಲ್ಲಿ ಒಂದು ದೇಶ-ಒಂದು ಚುನಾವಣೆ ನೀತಿ ಜಾರಿತೆ ಬರಬೇಕು, ಮತ ಖರೀದಿಸಲು ಬರುವವರನ್ನು ಜನರೇ ತಿರಸ್ಕರಿಸಬೇಕು. ಆಗ ಮಾತ್ರ ಭ್ರಷ್ಟಾಚಾರಕ್ಕೆ ಕಡಿವಾಣ ಬೀಳಲು ಸಾಧ್ಯ. ಚುನಾವಣಾ ಸುಧಾರಣೆ ಮೂಲಕ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕು, ಜನಪರ ಕೆಲಸ ಮಾಡುವ ನಾಯಕತ್ವ ಬೇಕು ಎಂದರು.

ಸುಧಾರಣೆಗೆ ಎಲ್ಲರ ಸಹಕಾರ ಅಗತ್ಯ: ಕೇಸ್‌ ಹಾಕಿಸಿಕೊಂಡ ರಾಜಕಾರಣಿಗಳೆಲ್ಲಾ ತಪ್ಪು ಮಾಡಿಲ್ಲ. ಜನಪರ ಹೋರಾಟಗಳಲ್ಲಿ ಕೇಸ್‌ ಹಾಕಿಸಿಕೊಂಡಿದ್ದೇವೆ, ಹೋರಾಟ ಮಾಡದಿದ್ದರೆ ಅಭಿವೃದ್ಧಿ ಅಸಾಧ್ಯ, ಮತದಾರರು ಮತ ಮಾರಾಟಕ್ಕಿಲ್ಲ ಎಂದು ನಿಲ್ಲಬೇಕು, ಮತ ಖರೀದಿಗೆ ರಾಜಕಾರಣಿಗಳು ಬರಬಾರದು ಇಬ್ಬರೂ ಪ್ರಯತ್ನಿಸಿದರೆ ಮಾತ್ರವೇ ಭ್ರಷ್ಟತೆ ಕಡಿವಾಣ ಸಾಧ್ಯ. ಸುಶೀಕ್ಷತರೇ ಮತ ಹಾಕೋದಿಲ್ಲ, ಮಾಧ್ಯಮದಿಂದ ಒಳ್ಳೆಯದೂ ಆಗಿದೆ, ತಪ್ಪು ಆಗಿದೆ ಒಟ್ಟಾರೆ ಸುಧಾರಣೆಗೆ ಪ್ರತಿಯೊಬ್ಬರ ಸಹಕಾರ ಅಗತ್ಯ ಎಂದರು.

ಹೆಚ್ಚುತ್ತಿರುವ ಕಾಂಗ್ರೆಸ್‌ ಶಾಸಕರ ದಬ್ಬಾಳಿಕೆ: ಬಿಜೆಪಿ ನಾಯಕರ ಆರೋಪ

ಇದೇ ಸಂದರ್ಭದಲ್ಲಿ ಶತಾಯುಷಿಗಳಾದ ನಾರಾಯಣಪ್ಪ, ಬೈಯ್ಯಮ್ಮರನ್ನು ಸನ್ಮಾನಿಸಲಾಯಿತಲ್ಲದೇ ಅವರಿಂದಲೇ ಕಾರ್ಯಕ್ರಮದಲ್ಲಿ ದೀಪ ಬೆಳಗಿಸಲಾಯಿತು. ಕಾರ್ಯಕ್ರಮದಲ್ಲಿ ಶಾಸಕ ಕೆ.ಶ್ರೀನಿವಾಸಗೌಡ, ಅಂಬೇಡ್ಕರ್‌ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಚ್‌.ನಾಗೇಶ್‌, ಎಂಎಲ್ಸಿ ಇಂಚರ ಗೋವಿಂದರಾಜು, ಛಲವಾದಿ ನಾರಾಯಣಸ್ವಾಮಿ ಮಾತನಾಡಿದರು. ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ರಾಮಚಂದ್ರಪ್ಪ, ಜಿಲ್ಲಾಧಿಕಾರಿ ವೆಂಕಟ್‌ರಾಜಾ, ಬೆಂಗಳೂರು ಉತ್ತರ ವಿವಿ ಕುಲಪತಿ ಪ್ರೊ.ನಿರಂಜನ ವಾನಳ್ಳಿ, ದಿಶಾ ಸಮಿತಿ ಸದಸ್ಯ ಅಪ್ಪಿನಾರಾಯಣಸ್ವಾಮಿ, ಜಿಪಂ ಉಪಕಾರ್ಯದರ್ಶಿ ಲಕ್ಷ್ಮೇ ಇದ್ದರು.

PREV
Read more Articles on
click me!

Recommended Stories

ಈಶ್ವರನ ಫ್ಲೆಕ್ಸ್‌ಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು; ಸಾಸ್ವೆಹಳ್ಳಿ ಗ್ರಾಮದಲ್ಲಿ ಪ್ರಕ್ಷುಬ್ಧ ವಾತಾವರಣ
'ಉಪಲೋಕಾಯುಕ್ತರಿಗೆ ಒಂದ್ ನಮಸ್ಕಾರ': ಭ್ರಷ್ಟಾಚಾರದ ಬಗ್ಗೆ ಹೇಳಿಕೆ ನೀಡಲು ಮಾತ್ರ ಅಧಿಕಾರವಿದೆಯೇ? – ಹೆಚ್‌ಡಿಕೆ ವ್ಯಂಗ್ಯ