Chitradurga: ರೇಷ್ಮೆ, ಹೂವಿನ ದರ ಇಳಿಕೆ, ಡಿಸಿ ಕಚೇರಿ ಮುಂದೆ ಹೂ ಸುರಿದು ರೈತರ ಪ್ರತಿಭಟನೆ

By Gowthami K  |  First Published Jul 17, 2023, 5:40 PM IST

ರೇಷ್ಮೆ‌ ಹಾಗೂ ಹೂವಿನ ಬೆಲೆ ದರ ಕುಸಿತದಿಂದ ಕಂಗಾಲಾದ ಚಿತ್ರದುರ್ಗ ರೈತರು  ಬೇರೆ ದಾರಿಯಿಲ್ಲದೇ  ಹೂವು ಸುರಿದು ಆಕ್ರೋಶ ಹೊರ ಹಾಕಿದ್ದಾರೆ.


ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿತ್ರದುರ್ಗ (ಜು.17): ರೇಷ್ಮೆ‌ ಹಾಗೂ ಹೂವಿನ ಬೆಲೆ ದರ ಕುಸಿತದಿಂದ ಕಂಗಾಲಾದ ಅನ್ನದಾತ  ಬೇರೆ ದಾರಿಯಿಲ್ಲದೇ ಜಿಲ್ಲಾಧಿಕಾರಿ ಕಚೇರಿ ಮುಂದೆ ಹೂವು ಸುರಿದು ಆಕ್ರೋಶ ಹೊರ ಹಾಕಿ, ಸೂಕ್ತ ಬೆಂಬಲ ಬೆಲೆ ಘೋಷಿಸಿ ಎಂದು ಸರ್ಕಾರದ ವಿರುದ್ದ ಪ್ರತಿಭಟನೆ ಮಾಡಿದ್ದಾರೆ. 

Latest Videos

undefined

ಇತ್ತೀಚೆಗೆ ಜನರು ಟೊಮ್ಯಾಟೊ ಬೆಳೆದ ರೈತರು ಸಾಹುಕಾರ ಆಗಿದ್ದಾರೆ ಎಂದೆಲ್ಲಾ ಮಾತನಾಡ್ತಿದ್ದಾರೆ. ಆದ್ರೆ ಸೇವಂತಿಗೆ ಹೂವು ಹಾಗೂ ರೇಷ್ಮೆ ಬೆಳೆದ ರೈತರ ಸ್ಥಿತಿ ಯಾರಿಗೂ ಹೇಳತೀರದು. ಚೀನಾದಿಂದ ಭಾರತಕ್ಕೆ ರೇಷ್ಮೆ ನೂಲು ಆಮದು ಆಗ್ತಿದ್ದು. ರೈತ ಬೆಳೆದ ರೇಷ್ಮೆ ಗೆ ಬೆಲೆಯೇ ಇಲ್ಲದಂತಾಗಿದೆ. ಅದ್ರಲ್ಲೂ ಕೋಟೆನಾಡಿನ ರೈತರು ಬಹುತೇಕ ರೇಷ್ಮೆ ಬೆಳೆಯೋದ್ರಲ್ಲಿ ಮುಂದಿದ್ದಾರೆ. ಇತ್ತೀಚಿನ ದಿನಗಳಲ್ಲಿ ರೇಷ್ಮೆ ಯನ್ನು ಕೇವಲ 200 ರಿಂದ 250 ರೂಗಳಿಗೆ ಕೇಳ್ತಿದ್ದಾರೆ. ಸಾಲ ಸೂಲ ಮಾಡಿ ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ರೇಷ್ಮೆ ಬೆಳೆದ ರೈತ ಏನು ಮಾಡಬೇಕು. ಇತ್ತ ಮಾರುಕಟ್ಟೆಗಳಲ್ಲಿ ದಲ್ಲಾಳಿಗಳ‌ ಕಾಟ, ಮತ್ತೊಂದೆಡೆ ಬೆಲೆ ಕುಸಿತ ಆಗಿರುವುದರಿಂದ ರೈತರು ತೀರಾ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೂಡಲೇ ಕೇಂದ್ರ ಸರ್ಕಾರ ಚೀನಾದಿಂದ ಆಮದು ಆಗ್ತಿರುವ ರೇಷ್ಮೆ ನೂಲನ್ನು ಸ್ಥಗಿತಗೊಳಿಸಿ, ನಮ್ಮ ದೇಶದಲ್ಲಿಯೇ ಬೆಳೆಯುವ ರೇಷ್ಮೆ ಗೆ ಪ್ರಾತಿನಿಧ್ಯ ‌ನೀಡಿ ಬೆಂಬಲ ಬೆಲೆ ಘೋಷಿಸಿ ರೈತರ ಸಂಕಷ್ಟಕ್ಕೆ ನೆರವಾಗಬೇಕಿದೆ ಅಂತಾರೆ ರೈತರು.

Aati Amavasya 2023: ತುಳುನಾಡಿನಲ್ಲಿ ಆಟಿ ಕಷಾಯ ಕುಡಿಯುವ ದಿನ, ಏನಿದು ಪಾಲೆ

ಸೇವಂತಿಗೆ ಹೂವನ್ನ ಬೆಳೆದ ರೈತರು ಪರಿಸ್ಥಿತಿಯೂ ಇದೇ ಆಗಿದೆ. ಇತ್ತೀಚಿನ ದಿನಗಳಲ್ಲಿ ಕೃಷಿ ಅಧಿಕಾರಿಗಳು ರೈತರ ವಿಚಾರದಲ್ಲಿ ಮಾಡ್ತಿರುವ ನಿರ್ಲಕ್ಷ್ಯ ಅಷ್ಟಿಷ್ಟಲ್ಲ. ಒಬ್ಬ ರೈತ ಬೆಳೆ‌ ಬೆಳೆದು ಕಟಾವಿಗೆ ಬಂದ್ರು ಯಾವೊಬ್ಬ ಅಧಿಕಾರಿಯೂ ಅವರ ಜಮೀನಿಗೆ ಪರಿಶೀಲನೆಗೆ ಬರಲ್ಲ. ನಾವು ಕೇವಲ‌ ಬೀಜ, ಗೊಬ್ಬರ, ಔಷಧಿ ಪಡೆಯುವ ಅಂಗಡಿಯವರ ಮಾತು ಕೇಳಿಯೇ ಬಿತ್ತನೆ ಮಾಡುವ ಸ್ಥಿತಿ ನಿರ್ಮಾಣವಾಗಿದೆ. ಬೆಳೆಗಳ ಪೋಷಣೆ, ರಕ್ಷಣೆ ಕುರಿತು ಯಾವೊಬ್ಬ ಅಧಿಕಾರಿಯೂ ರೈತರಿಗೆ ಸಲಹೆ ನೀಡ್ತಿಲ್ಲ. ಅದ್ರಲ್ಲಂತೂ ನಮ್ಮ ಜಿಕ್ಕೆಯಲ್ಲಿ‌ ಕೃಷಿ ಅಧಿಕಾರಿಗಳಿ ಇದ್ದಾರೆ ಎಂಬುದೇ ನಮಗೆ ಅನುಮಾನ ಮೂಡಿದೆ.‌ ಆದ್ದರಿಂದ ಸೇವಂತಿಗೆ ಹೂವಿಗೆ ಚುಕ್ಕೆ ರೋಗ ಬಂದು ಬೆಲೆ ಇಲ್ಲದೆ ರಸ್ತೆಗೆ ಸುರಿಯುವ ಪರಿಸ್ಥಿತಿ ನಮಗೆ ಒದಗಿ‌ ಬಂದಿದೆ  ಎಂದು ರೈತರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Ginger Price Hike: ಶುಂಠಿ ಬೆಳೆದ ರೈತ ರಾತ್ರೋ ರಾತ್ರಿ ಕುಬೇರ!

ಒಟ್ಟಾರೆ ಹೂವು ಮತ್ತು ರೇಷ್ಮೆ ಬೆಳೆದ ರೈತರ ಪಾಡು ತುಂಬಾ ಶೋಚನೀಯವಾಗಿದ್ದು. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಹಾಗೂ ಸರ್ಕಾರ ಅವರಿಗೆ ಪರಿಹಾರ ರೂಪದಲ್ಲಿ ರೈತರ ಸಂಕಷ್ಟಕ್ಕೆ ಸ್ಪಂದಿಸಲಿ ಎಂಬುದು ನಮ್ಮ ಒತ್ತಾಯ. 

click me!