Ramanagara: ಅನ​ಧಿ​ಕೃತ ಬ್ಯಾನರ್‌, ಫ್ಲೆಕ್ಸ್‌ ಅಳ​ವ​ಡಿ​ಸಿ​ದರೆ ಜೈಲು ಶಿಕ್ಷೆ!

By Govindaraj S  |  First Published Oct 13, 2022, 10:32 PM IST

ಇನ್ನು​ ಮುಂದೆ ನಗರ ಸ್ಥಳೀಯ ಸಂಸ್ಥೆ​ಗಳ ವ್ಯಾಪ್ತಿ​ಯಲ್ಲಿ ಅನು​ಮತಿ ಪಡೆ​ಯದೆ ಅನ​ಧಿ​ಕೃತವಾಗಿ ಬ್ಯಾನರ್‌ ಮತ್ತು ಫ್ಲೆಕ್ಸ್‌ಗಳನ್ನು ಅಳ​ವ​ಡಿ​ಸಿದರೆ ಒಂದು ಸಾವಿರ ದಂಡ ಮತ್ತು 6 ತಿಂಗಳು ಜೈಲು ಶಿಕ್ಷೆ ವಿಧಿ​ಸ​ಲಾ​ಗು​ತ್ತದೆ.


ಎಂ.ಅ​ಫ್ರೋಜ್‌ ಖಾನ್‌

ರಾಮ​ನ​ಗರ (ಅ.13): ಇನ್ನು​ ಮುಂದೆ ನಗರ ಸ್ಥಳೀಯ ಸಂಸ್ಥೆ​ಗಳ ವ್ಯಾಪ್ತಿ​ಯಲ್ಲಿ ಅನು​ಮತಿ ಪಡೆ​ಯದೆ ಅನ​ಧಿ​ಕೃತವಾಗಿ ಬ್ಯಾನರ್‌ ಮತ್ತು ಫ್ಲೆಕ್ಸ್‌ಗಳನ್ನು ಅಳ​ವ​ಡಿ​ಸಿದರೆ ಒಂದು ಸಾವಿರ ದಂಡ ಮತ್ತು 6 ತಿಂಗಳು ಜೈಲು ಶಿಕ್ಷೆ ವಿಧಿ​ಸ​ಲಾ​ಗು​ತ್ತದೆ. ರಾಜಕೀಯ ಸಮಾವೇಶ, ರಾಜಕಾರಣಿಗಳ ಜನ್ಮದಿನ, ಸಮಾರಂಭ, ಜಯಂತಿ, ಉತ್ಸವ, ಧಾರ್ಮಿಕ ಕಾರ್ಯಕ್ರಮಗಳ ಸಮಯದಲ್ಲಿ ಅನಧಿಕೃತ ಫ್ಲೆಕ್ಸ್‌, ಬ್ಯಾನರ್‌, ಸ್ಟಿಕ್ಕರ್‌, ಭಿತ್ತಿಪತ್ರ, ಸ್ವಾಗತ ಕಮಾನುಗಳು ನಗರ ಮತ್ತು ಪಟ್ಟ​ಣದ ಎಲ್ಲೆಡೆ ರಾರಾಜಿಸುತ್ತವೆ. ನಗರದ ಸೌಂದರ್ಯಕ್ಕೆ ಧಕ್ಕೆ ತರುವ, ಅನುಮತಿ ಪಡೆಯದ ಇಂತಹ ಅನಧಿಕೃತ ಪ್ರಚಾರದ ವಿರುದ್ಧ ಸ್ಥಳೀಯ ಸಂಸ್ಥೆ​ಗಳು ಕ್ರಮ ಕೈಗೊಳ್ಳದೇ ಪಕ್ಷಪಾತ ಮಾಡುತ್ತದೆ ಎನ್ನುವ ಆರೋಪವಿತ್ತು.

Tap to resize

Latest Videos

ನಗರ - ಪಟ್ಟ​ಣದಲ್ಲಿ ಹಬ್ಬ, ಉತ್ಸವ, ಜಾತ್ರೆ ಸಮಯದಲ್ಲೂ ಪೋಸ್ಟರ್‌, ಕಟೌಚ್‌, ಬ್ಯಾನರ್‌, ಫ್ಲೆಕ್ಸ್‌ಗಳನ್ನು ಹಾಕಿ ಶುಭಾಶಯ ಕೋರುವ ಕಾರ್ಯ ಜೋರಾಗಿರುತ್ತದೆ. ರಾಜ​ಕೀಯ ನಾಯ​ಕರ ಜನ್ಮ​ದಿ​ನಕ್ಕೆ ಶುಭಾ​ಶಯ ಕೋರುವ, ಪ್ರಮುಖ ನಟರು ನಟಿಸಿದ ಚಿತ್ರಗಳ ಪೋಸ್ಟರ್‌ಗಳು ಸೇರಿ ಅಕ್ರಮ ಕಟೌಟ್‌ಗಳು, ಫ್ಲೆಕ್ಸ್‌ಗಳ ಹಾವಳಿ ಮುಂದುವರಿದಿದೆ. ಹೆಚ್ಚು ಜನಸಂದಣಿ ಇರುವ ಪ್ರಮುಖ ವೃತ್ತ​ಗಳು ಸೇರಿ ಪಾದಚಾರಿ ಮಾರ್ಗಗಳಲ್ಲಿ, ವಿಭಜಕಗಳಲ್ಲಿರುವ ಬೀದಿ ದೀಪದ ಕಂಬಗಳು, ರಸ್ತೆ ಬದಿಯಲ್ಲಿರುವ ವಿದ್ಯುತ್‌ ಕಂಬಗಳಲ್ಲಿ ಅನಧಿಕೃತವಾಗಿ ಅಳವಡಿಸಲಾಗುತ್ತಿದೆ. ಇದರಿಂದ ಸಾರ್ವಜನಿಕರು ಹಾಗೂ ವಾಹನ ಸವಾರರ ಸಂಚಾರಕ್ಕೂ ಅಡಚಣೆಯಾಗುತ್ತಿದೆ. ಅವು​ಗ​ಳನ್ನು ತೆರವುಗೊಳಿಸುವ ಕಾರ್ಯವನ್ನೂ ಸ್ಥಳೀಯ ಸಂಸ್ಥೆ​ಗಳು ಮಾಡುತ್ತಿಲ್ಲ.

Ramanagara; ಡ್ರೋನ್ ಕ್ಯಾಮೆರಾದಲ್ಲಿ ಸೆರೆಯಾದ ಕಾಡಾನೆಗಳ ಹಿಂಡು, ಆತಂಕದಲ್ಲಿ ಗ್ರಾಮಸ್ಥರು

ನಿಯಮವಿದೆ, ಪಾಲನೆ ಇಲ್ಲ!: ನಗರದಲ್ಲಿ ಸಂಘ-ಸಂಸ್ಥೆಗಳು, ಕಾರ್ಯಕ್ರಮ ಆಯೋಜಕರು ತಮಗೆ ತೋಚಿದೆಡೆ ಬ್ಯಾನರ್‌ಗಳು, ಫ್ಲೆಕ್ಸ್‌ಗಳನ್ನು ಹಾಕುತ್ತಾರೆ. ಸ್ಥಳೀಯ ಸಂಸ್ಥೆ​ಗ​ಳಿಂದ ಅನುಮತಿ ಪಡೆಯಬೇಕೆಂಬ ನಿಯಮವಿದ್ದರೂ ಪಾಲಿಸುತ್ತಿಲ್ಲ. ಕಾರ್ಯಕ್ರಮ ಮುಗಿದರೂ ಅವುಗಳನ್ನು ತೆರವು ಮಾಡುತ್ತಿಲ್ಲ. ಅಧಿಕಾರಿಗಳು ಯಾರ ಮೇಲೂ ಕ್ರಮ ತೆಗೆದುಕೊಳ್ಳುತ್ತಿಲ್ಲ. ಹೀಗಾಗಿ ಅನ​ಧಿ​ಕೃತ ಬ್ಯಾನರ್‌ ಮತ್ತು ಫ್ಲೆಕ್ಸ್‌ಗಳ ಹಾವಳಿ ಮಿತಿ ಮೀರಿ​ದೆ. ಇದಕ್ಕೆಲ್ಲ ಕಡಿ​ವಾಣ ಹಾಕುವ ಉದ್ದೇ​ಶ​ದಿಂದ ಜಿಲ್ಲೆಯ ನಗ​ರ​ಸಭೆ, ಪುರ​ಸಭೆ ಹಾಗೂ ಪಟ್ಟಣ ಪಂಚಾ​ಯಿ​ತಿ​ಗಳ ವ್ಯಾಪ್ತಿ​ಯಲ್ಲಿ ಅನ​ಧಿ​ಕೃತ ಬ್ಯಾನರ್‌ ಗಳು ಮತ್ತು ಫ್ಲೆಕ್ಸ್‌ ಗಳನ್ನು ಅಳ​ವ​ಡಿ​ಸು​ವು​ದನ್ನು ನಿಷೇ​ಧಿಸಿ ಜಿಲ್ಲಾ​ಧಿ​ಕಾರಿ ಅವಿ​ನಾಶ್‌ ಮೆನನ್‌ ರಾಜೇಂದ್ರನ್‌ ಆದೇಶ ಹೊರ​ಡಿ​ಸಿ​ದ್ದಾರೆ.

ಸ್ಥಳೀಯ ಸಂಸ್ಥೆ​ಗಳ ಅನು​ಮತಿ ಪಡೆ​ಯದೆ ಯಾವುದೇ ವ್ಯಕ್ತಿ ಅಥವಾ ಮತ್ತೊಬ್ಬ ವ್ಯಕ್ತಿ ಮೂಲಕ ಯಾವುದೇ ಜಾಹಿ​ರಾ​ತು​ಗ​ಳನ್ನು ಪ್ರದ​ರ್ಶಿ​ಸು​ವು​ದಾ​ಗಲೀ, ಅಳ್ಲಿ ಜಾಹಿ​ರಾ​ತು​ಗ​ಳನ್ನು ನಿಲ್ಲಿ​ಸು​ವು​ದಾ​ಗಲೀ, ಬರ​ಹ​ಗಳ ಮೂಲ​ಕ​ವಾ​ಗಲೀ ಪ್ರಕ​ಟಿ​ಸಿ​ದಲ್ಲಿ ಶಿಕ್ಷೆಗೆ ಗುರಿ​ಯಾ​ಗ​ಬೇ​ಕಾ​ಗು​ತ್ತದೆ. ಸಾರ್ವ​ಜ​ನಿಕ ಸ್ಥಳ​ಗಳು ಹಾಗೂ ತೆರೆದ ಸ್ಥಳ​ಗಳು ಅಂದರೆ ಸಾರ್ವ​ಜ​ನಿಕ ಪ್ರವೇ​ಶ​ವಿ​ರುವ ಅಥವಾ ಆಶ್ರ​ಯಿ​ಸುವ ಹಕ್ಕು​ವಿ​ರುವ ಅಥವಾ ಹಾದು ಹೋಗಲು ಹಕ್ಕು ಇರುವ ರಸ್ತೆ, ಬೀದಿ, ರಸ್ತೆ ಮಾರ್ಗ, ನಿಲು​ಗಡೆ ಪ್ರದೇ​ಶ​ಗಳು ಒಳ​ಗೊಂಡಿವೆ. ಖಾಸಗಿ ಸ್ಥಳ ಅಥವಾ ಸ್ಮಾರಕ, ಪ್ರತಿಮೆ, ಪೋಸ್ಟ್‌, ಗೋಡೆ, ಬೇಲಿ, ಮರ​ಗ​ಳಲ್ಲಿ ವ್ಯಕ್ತಿ​ಗ​ಳಿಗೆ ಕಾಣಿ​ಸುವ ಹಾಗೆ ಜಾಹಿ​ರಾತು ಪ್ರದ​ರ್ಶಿ​ಸು​ವುದು. ಜಾಹಿ​ರಾ​ತು​ಗ​ಳನ್ನು ಮತ್ತು ಹೋರ್ಡಿಂಗ್‌ ಗಳನ್ನು ಸಾರ್ವ​ಜ​ನಿಕ ಸ್ಥಳ​ಗ​ಳಲ್ಲಿ ಪ್ರದ​ರ್ಶಿ​ಸು​ವು​ದನ್ನು ನಿಷೇ​ಧಿ​ಸ​ಲಾ​ಗಿದ್ದು, ಅಂತ​ಹು​ಗ​ಳನ್ನು ಪ್ರಕ​ಟಣೆ - ಪ್ರದ​ರ್ಶನ ಮಾಡಿ​ದರ ಮೇಲೂ ಕಠಿಣ ಕ್ರಮ ಕೈಗೊ​ಳ್ಳ​ಲಾ​ಗು​ತ್ತದೆ.

ನಗರ ಸ್ಥಳೀಯ ಸಂಸ್ಥೆ​ಗಳಿಗೆ ಸೂಚನೆ: ಜಿಲ್ಲೆಯ ಎಲ್ಲಾ ನಗರ ಸ್ಥಳೀಯ ಸಂಸ್ಥೆ​ಗಳ ವ್ಯಾಪ್ತಿ​ಯಲ್ಲಿ ಬಟ್ಟೆ​ಯಿಂದ ತಯಾ​ರಿ​ಸಿದ ಬ್ಯಾನರ್ಸ್‌, ಫ್ಲೆಕ್ಸ್‌ ಮತ್ತು ಬಂಟಿಂಗ್ಸ್‌ಗಳನ್ನು ನಗ​ರ​ಸಭೆ, ಪುರ​ಸಭೆ, ಪಟ್ಟಣ ಪಂಚಾ​ಯಿತಿ ವತಿ​ಯಿಂದ ಅನು​ಮತಿ ಪಡೆ​ಯುವ ಷರ​ತ್ತಿ​ಗೊ​ಳ​ಪಟ್ಟು ಉಳಿ​ದೆಲ್ಲಾ ಪ್ಲಾಸ್ಟಿಕ್‌ ಮೂಲ ವಸ್ತು​ವಿ​ನಿಂದ ತಯಾ​ರಾ​ಗುವ ಎಲ್ಲಾ ವಸ್ತು​ಗ​ಳನ್ನು ಸಂಪೂ​ರ್ಣ​ವಾಗಿ ನಿಷೇ​ಧಿಸಿ ಆದೇಶ ಹೊರ​ಡಿ​ಸು​ವಂತೆ ಜಿಲ್ಲಾ​ಧಿ​ಕಾರಿ ಅ​ವಿ​ನಾಶ್‌ ಅವರು ನಗ​ರ ಸ್ಥಳೀಯ ಸಂಸ್ಥೆ​ಗಳ ಪೌರಾ​ಯು​ಕ್ತರು/ಮುಖ್ಯಾ​ಧಿ​ಕಾ​ರಿ​ಗ​ಳಿಗೆ ಸೂಚನೆ ನೀಡಿ​ದ್ದಾರೆ.

ನೀತಿಸಂಹಿತೆ ಇದ್ದಾಗ ಕಡಿವಾಣ!: ನಗರ/ಪಟ್ಟ​ಣದ ಪ್ರಮುಖ ರಸ್ತೆಗಳ ಬದಿಯಲ್ಲಿ ಪ್ರಚಾರಕ್ಕೆ ಕಟ್ಟುವ ಬ್ಯಾನರ್‌, ಬಂಟಿಂಗ್‌್ಸ ಮತ್ತು ಮುಖ್ಯರಸ್ತೆಯ ವಿಭಜಕದ ಗ್ರಿಲ್‌, ವಿದ್ಯುತ್‌ ಕಂಬಗಳಿಗೆ ಅಳವಡಿಸುವ ಪೋಸ್ಟರ್‌ಗಳ ತೆರವು ಕಾರ್ಯದಲ್ಲಿ ಸ್ಥಳೀಯ ಸಂಸ್ಥೆ​ಗಳು ನಿರ್ಲಕ್ಷ್ಯ ವಹಿಸಿದೆ. ಚುನಾವಣೆಗಳ ನೀತಿಸಂಹಿತೆ ಜಾರಿಯಾದ ಸಮಯದಲ್ಲಿ ಕಡ್ಡಾಯವಾಗಿ ಅವುಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಯುತ್ತದೆ. ನಂತರ ಅತ್ತ ತಲೆ ಹಾಕುವುದಿಲ್ಲ.

ಸ್ಥಳೀಯ ಆಡಳಿತದ ಅನುಮತಿ ಪಡೆಯದೇ ಫ್ಲೆಕ್ಸ್‌, ಬ್ಯಾನರ್‌ ಹಾಕುವುದರಲ್ಲಿ ರಾಜಕೀಯ ಪಕ್ಷಗಳ ಮುಖಂಡರೇ ಮುಂದೆ ಇದ್ದಾರೆ. ಇದರಲ್ಲಿ ಪಕ್ಷ ಭೇದವಿಲ್ಲ. ಸ್ಥಳೀಯ ನಾಯಕರು ಪಕ್ಷದ ರಾಜ್ಯ ಘಟಕದ ಅಧ್ಯಕ್ಷರು ಹಾಗೂ ಇತರ ಗಣ್ಯರನ್ನು ಸ್ವಾಗತಿಸುವ ಫ್ಲೆಕ್ಸ್‌ ಹಾಗೂ ಬ್ಯಾನರ್‌ಗಳು ನಗರದಾದ್ಯಂತ ರಾರಾಜಿಸುತ್ತವೆ. ಮುಖ್ಯಮಂತ್ರಿ, ಸಚಿವರು, ಪಕ್ಷದ ವರಿಷ್ಠರು ಜಿಲ್ಲೆಗೆ ಬರುವ ದಿನಗಳಲ್ಲಿ ವಾರದ ಮುನ್ನವೇ ಅವರನ್ನು ಸ್ವಾಗತಿಸುವ ತರಹೇವಾರಿ ಫ್ಲೆಕ್ಸ್‌, ಬ್ಯಾನರ್‌ಗಳು ಎಲ್ಲಡೆ ಕಾಣಸಿಗುತ್ತವೆ.

ಸರ್ಕಾರಿ ನಿಯಮ ಗಾಳಿಗೆ ತೂರಿ ಬಡಾವಣೆ ನಿರ್ಮಾಣ: ಗೌರ್ಮೆಂಟ್‌ ಅಧಿಕಾರಿಗಳೇ ಸಾಥ್..?

ಫ್ಲೆಕ್ಸ್‌, ಬ್ಯಾನರ್‌ ಅಳವಡಿಕೆಗೆ ಸ್ಥ​ಳೀಯ ಸಂಸ್ಥೆ​ ಅಧಿಕಾರಿಗಳು ಜಾಗ ಗುರುತು ಮಾಡಿದ್ದಾರೆ. ಆ ಜಾಗದಲ್ಲಿ ಬಿಟ್ಟು ಬೇರೆಲ್ಲ ಜಾಗಗಳಲ್ಲೂ ಬ್ಯಾನರ್‌, ಫ್ಲೆಕ್ಸ್‌ಗಳ ಹಾವಳಿ ಇದೆ. ದೊಡ್ಡ ಬ್ಯಾನರ್‌ ಗಳಿಗೆ ಸಾವಿರಾರು ರುಪಾಯಿ ಖರ್ಚು ಮಾಡುವವರು ಅದನ್ನು ಹಾಕಲು ಅಷ್ಟೇ ಹಣ ಖರ್ಚು ಮಾಡುತ್ತಿದ್ದಾರೆ. ಸ್ಥಳೀ​ಯ​ಸಂಸ್ಥೆ ಗುರುತಿಸಿದ ಜಾಗದಲ್ಲಿ ಫ್ಲೆಕ್ಸ್‌ ಕಟ್ಟಲು ಸೂಕ್ತ ವ್ಯವಸ್ಥೆ ಮಾಡಿದರೆ, ಆದಾಯವೂ ಸಿಗುತ್ತದೆ. ಕಾರ್ಯಕ್ರಮ ಮುಗಿದ ಕೂಡಲೇ ತೆರವು ಮಾಡಲು ಅನುಕೂಲವಾಗುತ್ತದೆ. ನಗರದ ಸುಂದರವಾಗಿಯೂ ಇರುತ್ತದೆ.
- ನಿಜಾ​ಮು​ದ್ದೀನ್‌ ಷರೀಫ್‌, ನಗ​ರ​ಸಭೆ ಸದಸ್ಯ

click me!