Mysuru; ಮನನೊಂದಿದ್ದ ಮಗನಿಂದ ಅಪ್ಪನ ಕೊಲೆ

By Gowthami K  |  First Published Aug 9, 2022, 8:40 PM IST

ಆತ ರಿಯಲ್ ಎಸ್ಟೇಟ್ ಉದ್ಯಮಿ. ಊರೋರಿಗೆಲ್ಲಾ ಉಪಕಾರಿಯಾಗಿದ್ರೆ ಮನೆಯವರಿಗೆ ಮಾರಿಯಾಗಿದ್ದ. ಎಷ್ಟರ ಮಟ್ಟಿಗೆ ಅಂದ್ರೆ ಮನೆಯವರಿಗೆ ಸ್ವಚ್ಚ ಮಾಡಲು ಬಿಡ್ತಿರಲಿಲ್ಲ. ಇದರಿಂದ ಮನನೊಂದಿದ್ದ ಮಗನೇ ಅಪ್ಪನನ್ನ ಕೊಲೆ ಮಾಡಿದ್ದಾನೆ.


ವರದಿ : ಮಧು.ಎಂ, ಚಿನಕುರಳಿ ಏಷ್ಯಾನೆಟ್ ಸುವರ್ಣನ್ಯೂಸ್

ಮೈಸೂರು (ಆ.9): ಆತ ರಿಯಲ್ ಎಸ್ಟೇಟ್ ಉದ್ಯಮಿ. ಅಗರಬತ್ತಿ ಮಾರಿಕೊಂಡು ಅವರು ಇವರಿಗೆ ಮನೆ ಬಾಡಿಗೆ ಕೊಡಿಸಿಕೊಂಡು ಜೀವನ ನಡೆಸುತ್ತಿದ್ದ. ಊರೋರಿಗೆಲ್ಲಾ ಉಪಕಾರಿಯಾಗಿದ್ರೆ ಮನೆಯವರಿಗೆ ಮಾರಿಯಾಗಿದ್ದ. ಎಷ್ಟರ ಮಟ್ಟಿಗೆ ಅಂದ್ರೆ ಮನೆಯವರಿಗೆ ಸ್ವಚ್ಚ ಮಾಡಲು ಬಿಡ್ತಿರಲಿಲ್ಲ. ಕುಂತ್ರೆ ನಿಂತ್ರೆ ತಪ್ಪು ಎಂದು ಸಮಸ್ಯೆ ಮಾಡ್ತಿದ್ದ. ಇದರಿಂದ ಮನನೊಂದಿದ್ದ ಮಗನೇ ಅಪ್ಪನನ್ನ ಕೊಲೆ ಮಾಡಿದ್ದಾನೆ. ಈ ಕುರಿತ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ. ಈ ಪೋಟೊದಲ್ಲಿರುವ ಈತ ಸಂಪತ್. ಮೈಸೂರಿನ ಬೃಂದಾವನ ಬಡಾವಣೆಯ ನಿವಾಸಿ. ನಿನ್ನೆ ಈತ ಮನೆಯಲ್ಲಿ ರಕ್ತಸಿಕ್ತ ಸ್ಥಿತಿಯಲ್ಲಿ ಈತನ ಮೃತ ದೇಹ ಪತ್ತೆಯಾಗಿತ್ತು. ಜೊತೆಗೆ 16 ವರ್ಷದ ಮಗ ಸಹ ಇದ್ದ. ಯಾರೋ ದುರ್ಷ್ಕರ್ಮಿಯೊಬ್ಬ ಮನೆಗೆ ಬಂದು ಕೊಲೆ ಮಾಡಿದ್ದಾರೆ ಎಂದು ಎಲ್ಲರೂ ತಿಳಿದುಕೊಂಡಿದ್ರು. ಮಗಮ ಸಹ ಇದೇ ರೀತಿ ಪೊಲೀಸರ ಮುಂದೆ ಹೇಳಿಕೆ ನೀಡಿದ್ದ. ಇದರಿಂದ ಇಡೀ ಬೃಂದಾವನ ಬಡಾವಣೆ ಬೆಚ್ಚಿ ಬೀದಿತ್ತು. ಹಾಡು ಹಗಲೇ ಈ ರೀತಿ ಮನೆಗೆ ನುಗ್ಗಿ ಕೊಲೆ ‌ಮಾಡಿದ್ದರೆ ಅಂದ್ರೆ ಹೇಗೆ ಎಂದು ಚಿಂತಗ್ರಾಂಥರಾಗಿದ್ದರು.

Tap to resize

Latest Videos

ಇನ್ನೂ ವಿಚಾರ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ವಿವಿ ಪುರಂ ಪೊಲೀಸರು ಕೂಲಕುಂಶವಾಗಿ ಪರಿಶೀಲನೆ ನಡೆಸಿದ್ರು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ರು. ಸಂಪತ್ ಕುಮಾರ್ ಹಲವು ವರ್ಷಗಳಿಂದ ಬೃಂದಾವನ ಬಡಾವಣೆಯಲ್ಲಿ ವಾಸವಿದ್ರು. ಸಣ್ಣ ಪುಟ್ಟ ರಿಯಲ್ ಎಸ್ಟೇಟ್ ಮಾಡಿಕೊಂಡು ಅಗರಬತ್ತಿ ಮಾರಿ ಜೀವನ ನಡೆಸುತ್ತಿದ್ದ. ಮಾನಿಸಿಕವಾಗಿ ಖಿನ್ನತೆಗೊಳಗಾಗಿದ್ದ ಸಂಪತ್ ಕುಮಾರ್ ಹೆಂಡತಿ ಶಿಕ್ಷಕಿ ಹಾಗೂ 16 ವರ್ಷದ ಮಗನಿಗೆ ಪ್ರತಿನಿತ್ಯ ಟಾರ್ಚರ್ ನೀಡ್ತಿದ್ದ ಎನ್ನಲಾಗಿದೆ.

ಅತ್ಯಾಚಾರ ಆರೋಪ: ಮಧ್ಯ ಪ್ರದೇಶದಲ್ಲಿ ಸ್ವಯಂಘೋಷಿತ ದೇವಮಾನವ ಬಂಧನ

ಯಾವ ಕೆಲಸ ಮಾಡಲು ಸಹ ಬಿಡ್ತಿರಲಿಲ್ಲಾ. ಕುಂತ್ರು ನಿಂತ್ರು ತಪ್ಪು ಎಂದು ಹೊಡೆಯುತ್ತಿದ್ದ ಎನ್ನಲಾಗಿದೆ. ಈ ವಿಚಾರಗಳೆಲ್ಲವೂ ಪೊಲೀಸರಿಗೆ ತನಿಖೆ ತಿಳಿದ ಮೇಲೆ ಬೇರೆ ದಿಕ್ಕಿನಲ್ಲಿ ತನಿಖೆ ಆರಂಭಿಸಿದ್ರು. ಆಗ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ. ಅಮ್ಮನಿಗೆ ಟಾರ್ಚರ್ ಕೊಡುವುದನ್ನ ಸಹಿಸದ 16 ವರ್ಷದ ಮಗ‌ನೇ ರಾಡ್ ನಿಂದ ಹೊಡೆದು ಕೊಲೆ‌ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.

ಕಾಡಸಿದ್ದೇಶ್ವರ ಸ್ವಾಮೀಜಿ ಕಾರು ಅಪಘಾತ, ಮೂವರಿಗೆ ಗಾಯ

ಒಟ್ಟಾರೆ ಮಗನೇ ಅಪ್ಪನನ್ನ ಕೊಲೆ ಮಾಡುವ ಮನಸ್ಥತಿ ಬಂದಿರುವುದನ್ನೇ ನೋಡಿದ್ರೆ ಅವರಪ್ಪ ಎಷ್ಟರ ಮಟ್ಟಿಗೆ ಟಾರ್ಚರ್ ಕೊಡ್ತಿದ್ದ ಎಂಬುದು ಸ್ಪಷ್ಟವಾಗುತ್ತೆ. ಹೀಗಾಗಿ ತಾಯಿಗೆ ಮುಕ್ತಿ ಕೊಡಿಸಬೇಕೆಂದು ಮಗನೇ ಕೊಲೆ ಮಾಡಿ ಜೈಲು ಸೇರಿರುವುದು ದುರಂತ.

click me!